ಯಕ್ಷ ತಿರುಗಾಟದ 40ರ ಸಂಭ್ರಮ ಕೋಟ ಸುರೇಶ ಬಂಗೇರ


Team Udayavani, Apr 7, 2017, 3:56 PM IST

007-KALA-9.jpg

ಕುಂದಾಪುರ – ಬ್ರಹ್ಮಾವರ ಪರಿಸರದ ನಡುತಿಟ್ಟಿನ ಪ್ರಾತಿನಿಧಿಕ ಪುರುಷ ವೇಷಧಾರಿಯಾಗಿರುವ ಕೋಟ ಸುರೇಶ ಬಂಗೇರ ನಡುತಿಟ್ಟಿನ ಈ ತಲೆಮಾರಿನ ಪ್ರಾತಿನಿಧಿಕ ಕಲಾವಿದರು. ಈ ವರ್ಷ ಅವರ ಯಕ್ಷ ತಿರುಗಾಟಕ್ಕೆ 40 ವರ್ಷಗಳು ತುಂಬಿವೆ. ಅವರ ಅಭಿಮಾನಿಗಳು ಸಾರ್ವಜನಿಕ ಸಮ್ಮಾನ ಮತ್ತು ನಿಧಿ ಸಮರ್ಪಣಾ ಕಾರ್ಯಕ್ರಮವನ್ನು ಎ.12, 2017ರಂದು ಕೋಟದಲ್ಲಿ ಹಮ್ಮಿಕೊಂಡಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ಬಡಗುತಿಟ್ಟಿನ ಹಿರಿಯ ಕಲಾವಿದರ ಕೂಡುವಿಕೆಯಲ್ಲಿ ಪ್ರಮೀಳಾರ್ಜುನ- ಭೀಷ್ಮ ಪ್ರತಿಜ್ಞೆ ಮತ್ತು ಮಾಗಧ ವಧೆ ಪ್ರಸಂಗಗಳ ಪ್ರದರ್ಶನವಿದೆ.

ಶಿರಿಯಾರ ಮಂಜು ನಾಯ್ಕರ ಲಾಲಿತ್ಯಪೂರ್ಣ ಶ್ರುತಿಬದ್ಧ ಮಾತುಗಾರಿಕೆ, ವೀರಭದ್ರ ನಾಯ್ಕರ ಹೆಜ್ಜೆಗಾರಿಕೆ, ಮೊಳಹಳ್ಳಿ ಹೆರಿಯ ನಾಯ್ಕರ ರಂಗತಂತ್ರ ಮತ್ತು ಕಿರು ಹೆಜ್ಜೆ ಇವು ಮೂರನ್ನೂ ಒಮ್ಮೆಗೆ ನೋಡಬೇಕಾದರೆ ಸುರೇಶ ಬಂಗೇರರ ವೇಷಗಾರಿಕೆಯ ಸೊಗಸನ್ನು ಕಾಣಬೇಕು. ಉತ್ತರಕನ್ನಡದ ಭಾವಾಭಿನಯಕ್ಕೆ ದಕ್ಷಿಣಕನ್ನಡದ ವೀರಾಭಿನಯ ಸೇರಿಸಿ ಅವರು ಚಿತ್ರಿಸುವ ಸುಧನ್ವ ಯುವ ಕಲಾವಿದರಿಗೆ ಮಾರ್ಗದರ್ಶಿ. 

