ಕಾಲೇಜು ದಿನಗಳ ಫೋಟೋ ತೋರಿಸಿ ಹಣ ವಸೂಲಿ
Team Udayavani, Apr 7, 2017, 11:32 AM IST
ಬೆಂಗಳೂರು: ತನ್ನ ಜತೆ ಕಾಲೇಜಿನಲ್ಲಿ ತೆಗೆಸಿಕೊಂಡಿದ್ದ ಪೋಟೋವನ್ನು ಫೇಸ್ಬುಕ್ನಲ್ಲಿ ಹಾಕುವುದಾಗಿ ಸ್ನೇಹಿತೆಯನ್ನು ಬೆದರಿಸಿ ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣ ಪಡೆದುಕೊಂಡಿದ್ದ ಯುವಕನನ್ನು ಬಾಗಲಕುಂಟೆ ಪೊಲೀಸರು ಬಂಧಿಸಿದ್ದಾರೆ. ಖಾಸಗಿ ಕಾಲೇಜು ವಿದ್ಯಾರ್ಥಿ ಶ್ರೇಯಸ್ ಬಂಧಿತ ಆರೋಪಿ.
ಸಂತ್ರಸ್ತ ಯುವತಿ ಹಾಗೂ ಆರೋಪಿ ಶ್ರೇಯಸ್ ನಗರದ ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು ಪರಸ್ಪರ ಸ್ನೇಹಿತರಾಗಿದ್ದರು. ಇದೇ ಸಲುಗೆಯ ಮೇಲೆ ಇಬ್ಬರೂ ಪೋಟೋ ತೆಗೆಸಿಕೊಂಡಿದ್ದರು. ಇದನ್ನೇ ದುರುಪಯೋಗ ಪಡೆಸಿಕೊಳ್ಳಲು ಯತ್ನಿಸಿದ ಶ್ರೇಯಸ್, ನೀನು ನನಗೆ ಹಣ ನೀಡಬೇಕು ಇಲ್ಲದಿದ್ದರೆ ಪೋಟೋ ಫೇಸ್ಬುಕ್ನಲ್ಲಿ ಹಾಕುತ್ತೇನೆ, ಜತೆಗೆ ನಿಮ್ಮ ಮನೆಯವರಿಗೂ ಕಳಿಸಿಕೊಡುತ್ತೇನೆ ಎಂದು ಬೆದರಿಸುತ್ತಿದ್ದ.
ಇದರಿಂದ ನೊಂದಿದ್ದ ಯುವತಿ, ತಾನು ಉಳಿದುಕೊಂಡಿದ್ದ ದೊಡ್ಡಮ್ಮನ ಮನೆಯಲ್ಲಿಯೇ 10 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕದ್ದು ಶ್ರೇಯಸ್ಗೆ ನೀಡಿದ್ದಳು. ಇದಾದ ಬಳಿಕವೂ ಶ್ರೇಯಸ್, ಪದೇ ಪದೆ ಹಣಕ್ಕಾಗಿ ಪೀಡಿಸುತ್ತಿದ್ದ ಎನ್ನಲಾಗಿದೆ. ಈ ಮಧ್ಯೆ ಚಿನ್ನಾಭರಣ ಕಳವಿನ ಬಗ್ಗೆ ಯುವತಿಯ ದೊಡ್ಡಮ್ಮ ಪೊಲೀಸರಿಗೆ ದೂರು ನೀಡಿದ್ದರು.
ಈ ಸಂಬಂಧ ಪೊಲೀಸರು ಮನೆಯವರನ್ನು ವಿಚಾರಣೆ ನಡೆಸುತ್ತಿದ್ದ ವೇಳೆ ತಾನೇ ಚಿನ್ನಭರಣ ಕದ್ದು ಶ್ರೇಯಸ್ಗೆ ನೀಡಿರುವುದಾಗಿ ತಪ್ಪೊಪ್ಪಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು, ಆರೋಪಿ ಶ್ರೇಯಸ್ನನ್ನು ಬಂಧಿಸಿ ಆತನ ಬಳಿಯಿದ್ದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.