ಲೋಕಾಯುಕ್ತ ಕಚೇರಿಯಲ್ಲೇ ಎಸಿಬಿ ಬಲೆಗೆ ಬಿದ್ದ ನೌಕರ!
Team Udayavani, Apr 7, 2017, 11:34 AM IST
ಬೆಂಗಳೂರು: ಎಸಿಬಿ ಪೊಲೀಸ್ ತಂಡ ಇಂದು ಲೋಕಾಯುಕ್ತ ಕಚೇರಿ ಮೇಲೆ ದಾಳಿ ನಡೆಸಿ ಭ್ರಷ್ಟಾಚಾರದಲ್ಲಿ ತೊಡಗಿದ್ದ ನೌಕರನನ್ನು ಬಂಧಿಸಿದೆ. ಲೋಕಾಯುಕ್ತದ ಮಾಹಿತಿ ಆಧರಿಸಿಯೇ ಎಸಿಬಿ ಈ ದಾಳಿ ನಡೆಸಿದೆ. ಲೋಕಾಧಿಯುಕ್ತ ಕಚೇರಿಯಲ್ಲಿ ಜಡ್ಜ್ ಮೆಂಟ್ ರೈಟರ್ ಆಗಿದ್ದ ಸುಂಕಣ್ಣ ಎಸಿಬಿ ಬಲೆಗೆ ಬಿದ್ದ ನೌಕರ.
ಬಳ್ಳಾರಿಯ ಪೊಲೀಸ್ ಪೇದೆಯೊಬ್ಬರಿಗೆ ಭ್ರಷ್ಟಾಚಾರ ಪ್ರಕರಣದಲ್ಲಿ ಖುಲಾಸೆಗೊಂಡ ಬಗ್ಗೆ ಲೋಕಾಯುಕ್ತ ಕಾನೂನು ವಿಭಾಗದಿಂದ ಪ್ರಮಾಣ ಪತ್ರ ನೀಡಲು 25 ಸಾವಿರ ರೂ. ಲಂಚ ಸ್ವೀಕರಿಸಲಿರುವ ಖಚಿತ ಮಾಹಿತಿ ಆಧರಿಸಿ ಎಸಿಬಿ ದಾಳಿ ನಡೆಸಿದಾಗ ಭ್ರಷ್ಟಾಚಾರ ಪ್ರಕರಣ ಬಯಲಾಗಿದೆ.
ಬಳ್ಳಾರಿಯ ಎಪಿಎಂಸಿ ಪೊಲೀಸ್ ಠಾಣೆಯ ಪೇದೆಯಾಗಿರುವ ದೂರುದಾರ ಕಲ್ಲೇಶಪ್ಪ, 2011ರಲ್ಲಿ ಲಂಚ ಸ್ವೀಕಾರ ಪ್ರಕರಣದ ಆರೋಪಿಧಿಯಾಗಿದ್ದು, ಈ ಪ್ರಕರಣದ ವಿಚಾರಣೆ ನಡೆಸಿದ್ದ ಸೆಷನ್ಸ್ ನ್ಯಾಯಾಲಯ, 2015ರಲ್ಲಿ ದೋಷಮುಕ್ತಗೊಳಿಸಿತ್ತು.
ಈ ನಿಟ್ಟಿನಲ್ಲಿ “ಲಂಚ ಸ್ವೀಕಾರ ಪ್ರಕರಣದಲ್ಲಿ ಮೇಲ್ಮನವಿ ಸಲ್ಲಿಸುವ ಅಗತ್ಯವಿಲ್ಲ’ ಎಂಬ ಬಗ್ಗೆ ಪೇದೆ ಕಲ್ಲೇಶಪ್ಪ ಲೋಕಾಯುಕ್ತ ಕಾನೂನು ವಿಭಾಗದಿಂದ ಪ್ರಮಾಣಪತ್ರ ಪಡೆಯಬೇಕಿತ್ತು. ಈ ಪ್ರಮಾಣಪತ್ರ ನೀಡಲು ಜಡ್ಜ್ಮೆಂಟ್ ರೈಟರ್ ಆಗಿರುವ ಸುಂಕಣ್ಣ, ನಿನ್ನ ಪ್ರಕರಣ ಮೇಲ್ಮನವಿ ಸಲ್ಲಿಸಲು ಯೋಗ್ಯವಲ್ಲ ಎಂಬ ನಿರ್ಧಾರಕ್ಕೆ ಬರಲು ನಾನು ಕಾರಣ.
