ಸರಕಾರಕ್ಕೆ ಭೂಗಳ್ಳರನ್ನು ಹಿಡಿಯಲು ಮನಸ್ಸಿಲ್ಲವೇ?


Team Udayavani, Apr 10, 2017, 7:03 AM IST

land.jpg

ಬೆಂಗಳೂರು ಗ್ರಾಮಾಂತರ ಮತ್ತು ಬೆಂಗಳೂರು ನಗರ ಜಿಲ್ಲೆಗಳೆರಡರಲ್ಲೇ 60,000 ಎಕರೆಗಳಷ್ಟು ಭೂಕಬಳಿಕೆಯಾದರೆ, ಕರ್ನಾಟಕದಲ್ಲಿ ಒಟ್ಟು ಕಬಳಿಕೆಯಾದ ಭೂ ಪ್ರಮಾಣ 6 ಲಕ್ಷ ಎಕರೆಯಷ್ಟಿದೆ.

ಈ ಕಬಳಿಕೆಯ ಕಾರ್ಯದಲ್ಲಿ ಬಿಲ್ಡರ್‌ಗಳು, ಶಾಸಕರು, ರಿಯಲ್‌ ಎಸ್ಟೇಟ್‌ ಏಜೆಂಟರು, ಕಾರ್ಪೊರೇಟಿನ/ಕಂಪೆನಿಗಳ ಸದಸ್ಯರು, ಕಾಫಿ ಪ್ಲಾಂಟರ್‌ಗಳು ಎಲ್ಲರೂ ತೊಡಗಿದ್ದಾರೆ. 

ಭೂಕಬಳಿಕೆ ಬಿಬಿಎಂಪಿಯಲ್ಲಿ, ಬಿಡಿಎನಲ್ಲಿ, ಅರಣ್ಯ ಇಲಾಖೆಯಲ್ಲಿ , ಪಂಚಾಯ್ತಿಗಳಲ್ಲಿ, ಕಂದಾಯ ಇಲಾಖೆಯಲ್ಲಿ ಹೀಗೆ ಎಲ್ಲ ಇಲಾಖೆಯಲ್ಲೂ ನಡೆದಿದೆ.

ಈ ಭೂಕಬಳಿಕೆಯಲ್ಲಿ ಕಂದಾಯ ಇಲಾಖೆಯ ಜಿಲ್ಲಾಧಿಕಾರಿಗಳು, ವಿಶೇಷ ಜಿಲ್ಲಾಧಿಕಾರಿಗಳು, ತಹಸೀಲ್ದಾರರು ಶಾಮೀಲಾಗಿದ್ದಾರೆ. ಈ ಅವ್ಯವಹಾರದಲ್ಲಿ ತೊಡಗಿಕೊಂಡ ಇವರೆಲ್ಲರ ವಿಚಾರಣೆಗಾಗಿ ಕಂದಾಯ ಭವನದಲ್ಲಿ ವಿಶೇಷ ನ್ಯಾಯಾಲಯವನ್ನು ಸ್ಥಾಪಿಸಲಾಗಿದೆ. 

ಈ ವಿಶೇಷ ನ್ಯಾಯಾಲಯ ಅಸ್ತಿತ್ವಕ್ಕೆ ಬಂದು ಒಂದು ವರ್ಷವಾಗುತ್ತ ಬಂತು. ಈ ನ್ಯಾಯಾಲಯಕ್ಕೆ ಯಾವ ಜಿಲ್ಲಾಧಿಕಾರಿಯಾಗಲಿ, ತಹಸೀಲ್ದಾರರಾಗಲಿ, ಅರಣ್ಯ ಇಲಾಖೆಯವರಾಗಲಿ ಒಂದೂ ಕೇಸು ಕೊಟ್ಟಿಲ್ಲ. ಜಿಲ್ಲಾಧಿಕಾರಿಗಳ ಈ ಅಸಹಕಾರ ನೀತಿಗೆ ಬೇಸತ್ತು ವಿಶೇಷ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು ಅವರಿಗೆಲ್ಲ ನೋಟಿಸ್‌ ಕೊಟ್ಟು ಕರೆಸಿಕೊಂಡು ಕೂಡಲೇ ಕಡತಗಳನ್ನು ಕಳಿಸಲು ತಾಕೀತು ಮಾಡಿದ್ದಾರೆ. ಅನೇಕ ಭೂಗಳ್ಳರು, ಭೂಕಬಳಿಕೆದಾರರು, ಬಿಲ್ಡರ್‌ಗಳು ಕಾಲಹರಣ ಮಾಡಲು ನ್ಯಾಯಾಧಿಲಯಗಳಿಗೆ ಅಪೀಲ್‌ ಹಾಕಿಕೊಂಡಿದ್ದಾರೆ. ಆ ಕೇಸುಗಳನ್ನೆಲ್ಲ ಅಲ್ಲಿಂದ ವಿಶೇಷ ನ್ಯಾಯಾಲಯಕ್ಕೆ ವರ್ಗಾಯಿಸುವಂತೆ ಕಾನೂನು ಸಚಿವರು ಅಡ್ವೊಕೇಟ್‌ ಜನರಲ್‌ ಮೂಲಕ ಸಂಬಂಧಪಟ್ಟ ನ್ಯಾಯಾಧಿಲಯಗಳನ್ನು ವಿನಂತಿಸಿಕೊಳ್ಳಬೇಕು. 
ಈ ಕೆಲಸ ಇದುವರೆಗೂ ಆಗಿಲ್ಲ.

