ಬೇಸಿಗೆಯಲ್ಲೇ ಈಜುಗೊಳ ಬಂದ್: ಅಸಮಾಧಾನ
Team Udayavani, Apr 6, 2017, 3:13 PM IST
ಕಲಬುರಗಿ: ಮಹಾನಗರದ ಚಂದ್ರಶೇಖರ ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿರುವ ಏಕೈಕ ಈಜುಕೋಳ ಪ್ರಸಕ್ತ ಕಡು ಬೇಸಿಗೆಯಲ್ಲಿಯೇ ಬಂದ್ ಆಗಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಕಳೆದ ಹತ್ತು ವರ್ಷಗಳಿಂದ ಪ್ರತಿ ಬೇಸಿಗೆಯಲ್ಲಿ ಮಹಾನಗರದ ಸಾವಿರಾರು ಚಿಣ್ಣರಿಗೆ, ಯುವಕರಿಗೆ ಈಜು ಕಲಿಸಿಕೊಟ್ಟ ಈಜುಕೋಳ ಪ್ರಸಕ್ತವಾಗಿ ಬಂದ್ ಆಗಿರುವುದು ತೀವ್ರ ನಿರಾಸೆ ಮೂಡಿಸಿದೆ.
ದುರಸ್ತಿ ಹಾಗೂ ಕೆಲವು ಸುಧಾರಣಾ ಕಾರ್ಯ ನೆಪವೊಡ್ಡಿ ಕಳೆದ ಫೆಬ್ರುವರಿ ತಿಂಗಳಲ್ಲಿಯೇ ಬಂದ್ ಮಾಡಲಾಗಿದ್ದು, ಇಂದಿನ ದಿನದವರೆಗೂ ಈಜುಕೋಳ ಪ್ರಾರಂಭವಾಗಿಲ್ಲ. ಏನೇ ಕೆಲಸ ಕಾರ್ಯ, ಅದರಲ್ಲೂ ಸುಧಾರಣೆ ಕಾರ್ಯಗಳಿದ್ದಲ್ಲಿ ಜನವರಿ-ಫೆಬ್ರುವರಿಯಲ್ಲಿ ಕೈಗೊಂಡು ಮಾರ್ಚ್ ಆರಂಭದ ಹೊತ್ತಿಗೆ ಈಜುಕೋಳ ಪ್ರಾರಂಭವಾಗಿದ್ದಲ್ಲಿ ಜನತೆಗೆ ಹೆಚ್ಚಿನ ನಿಟ್ಟಿನಲ್ಲಿ ಸಹಾಯವಾಗುತ್ತದೆ.
ಆದರೆ ಈಜುಕೋಳದ ಉಸ್ತುವಾರಿ ಸಮಿತಿಯ ಈ ನಡಾವಳಿಕೆ ಈಜು ಪ್ರಿಯರಲ್ಲಿ ರಾಸೆ ಮೂಡಿಸಿದೆ. ಈಜುಕೋಳದ ಆರಂಭದಿಂದ ಸುಮಾರು 200 ಜನ ತಲಾ 10 ಸಾವಿರ ರೂ. ತುಂಬಿ ಅಜೀವ ಸದಸ್ಯತ್ವ ಹೊಂದಿದ್ದಾರೆ. ದಿನನಿತ್ಯ ಈಜಾಡುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ.
ಆದರೆ ಕಡು ಬೇಸಿಗೆಯಲ್ಲೇ ಈಜುಕೋಳ ಬಂದಾಗಿರುವುದು ತೀವ್ರ ಹೊಡೆತ ಬಿದ್ದಿದೆ. ಅಜೀವ ಸದಸ್ಯರನ್ನು ಮೊಟಕುಗೊಳಿಸಿ ಈಗ ತಿಂಗಳಿಗೆ ಸಾವಿರ ರೂ ದರ ನಿಗದಿ ಮಾಡಲಾಗಿದೆ. ಅದೇ ರೀತಿ ಮಕ್ಕಳಿಗೆ ಹಾಗೂ ಹಿರಿಯ ನಾಗರಿಕರಿಗೂ ಶುಲ್ಕ ಹೆಚ್ಚಳ ಮಾಡಲಾಗಿದೆ. ಸರ್ಕಾರಿ ನೌಕರರಿಗೆ ರಿಯಾಯಿತಿ ದರ ನಿಗದಿ ಮಾಡಲಾಗಿದೆ.
