ಯಡ್ತಾಡಿ: ಕೇಳುವವರಿಲ್ಲವೇ ಜೀತ ಮುಕ್ತ ಕಾರ್ಮಿಕರ ಗೋಳು ?
Team Udayavani, Apr 6, 2017, 3:18 PM IST
ಕೋಟ: ಸಮಾಜದಲ್ಲಿ ಶೋಷಣೆಗೊಳಗಾದ ಜೀತ ಕಾರ್ಮಿಕರನ್ನು ಸರಕಾರ ಜೀತ ಮುಕ್ತಗೊಳಿಸಿ, ಅವರ ಪುನರ್ವಸತಿಗೆ ಭೂಮಿ ಮಂಜೂರು ಮಾಡಿ ಮುಂದೆ ಅಗತ್ಯವಿರುವ ಮೂಲ ಸೌಕರ್ಯವನ್ನು ನೀಡುವಂತೆ ಸ್ಥಳೀಯಾಡಳಿತಕ್ಕೆ ಸೂಚನೆ ನೀಡಿದರೂ ಕೂಡ ಸೂಕ್ತ ಕ್ರಮ ಕೈಗೊಳ್ಳದೆ ಇದೀಗ ಅವರ ಪುನರ್ವಸತಿಗೆ ಮೀಸಲಿರಿಸಿದ ಜಾಗವನ್ನೇ ದುರುಪಯೋಗಪಡಿಸಿಕೊಂಡಿದೆ ಎನ್ನುವ ಆರೋಪ ಉಡುಪಿ ತಾಲೂಕಿನ ಯಡ್ತಾಡಿ ಗ್ರಾ.ಪಂ. ಮೇಲೆ ಕೇಳಿ ಬಂದಿದ್ದು ಸಂತ್ರಸ್ತ ಕಾರ್ಮಿಕರು ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ.
ಜೀತ ಮುಕ್ತ ಕಾರ್ಮಿಕರಿಗೆ ಅನ್ಯಾಯ ಸುಮಾರು ಮೂರು ವರ್ಷಗಳ ಹಿಂದೆ ಯಡ್ತಾಡಿ ಗ್ರಾ.ಪಂ. ವ್ಯಾಪ್ತಿಯ ಗರಿಕೆಮಠ ಕಲ್ಲುಕೋರೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಯಡ್ತಾಡಿ ಗ್ರಾಮದ ನಿವಾಸಿಗಳಾದ ಅಣ್ಣಪ್ಪ, ಗೋವಿಂದರಾಜು, ನರಸಿಂಹ, ಪರಶುರಾಮ, ಮುತ್ತುರಾಜ್, ರಮೇಶ, ಕುಂಜಿ ಮೋಯಿಂಗ್, ಚೆಲುವರಾಜು ಎನ್ನುವ ಕುಟುಂಬದವರನ್ನು ಜೀತದಾಳುಗಳಂತೆ ನಡೆಸಿಕೊಳ್ಳಲಾಗು ತ್ತಿದೆ ಎನ್ನುವ ದೂರಿನ ಮೇರೆಗೆ ಸಂಬಂಧಪಟ್ಟ ಅಧಿಕಾರಿಗಳು ತನಿಖೆ ನಡೆಸಿ ಜೀತದಿಂದ ಮುಕ್ತಗೊಳಿಸಿ, ಪುನರ್ವಸತಿ ಯೋಜನೆಯಡಿ ಯಡ್ತಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹೇರಾಡಿಯ ಸರ್ವೇ ನಂಬರ್ 51/ಪಿ1ರಲ್ಲಿ ಒಟ್ಟು 94 ಸೆಂಟ್ಸ್ ಜಾಗವನ್ನು ಮೀಸಲಿರಿಸಿತ್ತು ಹಾಗೂ ಮೂಲ ಸೌಕರ್ಯವನ್ನು ನೀಡಬೇಕೆಂದು ಆದೇಶ ನೀಡಿತ್ತು. ಆದರೆ ಈ ಕಾರ್ಮಿಕರಿಗೆ ಇದುವರೆಗೆ ಸೂಕ್ತ ಪುನರ್ವಸತಿ ದೊರೆತಿಲ್ಲ. ಇದೀಗ ಮೀಸಲಿಟ್ಟ ಭೂಮಿಯನ್ನು ಸಮತಟ್ಟುಗೊಳಿಸುವ ನಿಟ್ಟಿನಲ್ಲಿ ಯಡ್ತಾಡಿ ಗ್ರಾ.