ಅವಳಿನಗರದಲ್ಲಿ ಸುಧಾರಿತ ಬೀಟ್‌ ಪದ್ಧತಿ ಜಾರಿ


Team Udayavani, Apr 8, 2017, 1:30 PM IST

hub5.jpg

ಹುಬ್ಬಳ್ಳಿ: ಅವಳಿ ನಗರದಲ್ಲಿ ಅಪರಾಧ ಪ್ರಕರಣಗಳನ್ನು ತಡೆಗಟ್ಟಲು ಹಾಗೂ ಶಾಂತಿ- ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸಾರ್ವಜನಿಕರ ಸಹಭಾಗಿತ್ವದೊಂದಿಗೆ ಅವಳಿನಗರದ 15 ಪೊಲೀಸ್‌ ಠಾಣೆಗಳಲ್ಲಿ ಸುಧಾರಿತ ಬೀಟ್‌ ಪದ್ಧತಿ ಮೂಲಕ “ಜನಸ್ನೇಹಿ ಮತ್ತು ಸಮುದಾಯದತ್ತ ಪೊಲೀಸ್‌’ ವ್ಯವಸ್ಥೆ ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗಿದೆ ಎಂದು ಪೊಲೀಸ್‌ ಆಯುಕ್ತ ಪಾಂಡುರಂಗ ರಾಣೆ ಹೇಳಿದರು. 

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಪೊಲೀಸ್‌ ಇಲಾಖೆಯ ಪ್ರಧಾನ ಕಚೇರಿ ಆದೇಶದ ಮೇರೆಗೆ ಈ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಹು-ಧಾ ಪೊಲೀಸ್‌ ಕಮಿಷ°ರೇಟ್‌ ಘಟಕ ವ್ಯಾಪ್ತಿಯ 15 ಪೊಲೀಸ್‌ ಠಾಣೆಗಳಿಂದ ಒಟ್ಟು 659 ಬೀಟ್‌ ರಚಿಸಲಾಗಿದೆ. ಒಂದೊಂದುಬೀಟ್‌ಗೆ ಕನಿಷ್ಠ 50 ಸಾರ್ವಜನಿಕರಂತೆ ಒಟ್ಟು 17856 ಜನರನ್ನು ಬೀಟ್‌ನ ಸದಸ್ಯರನ್ನಾಗಿ ನೇಮಿಸಲಾಗಿದೆ.

ಆಯಾ ಬೀಟ್‌ನ ಜವಾಬ್ದಾರಿ, ಉಸ್ತುವಾರಿ ಆಯಾ ಪೊಲೀಸ್‌ ಠಾಣೆ ವ್ಯಾಪ್ತಿಯ ಅಧಿಕಾರಿಗಳದ್ದಾಗಿರುತ್ತದೆ. ಅವರಿಗೆ ಅಧಿಕಾರಿ, ಜವಾಬ್ದಾರಿ, ಕರ್ತವ್ಯಗಳ ಬಗ್ಗೆ ನಾಲ್ಕು ಬ್ಯಾಚ್‌ ಗಳಲ್ಲಿ ತರಬೇತಿ ನೀಡಲಾಗಿದೆ. ಅದೇ ರೀತಿ ಬೀಟ್‌ಗೆ ನೇಮಕವಾದ ಸದಸ್ಯರಿಗೆ ಶನಿವಾರದಿಂದಲೇ ತರಬೇತಿ ನೀಡಲಾಗುತ್ತದೆ ಎಂದರು.