ವಿಶೇಷ ನ್ಯಾಯಾಲಯ ಸರಕಾರದ ಈ ಅಧಿಕಾರಿಗಳ ಅಸಹಕಾರಕ್ಕೆ ರೋಸಿ ತಾನೇ ಕೆಲವು ಮುಖ್ಯವಾದ ಪ್ರಕರಣಗಳನ್ನು ಕೈಗೆತ್ತಿಧಿಕೊಂಡು, ಆ ಪ್ರಕರಣಗಳ ವಿಚಾಧಿರಣೆಗೆ ತೊಡಗಿದೆ. ಉದಾಹರಣೆಗೆಶ್ರೀರಂಗಧಿ ಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲ ಯಕ್ಕೆ ದಾನಿಗಳು 50-60 ವರ್ಷಗಳ ಹಿಂದೆ ದಾನವಾಗಿ ಕೊಟ್ಟ 270 ಎಕರೆ ಜಮೀನನನ್ನು ಉತುಬಿತ್ತಿ ಮಾಡುತ್ತಿದ್ದ ರೈತರು ಮಾರಿ ಹಾಕಿರುವುದಲ್ಲದೆ ಆ ಜಮೀಧಿನುಗಳು 3-4 ಸಾರಿ ಬೇರೆ ಬೇರೆಯವರಿಗೆ ಹಸ್ತಾಂತರವಾಗಿದೆ. ಅವುಗಳಲ್ಲಿ ಕೆಲವು ಎಕರೆಗಳಷ್ಟು ಜಮೀನು 10-20 ವರ್ಷ ಗಳಲ್ಲಿ ನಿವೇಶನಗಳಾಗಿ ಪರಿವರ್ತಿತವಾಗಿ ಮಾರಾಟ ಕೂಡ ಆಗಿದೆ.

ದೇವಾಲಯದ ಜಮೀನು ಒಂದೇ ಕಡೆ ಇಲ್ಲ ಎರಡು ಮೂರು ಬೇರೆ ಬೇರೆ ಹೋಬಳಿಗಳಲ್ಲಿವೆ. ಪತ್ರಿಕಾ ವರದಿಗಳ ಪ್ರಕಾರ ಈ ಜಮೀನಿಗೆ ಸಂಬಂಧಪಟ್ಟಂತೆ ಶಾಸಕರೊಬ್ಬರು ಸೇರಿದಂತೆ 52 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ. ಕೆಂಗೇರಿ ಹೋಬಳಿಯ ವೆಂಕಟಾಪುರ ಗ್ರಾಮ ಒಂದು ಇನಾಂಗ್ರಾಮ. ಇನಾಂ ರದ್ದತಿಯಾದ ಮೇಲೆ ಆ ಜಮೀನು ಸರ್ಕಾರಕ್ಕೆ ಸೇರಬೇಕು. ಆದರೆ ಅದು ಒಬ್ಬರಿಂದ ಒಬ್ಬರಿಗೆ ಹಸ್ತಾಂತರವಾಗಿ ಈಗ ಅದು ಒಂದು ಬಿಲ್ಡರ್ಸ್‌ನವರಲ್ಲಿದೆ. ಬಸವನಗುಡಿಯಲ್ಲಿ 6000 ಮನೆಗಳ ಒಂದು ಫ್ಲಾಟ್‌ ಕಟ್ಟಿ ಈಗಾಗಲೇ ಕೊಳ್ಳುವವರಿಂದ ಮುಂಗಡವಾಗಿ ತಲಾ 2- 3 ಲಕ್ಷ ಪಡೆದಿದ್ದಾರೆ ಬಿಲ್ಡರ್ಸ್‌ಗಳು. ಈ ಮಾರಾಟಕ್ಕೆ ತಡೆ ಹಾಕಲು ಇಷ್ಟರಲ್ಲೇ ವಿಶೇಷ ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಲಾಗುತ್ತದೆ. ಆನೇಕಲ್‌ ತಾಲೂಕು ಸರ್ಜಾಪುರ ಹೋಬಳಿಯ ಅಡಿಗಾರ ಕಲ್ಲಹಳ್ಳಿಯಲ್ಲಿ ಸರ್ವೆ ನಂ. 147ರ 103 ಎಕರೆ 33 ಗುಂಟೆ ಗೋಮಾಳದಲ್ಲಿನ ವಸತಿ ನಿರ್ಮಾಣ ಪ್ರಕರಣದಲ್ಲಿ ಶಾಸಕರೊಬ್ಬರ ವಿರುದ್ಧ ಮೊಕದ್ದಮೆ ದಾಖಲಾಗಿದೆ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕುಂದೂರಿನ ಸ.ನಂ. 156ರಲ್ಲಿ 15 ಎಕರೆ ಸರ್ಕಾರಿ ಭೂಮಿ ಬಳಕೆ ಆಗಿರುವ ಪ್ರಕರಣದಲ್ಲಿ ಸಚಿವರೊಬ್ಬರ ಮೇಲೂ ಕೇಸ್‌ ದಾಖಲಾಗಿದೆ. ಅವರಿಗೂ, ಅವರ ಮಕ್ಕಳಿಗೂ ನೋಟೀಸ್‌ ನೀಡಲಾಗಿದೆ.