ಪಂ. 24 ಸಾವಿರ ರೂ.ಗೆ ಕ್ರಿಯಾ ಯೋಜನೆ ತಯಾರಿಸಿದ್ದು, ಜಾಗವನ್ನು ಸಮತಟ್ಟು ಮಾಡುವ ಬದಲು ಅಲ್ಲಿನ ಮಣ್ಣನ್ನು ಖಾಸಗಿ ವ್ಯಕ್ತಿಗಳಿಗೆ ಲಕ್ಷಾಂತರ ಹಣಕ್ಕೆ ಮಾರಾಟ ಮಾಡಲಾಗಿದೆ ಎನ್ನುವ ಆರೋಪ ಸಂತ್ರಸ್ತರಿಂದ ಕೇಳಿ ಬಂದಿದೆ ಹಾಗೂ ಸದ್ರಿ ಸ್ಥಳವನ್ನು ಸುಮಾರು 3 ಫೀಟ್‌ಗಿಂತ ಹೆಚ್ಚು ಆಳ ಮಾಡಿರುವುದು ಈ ಆರೋಪಕ್ಕೆ ಪುಷ್ಟಿ ನೀಡುವಂತಿದೆ ಹಾಗೂ ಜಾಗ ಸಮತಟ್ಟುಗೊಳಿಸಲು ಹೊಂಡ ಮಾಡಬೇಕಾದ ಅಗತ್ಯವೇನು ಎನ್ನುವ ಪ್ರಶ್ನೆ ಮೂಡಿದೆ. ಮಣ್ಣು ತೆಗೆದ ಸ್ಥಳದಲ್ಲಿ ಮಳೆಗಾಲದಲ್ಲಿ ನೀರು ನಿಲ್ಲಲಿದ್ದು ಮನೆ ಕಟ್ಟಿಕೊಳ್ಳಲು ಅಸಾಧ್ಯವಾಗಲಿದೆ. ಹೀಗಾಗಿ ಸಂತ್ರಸ್ತರಿಗೆ ಈ ಸ್ಥಳದಲ್ಲಿ ಪುನರ್ವಸತಿ ಕನಸಿನ ಮಾತಾಗಲಿದೆ.
ಒಟ್ಟಾರೆ ಜೀತ ಮುಕ್ತ ಕಾರ್ಮಿಕರಿಗೆ ನೀಡಿದ ಭೂಮಿಯನ್ನು ಅಭಿವೃದ್ಧಿಪಡಿಸುವ ಬದಲು ಹಾಳು ಮಾಡಿದ ಯಡ್ತಾಡಿ ಗ್ರಾ.ಪಂ.ಗೆ ಸಂತ್ರಸ್ತ ಕಾರ್ಮಿಕರು ಹಿಡಿಶಾಪ ಹಾಕುತ್ತಿದ್ದಾರೆ. ಈ ಕುರಿತು ಜೀತ ಮುಕ್ತ ಕಾರ್ಮಿಕರು ಜಿಲ್ಲಾಧಿಕಾರಿ, ಜಿ.ವಿ.ಕೆ. ಸೇರಿದಂತೆ ಹಲವು ಅಧಿಕಾರಿಗಳಿಗೆ ದೂರು ನೀಡಿದ್ದು ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ.
ಜೀತಮುಕ್ತ ಕಾರ್ಮಿಕರಿಗೆ ಪುನರ್ವಸತಿ ಒದಗಿಸುವಲ್ಲಿ ನಾವು ನಿರ್ಲಕ್ಷ ಮಾಡಿಲ್ಲ. ಸಂಬಂಧಪಟ್ಟ ಇಲಾಖೆಯಿಂದ ಅನುದಾನ ಬರುವುದು ತಡವಾದ್ದರಿಂದ ಪುನರ್ವಸತಿ ವಿಳಂಬವಾಯಿತು. ಇದೀಗ ಕ್ರಿಯಾ ಯೋಜನೆ ರೂಪಿಸಿ ಮೀಸಲಿಟ್ಟ ಜಾಗವನ್ನು ಸಮತಟ್ಟು ಮಾಡಲಾಗುತ್ತಿದೆ. ಜಾಗ ಸಮತಟ್ಟು ಮಾಡುವಾಗ ಕಲ್ಲು ಬಂದ ಕಾರಣ ಜಾಗ ಸ್ವಲ್ಪ ಹೊಂಡವಾಗಿದೆ. ಇದರಲ್ಲಿ ಅವ್ಯವಹಾರ ನಡೆದಿಲ್ಲ.