ಬೀಟ್‌ಗೆ ನೇಮಿಸಿದ ಸಿಬ್ಬಂದಿ ಹೆಸರು, ಹುದ್ದೆ, ಉಸ್ತುವಾರಿ ಅಧಿಕಾರಿಗಳ ಹೆಸರು, ಹುದ್ದೆ, ಫೋನ್‌ ಸಂಖ್ಯೆಗಳ ಮಾಹಿತಿ ಹಾಗೂ ಸರಹದ್ದಿನ ಮಾಹಿತಿಯನ್ನು ಹು-ಧಾ ಪೊಲೀಸ್‌ ಕಮೀಷನರೇಟ್‌ ಘಟಕದ ವೆಬ್‌ಸೈಟ್‌ www.hublidharwadpolice.com ದಲ್ಲಿ ನೀಡಲಾಗಿದೆ. ಸಾರ್ವಜನಿಕರು ಇದನ್ನು ವೆಬ್‌ಸೈಟ್‌ ಮೂಲಕ ತಿಳಿಯಬಹುದು. 

ಆಯಾ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿನ ಸುಸ್ಥಿರ ಮನಸ್ಥಿತಿಯ ಯುವಕರು,  ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು ಹಾಗೂ ನಿವೃತ್ತ ಪೊಲೀಸ್‌ ಸಿಬ್ಬಂದಿ ಬೀಟ್‌ ನಲ್ಲಿ ಕರ್ತವ್ಯ ನಿರ್ವಹಿಸುತ್ತಾರೆ. ಅಪರಾಧ ಹಿನ್ನೆಲೆಯುಳ್ಳವರಿಗೆ ಇದರಲ್ಲಿ ಅವಕಾಶವಿಲ್ಲ. ಸಾರ್ವಜನಿಕರ ಜೊತೆ ಹೇಗೆ ನಡೆದುಕೊಳ್ಳಬೇಕು,  ತುರ್ತು ಸಂದರ್ಭದಲ್ಲಿ ಯಾವ ಕ್ರಮ ಕೈಗೊಳ್ಳಬೇಕೆನ್ನುವ ಕುರಿತು ಅವರಿಗೆ ಸೂಕ್ತ ತರಬೇತಿ ನೀಡಲಾಗುವುದು.

ಪ್ರತಿಯೊಬ್ಬ ಬೀಟ್‌ ನಾಗರಿಕ ಸಿಬ್ಬಂದಿಗೆ ಪೊಲೀಸ್‌ ಇಲಾಖೆಯಿಂದ ಗುರುತಿನ ಚೀಟಿ ನೀಡಲಾಗುವುದು ಎಂದರು. ದಿನದ ಎಲ್ಲ ಸಮಯದಲ್ಲೂ 50 ಸದಸ್ಯರಲ್ಲಿ ಒಬ್ಬರಲ್ಲ ಒಬ್ಬರೂ ಗಸ್ತಿನಲ್ಲಿರುತ್ತಾರೆ. ಇದರಿಂದ ಅಪರಾಧ ಚಟುವಟಿಕೆಗಳು ಎಲ್ಲೇ ನಡೆದರೂ ಇಲ್ಲವೆ ನಡೆಯುವ ಮುನ್ಸೂಚಗಳಿದ್ದರೂ ತಕ್ಷಣವೇ ಪೊಲೀಸ್‌ ಇಲಾಖೆಗೆ ಮಾಹಿತಿ ರವಾನೆಯಾಗುತ್ತದೆ.

ಆ ಮೂಲಕ ಅವಳಿ ನಗರದಲ್ಲಿ ಸಹಜವಾಗಿ ಅಪರಾಧ ಪ್ರಕರಣಗಳನ್ನು ಕಡಿವಾಣ ಹಾಕಬಹುದಾಗಿದೆ. ಜೊತೆಗೆ ಪೊಲೀಸರು ನಾಗರಿಕ ಸಮುದಾಯದೊಂದಿಗೆ ಉತ್ತಮ  ಬಾಂಧವ್ಯ ಹೊಂದಲು ಸಹಕಾರಿಯಾಗುತ್ತದೆ. ಬೀಟ್‌ನಲ್ಲಿರುವ ನಾಗರಿಕರು ಸಮಾಜದಲ್ಲಿ ಎಲ್ಲರಂತೆಯೇ ಸಾಮಾನ್ಯರಂತೆ ಕರ್ತವ್ಯ ನಿರ್ವಹಿಸುತ್ತ ಅಪರಾಧ ಚಟುವಟಿಕೆ ಕುರಿತು ಮಾಹಿತಿ ನೀಡಲಿದ್ದಾರೆ.

