ರಾಜ್ಯದ ಯುವಕರಲ್ಲಿ  ಹೆಚ್ಚುತ್ತಲಿದೆ ಖನ್ನತೆ ಪ್ರಮಾಣ


Team Udayavani, Apr 7, 2017, 3:45 AM IST

kinnate.jpg

ಬೆಂಗಳೂರು: ಇಂದು ವಿಶ್ವ ಆರೋಗ್ಯ ದಿನ. ಈ ಬಾರಿಯ ಘೋಷವಾಕ್ಯ “ಖನ್ನತೆಯಿಂದ ಉತ್ಸಾಹದೆಡೆಗೆ’. ಮನುಷ್ಯನನ್ನು ಗೆದ್ದಲು ಹುಳುವಿನಂತೆ ಕಾಡುವ “ಖನ್ನತೆ’ ಎಂಬ ಮಾನಸಿಕ ಕಾಯಿಲೆ, ಇತ್ತೀಚಿನ ವರ್ಷಗಳಲ್ಲಿ ಯುವಕರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಕರ್ನಾಟಕದಲ್ಲಿ ಇದರ ಪ್ರಮಾಣ ಏರುಗತಿಯಲ್ಲಿದೆ.

ಆರೋಗ್ಯ ಸಮಸ್ಯೆಗಳ ಬಗ್ಗೆ ಆಪ್ತ ಸಮಾಲೋಚನೆ ನಡೆಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ “ಆರೋಗ್ಯವಾಣಿ 104′ ಇದರ ವಿಶ್ಲೇಷಣೆ ಪ್ರಕಾರ ರಾಜ್ಯದ 16 ರಿಂದ 24 ವರ್ಷದವರೆಗೆಗಿನ ಯುವಕರ ಪೈಕಿ ಶೇ.73.17 ರಷ್ಟು ಮಂದಿಗೆ “ಖನ್ನತೆ’ ಕಾಡುತ್ತಿದೆ. ಈ ಖನ್ನತೆಗೆ ಶೇ.73ರಷ್ಟು ಶಿಕ್ಷಣ ಕಾರಣ ಆಗಿದ್ದರೆ, ಶೇ.8.18 ಕೌಟುಂಬಿಕ ಸಮಸ್ಯೆ ಹಾಗೂ ಶೇ.3.38 ಪ್ರೇಮ ವೈಫ‌ಲ್ಯ ಹಾಗೂ ಭಾವನಾತ್ಮಕ ವಿಷಯಗಳು ಕಾರಣವಾಗಿವೆ.

ಜಾಗತಿಕ ಮಟ್ಟಧಿದಲ್ಲಿ ಖನ್ನತೆ ಪ್ರಮಾಣ ಏರಿಕೆ ಆಗುತ್ತಿದ್ದು ಪ್ರಪಂಚದಲ್ಲಿ ಪ್ರತಿ ವರ್ಷ 8 ಲಕ್ಷ ಮಂದಿ ಖನ್ನತೆಯಿಂದಾಗಿ
ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಅದೇ ರೀತಿ ರಾಷ್ಟ್ರೀಯ ಮಾನಸಿಕ ಆರೋಗ್ಯ ಸಮೀಕ್ಷೆ ಪ್ರಕಾರ ಪ್ರತಿ 20 ಜನರಲ್ಲಿ
ಒಬ್ಬರು ಖನ್ನತೆಯಿಂದ ನರಳುತ್ತಾರೆ. ಅದರಂತೆ ಕರ್ನಾಟಕದಲ್ಲೂ ಈ ಸಮಸ್ಯೆ ಹೆಚ್ಚಾಗುತ್ತಿದೆ. ಅದಕ್ಕಾಗಿಯೇ ಈ ಬಾರಿ ವಿಶ್ವ ಆರೋಗ್ಯ ದಿನವನ್ನು (ಮಾ.7) “ಖನ್ನತೆ ಬಗ್ಗೆ ಮಾತನಾಡೋಣ’ ಎಂಬ ಘೋಷಣೆಯೊಂದಿಗೆ ಆಚರಿಸಧಿಲಾಗುತ್ತಿದೆ.

