ಅರ್ಥಪೂರ್ಣ ಮ್ಯಾರಥಾನ್
Team Udayavani, Apr 7, 2017, 3:45 AM IST
ಆ ದಿನ ಸಂಜೆ ನಮ್ಮ ಕ್ರೀಡಾಂಗಣದಲ್ಲಿ ಲೈನ್‌ಅಪ್ ಮಾಡಿ ಬಿಡೋ ಹೊತ್ತಿಗೆ ಒಂದು ಸೂಚನೆಯನ್ನು ನಮ್ಮ ಕಿವಿ ಮೇಲೆ ಹಾಕಿದ್ರು. ಅದೇನಪ್ಪಾ ಅಂದ್ರೆ, ಎಲ್ರೂ ನಾಳೆ ಬೆಳಗ್ಗಿನ ಜಾವ 4 ಗಂಟೆಗೆ ಹೊರಟು ರೆಡಿ ಆಗಿರ್ಬೇಕು, ಎಲ್ಲ ಸ್ಟೂಡೆಂಟ್ಸ್ ಕಡ್ಡಾಯವಾಗಿ ಬರೆಲàಬೇಕು ! ಯಾಕಪ್ಪಾ ಅಷ್ಟು ಬೇಗ ಎಲ್ಲಿಗಾದ್ರೂ ಟ್ರಿಪ್ ಅರೇಂಜ್ ಮಾಡಿಬಿಟ್ರಾ ಹೇಗೆ ಅಂತೆಲ್ಲ ನಾವು ಪಿಸುಗುಟ್ಟೋಕೆ ಶುರು ಮಾಡಿದೆವು. ಆ ದಿನ ಸಂಡೇ ಬೇರೆ. ಒಂದು ದಿನ ಸಿಗೋ ರಜೆಗೂ ಕಲ್ಲು ಹಾಕ್ತಾರಲ್ಲ ಅಂದೊRಂಡೇ ವಿಷಯ ಏನು ಅನ್ನೋ ಕುತೂಹಲದಲ್ಲಿದ್ದೆವು.
ಅದೇನು ಅಂದ್ರೆ, ಮಂಗಳೂರಿನ ಯೆನಪೋಯ ಯೂನಿವರ್ಸಿಟಿಯ Fight against Cancer at Cancertheon ಅನ್ನೋ ಹಾಫ್ ಮ್ಯಾರಥಾನ್ ಈವೆಂಟ್‌ನ ಅರೇಂಜ್ ಮಾಡಿದ್ರು. ಆ ಓಟದಲ್ಲಿ ಸ್ಪರ್ಧೆಗಾಗಿ ಓಡಿದವರು ಸ್ವಲ್ಪ ಜನ. ನಾವೆಲ್ಲ ಮ್ಯಾರಥಾನ್‌ನ ಎಂಜಾಯ್ ಮಾಡ್ಕೊಂಡು ಓಡೋದು ಅಂತ ಹೊರಟಿದ್ದೆವು.
ಯೆನಪೋಯ ಡೆಂಟಲ್ ಕಾಲೇಜು, ಯೆನಪೋಯ ಯೂನಿವರ್ಸಿಟಿಯ ಬೆಳ್ಳಿಹಬ್ಬದ ಸುಸಂದರ್ಭದಲ್ಲಿತ್ತು. ಇದರ ಪ್ರಯುಕ್ತ ಏರ್ಪಡಿಸಿದ್ದ ಕ್ಯಾನ್ಸೆರ್‌ಥೆನ್- 17 ಮಂಗಳೂರು ಹಾಫ್ ಮ್ಯಾರಥಾನ್‌ನಲ್ಲಿ ಸಾವಿರಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಓಟಗಾರರು ಸಾಕ್ಷಿಯಾಗಿದ್ದರು. ಭಾಗವಹಿಸಿದಂಥ ಎಲ್ಲ ಓಟಗಾರರಿಗೂ ಶ್ವೇತವರ್ಣದಿಂದ ಕಂಗೊಳಿಸೋ ಟೀ-ಶರ್ಟ್‌ಗಳನ್ನು ನೀಡಿದ್ದರಿಂದ ಎಲ್ಲರ ಗಮನವೂ ನಮ್ಮತ್ತ ಸೆಳೆಯುವಂತೆ ಮಾಡಿತ್ತು.