ಸುರೇಶರ ವೇಷಗಳಲ್ಲಿ ಗುರುತಿಸಬೇಕಾದದ್ದು ಮಾತುಗಾರಿಕೆಯ ಮೋಡಿ ಮತ್ತು ವೇಷಗಾರಿಕೆಯ ಸೊಗಸು. ಎಲ್ಲಿಯೂ ಯಕ್ಷಗಾನದ ಆವರಣ ಭಂಗ ಮಾಡದೆ, ಪಾತ್ರಗಳ ಔಚಿತ್ಯ ಕೆಡಿಸದೆ, ಇದಿರು ಪಾತ್ರಧಾರಿ ಗಳಿಗೆ ಅನಗತ್ಯ ಸವಾಲು ಹಾಕದೇ ಹಿರಿಯರು ಹಾಕಿಕೊಟ್ಟ ಚೌಕಟ್ಟಿನೊಳಗೆ ಕಡೆದು ನಿಲ್ಲಿಸಿದ ಬಿಂಬದ ಹಾಗೆ ಅವರ ಪಾತ್ರಚಿತ್ರಣ. ಅಪೂರ್ವವಾದ ಶ್ರುತಿಬದ್ಧತೆ ಅವರ ಆಸ್ತಿ. ದಕ್ಷಿಣಕನ್ನಡ, ದೂರದ ಬೆಂಗಳೂರು, ಮುಂಬೈಗಳಲ್ಲಿ ಬಡಗುತಿಟ್ಟಿನ ಸಾಂಪ್ರದಾಯಿಕ ಶೈಲೀಕೃತ ಭವ್ಯತೆಯನ್ನು ಪಾತ್ರಗಳ ಮೂಲಕ ಜೀವಂತವಾಗಿ ತೆರೆದಿಡುವ ಮಧ್ಯಮ ತಿಟ್ಟಿನ ಕರ್ಣಾರ್ಜುನದಂತಹ ಪ್ರಸಂಗದ ಪ್ರದರ್ಶನ ವಿದ್ದಲ್ಲಿ ಅರ್ಜುನ ಅಥವಾ ಕೃಷ್ಣನ ಪಾತ್ರಕ್ಕೆ ಇವರು ಅನಿವಾರ್ಯವಾಗುತ್ತಾರೆ. ಬಡಗುತಿಟ್ಟಿನ ಪುರುಷ ವೇಷಗಳ ಸಾಂಪ್ರದಾಯಿಕ ಸೊಗಸು ಮೈದುಂಬಿಕೊಂಡ ಸುರೇಶರ ಪರಿಶುದ್ಧ ನೃತ್ಯಾಭಿನಯ, ಆಕರ್ಷಕ ಆಳಂಗ, ನಿರರ್ಗಳ ಮಾತುಗಾರಿಕೆ, ಸೊಗಸಾದ ವೇಷಗಾರಿಕೆಯಿಂದ ಅವರನ್ನು ಭಿನ್ನವಾಗಿ ಗುರುತಿಸಬಹುದಾಗಿದೆ.

ಉಡುಪಿ ತಾಲೂಕು ಮಣೂರು-ಪಡುಕೆರೆಯಲ್ಲಿ 1965ರಲ್ಲಿ ಬೇಡು ಮರಕಾಲ ಮತ್ತು ಅಕ್ಕಮ್ಮ ದಂಪತಿಯ ಮಗನಾಗಿ ಜನಿಸಿದ ಸುರೇಶ ಬಂಗೇರರು 16ನೇ ವಯಸ್ಸಿನಲ್ಲಿ ಮಂದಾರ್ತಿ ಮೇಳದಲ್ಲಿ ಗೆಜ್ಜೆ ಕಟ್ಟಿದರು. ನಿರಂತರ ಕಲಾಸೇವೆ ಮಾಡಿದ ಇವರು ಬಹುತೇಕ ಹಿರಿಯ ಕಲಾವಿದರಂತೆ ಕಂಡು – ಕೇಳಿ ಉನ್ನತ ಮಟ್ಟಕ್ಕೆ ಏರಿದವರು. ಅಂದಿನ ಹಿರಿಯ ಕಲಾವಿದ ಶಿರಿಯಾರ ಮಂಜು ನಾಯ್ಕರ ಹೂವಿನ ಕೋಲಿನ ಬಾಲ ಕಲಾವಿದರಾಗಿ ಶಿರಿಯಾರದವರ ನಿಕಟ ಸಂಪರ್ಕವನ್ನು ಸಾಧಿಸಿ ಅರ್ಥಗಾರಿಕೆ, ರಂಗನಡೆ, ನೃತ್ಯಾಭಿನಯ ಕೌಶಲವನ್ನು ಕಂಡುಕೊಂಡು ತನ್ನ ಕಲಾನುಭವವನ್ನು ಗರಿಷ್ಟ ಮಟ್ಟದಲ್ಲಿ ಇಟ್ಟುಕೊಂಡವರು. ಸಹೋದರ ಸಂಬಂಧಿ ಮೊಳಹಳ್ಳಿ ಹೆರಿಯ ನಾಯ್ಕರನ್ನು ಗುರು ಸ್ಥಾನ ದಲ್ಲಿ ಇರಿಸಿಕೊಂಡು ಅವರೊಂದಿಗೆ ಮಂದಾರ್ತಿ ಮೇಳದಲ್ಲಿ ಗೆಜ್ಜೆ ಕಟ್ಟಿ ಅನಂತರ ದೀರ್ಘ‌ಕಾಲ ಸೌಕೂರು, ಸಾಲಿಗ್ರಾಮ, ಪೆರ್ಡೂರು, ಕಮಲಶಿಲೆ ಮೇಳಗಳಲ್ಲಿ ಸೇವೆ ಸಲ್ಲಿಸಿ ಸದ್ಯ ಅಮೃತೇಶ್ವರಿ ಮೇಳದ ಪುರುಷ ವೇಷಧಾರಿಯಾಗಿರುವುದಲ್ಲದೆ ಮೇಳದ ಪ್ರಬಂಧಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