ಯುವಕರ ಸಂಖ್ಯೆಯೇ ಹೆಚ್ಚು: ಆರೋಗ್ಯವಾಣಿ 104 ಇದರ ಕಳೆದ ನಾಲ್ಕು ವರ್ಷದ (2013-17) ವಿಶ್ಲೇಷಣೆ ಪ್ರಕಾರ ಸಹಾಯವಾಣಿಗೆ ಆಪ್ತ ಸಮಾಲೋಚನೆಗಾಗಿ 1,67,815 ಕರೆಗಳನ್ನು ಸ್ವೀಕರಿಸಲಾಗಿದ್ದು, ಅದರಲ್ಲಿ 1,37,760 ಲಕ್ಷ
ಮಂದಿಗೆ ಆಪ್ತ ಸಮಾಲೋಚನೆ ಮಾಡಲಾಗಿದೆ. ಬಹುತೇಕ ಕರೆಗಳು ಯುವಕರದ್ದಾಗಿದ್ದು, ಬೇರೆ ಆರೋಗ್ಯ ಸಮಸ್ಯೆಗಳಿಗಿಂತ ಹೆಚ್ಚಾಗಿ ಖನ್ನತೆಗೆ ಒಳಗಾದವರೇ ಕರೆ ಮಾಡಿರುತ್ತಾರೆ. ಅದರಂತೆ 16 ರಿಂದ 24 ವರ್ಷದೊಳಗಿನ ಶೇ.73ರಷ್ಟು ಯುವಕರು ಖನ್ನತೆಯಿಂದ ಬಳಲುತ್ತಾರೆ. ಶಿಕ್ಷಣ, ವೃತ್ತಿ ಬದುಕಿನ ಜೊತೆಗೆ ಪ್ರೇಮ ವೈಫ‌ಲ್ಯ, ಭಾವನಾತ್ಮಕ ವಿಷಯಗಳು ಖನ್ನತೆಗೆ ಪ್ರಮುಖ ಕಾರಣ ಅನ್ನುವುದು ವಿಶ್ಲೇಷಣೆಯಿಂದ ತಿಳಿದಿದೆ.

ಖನ್ನತೆಗೆ ಕಾರಣ/ಲಕ್ಷಣ: ಮೆದುಳಿನಲ್ಲಿನ ರಾಸಾಯನಿಕ ಕ್ರಿಯೆಯ ಬದಲಾವಣೆ. (ಉದಾ: ದೋಪಮಿನ್‌/ಸೆರೋಟೋನಿನ್‌). ವ್ಯಕ್ತಿಗೆ ವಂಶಿಕವಾಗಿ ಬರುವ ದೌರ್ಬಲ್ಯ, ಆತನ ವ್ಯಕ್ತಿತ್ವ. ಕಷ್ಟ-ನಷ್ಟ ಬಂದಾಗ ತಾಳ್ಮೆಯ
ಶಕ್ತಿ ಇಲ್ಲದಿರುವುದು. ಮನೆಯವರ ನಡುವಿನ ಬಾಂಧವ್ಯ ಮುಂತಾದವು ಖನ್ನತೆಗೆ ಪ್ರಮುಖ ಕಾರಣಗಳು. ಅದೇ ರೀತಿ ಅತಿಯಾದ ಚಿಂತೆ ಮತ್ತು ವ್ಯಥೆ, ಹಸಿವು ಮತ್ತು ನಿದ್ರೆಯಲ್ಲಿ ಬದಲಾವಣೆ, ದೈನಂದಿನ ಚಟುವಟಿಕಗಳಲ್ಲಿ ನಿಧಾನ ಮತ್ತು ಅಪೂರ್ಣತೆ. ಜಡತ್ವ ಹಾಗೂ ನಿಷ್ಕ್ರಿಯತೆ, ಕೆಲಸಗಳಲ್ಲಿ ನಿರಾಸಕ್ತಿ ಇವು ಖನ್ನತೆಯ ಪ್ರಮುಖ ಲಕ್ಷಣಗಳು.

ಏನಿದು ಆರೋಗ್ಯವಾಣಿ: ಆರೋಗ್ಯ ಸಮಸ್ಯೆಗಳಿಗೆ ಆಪ್ತ ಸಮಾಲೋಚನೆ ಮೂಲಕ ಸಲಹೆ, ಮಾರ್ಗದರ್ಶನ ನೀಡಲು ರಾಜ್ಯ ಸರ್ಕಾರ 2013ರಲ್ಲಿ ಹುಬ್ಬಳ್ಳಿಯಲ್ಲಿ ಆರೋಗ್ಯವಾಣಿ 104 ಎಂಬ ಸಹಾಯವಾಣಿ ಆರಂಭಿಸಿತ್ತು. ವಿವಿಧ
ಆರೋಗ್ಯ ಸಮಸ್ಯೆಗಳ ಆಪ್ತಸಮಾಲೋಚನೆ ಬಯಸಿ ಕರೆಗಳು ನಿರಂತರ ಹೆಚ್ಚುತ್ತಿವೆ. ಇದೇ ವೇಳೆ ಖನ್ನತೆಗೊಳಗಾದವರು ಕರೆ ಮಾಡುವುದು ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ.

