ಸಾರ್ವಜನಿಕ ಆರೋಗ್ಯ ರಕ್ಷಣೆ
Team Udayavani, Apr 9, 2017, 3:45 AM IST
ಹಿಂದಿನ ವಾರದಿಂದ – ಪುನಶ್ಚೇತನಗೊಳಿಸುವ ಪ್ರಕ್ರಿಯೆ ಅಂದರೆ ಗಾಯಾಳುವಿನಲ್ಲಿ ಜೀವಕ್ಕೆ ಅಪಾಯಕಾರಿಯಾದ ಪರಿಸ್ಥಿತಿ ಇದೆಯೇ ಎಂದು ಗುರುತಿಸುವ ಮತ್ತು ಅಂಗಾಂಗದ ಸಮಗ್ರ ಕಾರ್ಯವ್ಯವಸ್ಥೆಯನ್ನು ಕಾಪಾಡುವ ಒಂದು ಪ್ರಕ್ರಿಯೆ.
ತುರ್ತು ಚಿಕಿತ್ಸೆ ನೀಡುವ ವೈದ್ಯರಿಗೆ, ಶ್ವಾಸನಾಳಗಳ ನಿರ್ವಹಣೆ, ರಕ್ತಪೂರಣದ ಪ್ರಮಾಣ ಮತ್ತು ವ್ಯವಸ್ಥೆ, ತೀವ್ರ ರಕ್ತಸ್ರಾವ ನಿಯಂತ್ರಣ, ಮಕ್ಕಳ ಮತ್ತು ಗರ್ಭಿಣಿಯರ ಪುನಶ್ಚೇತನಾ ಚಿಕಿತ್ಸೆಯ ಕ್ಷೇತ್ರದಲ್ಲಿ ವಿಶೇಷ ಅರಿವು ಇರಬೇಕಾಗುತ್ತದೆ. ಮಿಯೋಕಾರ್ಡಿಯಲ್ ಇನಾ#ಕ್ಷìನ್, ಕಾರ್ಡಿಯಾಕ್ ಅರಿತ್ಮಿಯಾಸ್ ಮತ್ತು ಲಕ್ವಾ ಚಿಕಿತ್ಸೆಯಲ್ಲಿ ಅವರು ವಿಶೇಷ ತಜ್ಞತೆ ಮತ್ತು ಕೌಶಲವನ್ನು ಹೊಂದಿರಬೇಕಾಗುತ್ತದೆ.
ಒಂದು ವೇಳೆ ಆರಂಭಿಕ ತಪಾಸಣೆ ಮತ್ತು ಚಿಕಿತ್ಸಾ ಕ್ರಮಗಳು ಅಸಮರ್ಪಕವಾಗಿದ್ದರೆ, ಸಮಾಲೋಚನೆ ಮತ್ತು ನಿಗಾವಣೆಗಾಗಿ ಇನ್ನೊಬ್ಬ ತಜ್ಞರನ್ನು ಸೂಚಿಸಬಹುದು. ಚಿಕಿತ್ಸೆಯ ಪರಿಣಾಮದ ಬಗ್ಗೆ ಇತರ ವೈದ್ಯರ ಜೊತೆಗೆ ಚರ್ಚಿಸುವುದು ಸಹ ಆವಶ್ಯಕ. ನೀಡಿರುವ ಆರೈಕೆಯ ಬಗ್ಗೆ ವರದಿ ಮಾಡುವುದು ಮತ್ತು ಫಾಲೋ-ಅಪ್ ಆರೈಕೆಗಾಗಿ ಸೌಲಭ್ಯಗಳನ್ನು ಒದಗಿಸಬೇಕು. ರೋಗಿಯ ದಾಖಲಾತಿ, ಡಿಸಾcರ್ಜ್ ಅಥವಾ ವರ್ಗಾವಣೆಯ ಬಳಿಕ ತುರ್ತು ಆರೈಕೆಯ ಹಂತವು ಮುಕ್ತಾಯಗೊಳ್ಳುತ್ತದೆ.