ಅಲ್ಲಿ ಏರ್ಪಡಿಸಿರೋ ಈ ಹಾಫ್ ಮ್ಯಾರಥಾನ್‌ಗೆ ನಮ್ಮ ಕ್ಲಬ್‌ನಿಂದ ಸುಮಾರು ನೂರು ಮಂದಿಯಷ್ಟು ಸ್ಟೂಡೆಂಟ್ಸ್‌ಗಳು ಹಾಜರಾಗಿದ್ವಿ. ಅಂದು ಬೆಳಗ್ಗೆ ನೇಸರ ಹುಟ್ಟೋ ಮುಂಚೆನೇ ಮಂಗಳೂರಿನ ಫಾರಮ್ ಫಿಝಾ ಮಾಲ್‌ನಿಂದ ಸ್ಟಾರ್ಟ್ ಆಗೋ ಸ್ಟಾರ್ಟಿಂಗ್ ಪಾಯಿಂಟ್‌ನಲ್ಲಿ ನಾವಿದ್ವಿ. ಅದಾಗಲೇ ನಮ್ಮ ಹಾಗೆ ಸಾವಿರಾರು ಓಟಗಾರರಾದ ಹುಡುಗರು, ಹುಡುಗಿಯರು, ಆಂಟಿಯರು, ಅಂಕಲ್‌ಗಳು, ಅಜ್ಜಿಯಂದಿರು, ಪುಟ್ಟಮಕ್ಕಳು ಎಲ್ಲರೂ ಓಟದಲ್ಲಿ ಪಾಲ್ಗೊಳ್ಳಲು ಉತ್ಸಾಹದಾಯಕವಾಗಿ ಓಡಾಡ್ತಾ ಇದ್ದರು.
ಒಟ್ಟಾಗಿ ಅಲ್ಲಿ 21 ಕಿ.ಮೀ. ಮ್ಯಾರಥಾನ್, 10 ಕಿ.ಮೀ. ಮ್ಯಾರಥಾನ್ ಮತ್ತು 5 ಕಿ.ಮೀ. ಮ್ಯಾರಥಾನ್ ಅದಾಗಿತ್ತು. 21 ಕಿ.ಮೀ ಓಡೋ ಓಟಗಾರರಿಗೆ 6 ಗಂಟೆಗೆ ಸ್ಪರ್ಧೆ ಶುರುವಾದ್ರೆ, 10 ಕಿ.ಮೀ ಓಡೋ ಓಟಗಾರರನ್ನು 6.30ರ ವೇಳೆಗೆ ಸ್ಟಾರ್ಟ್ ಅನ್ನೋ ಸೂಚನೆಯನ್ನು ನೀಡ್ತಾ ಇದ್ರು. ಇನ್ನು ಉಳಿದದ್ದು 5 ಕಿ. ಮೀ. ಓಡೋ ಓಟಗಾರರು. ಈ ಗುಂಪಿನಲ್ಲಿ ನಾವೆಲ್ಲರೂ ಪಾಲ್ಗೊಂಡಿದ್ದೆವು. ನಮ್ಮ ಮ್ಯಾರಥಾನ್ ಏಳು ಗಂಟೆಗೆ ಪ್ರಾರಂಭ ಮಾಡಿಯೇಬಿಟ್ಟರು. ಅತೀ ಹೆಚ್ಚಿನ ಸಂಖ್ಯೆಯ ಮ್ಯಾರಥಾನ್ ಪಟುಗಳು ನಮ್ಮ ಗುಂಪಿನಲ್ಲಿ ಇದ್ದದ್ದು ವಿಶೇಷ.