ಈವರೆಗೆ ಭೂಕಬಳಿಕೆ ವಿಶೇಷ ನ್ಯಾಯಾಲಯದಲ್ಲಿ 348 ಭೂಕಬಳಿಕೆ ಪ್ರಕರಣಗಳು ದಾಖಲಾಗಿವೆ. ವಿಶೇಷ ನ್ಯಾಯಾಲಯ ಸ್ವಪ್ರೇರಣೆಯಿಂದ ದಾಖಲಿಸಿರುವ ಭೂಕಬಳಿಕೆ ಪ್ರಕರಣಗಳು 243. ಖಾಸಗಿ ದೂರಿನ ಮೇಲೆ ದಾಖಲಾಗಿರುವ ಪ್ರಕರಣಗಳು 92. ವಿವಿಧ ಸರ್ಕಾರಿ ಇಲಾಖೆಗಳಿಂದ ವರ್ಗಾವಣೆಯಾಗಿರುವ ಪ್ರಕರಣಗಳ ಸಂಖ್ಯೆ 8. ಈ ಪೈಕಿ 13 ಪ್ರಕರಣಗಳು ಈವರೆಗೆ ಇತ್ಯರ್ಥಗೊಂಡಿವೆ. 5 ಪ್ರಕರಣಗಳು ಬೇರೆ ನ್ಯಾಯಾಲಯಗಳಿಗೆ ವರ್ಗಾವಣೆಯಾಗಿವೆ. ಬೆಂಗಳೂರು ನಗರ ಜಿಲ್ಲಾ ವಿಶೇಷ ಜಿಲ್ಲಾಧಿಕಾರಿಗಳ ಕಡೆ 4000 ಭೂಗಳ್ಳರ ಪ್ರಕರಣಗಳಿವೆ. ಜಿಲ್ಲಾಧಿಕಾರಿಗಳು ಮತ್ತು ಎಸಿಗಳ ನ್ಯಾಯಾಲಯಗಳಲ್ಲೂ 3000 ಪ್ರಕರಣಗಳಿವೆ. ಇವುಗಳನ್ನು ಈ ಅಧಿಕಾರಿಗಳು ವಿಶೇಷ ನ್ಯಾಯಾಲಯಕ್ಕೆ ಎಂದೋ ವರ್ಗಾಯಿಸಬೇಕಿತ್ತು.