ಸಾರ್ವಜನಿಕ ಆರೋಗ್ಯ
ರಕ್ಷಣೆಯಲ್ಲಿ ತುರ್ತು
ವೈದ್ಯಕೀಯ ಆರೈಕೆಯ ಪಾತ್ರ
ಪ್ರಮುಖ ಸಾರ್ವಜನಿಕ ಆರೋಗ್ಯ ರಕ್ಷಣೆಯ ಪಾತ್ರವೂ ಸೇರಿದಂತೆ ರೋಗಸ್ಥಿತಿ ತಡೆಗಟ್ಟುವ ಎರಡನೆಯ ಹಂತದ ಕಾರ್ಯವನ್ನೂ ಸಹ ನಿರ್ವಹಿಸುವ ತುರ್ತು ವೈದ್ಯಕೀಯ ಆರೈಕೆ ವ್ಯವಸ್ಥೆಯಲ್ಲಿ ಪ್ರಥಮ ಹಂತದ ರೋಗಸ್ಥಿತಿಯ ತಡೆಗಟ್ಟುವಿಕೆಗಾಗಿ ತುರ್ತು ವೈದ್ಯಕೀಯ ಆರೈಕೆಯನ್ನು ನೀಡುವ ವೈದ್ಯರೂ ಸಹ ಪ್ರಾಮುಖ್ಯತೆಯನ್ನು ಪಡೆಯುತ್ತಾರೆ. ಡಿಫ್ತಿàರಿಯಾ, ಟೆಟೆನಸ್ ಮತ್ತು ಪಟ್ಯೂìಸಿಸ್ ವಿರುದ್ಧ ಚುಚ್ಚುಮದ್ದು ನೀಡಿಕೆ, ರೇಬಿಸ್ ಮತ್ತು ಹೆಪಟೈಟಿಸ್‌ನಂತಹ ಕಾಯಿಲೆಗಳ ವಿರುದ್ಧ ಪೋಸ್ಟ್ ಎಕ್ಸ್‌ಪೋಷರ್ ಪ್ರಾಪಿಲ್ಯಾಕ್ಸಿಸ್ ನೀಡಿಕೆ; ಜೀವಾಧಾರಕ ಚಿಹ್ನೆಗಳ ವಿಶ್ಲೇಷಣೆಯ ಸಂದರ್ಭದಲ್ಲಿ ಲಕ್ಷಣ ರಹಿತ ರಕ್ತದೊತ್ತಡದ ಗುರುತಿಸುವಿಕೆ ಇತ್ಯಾದಿ ಪ್ರಾಥಮಿಕ ನಿಗಾವಣೆ ಮತ್ತು ಕ್ರಮಗಳನ್ನು ತುರ್ತು ನಿಗಾ ಘಟಕಗಳಲ್ಲಿ ಕೈಗೊಳ್ಳುತ್ತಾರೆ. ತುರ್ತು ವೈದ್ಯಕೀಯ ಸೇವೆಯನ್ನು ನೀಡುವ ವೈದ್ಯರು ಕೈಗೊಳ್ಳಬೇಕಾದ ಕ್ರಮಗಳು ಮತ್ತು ಚಿಕಿತ್ಸೆಯ ಉದ್ದೇಶದ ಬಗ್ಗೆ ಮಾಹಿತಿಯನ್ನು ಒದಗಿಸುತ್ತಾರೆ ಮತ್ತು ಮಾದಕ ಪದಾರ್ಥದ ಬಳಕೆ, ಖನ್ನತೆ ಮತ್ತು ವ್ಯಕ್ತಿಗಳ ನಡುವಣ ಪರಸ್ಪರ ಹಾನಿಯಂತಹ ಪರಿಸ್ಥಿತಿಗಳಲ್ಲಿ ಹೆಚ್ಚುವರಿ ಶಿಫಾರಸುಗಳನ್ನು ಮಾಡುತ್ತಾರೆ ಮಾತ್ರವಲ್ಲ ಗಾಯಾಳುವಿಗೆ ಹೆಲ್ಮೆಟ್ ಬಳಕೆ ಮತ್ತು ಸೀಟ್‌ಬೆಲ್ಟ್ ಬಳಕೆಯ ಅಗತ್ಯದ ಬಗ್ಗೆ ತಿಳಿವಳಿಕೆಯನ್ನು ನೀಡಬಹುದು.
