ಅಂತರಂಗದಲ್ಲಿ ಸದಾ ಇರುತ್ತೆ ಬೆಳಕಿನ ಮಿಡಿತ


Team Udayavani, Apr 10, 2017, 1:29 PM IST

hub4.jpg

ಧಾರವಾಡ: ತಲೆಮಾರು ಹಾಗೂ ಕಾಲಮಾನ ಬದಲಾದಂತೆ, ನೋಟಗಳು ಬದಲಾದಂತೆ ವಿಚಾರಗಳೂ ಬದಲಾಗುತ್ತವೆ. ಆದರೆ ಅಂತರಂಗದಲ್ಲಿ ಬೆಳಕಿನ ಮಿಡಿತ ಸದಾ ಇರುತ್ತದೆ ಎಂದು ಹಿರಿಯ ಸಾಹಿತಿ ಪ್ರೊ| ಚಂದ್ರಶೇಖರ ಪಾಟೀಲ ಹೇಳಿದರು. 

ನಗರದ ರಂಗಾಯಣದ ಸುವರ್ಣ ಸಾಂಸ್ಕೃತಿಕ ಸಮುತ್ಛಯದಲ್ಲಿ ರಂಗಧ್ವನಿ-17ರ ಪ್ರಯುಕ್ತ ಹಮ್ಮಿಕೊಂಡಿದ್ದ ರಾಷ್ಟ್ರೀಯ ನಾಟಕೋತ್ಸವ ವಿಚಾರ ಸಂಕಿರಣ “ರಂಗಾಭಿನಯ: ಮಾತುಕತೆ, ಮಾಟ, ಮನನ’ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಇಂದಿನ ಪೀಳಿಗೆಗೆ ತಲೆ ಕೆಡೆಸುವಂತ ಮನ ಕುಲುಕುವಂತಹ ವಿಷಯಗಳ ಬಗ್ಗೆ ತಿಳಿಯುವಲ್ಲಿ ಶ್ರಮಿಸಬೇಕಿದೆ ಎಂದರು. 

ಕಾಲ ಬದಲಾದಂತೆ ಜನರ ನಿರೀಕ್ಷೆ, ಸಂಸ್ಕೃತಿ ಸಹಜವಾಗಿ ಬದಲಾಗುತ್ತದೆ. ಅದೇ ರೀತಿ ಕಲಾವಿದರ ನಟನೆ ಬದಲಾಗುತ್ತಿವೆ. ಜೊತೆಗೆ ರಂಗಭೂಮಿ ಬದುಕಿನ ಧ್ವನಿಯಾಗುತ್ತಿದೆ. ರಂಗಭೂಮಿಯಲ್ಲಿ ನಟಿಸುವ ಕಲಾವಿದನಿಗೆ ಬದ್ಧತೆ, ಶ್ರದ್ಧೆ ಹಾಗೂ ಕಾಯಕದ ಮನೋಭಾವ ಇರಬೇಕು. ಒಬ್ಬ ರಂಗಭೂಮಿ ಕಲಾವಿದ ಸಮಾಜದ ವಿವಿಧ ಪಾತ್ರಗಳನ್ನು ಮಾಡಬಲ್ಲ. ಅದಕ್ಕೆ ಸಾಕಷ್ಟು ಅನುಭವ ಇರುವ ರಂಗಭೂಮಿ ತಜ್ಞರ ಮಾರ್ಗದರ್ಶನ ಪಡೆದುಕೊಳ್ಳಬೇಕು. 

ಆಗ ಕಲಾವಿದ ಯಶಸ್ವಿ ಹೊಂದಲು ಸಾಧ್ಯವಿದೆ ಎಂದರು. ಜಗತ್ತಿನ ಚಲನಶೀಲತೆ ಸ್ಥಗಿತಗೊಂಡಿದೆ ಎಂದು ಕೆಲವರು ಹೇಳುತ್ತಾರೆ. ಆದರೆ ಇಂದಿನ ಯುವ ಪೀಳಿಗೆಯ ತಲೆ ಕೆಡಿಸಿದಂತ ಹಾಗೂ ಹೃದಯ ಕದ್ದಿರುವ ವಿಷಯ ಗಮನಿಸಿದರೆ ಭವಿಷ್ಯ ಕುರಿತು ನಿರಾಶರಾಗಬೇಕಿಲ್ಲ ಎಂದೆನಿಸುತ್ತದೆ.