ದರ ದುಪ್ಪಟ್ಟು-ಅವ್ಯವಸ್ಥೆ ಹೆಚ್ಚಳ: ಈಜಾಡಲು ಈ ಮೊದಲಿದ್ದ ಶುಲ್ಕ ದುಪ್ಪಟ್ಟು ಹೆಚ್ಚಳ ಮಾಡಲಾಗಿದೆ. ಆದರೆ ಅವ್ಯವಸ್ಥೆ ಸಹ ಹೆಚ್ಚಳವಾಗಿರುವುದು ವಿಪರ್ಯಾಸವೆ ಸರಿ. ಮೊದಲು ನೀರು ಶುದ್ಧವಾಗಿರುತ್ತಿತ್ತು. ದಿನಾಲು ಸರಿಯಾಗಿ ಶುದ್ಧೀಕರಣ ಕಾರ್ಯ ನಡೆಯುತ್ತಿತ್ತು. ಆದರೆ ಈಗ ಸರಿಯಾಗಿ ನಡೆಯುತ್ತಿಲ್ಲ.
ಒಟ್ಟಾರೆ ಉಸ್ತುವಾರಿಯೇ ಇಲ್ಲ ಎನ್ನುವಂತಾಗಿದೆ. ಈ ಮುಂಚೆ ಈಜುಕೋಳ ನಿರ್ವಹಣೆ ಗುಲಬರ್ಗಾ ಅಕ್ವಾ ಅಸೋಸಿಯೇಷನ್ ಅವರು ನೋಡಿಕೊಳ್ಳುತ್ತಿದ್ದರು. ಅಸೋಸಿಯೇಷನ್ ನಿರ್ವಹಣೆ ಸಂದರ್ಭದಲ್ಲಿ ಈಜುಕೋಳ ಸರಿಯಾಗಿ ನಡೆಯುತ್ತಿತ್ತು. ಒಂದು ದಿನವೂ ಬಂದ್ ಆಗಿರಲಿಲ್ಲ.
ವರ್ಷವಿಡಿ ಸಕ್ರಿಯವಾಗಿ ನಡೆಯುತ್ತಿತ್ತು. ಅಂತಾರಾಷ್ಟ್ರೀಯ ಈಜುಕೋಳ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಆದರೆ ಈಗ ಈಜುಕೋಳ ಜಿಲ್ಲಾ ಯುವಜನ ಸೇವಾ ಕ್ರೀಡಾ ಇಲಾಖೆ ಸುಪರ್ದಿಗೆ ಬಂದಿದ್ದು, ಕ್ರೀಡಾ ಇಲಾಖೆ ಸಮಿತಿಗೆ ಪ್ರಾದೇಶಿಕ ಆಯುಕ್ತ ಆಮ್ಲಾನ್ ಆದಿತ್ಯ ಬಿಸ್ವಾಸ ಅವರೆ ಅಧ್ಯಕ್ಷರಾಗಿದ್ದಾರೆ.
* ಹಣಮಂತರಾವ ಭೈರಾಮಡಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
Malpe: ಕಿನ್ನಿಮೂಲ್ಕಿ; ನಿಲ್ಲಿಸಲಾಗಿದ್ದ ಬುಲೆಟ್ ಕಳವು
Maharashtra: ಬಿಜೆಪಿ ನಾಯಕಿ ನವನೀತ್ ರಾಣಾ, ಬೆಂಬಲಿಗರ ಮೇಲೆ ಹಲ್ಲೆ, ಎಫ್‌ಐಆರ್ ದಾಖಲು
Boeing: 400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್ ನೀಡಿದ ಬೋಯಿಂಗ್
Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು
Kanguva ಕುರಿತು ಭಾರೀ ನೆಗೆಟಿವ್ ವಿಮರ್ಶೆ: ನಟ ಸೂರ್ಯ ಪತ್ನಿ ಜ್ಯೋತಿಕಾ ಆಕ್ರೋಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.