ಆದರೆ ಮಾಹಿತಿ ನೀಡಿದವರ ಹೆಸರು ಮಾತ್ರ ತುಂಬಾ ಗೌಪ್ಯವಾಗಿರುತ್ತದೆ. ಇವರೆಲ್ಲ ಮμ¤ಯಲ್ಲೇ ಕಾರ್ಯ ನಿರ್ವಹಿಸಲಿದ್ದಾರೆ ಎಂದರು. ಬೀಟ್‌ ಸಿಬ್ಬಂದಿಗೆ 110 ಪರಿಪೂರ್ಣ ಮಾಹಿತಿಗಳುಳ್ಳ ಪುಸ್ತಕ ನೀಡಲಾಗಿದೆ. ಬೀಟ್‌ ನಲ್ಲಿ ಓರ್ವ ಎಎಸ್‌ಐ, ಮುಖ್ಯಪೇದೆ ಹಾಗೂ ಇನ್ನುಳಿದಂತೆ 50 ಸದಸ್ಯರು ಇರುತ್ತಾರೆ. ಆಯಾ ಪೊಲೀಸ್‌ ಠಾಣೆ ಅಧಿಕಾರಿ ಇಲ್ಲವೆ ಮೇಲ್ವಿಚಾರಕರು ವಾರಕ್ಕೊಮ್ಮೆ ಸಭೆ ಸೇರಿ ಸ್ಥಳೀಯ ಪ್ರದೇಶಗಳಲ್ಲಿ ನಡೆಯುವ ಅಪರಾಧ ಚಟುವಟಿಕೆಗಳ ಕುರಿತು ಮಾಹಿತಿ ಪಡೆಯಲಿದ್ದಾರೆ.

ಬೀಟ್‌ ಸಿಬ್ಬಂದಿಯಾಗಿ ಆಯ್ಕೆಯಾದ ಸದಸ್ಯರ ನಡವಳಿಕೆ ಬಗ್ಗೆಯೂ ಇಲಾಖೆ ವಿಶೇಷ ಗಮನಹರಿಸಿ ಅವರಿಂದ ಇನ್ನುಳಿದವರಿಗೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳುತ್ತದೆ. ಒಂದು ವೇಳೆ ಅವರಿಂದಲೇ ಕಾನೂನು ಬಾಹಿರ ಚಟುವಟಿಕೆಗಳು ನಡೆದರೆ ಅವರ ಮೇಲೆ ನಿರ್ದಾಕ್ಷಿಣ್ಯ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.   

ಟಾಪ್ ನ್ಯೂಸ್

Dhankar

CBI ಪಂಜರದ ಗಿಳಿ: ಸುಪ್ರೀಂ ಅಭಿಪ್ರಾಯಕ್ಕೆ ಉಪರಾಷ್ಟ್ರಪತಿ ಕೆಂಡ

1-iran

Hijab ಧರಿಸದೆ, ಕೇಶ ಕಟ್ಟದೇ ಬೀದಿಗಿಳಿದ ಇರಾನ್‌ ಮಹಿಳೆಯರು!

