ಓಲೈಸುವವರು ಕಲಾವಿದರಲ್ಲ ವಿದೂಷಕರು
Team Udayavani, Apr 10, 2017, 12:38 PM IST
ಮೈಸೂರು: ಕಲಾವಿದರು ಯಾವುದೇ ಆತಂಕವಿಲ್ಲದೆ ತಮ್ಮ ಮನಸ್ಸಿನಲ್ಲಿರುವ ವಿಷಯವನ್ನು ನೇರ ಹಾಗೂ ನಿರ್ಭಯದಿಂದ ಅಭಿವ್ಯಕ್ತಪಡಿಸಬೇಕು ಎಂದು ಸಾಹಿತಿ ಪ್ರೊ. ಅರವಿಂದ ಮಾಲಗತ್ತಿ ಅಭಿಪ್ರಾಯಪಟ್ಟರು.
ನಗರದ ಚಾಮರಾಜಪುರಂನ ಶ್ರೀ ರವಿವರ್ಮ ಚಿತ್ರಕಲಾ ಶಾಲೆ ಮೈಸೂರು ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಭಾನುವಾರ ಆಯೋಜಿಸಿದ್ದ ರಾಜ ರವಿವರ್ಮ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಸಾಂವತ್ಸರಿಕ ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿ ಮಾತನಾಡಿ, ಕಲಾವಿದರು ನಾಡಿನ ನಿರಂಕುಶ ಪ್ರಭುಗಳಾಗಿದ್ದು, ಭಾಷೆ ಮತ್ತು ಮಾಧ್ಯಮ ಬೇರೆ ಬೇರೆ ಯಾದರೂ ಮನಸ್ಸಿನಲ್ಲಿ ಅನಿಸಿದ್ದನ್ನು ನೇರವಾಗಿ ನಿರ್ಭಯದಿಂದ ಅಭಿವ್ಯಕ್ತಿ ಗೊಳಿಸಬೇಕು.
ಇದರ ಹೊರತಾಗಿ ಬೇರೊಬ್ಬರ ಓಲೈಕೆಗೆ ಕಲಾವಿದ ರಾಗುವವರು ಕಲಾವಿದರಾಗದೆ ವಿದೂಷಕ ರಾಗುತ್ತಾರೆ ಎಂದರು. ಸಮಾಜದ ಅಂಕು – ಡೊಂಕು ಗಳನ್ನು ವಾಸ್ತವ ಕಟ್ಟಿಕೊಡದೇ ಇನ್ನೊಬ್ಬರ ಅಸ್ತಿತ್ವ ಕಾಯಬಾರದು. ವರ್ತಮಾನದ ಸಮಸ್ಯೆಗಳಿಗೆ ಸ್ಪಂದಿಸ ದಿದ್ದರೇ ಕಲಾವಿದನಾಗಲು ಸಾಧ್ಯವಿಲ್ಲ. ಆದರೆ ಪ್ರಸ್ತುತ ಸಂದರ್ಭದಲ್ಲಿ ಸರ್ಕಾರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಾಹಿತಿಗಳು ಮತ್ತು ಕಲಾವಿದರಲ್ಲಿ ಭೇದ ನೀತಿ ಅನುಸರಿಸುತ್ತಿದೆ.
ಸಾಹಿತಿಗಳಿಗೆ ಇರುವೆ ಸಾಲಿನಂತೆ ಉದ್ದಕ್ಕೂ ಪ್ರಶಸ್ತಿಗಳನ್ನು ನೀಡಲಾಗುತ್ತಿದ್ದು, ಕಲಾವಿದನಿಗೆ ಯಾವುದೇ ಪ್ರಶಸ್ತಿಗಳನ್ನು ನೀಡುತ್ತಿಲ್ಲ ಎಂದು ಬೇಸರಿಸಿದರು. ಪ್ರಧಾನ ಮಂತ್ರಿ ಅವರು ನೋಟ್‌ಬ್ಯಾನ್ ನಿರ್ಧಾರ ಗಂಡು ನಿರ್ಧಾರವೆಂದು ಭಾವಿಸಿದೆ. ಆದರೆ ನೋಟ್‌ಬ್ಯಾನ್ ತೀರ್ಮಾನ ಒಪ್ಪು$ವಂತಾದರೂ ಅದರ ನಿರ್ವಹಣೆಯಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದ್ದು, ಈ ವಿಷಯದಲ್ಲಿ ಕೇಂದ್ರ ಸರ್ಕಾರದ ನಿರ್ಧಾರದಂತೆಯೇ ನಡೆದಿದ್ದರೇ ದೇಶದ ಶೇ.30 ಕಪ್ಪು ಕುಳಗಳು ಪ್ರಸ್ತುತ ಸೆರೆವಾಸದಲ್ಲಿ ಇರಬೇಕಿತ್ತು ಎಂದು ಹೇಳಿದರು.