ತೀವ್ರ ಲಕ್ವಾ, ತೀವ್ರ ಮಿಯೋಕಾರ್ಡಿಯಲ್ ಇನಾ#ಕ್ಷìನ್, ತೀವ್ರ ಆಸ್ತಮಾ ಮತ್ತು ತೀವ್ರ ಸೆಳವು ಇತ್ಯಾದಿ ತೀವ್ರ ಪರಿಸ್ಥಿತಿಯಲ್ಲಿರುವ ರೋಗಿಗಳಿದ್ದಲ್ಲಿ, ರೋಗಿಗಳನ್ನು ಕ್ಲಿನಿಕಲ್ ಸಂಶೋಧನಾ ಟ್ರಯಲ್‌ಗೆ ಸೇರಿಸಿಕೊಳ್ಳುವುದಕ್ಕೂ ತುರ್ತು ನಿಗಾ ಘಟಕವು ಬಹು ಮುಖ್ಯ ತಾಣವಾಗಿರುತ್ತದೆ. ಬೋಧಿಸುವ ಆಸ್ಪತ್ರೆಯಲ್ಲಿರುವ ತುರ್ತು ನಿಗಾ ಘಟಕಗಳು ಕಲಿಕೆ ಮತ್ತು ಚಿಕಿತ್ಸೆಗೆ ಉತ್ತಮ ತಾಣಗಳು. ಕಡಿಮೆ ಅಭಿವೃದ್ಧಿ ಹೊಂದಿರುವ ದೇಶಗಳಲ್ಲಿ, ತುರ್ತು ಚಿಕಿತ್ಸೆ ನೀಡುವ ವೈದ್ಯರುಗಳು ಜನಸಮುದಾಯಕ್ಕೆ ಆರೋಗ್ಯ ಆರೈಕೆಯನ್ನು ಒದಗಿಸುವ ಕಾರ್ಯಕರ್ತರಿಗೆ ಶಿಕ್ಷಣ ಮತ್ತು ತರಬೇತಿಯನ್ನು ಒದಗಿಸಬಹುದು, ಹೀಗೆ ಮಾಡುವುದರಿಂದ ಅವರಿಂದ ಜನಸಮುದಾಯಕ್ಕೆ ಹೆಚ್ಚು ಆರೈಕೆ ಸಿಗಬಹುದು.
ವಿಪತ್ತುಗಳ ಸಂದರ್ಭದಲ್ಲಿ ಅದನ್ನು ನಿಭಾಯಿಸಬೇಕಾಗಿರುವ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವ್ಯವಸ್ಥೆಗಳು ತಲುಪಲು ಅಥವಾ ಸಂಯೋಜನೆಗೊಳ್ಳಲು ಸ್ವಲ್ಪ$ ಸಮಯ ಹಿಡಿಯಬಹುದು, ಇಂತಹ ಸಂದರ್ಭದಲ್ಲಿ, ಆರಂಭಿಕ ವೈದ್ಯಕೀಯ ಉಪಚಾರದ ಜವಾಬ್ದಾರಿಯನ್ನು ಸ್ಥಳೀಯ ತುರ್ತು ವೈದ್ಯಕೀಯ ಆರೈಕೆ ವ್ಯವಸ್ಥೆ ಮತ್ತು ಕಾರ್ಯಕರ್ತರು ವಹಿಸಿಕೊಳ್ಳಬೇಕಾಗುತ್ತದೆ. ಪತ್ತಿನ ಪರಿಣಾಮವನ್ನು ತಗ್ಗಿಸಲು ಏನು ಮಾಡಬಹುದು ಎಂಬ ನಿಟ್ಟಿನಲ್ಲಿ ಖಂಡಿತವಾಗಿಯೂ ಇನ್ನೂ ಅನೇಕ ಕೆಲಸಗಳು ಬಾಕಿ ಇವೆ. ಪತ್ತುಗಳ ಸಂದರ್ಭದಲ್ಲಿ, ಪತ್ತಿನ ಪರಿಣಾಮವನ್ನು ತಗ್ಗಿಸುವಲ್ಲಿ ಒಂದು ತ್ವರಿತ ವೈದ್ಯಕೀಯ ಆರೈಕೆ ವ್ಯವಸ್ಥೆ ಮತ್ತು ಕಾರ್ಯಕರ್ತರ ಪ್ರಮುಖ ಪಾತ್ರ ಎಂಬುದು ಈಗ ಹಿಂದೆಂದಿಗಿಂತಲೂ ಹೆಚ್ಚು ಸ್ಪಷ್ಟವಾಗಿದೆ.