Kasaragodu

Kasaragodu: ಬೆಂಕಿ ಹೊತ್ತಿಕೊಂಡು ಕಾರು ಸಂಪೂರ್ಣ ನಾಶ

1-kota-shivanand

Yakshagana ಕಾಳಿಂಗ ನಾವಡ ಪ್ರಶಸ್ತಿಗೆ ಶಿವಾನಂದ ಆಯ್ಕೆ

Suside-Boy

Surathkal: ಚಿಕ್ಕಬಳ್ಳಾಪುರ ಮೂಲದ ವೈದ್ಯಕೀಯ ವಿದ್ಯಾರ್ಥಿ ಆತ್ಮಹತ್ಯೆ

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ

PM Modi ಜನ್ಮದಿನ: ಬಿಜೆಪಿಯಿಂದ ಸೇವಾಪಾಕ್ಷಿಕ: ಹರತಾಳು ಹಾಲಪ್ಪ

PM Modi ಜನ್ಮದಿನ: ಬಿಜೆಪಿಯಿಂದ ಸೇವಾಪಾಕ್ಷಿಕ: ಹರತಾಳು ಹಾಲಪ್ಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hubli: ಪಂಚಮಸಾಲಿ ವಕೀಲರ ಪರಿಷತ್ತಿನಿಂದ ಸೆ.22ರಿಂದ ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನೆ

Hubli: ಪಂಚಮಸಾಲಿ ವಕೀಲರ ಪರಿಷತ್ತಿನಿಂದ ಸೆ.22ರಿಂದ ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನೆ

mutalik (2)

B.C.Road ಏನು ಅಫ್ಘಾನಿಸ್ಥಾನ,ಪಾಕಿಸ್ಥಾನದಲ್ಲಿ ಇದೆಯಾ?: ಮುತಾಲಿಕ್ ಕಿಡಿ

ರಾಡ್‌ ಬಿದ್ದು ಎಎಸ್‌ಐ ಸಾವು ಪ್ರಕರಣದಲ್ಲಿ ಕಾಮಗಾರಿ ಕಂಪನಿಯ 11 ಜನರ ಬಂಧನ

Hubli: ರಾಡ್‌ ಬಿದ್ದು ಎಎಸ್‌ಐ ಸಾವು ಪ್ರಕರಣದಲ್ಲಿ ಕಾಮಗಾರಿ ಕಂಪನಿಯ 11 ಜನರ ಬಂಧನ

ShreeKanth

Meet Friends: ಧಾರವಾಡದ ಹಳೆಯ ಗೆಳೆಯರ ಭೇಟಿಯಾದ ತೆಲುಗು ನಟ ಶ್ರೀಕಾಂತ್

Hubli: ಬೈಕಲ್ಲಿ ಹೋಗುತ್ತಿದ್ದಾಗ ತಲೆಗೆ ರಾಡ್‌ ಬಿದ್ದು ಗಾಯಗೊಂಡಿದ್ದ ಎಎಸ್‌ಐ ಸಾವು

Hubli: ಬೈಕಲ್ಲಿ ಹೋಗುತ್ತಿದ್ದಾಗ ತಲೆಗೆ ರಾಡ್‌ ಬಿದ್ದು ಗಾಯಗೊಂಡಿದ್ದ ಎಎಸ್‌ಐ ಸಾವು

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

new-parli

Foreign affairs, ಕೃಷಿ ಶಿಕ್ಷಣ, ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನ ಕಾಂಗ್ರೆಸ್‌ ಪಾಲು

Dhankar

CBI ಪಂಜರದ ಗಿಳಿ: ಸುಪ್ರೀಂ ಅಭಿಪ್ರಾಯಕ್ಕೆ ಉಪರಾಷ್ಟ್ರಪತಿ ಕೆಂಡ

1-iran

Hijab ಧರಿಸದೆ, ಕೇಶ ಕಟ್ಟದೇ ಬೀದಿಗಿಳಿದ ಇರಾನ್‌ ಮಹಿಳೆಯರು!

Kasaragodu

Kasaragodu: ಬೆಂಕಿ ಹೊತ್ತಿಕೊಂಡು ಕಾರು ಸಂಪೂರ್ಣ ನಾಶ

1-kota-shivanand

Yakshagana ಕಾಳಿಂಗ ನಾವಡ ಪ್ರಶಸ್ತಿಗೆ ಶಿವಾನಂದ ಆಯ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.