2013-14ರಲ್ಲಿ ಖನ್ನತೆಗೆ ಸಂಬಂಧಿಸಿದ 11 ಸಾವಿರ ಕರೆಗಳಿದ್ದರೆ 2016-17ರಲ್ಲಿ ಅದರ ಸಂಖ್ಯೆ 57 ಸಾವಿರಕ್ಕೆ ಏರಿದೆ. ಸಹಾಯವಾಣಿಗೆ ಸಾಕಷ್ಟು ಬೇಡಿಕೆ ಬರುತ್ತಿದ್ದು, ಶೀಘ್ರದಲ್ಲೇ ಬೆಂಗಳೂರು ಮತ್ತು ರಾಯಚೂರಿನಲ್ಲಿ ಎರಡು ಸಹಾಯವಾಣಿ ಕೇಂದ್ರ ತೆರೆಯವ ಪ್ರಸ್ತಾವನೆ ಇದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಟಾಪ್ ನ್ಯೂಸ್

Padubidri

Padubidire: “ಬಲೆ ಬಲಿಪುಗ’ 3 ಕಿ.ಮೀ. ಬರಿಗಾಲ ಮ್ಯಾರಥಾನ್‌ ಓಟ

cOurt

Pakshikere: ಮೂವರ ಸಾವಿನ ಪ್ರಕರಣ: ತಾಯಿ, ಪುತ್ರಿಗೆ ಜಾಮೀನು ಮಂಜೂರು

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

aus-rohit

Australia: ಪರ್ತ್‌ಗೆ ಆಗಮಿಸಿದ ರೋಹಿತ್‌ ಶರ್ಮ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-ewew

ಸಂಗೀತ ವಿವಿಯಲ್ಲಿ ಕೋರ್ಸ್‌ ಆರಂಭ: ಕುಲಪತಿ ನಾಗೇಶ್‌

CT RAVI 2

C T Ravi; ಸನಾತನ ಧರ್ಮ ಉಳಿದರೆ ದೇಶದ ಉಳಿವು

Darshan (3)

Renukaswamy ಹ*ತ್ಯೆ ಸ್ಥಳದಲ್ಲಿ ದರ್ಶನ್‌ ಇದ್ದ ಚಿತ್ರ ಲಭ್ಯ: ಪರಂ

ravi-kumar

BJP ಸೋಲಿಗೆ ರಾಜ್ಯಾಧ್ಯಕ್ಷ ಒಬ್ಬರೇ ಹೊಣೆಯಲ್ಲ: ಎನ್‌. ರವಿಕುಮಾರ್‌

1-nikkki

JDS ಕಳೆದುಕೊಂಡಲ್ಲೇ ಹುಡುಕುತ್ತೇನೆ: ನಿಖಿಲ್‌ ಕುಮಾರಸ್ವಾಮಿ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Padubidri

Padubidire: “ಬಲೆ ಬಲಿಪುಗ’ 3 ಕಿ.ಮೀ. ಬರಿಗಾಲ ಮ್ಯಾರಥಾನ್‌ ಓಟ

cOurt

Pakshikere: ಮೂವರ ಸಾವಿನ ಪ್ರಕರಣ: ತಾಯಿ, ಪುತ್ರಿಗೆ ಜಾಮೀನು ಮಂಜೂರು

police

Gangolli: ಕ್ರಿಮಿನಲ್‌ ಹಿನ್ನೆಲೆ: ಮೂವರ ಮೇಲೆ ಪ್ರಕರಣ ದಾಖಲು

theft-temple

Koteshwara: ಶೋ ರೂಮ್‌ನಲ್ಲಿ ಕಳವಿಗೆ ಯತ್ನ

Accident-logo

Sulya: ನಿಲ್ಲಿಸಿದ್ದ ಕಾರಿಗೆ ಬಸ್‌ ಢಿಕ್ಕಿ; ಜಖಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.