ಇಂದಿಗೂ ಅವರು ಈ ಕೆಲಸ ಮಾಡಿಲ್ಲ. ಬೆಂಗಳೂರು ನಗರ ಜಿಲ್ಲೆಯ ತಹಸೀಲ್ದಾರರು ಕಾಟಾಚಾರಕ್ಕೆ 500 ಪ್ರಕರಣಗಳನ್ನು ವಿಶೇಷ ನ್ಯಾಯಾಲಯಕ್ಕೆ ಕಳುಹಿಸಿಕೊಟ್ಟರು. ಆ ಕಡತದಲ್ಲಿ ಗ್ರಾಮದ ಹೆಸರು ಸನಂ. ಕಬಳಿಸಿದ ಜಮೀನಿನ ವಿಸ್ತೀರ್ಣ ಇಷ್ಟನ್ನು ಪಟ್ಟಿ ಮಾಡಿ ಕಳಿಸಿದ್ದರು. ಕಬಳಿಕೆ ಮಾಡಿದವನ ಹೆಸರು, ವಿಳಾಸ ಇಲ್ಲ, ರೆಕಾರ್ಡ್‌ ತಿದ್ದಿದ ಅಧಿಕಾರಿಯ ಹೆಸರಿಲ್ಲ. ಹೀಗಾಗಿ ವಿಶೇಷ ನ್ಯಾಯಾಲಯ ಆ ಕಡತವನ್ನು ಜಿಲ್ಲಾಧಿಕಾರಿಗಳಿಗೆ ಹಿಂದಿರುಗಿಸಿ 4 ತಿಂಗಳೇ ಆದರೂ ಇನ್ನೂ ಈ ತಹಸೀಲ್ದಾರರು ಭೂಗಳ್ಳರ ವಿರುದ್ಧ ವಿಶೇಷ ನ್ಯಾಯಾಲಯದಲ್ಲಿ ಕೇಸ್‌ ದಾಖಲಿಸಿಲ್ಲ. ಈ ಬಗ್ಗೆ ಬೇಜವಾಬ್ದಾರಿತನ ನಮ್ಮ ಜಿಲ್ಲಾಧಿಕಾರಿಗಳದು ಮತ್ತು ತಹಸೀಲ್ದಾರರದು.

ವಿಶೇಷ ನ್ಯಾಯಾಲಯ ನೋಟೀಸ್‌ ನೀಡಿದ್ದರೂ ಸ್ಪಂದಿಸಲಿಲ್ಲವಾದ್ದರಿಂದ ವಿಶೇಷ ನ್ಯಾಯಾಲಯ ಉಪ ವಿಭಾಗಾಧಿಕಾರಿಗಳಿಗೆ ಹಾಗೂ ತಹಸೀಲ್ದಾರಿಗೆ ವಾರೆಂಟ್‌ ಜಾರಿ ಮಾಡಿ ಅವರನ್ನು ಕರೆಸಿಕೊಂಡು ಮಾಹಿತಿ ಪಡೆಯಬೇಕಾಯಿತು. ಸರ್ಕಾರ ಭೂಗಳ್ಳರಿಗೆ ರಕ್ಷಣೆ ನೀಡುವ ಇಲಾಖಾಧಿಕಾರಿಗಳಿಗೆ ರಕ್ಷಣೆ ನೀಡುತ್ತಿದೆ. ಸರ್ಕಾರಕ್ಕೆ ಭೂಗಳ್ಳರನ್ನು ಹಿಡಿದು ಶಿಕ್ಷಿಸುವ ಮನಸ್ಸಿಲ್ಲದಿದ್ದ ಮೇಲೆ ಈ ವಿಶೇಷ ನ್ಯಾಯಾಲಯ ಆರಂಭಿಸುವ ನಾಟಕವನ್ನು ಏಕೆ ಮಾಡಬೇಕಿತ್ತು? ಜನರನ್ನು ದಿಕ್ಕು ತಪ್ಪಿಸುವ ಹುನ್ನಾರ ಇದಲ್ಲವೇ?

– ಎಚ್‌.ಎಸ್‌. ದೊರೆಸ್ವಾಮಿ 

ಟಾಪ್ ನ್ಯೂಸ್

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ganapa

Ganesha Festival: ಇಂದು ಗಣೇಶ ಚತುರ್ಥಿ; ವಿಘ್ನ ನಿವಾರಕ ವಿನಾಯಕ ವಿಶ್ವನಾಯಕನೂ ಹೌದು

ETTINAHOLE

Ettinahole Drinking Water Project: ದಶಕದ ಬಳಿಕ ಎತ್ತಿನಹೊಳೆ ಯೋಜನೆ ಸಾಕಾರ

Gouri-Puja-

Gowri Festival: ಇಂದು ಗೌರಿ ತದಿಗೆ: ಭಾದ್ರಪದ ಶುಕ್ಲ ತೃತೀಯಾ ಹರಿತಾಲಿಕಾ ವ್ರತಂ

ETTINAHOLE1

Ettinahole Project: ಬತ್ತಿದ ಕನಸುಗಳಿಗೆ ಎತ್ತಿನಹೊಳೆ ಜೀವಜಲ ಧಾರೆ!

10-uv-fusion

Teacher’s Day: ಆದರ್ಶ ಬದುಕಿಗೆ ದಾರಿ ತೋರುವ ಗುರು

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.