ಪ್ರಕಾಶ್ ಎಚ್. ಶೆಟ್ಟಿ, ಅಧ್ಯಕ್ಷರು ಯಡ್ತಾಡಿ ಗ್ರಾ.ಪಂ.
ಜೀತ ಕಾರ್ಮಿಕರು ಎನ್ನುವ ನಿಟ್ಟಿನಲ್ಲಿ ಸರಕಾರ ನಮಗೆ ನಿವೇಶನ ಮಂಜೂರು ಮಾಡಿತ್ತು ಹಾಗೂ ಮನೆ ಮುಂತಾದ ಮೂಲ ಸೌಲಭ್ಯಗಳನ್ನು ಕಲ್ಪಿಸಿಕೊಡುವುದಾಗಿ ಭರವಸೆ ನೀಡಿತ್ತು. ಆದರೆ ಇದುವರೆಗೆ ನಮಗೆ ಸ್ಥಳೀಯ ಯಡ್ತಾಡಿ ಗ್ರಾ.ಪಂ. ಯಾವುದೇ ಸೌಲಭ್ಯಗಳನ್ನು ನೀಡಿಲ್ಲ. ಬದಲಿಗೆ ಹೇರಾಡಿಯಲ್ಲಿ ನಮಗೆ ಮೀಸಲಿರಿಸಿದ ಜಾಗದ ಮಣ್ಣನ್ನು ಖಾಸಗಿಯವರಿಗೆ ಲಕ್ಷಾಂತರ ಹಣಕ್ಕೆ ಮಾರಾಟ ಮಾಡಿ ಆ ಜಾಗ ಪ್ರಯೋಜನಕ್ಕೆ ಬಾರದಂತೆ ಮಾಡಿದೆ. ಈ ಕುರಿತು ವಿಚಾರಿಸಿದರೆ ಜಾಗ ಸಮ ತಟ್ಟು ಮಾಡಲು ಎಂದು ಹೇಳುತ್ತಿದ್ದಾರೆ. ಇದರಿಂದಾಗಿ ಬಡವರು, ಅವಿಧ್ಯಾವಂತರಾದ ನಮಗೆ ಅನ್ಯಾಯವಾಗಿದೆ. ದಯವಿಟ್ಟು ನಮಗೆ ಸಂಬಂಧಪಟ್ಟವರು ನ್ಯಾಯ ನೀಡಬೇಕು.
ಗೋವಿಂದರಾಜು, ಸಂತ್ರಸ್ತ ಜೀತ ಮುಕ್ತ ಕಾರ್ಮಿಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Udupi: ಸಾಲ ಮರುಪಾವತಿಸದೆ ನಕಲಿ ದಾಖಲೆ ಸೃಷ್ಟಿಸಿ ಮರು ಸಾಲ; ಪ್ರಕರಣ ದಾಖಲು
Kaup: ಉದ್ಯಾವರ: ಮನೆಯ ಬೀಗ ಮುರಿದು ಸೊತ್ತು ಕಳವು
Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್ ಚಾಲಕನ ವಿರುದ್ಧ ದೂರು
Jaipur: ಶ್ರೀಮಂತ ಪುರುಷರನ್ನು ಮೋಡಿ ಮಾಡುವ ʼಕಿಲಾಡಿ ವಧುʼ; ಇವಳು ಪೀಕಿದ್ದು ಕೋಟಿ ಕೋಟಿ ಹಣ
Birds: ಸಿಲಿಕಾನ್ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ
Darshan; ಶೂಟಿಂಗ್ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?
Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್ ಹೆಸರಲ್ಲಿ ವಂಚನೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.