ದೆಹಲಿಯ ರಾಷ್ಟ್ರೀಯ ಲಲಿತಕಲಾ ಅಕಾಡೆಮಿ ಆಡಳಿತಾಧಿಕಾರಿ ಚಿ.ಸು.ಕೃಷ್ಣ ಸೆಟ್ಟಿ ಮಾತನಾಡಿ, 19ನೇ ಶತಮಾನದಂಚಿನಲ್ಲಿ ಯುರೋಪ್‌ನಲ್ಲಿ ನಡೆದ ಚಳವಳಿಗಳಲ್ಲಿ ಸಾಹಿತಿಗಳಿಗಿಂತ ಒಂದು ಹೆಜ್ಜೆ ಮುಂದಾಗಿದ್ದವರು ಚಿತ್ರಕಲಾವಿದರು. ಹೀಗಾಗಿ ಸಾಹಿತಿಗಳು, ಚಿಂತಕರು ಹಾಗೂ ಚಿತ್ರಕಲಾವಿದರು ಒಗ್ಗೂಡಿದರೆ ಸಾಮಾಜಿಕ, ಸಾಂಸ್ಕೃತಿಕ ಹಾಗೂ ರಾಜಕೀಯ ಪಲ್ಲಟಗಳು ಸೃಷ್ಟಿಯಾಗಲಿದೆ.
ಭ್ರಷ್ಟಾಚಾರ ರಹಿತ, ನೇರ ನುಡಿಯ ಸ್ವಭಾವದ ವ್ಯಕ್ತಿತ್ವ ಪ್ರತಿಯೊಬ್ಬರನ್ನು ನಿರೀಕ್ಷೆಗೂ ಮೀರಿದ ಪ್ರತಿಫಲವನ್ನು ನೀಡಲಿದೆ. ಆದ್ದರಿಂದ ಪ್ರಾಮಾಣಿಕ ಸಮರ್ಪಣ ಭಾವದಿಂದ ಸಮಾಜಕ್ಕೆ ಕೆಲಸ ಮಾಡಬೇಕಿದ್ದು, ವರ್ತಮಾನದ ಶಿಶುವಾಗಿರುವ ನಾವು ನಮ್ಮೊಳಗಿನ ದನಿಯನ್ನು ಅಭಿವ್ಯಕ್ತಿ ಗೊಳಿಸಬೇಕಿದೆ ಎಂದು ಹೇಳಿದರು.
ಸರ್ಕಾರಗಳು ಸಾಹಿತ್ಯ ಕ್ಷೇತ್ರದಲ್ಲಿನ ಸಾಧನೆ ಪರಿಗಣಿಸಿ ನೀಡುವ ಪ್ರಶಸ್ತಿಗಳಂತೆ ಚಿತ್ರಕಲಾವಿದ ಹಾಗೂ ದೃಶ್ಯ ಕಲಾವಿದರಿಗೂ ಪ್ರಶಸ್ತಿ ನೀಡಿದರೆ ಕಲೆಯ ಚಟುವಟಿಕೆಗಳು ಮತ್ತಷ್ಟು ಉತ್ತುಂಗಕ್ಕೆ ಏರುವ ಜತೆಗೆ ಕಲೆಯ ಬೆಳವಣಿಗೆಗೂ ಸಹಾಯವಾಗಲಿದೆ. ಜತೆಗೆ ಪ್ರತಿಯೊಂದು ಕಲೆಯ ಶಾಲೆಗಳು ಪ್ರಾಯೋಗಿಕ, ತಾತ್ವಿಕವಾಗಿ ಕಲೆಯ ಬಗ್ಗೆ ಬೋಧನೆ ಮಾಡುತ್ತವೆ. ಆದರೆ ಪಠ್ಯದ ಜತೆಯಲ್ಲಿ ಪಠ್ಯೇತರ ಚಟುವಟಿಕೆ ಮನ್ನಣೆ ನೀಡುವ ಕಾಲೇಜುಗಳು ಪ್ರಗತಿ ಸಾಧಿಸಲಿದೆ.
ಆದ್ದರಿಂದ ವಿದ್ಯಾರ್ಥಿಗಳಲ್ಲಿ ಹೊಸ ಚಿಂತನೆಗಳನ್ನು ಹುಟ್ಟು ಹಾಕುವ ಜತೆಗೆ ಪಠ್ಯೇತರಕ್ಕೆ ಚಟುವಟಿಕೆಗಳಿಗೆ ಹೆಚ್ಚಿನ ಮಹತ್ವ ನೀಡುವ ಮೂಲಕ ಕಲೆ ಅಭಿವೃದ್ಧಿ ಪಡಿಸಬೇಕು ಎಂದರು. ಕಾರ್ಯಕ್ರಮದ ಅಂಗವಾಗಿ ಶಾಲೆಯ ವಾರ್ಷಿಕ ಸಾಧಕರಾದ ಪೂಜಾ ಮೆಹ್ತಾ, ಮೋಹನ್ ರಾಜ್ ಹಾಗೂ ಬಿ. ಕುಮಾರ್ ಅವರಿಗೆ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು. ರವಿವರ್ಮ ಚಿತ್ರಕಲಾ ಶಾಲೆ ಪ್ರಾಚಾರ್ಯ ಶಿವಕುಮಾರ ಕೆಸರಮಡು, ಕಾವಾ ಕಾಲೇಜಿನ ಮುಖ್ಯಸ್ಥ ಬಸವರಾಜು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.