ಇನ್ನೇನು, ಸ್ಟಾರ್ಟ್ ಅನ್ನೋ ಕೂಗು ಕೇಳಿದ ತಕ್ಷಣ ನಾವು ಫುಲ್ ರೆಡಿಯಾಗಿ ನಿಂತಿದ್ದೆವು. ನಮಗೆ ಸಿಕ್ಕಿರೋ ಚೆಸ್ಟ್ ನಂಬರ್ ಮತ್ತು ಟೀ-ಶರ್ಟ್‌ಗಳು ಕಣ್ಣಿಗೆ ಹಬ್ಬವೆನ್ನುವ ರೀತಿ ತೋರುತ್ತಿತ್ತು. ನಮ್ಮ ಓಟ ಆರಂಭವಾಗಿಯೇಬಿಟ್ಟಿತು. ನಮ್ಮ ಫ್ರೆಂಡ್ಸ್ ಎಲ್ಲ ಜೊತೆಯಾಗಿ ರೋಡ್‌ಫುಲ್ ನಮೆªà ಅನ್ನೋ ಥರಾ ಓಡಿದೆವು. ಮುಂದೆ ಇರೋರನ್ನ ಹಿಂದೆ ಹಾಕೋದೊಂದೇ ನಮ್ಮ ಕೆಲಸ. ಎಷ್ಟು ಹಿಂದೆ ಹಾಕ್ಕೊಂಡು ಹೋದ್ರೂ ಅಷ್ಟೊಂದು ಜನರಲ್ಲಿ ನಾವು ಮುಂದೆ ಹೋಗೋಕ್ಕೆ ಸಾಧ್ಯ ಆಗ್ಲೆà ಇಲ್ಲ. ಸ್ವಲ್ಪ ಓಡೋದು, ಸ್ವಲ್ಪ ನಡೆಯೋದು, ಅಲ್ಲಲ್ಲಿ ಇಟ್ಟಿದ್ದ ನೀರಿನ ಬಾಟಲ್‌ಗಳನ್ನು ಬಾಯಾರಿಕೆ ಆಗಿÇÉಾಂದ್ರೂ ಎತ್ಕೊಂಡು ಕುಡಿಯೋದು ತುಂಬಾ ಮಜಾ ಅನ್ನಿಸಿಬಿಟ್ಟಿತ್ತು. ನಮ್ಮವ್ರು ಯಾರಾದ್ರೂ ಸಿಗುವಾಗ ರೋಡಲ್ಲಿ ಜೋರಾಗಿ ಕೂಗೋದು, ಅಷ್ಟು ದೊಡ್ಡ ಸಿಟಿ ಮಧ್ಯೆ ಓಡುವಾಗ ಪಕ್ಕದಲ್ಲಿ ನಿಂತು ನೋಡೋ ಜನರ ಉತ್ಸಾಹ ತುಂಬೋ ಕಮೆಂಟ್‌ಗಳು, ಒನ್ ವೇ ರೋಡ್ ಫುಲ್ ನಮಗೆ ನೀಡಿದರು. ಓಡಿದ್ದು 5 ಕಿ. ಮೀ. ಆಗಿದ್ರೂ ಅರ್ಧ ಮಂಗಳೂರು ಸುತ್ತಿ ಬಂದ ಹಾಗೆ ಅನ್ನಿಸಿತ್ತು.
ಸ್ವಲ್ಪ ಸುಸ್ತಾಗ್ತಾ ಇದ್ದ ಹಾಗೆ ಯಾವಾಗ ಫಾರಮ್ ಫಿಝಾ ಬರೆಲà ಇಲ್ವಲ್ಲ. ಆದಷ್ಟು ಬೇಗ ಹೋಗಿ ರೀಚ್ ಆಗ್ಬೇಕು ಅಂತ ನಮ್ಮ ಸ್ಪೀಡ್ ಸ್ವಲ್ಪ ಜಾಸ್ತಿ ಮಾಡಿದೆವು. ಇದ್ರಲ್ಲಿ ಎಷ್ಟೋ ಜನ ಓಟನ್ನ ಕಂಪ್ಲೀಟ್ ಮಾಡ್ಲೆà ಇಲ್ಲ. ಅರ್ಧದಿಂದಲೇ ರೋಡ್ ಕ್ರಾಸ್ ಮಾಡಿ ರಿಟರ್ನ್ ಬಂದು ಬಿಡ್ತಾ ಇದ್ರು. ನಾವೂನೂ ಹೇಗೋ ಬಂದು ವಾಪಾಸು ಮಾಲ್ ತಲುಪಿದ್ವಿ. ಕಣ್ಣು ಮುಚ್ಚಿ ಬಿಡೋ ಹೊತ್ತಿಗೆ ನಮ್ಮ ಕೊರಳಿಗೆ ಮೆಡಲ್‌ಗಳು ಬಂದುಬಿಟ್ಟಿತ್ತು. ನಾವು ಫುಲ್ ಖುಷಿಯಿಂದ “ಅಷ್ಟು ಬೇಗ ರೀಚ್ ಆದ್ವಾ?’ ಅಂತೆಲ್ಲ ಯೋಚನೆ ಮಾಡೋವಾಗ ಅಲ್ಲಿ ಹೇಳಿದ್ರು, ಈ ಮೆಡಲ್‌ಗಳು ಮೊದಲು ರೀಚ್ ಆಗೋ ಒಂದು ಸಾವಿರ ಮಂದಿಗೆ ಮಾತ್ರ. ಹಾಗಾಗಿ, ನಾವು ಆ ಸಾವಿರ ಮಂದಿಗಳಲ್ಲಿ ಒಬ್ಬರಾಗಿದ್ದೆವು.