ಮುಕ್ತಾಯ
ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ, ಪ್ರಾಥಮಿಕ ಮತ್ತು ಸೆಕೆಂಡರಿ ಹಂತದ ರೋಗಸ್ಥಿತಿಯನ್ನು ತಡೆಗಟ್ಟುವಲ್ಲಿ ಜಾಗತಿಕ ತುರ್ತು ವೈದ್ಯಕೀಯ ಆರೈಕೆಯ ಪಾತ್ರ ಏನು ಎಂಬುದನ್ನು ಹೇಳಿದೆವು. ತೀವ್ರ ಕಾಯಿಲೆ ಮತ್ತು ಪೆಟ್ಟುಗಳ ಸಂದರ್ಭ, ಪತ್ತಿನ ಪರಿಸ್ಥಿತಿ, ಸಾಂಕ್ರಾಮಿಕ ರೋಗಗಳ ಹರಡುವಿಕೆಯ ಸಂದರ್ಭ ಮತ್ತು ಕೆಲವು ಸುರಕ್ಷತಾ ಸಂದರ್ಭಗಳಲ್ಲಿ ತುರ್ತು ವೈದ್ಯಕೀಯ ಆರೈಕೆಯು ಸಾರ್ವಜನಿಕ ಆರೋಗ್ಯವನ್ನು ಕಾಪಾಡುವ ಬಹುಮುಖ್ಯ ಸಾಧನವಾಗಬಹುದು. ಉಳಿದಂತೆ, ಜನರ ಆರೋಗ್ಯಕ್ಕೆ ಪ್ರಯೋಜನಕಾರಿ ಯಾಗುವಂತಹ ಆರೋಗ್ಯ ಆರೈಕೆಯ ನಿಯಮಾವಳಿ ಗಳನ್ನು ರೂಪಿಸುವವರಿಗೆ ಮತ್ತು ಸಾರ್ವಜನಿಕ ಆರೋಗ್ಯ ಅಧಿಕಾರಿಗಳಿಗೆ ತುರ್ತು ವೈದ್ಯಕೀಯ ಆರೈಕೆಯನ್ನು ಉತ್ತಮಪಡಿಸುವ ನೆಲೆಯಲ್ಲಿ ಖಂಡಿತವಾಗಿಯೂ ಅನೇಕ ಸವಾಲುಗಳು ಮತ್ತು ಅವಕಾಶಗಳು ಇದ್ದೇ ಇವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?
COPD: ಕ್ರೋನಿಕ್ ಒಬ್‌ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ (ಸಿಒಪಿಡಿ)
Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ
Lupus Nephritis: ಲೂಪಸ್ ನೆಫ್ರೈಟಿಸ್ ರೋಗಿಗಳಿಗೆ ಒಂದು ಮಾರ್ಗದರ್ಶಿ
Naturopathy: ಉತ್ತಮ ಆರೋಗ್ಯಕ್ಕಾಗಿ ಪ್ರಕೃತಿ ಚಿಕಿತ್ಸೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು
8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ
Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ
Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’
ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್ ಮಾದರಿಯಲ್ಲಿ ವಿಶೇಷ ಪೊಲೀಸ್ ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.