ವಾಸು ಎಂಬ ಪಕ್ಕಾ ಕಮರ್ಷಿಯಲ್ ಹುಡ್ಗ
Team Udayavani, Apr 8, 2017, 11:19 AM IST
ಅನೀಶ್ ತೇಜೇಶ್ವರ್, “ಮಾಂಜ’ ಎಂಬ ಚಿತ್ರದಲ್ಲಿ ನಟಿಸುತ್ತಿರುವುದು ಗೊತ್ತಿರುವ ವಿಚಾರವೇ. ಈಗಾಗಲೇ ಆ ಚಿತ್ರದ ಎರಡು ಹಂತಗಳ ಚಿತ್ರೀಕರಣ ಮುಗಿದು, ಸದ್ಯದಲ್ಲೇ ಮೂರನೆಯ ಹಂತದ ಚಿತ್ರೀಕರಣ ಪ್ರಾರಂಭವಾಗಲಿದೆಯಂತೆ. ಈ ಮಧ್ಯೆ ಅವರು ಸದ್ದಿಲ್ಲದೆ ಒಂದು ಹೊಸ ಚಿತ್ರದಲ್ಲಿ ನಟಿಸುವುದಕ್ಕೆ ಸಜ್ಜಾಗಿದ್ದಾರೆ. ಮೇ ಮೊದಲ ವಾರದಲ್ಲಿ ಶುರುವಾಗಲಿರುವ ಈ ಚಿತ್ರದ ಹೆಸರೇನು ಗೊತ್ತಾ? “ವಾಸು – ನಾನ್ ಪಕ್ಕಾ ಕಮರ್ಷಿಯಲ್’ ಅಂತ.
ಈ ಚಿತ್ರದಲ್ಲಿ ಅನೀಶ್ ಬರೀ ಹೀರೋ ಅಷ್ಟೇ ಅಲ್ಲ, ಈ ಚಿತ್ರವನ್ನು ಅವರೇ ನಿರ್ಮಿಸುತ್ತಿದ್ದಾರೆ. ವಿಂಕ್‌ವಿಶಲ್ ಸ್ಟುಡಿಯೋಸ್ ಎಂಬ ಪ್ರೊಡಕ್ಷನ್ ಹೌಸ್ ಹುಟ್ಟುಹಾಕಿರುವ ಅನೀಶ್, ಆ ಸಂಸ್ಥೆಯ ಮೂಲಕ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. “ನಿರ್ಮಾಣ ಮಾಡಬೇಕೆಂದು ಬಹಳ ದಿನಗಳಿಂದ ಆಸೆ ಇತ್ತು. ನನ್ನ ಸಿನಿಮಾ ಅಂದರೆ ನನಗೆ ಸ್ವಾತಂತ್ರ್ಯ ಇರುತ್ತದೆ. ಎಲ್ಲವೂ ನಮ್ಮ ಕೈಲೇ ಇರುತ್ತದೆ. ಹಾಗಾಗಿ ನಿರ್ಮಾಣಕ್ಕಿಳಿಯಬೇಕು ಎಂದು ಬಹಳ ದಿನಗಳಿಂದ ಆಸೆ ಇತ್ತು. ಅದು ಈ ಚಿತ್ರದ ಮೂಲಕ ಈಡೇರಿದೆ’ ಎನ್ನುತ್ತಾರೆ ಅವರು.
ಇನ್ನು “ಅಕಿರಾ’ ಚಿತ್ರತಂಡದಲ್ಲಿ ಅಜಿತ್‌ವಾಸನ್ ಅಂತ ಅಸೋಸಿಯೇಟ್ ಇದ್ದರಂತೆ. ಅವರಿಂದಲೇ ಈ ಚಿತ್ರ ಮಾಡಿಸುತ್ತಿದ್ದಾರೆ ಅನೀಶ್. “ನಾನು “ಅಕಿರಾ’ ಮಾಡಿದ ಸಂದರ್ಭದಲ್ಲಿ ಒನ್‌ಲೈನ್ ಹೇಳಿದ್ದರು ವಾಸನ್. ಬಹಳ ಹಿಡಿಸಿತ್ತು. ನಾನು ನಿರ್ಮಾಪಕನಾಗಬೇಕೆಂದುಕೊಂಡಾಗ, ಮೊದಲು ನೆನಪಾದವರೇ ಅವರು. ಅವರನ್ನು ಕರೆದೆ. ಅವರು ಸಿನಿಮಾ ಮಾಡೋಕೆ ಒಪ್ಪಿದರು. ಹೀಗೆ ಈ ಸಿನಿಮಾ ಶುರುವಾಯ್ತು. ಚಿತ್ರಕ್ಕೆ ಅವರೇ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಗಳನ್ನ ರಚಿಸಿದ್ದಾರೆ.
ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದರೆ, ಶ್ರೀಕಾಂತ್ ಸಂಕಲನಕಾರರಾಗಿ ಕೆಲಸ ಮಾಡುತ್ತಿದ್ದಾರೆ. ಸದ್ಯಕ್ಕೆ ಪ್ರೀ-ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಮೇನಲ್ಲಿ ಚಿತ್ರ ಶುರುವಾಗಲಿದೆ. ಒಂದೇ ಹಂತದಲ್ಲಿ ಟಾಕಿ ಭಾಗದ ಚಿತ್ರೀಕರಣ ಮಾಡುವ ಯೋಚನೆಯಿದೆ’ ಎನ್ನುತ್ತಾರೆ ಅವರು. ಅಂದಹಾಗೆ, ಈ ಚಿತ್ರಕ್ಕೆ ಅವರಿಗೆ ನಾಯಕಿಯಾಗಿ ಸಂಯುಕ್ತಾ ಹೆಗ್ಡೆ ಆಯ್ಕೆಯಾಗಿದ್ದಾರೆ. “ಕಿರಿಕ್ ಪಾರ್ಟಿ’ಯಲ್ಲಿ ರಕ್ಷಿತ್‌ಗೆ ನಾಯಕಿಯಾಗಿದ್ದ ಸಂಯುಕ್ತಾಗೆ ಇದು ಎರಡನೆಯ ಚಿತ್ರ. ಉಳಿದ ಕಲಾವಿದರ ಆಯ್ಕೆ ಇನ್ನಷ್ಟೇ ಆಗಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Old Parliament House: ಭಾರತದ ಸಂವಿಧಾನವು ಜೀವಂತಿಕೆಯ, ಪ್ರಗತಿಪರ ದಾಖಲೆ: ರಾಷ್ಟ್ರಪತಿ
Cleanliness: ಮನೆ ಮನೆಯಿಂದ ದೇಶವೇ ಸ್ವಚ್ಚ
Congress: ದ.ಕ ಗ್ರಾಮ ಪಂಚಾಯತ್; 24ರಲ್ಲಿ 19 ಸ್ಥಾನ ಕಾಂಗ್ರೆಸ್ ಬೆಂಬಲಿತರಿಗೆ ಗೆಲುವು
Siddapura: ಬುಲೆಟ್ ಬೈಕಿಗೆ ಜೆಸಿಬಿ ಡಿಕ್ಕಿ; ಸವಾರರಿಗೆ ಗಾಯ
Moodabidri: ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಪಿ.ನೇಮಿರಾಜ ಹೆಗ್ಡೆ ನಿಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.