ಮುಂದೆ ಹೋಗುವಾಗ ನಮ್ಮ ಖಾಲಿ ಹೊಟ್ಟೆಗೋಸ್ಕರ ತಂಪು ಪಾನೀಯಗಳು ರೆಡಿಯಾಗಿ ಕಾಯ್ತಾ ಇತ್ತು. ಅದನ್ನು ಕುಡ್ಕೊಂಡು ಮಾಲ್ ಒಳಗೆ ಬೆಳಗಿನ ಉಪಾಹಾರವನ್ನು ಸೇವಿಸಲು ಬಂದೆವು. ಹೊಟ್ಟೆ ತಾಳ ಹಾಕೋಕ್ಕೆ ಶುರು ಹಚ್ಚಿತ್ತು. ಪ್ಲೇಟ್ ತಗೊಂಡು ತಿಂಡಿ ಬಳಿ ಬಂದೆವು. ಮೂರು- ನಾಲ್ಕು ಬಗೆಯ ತಿಂಡಿಗಳು ತಯಾರಾಗಿ ಪ್ಲೇಟಿಗೆ ಬರಲು ಕಾದು ಕುಳಿತಿದ್ದವು. ನಾವು ಅಲ್ಲಿದ್ದ ಹಣ್ಣುಗಳನ್ನು ಮಾತ್ರ ತಿಂದೆವು. ಒಟ್ಟಾಗಿ, ಎಲ್ಲ ರೀತಿಯ ಅಚ್ಚುಕಟ್ಟಾದ ವ್ಯವಸ್ಥೆಯನ್ನು ಯೆನೆಪೋಯಾದವರು ನಮಗೆ ನೀಡಿದ್ರು.
ಈ ಮ್ಯಾರಥಾನ್‌ನಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಿಕೊಟ್ಟ ಯೆನಪೋಯ ಯೂನಿವರ್ಸಿಟಿಗೆ ಕೃತಜ್ಞತೆಯನ್ನು ಸಲ್ಲಿಸಲೇಬೇಕು. ಒಂದು ವಿಶೇಷ ಅನುಭವವನ್ನು ನೀಡಿತು. ನಾವೂ ಕೂಡಾ ಈ ಅರ್ಥಪೂರ್ಣ ಓಟದಲ್ಲಿ ಭಾಗವಹಿಸಿದೆವು ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿರುವುದು ಹೆಮ್ಮೆಯ ವಿಚಾರ ಅಂದ್ರೆ ತಪ್ಪಾಗಲಾರದು.
ಮುಗಿಸಿ ಬರೋ ಹೊತ್ತಿಗೆ, ನಮಗೆ ಭಾಗವಹಿಸಿದ ಪ್ರಶಸ್ತಿ ಪತ್ರವನ್ನೂ ನೀಡಿದ್ರು. ನಮ್ಮ ನ್ಪೋರ್ಟ್ಸ್ ಕ್ಲಬ್‌ನ ವಿದ್ಯಾರ್ಥಿಗಳಿಗೂ ನಗದು ಬಹುಮಾನವೂ ದೊರೆಯಿತು. ಮ್ಯಾರಥಾನ್ ಓಡಿದ ಅನುಭವ ಮನಸ್ಸಿಗೆ ಮುದ ನೀಡಿತ್ತು. ಇಡೀ ಮಾಲ್ ಸುತ್ತಿ ಸುತ್ತಿ ಸುಸ್ತಾಗಿ ಬಿಟ್ಟಿದ್ದೆವು. ಮರೆಯಲಾಗದ ಈ ಅನುಭವದ ಮ್ಯಾರಥಾನ್ ಮುಂದೆಯೂ ನಡೆಯಲಿ. ಸಿಕ್ಕಿದ ಅವಕಾಶವನ್ನು ಉಪಯೋಗಿಸುವಂತಾಗಲಿ.
ದೀಕ್ಷಾ ಬಿ. ಪೂಜಾರಿ
ತೃತೀಯ ಬಿ.ಎ. ಪತ್ರಿಕೋದ್ಯಮ ವಿಭಾಗ
ಎಸ್.ಡಿ.ಎಮ್. ಕಾಲೇಜು, ಉಜಿರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Team India; ಅಶ್ವಿನ್ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್
Kambli Health: ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!
INDvAUS: ಬಿಸಿಸಿಐ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ರಾ ಟ್ರಾವಿಸ್ ಹೆಡ್? Video
Cricket: ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಅಂತಿಮ; ಭಾರತದ ಪಂದ್ಯಗಳಿಗೆ ಯುಎಇ ಆತಿಥ್ಯ
Champions Trophy, ಭಾರತ ಪ್ರವಾಸಕ್ಕೆ ಇಂಗ್ಲೆಂಡ್ ತಂಡ ಪ್ರಕಟ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.