ಹೊಸ ಪ್ರಸಂಗಗಳಿಗೂ ನ್ಯಾಯ ಒದಗಿಸಿದ ಅವರಿಗೆ ಬಹು ಪ್ರಸಿದ್ಧಿ ತಂದದ್ದು ನಾಗಶ್ರೀ ಪ್ರಸಂಗದ ಶುಭಾಗನ ಪಾತ್ರ. ಇವರ ಸತಿ ಸೀಮಂತಿನಿಯ ಚಂದ್ರಾಂಗದ, ಚೆಲುವೆ ಚಿತ್ರಾವತಿಯ ಹೇಮಾಂಗದ, ಭಾನು ತೇಜಸ್ವಿ ಮುಂತಾದ ಪಾತ್ರಗಳು ಕೂಡ ಅಷ್ಟೇ ಪ್ರಸಿದ್ಧ. ಕಿರೀಟ ವೇಷಕ್ಕಿಂತ ಕೇದಗೆ ಮುಂದಲೆ ವೇಷಗಳೇ ಅವರಲ್ಲಿ ಹೆಚ್ಚು ಆಕರ್ಷಕವಾಗಿ ಕಾಣುವುದರಿಂದ ಅವರ ವತ್ಸಾಖ್ಯ, ಚಂದ್ರಹಾಸನಂಥ ಪಾತ್ರಗಳು ಜನಪ್ರಿಯವಾಗಿವೆ. ನೆರಿಯುಟ್ಟ ಕೃಷ್ಣನ ವೇಷ ಅವರಿಗೆ ಕೀರ್ತಿ ತಂದುಕೊಟ್ಟಿದೆ. 

ಕೋಟ ಸುರೇಶರು ಪತ್ನಿ ಸುಶೀಲಾ, ಮಕ್ಕಳಾದ ಸುರಕ್ಷಾ ಮತ್ತು ಸಮರ್ಥರೊಂದಿಗೆ ಕೋಟ ಪಡುಕೆರೆಯಲ್ಲಿ ವಾಸವಾಗಿದ್ದಾರೆ. ನಿತ್ಯಜೀವನದಲ್ಲಿ ಸರಳ ಸಜ್ಜನ ಸ್ನೇಹಶೀಲರಾದ ಇವರಿಗೆ ಸಮ್ಮಾನ ಯೋಗ್ಯವಾಗಿಯೇ ಸಲ್ಲುತ್ತಿದೆ.

ಎಸ್‌. ವಿ. ಉದಯಕುಮಾರ ಶೆಟ್ಟಿ

ಟಾಪ್ ನ್ಯೂಸ್

1-kanaka

Kanakadasa Jayanthi ಇಂದು; ಕನಕದಾಸರ ತಣ್ತೀಗಳು ಹಿಂದೆಂದಿಗಿಂತ ಇಂದಿಗೆ ಹೆಚ್ಚು ಪ್ರಸ್ತುತ

parthagali

Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ

kalaranga

Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ

kapu-marigudi

Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ

K-H-Muniyappa

BPL ಕಾರ್ಡು ರದ್ದಾಗಲ್ಲ: ಮುನಿಯಪ್ಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19

ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

3

Yakshagana: ಚಪ್ಪಾಳೆಗಾಗಿ ರಸಾಭಾಸ ಮಾಡಬಾರದು

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

1-kanaka

Kanakadasa Jayanthi ಇಂದು; ಕನಕದಾಸರ ತಣ್ತೀಗಳು ಹಿಂದೆಂದಿಗಿಂತ ಇಂದಿಗೆ ಹೆಚ್ಚು ಪ್ರಸ್ತುತ

parthagali

Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ

kalaranga

Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ

kapu-marigudi

Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.