ಹೀಗಾಗಿ 34 ಸಾವಿ ರೂ. ಲಂಚ ನೀಡುವಂತೆ ಪೇದೆ ಕಲ್ಲೇಶಪ್ಪನಿಗೆ ಬೇಡಿಕೆ ಇಟ್ಟಿರುತ್ತಾನೆ. ಕೊನೆಗೆ 25 ಸಾವಿರ ರೂ. ನೀಡಲು ಪೇದೆ ಒಪ್ಪಿಕೊಂಡಿರುತ್ತಾರೆ. ಈ ಹಿನ್ನೆಲೆಯಲ್ಲಿ ಪೇದೆ ಕಲ್ಲೇಶಪ್ಪ, ಸುಂಕಣ್ಣನ ಲಂಚ ಬೇಡಿಕೆ ವಿಚಾರ ಕುರಿತು ಮೊದಲು ಲೋಕಾಯುಕ್ತ ಉನ್ನತ ಅಧಿಕಾರಿಗಳಿಗೆ ಮಾಹಿತಿ ನೀಡಿ, ಅವರ ನಿರ್ದೇಶನದಂತೆ ಎಸಿಬಿ ಪೊಲೀಸರಿಗೆ ದೂರು ನೀಡಿರುತ್ತಾರೆ.
ಪೇದೆ ಕಲ್ಲೇಶಪ್ಪ ಗುರುವಾರ 25 ಸಾವಿರ ರೂ. ನೀಡುವುದಾಗಿ ತಿಳಿಸು ತ್ತಾರೆ. ಆದರೆ ನೇರವಾಗಿ ಹಣ ಸ್ವೀಕರಿ ಸದ ಸುಂಕಣ್ಣ, ತಾನು ಬೆಂಗಳೂರಿನಲ್ಲಿದ್ದು, ತನ್ನ ಗೆಳೆಯ ಬಳ್ಳಾರಿಯ ಎಪಿಎಂಸಿ ಠಾಣೆಯ ಪೇದೆ ಸುಧಾಕರ್‌ಗೆ ಹಣ ನೀಡಲು ತಿಳಿಸಿರುತ್ತಾರೆ. ಈ ಕುರಿತ ದೂರವಾಣಿ ಕರೆಗಳ ಸಂಭಾ ಷಣೆ ಆಧಾರದಲ್ಲಿ ಕಾರ್ಯಾಧಿಚರಣೆ ನಡೆಸಿ ಗುರುವಾರ ಬೆಂಗಳೂರಿನ ಲೋಕಾಯುಕ್ತ ಕಚೇರಿಯಲ್ಲಿ ಸುಂಕಣ್ಣನನ್ನು ಬಂಧಿಸಲಾಯಿತು. ಲಂಚ ಸ್ವೀಕರಿಸುತ್ತಿದ್ದ ಸುಧಾಕರ್‌ನನ್ನು ಸೆರೆ ಹಿಡಿಧಿಯಲಾಯಿತು.
ಸುಂಕಣ್ಣ ಲಂಚ ಬೇಡಿಕೆ ಸಂಬಂಧ ದೂರುದಾರರಾದ ಪೇದೆ ಮೊದಲು ನಮಗೆ ದೂರು ನೀಡಿದ್ದರು. ಆರೋಪಿ ಯನ್ನು ಬಂಧಿಸಿ ತನಿಖೆ ನಡೆಸುವಂತೆ ಭ್ರಷ್ಟಾಚಾರ ನಿಗ್ರಹ ದಳಕ್ಕೆ ನಿರ್ದೇಶನ ನೀಡಿದ್ದೆ. ಭ್ರಷ್ಟಚಾರಕ್ಕೆ ಕಡಿವಾಣ ಹಾಕಲು ಹುಟ್ಟಿಕೊಂಡ ಲೋಕಾ ಯುಕ್ತ ಹಾಗೂ ಎಸಿಬಿ ಸಂಂಸ್ಥೆಗಳು ಪರಸ್ಪರ ಸಹಕಾರದ ಮೇಲೆ ಕಾರ್ಯ ನಿರ್ವಹಿಸಲಿವೆ.
-ಪಿ. ವಿಶ್ವನಾಥ ಶೆಟ್ಟಿ, ನಿವೃತ್ತ ನ್ಯಾಯಮೂರ್ತಿ ಲೋಕಾಯುಕ್ತರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Yadagiri: ವಕ್ಫ್ ಹೋರಾಟ ರೈತರ ಪರವಾಗಿದೆ: ಶಾಸಕ ಯತ್ನಾಳ
ಅಡಿಕೆ ಬೆಳೆಗಾರರ ಜೀವನಕ್ಕೆ ಆಘಾತವಿಕ್ಕಿದ ಡಬ್ಲ್ಯೂಎಚ್‌ಒ ವಿರುದ್ಧ ಕ್ರಮಕ್ಕೆ ಒತ್ತಾಯ
Sullia: ಕನಕಮಜಲು; ಅಂಗಡಿ, ಹೊಟೇಲ್‌ನಿಂದ ಕಳವು
KFD Vaccine: ಮುಂಬರುವ ನವೆಂಬರ್‌ನಲ್ಲಿ ಮಂಗನ ಕಾಯಿಲೆಗೆ ಲಸಿಕೆ ಸಿದ್ಧ: ದಿನೇಶ್ ಗುಂಡೂರಾವ್
Actress: ಫ್ರೆಂಚ್ ಗೆಳೆಯನೊಂದಿಗೆ ಬ್ರೇಕ್‌ಅಪ್ ಆಗಿದೆ: ಮಲ್ಲಿಕಾ ಶೆರಾವತ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.