ಶಿವಮೊಗ್ಗದಲ್ಲಿ ಈಚೆಗೆ ನಡೆದ ದಕ್ಷಿಣಾಯಣ ಹಾಗೂ ಇಲ್ಲಿನ ರಂಗಾಯಣದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ನಾಟಕೋತ್ಸವದಲ್ಲಿ ಯುವಕರ ಪಾಲುದಾರಿಕೆ ಆಶಾಭಾವ ಮೂಡಿಸುವಂತಿದೆ ಎಂದು ಅಭಿಪ್ರಾಯಪಟ್ಟರು. ರಂಗ ಸಮಾಜದ ಸದಸ್ಯ ಡಾ| ಕೆ.ವೈ. ನಾರಾಯಣಸ್ವಾಮಿ ಮಾತನಾಡಿ, ಆಧುನಿಕ ಜಗತ್ತಿನಲ್ಲಿ ರಂಗ ಚಟುವಟಿಕೆ ಹೆಚ್ಚಾಗಿದ್ದರೂ, ರಂಗ ಸಂಸ್ಕೃತಿ ಮರೆಯಾಗುತ್ತಿರುವ ಆತಂಕ ಎದುರಾಗಿದೆ.

ಸಾಹಿತ್ಯದ ಹಾಗೂ ರಂಗಭೂಮಿಯ ವಸ್ತುಗಳಿಂದ ಬದುಕಿಗೆ ಯಾವುದೇ ಅರ್ಥವಿಲ್ಲ ಎಂಬ ಸಂದೇಶವನ್ನು ರಾಜಕೀಯ ವ್ಯಕ್ತಿಗಳು, ಮಾಧ್ಯಮಗಳನ್ನು ನಿಯಂತ್ರಿಸುತ್ತಿರುವ ಧಣಿಗಳು ಸಾರುತ್ತಿದ್ದಾರೆ. ಹೀಗಾಗಿ ಸುಮಾರು ಮೂರು ದಶಕಗಳ ಹಿಂದೆ ಇದ್ದ ರಂಗ ಸಂಸ್ಕೃತಿ ಇಂದು ಮರೆಯಾಗುತ್ತಿದೆ ಎಂದು ವಿಷಾದಿಸಿದರು. 

ಲವಕುಮಾರ, ಟಿ.ಎಚ್‌. ಸಂಧ್ಯಾರಾಣಿ, ಬಸವರಾಜ ಹೂಗಾರ ಹಾಗೂ ರಜನಿ ಗರುಡ ಇದ್ದರು. ವಿಚಾರ ಸಂಕಿರಣದ ಕೊನೆಯ ದಿನವಾದ ರವಿವಾರ ಪುದುಚೇರಿಯ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಸವಿತಾ ರಾಣಿ ಅವರು ಪ್ರಸ್ತುತಪಡಿಸಿದ ರೆಸ್ಟ್‌ನೆಸ್‌ ಇನ್‌ ಪೀಸ್‌ (ರಿಪ್‌) ಎಂಬ ಏಕವ್ಯಕ್ತಿ ರಂಗಪ್ರಯೋಗದಲ್ಲಿ ಮಹಿಳೆಯರ ಜೀವನ ಚೂರಾಗಿ ಚಡಪಡಿಸುವುದನ್ನು ರಂಗದ ಮೇಲೆ ಪ್ರಾತ್ಯಕ್ಷಿಕೆ ರೂಪದಲ್ಲಿ ಪ್ರಸ್ತುತಪಡಿಸಿದರು.

ಚಂಪಾ ಶೆಟ್ಟಿ ಮತ್ತು ತಂಡದವರು “ಅಕ್ಕು ಕಥಾಭಿನಯ’ ಎಂಬ ಮೂರು ಕಥೆಗಳನ್ನು ಒಳಗೊಂಡ ನಾಟಕವನ್ನು ಸಾದರ ಪಡಿಸಿದರು. ಇದರೊಂದಿಗೆ ಚಂಪಾ ಶೆಟ್ಟಿ ಅವರು ಅದರ ಪ್ರಾತ್ಯಕ್ಷಿಕೆ ನೀಡಿದರು. ಇದಾದ ನಂತರ ಹೆಗ್ಗೊàಡಿನ ನೀನಾಸಂ ತಂಡದಿಂದ “ಬಾಬುಗಿರಿ, ತಂಡ’ ಎಂಬ ಟ್ಯಾಗೋರರ “ಬಾಬೂಸ್‌ ಆಫ್‌ ನಯಂಜೂರ್‌ ಮತ್ತು ಮೈ ಲಾಡ್‌ ದ ಬೇಬಿ’ ಎಂಬ ಎರಡು ಕಥೆಗಳ ರಂಗರೂಪವನ್ನು ಪ್ರಸ್ತುಪಡಿಸಿದರು. ಇದಕ್ಕೂ ಮೊದಲು “ಕಾಯದ ಸತ್ಯ’ ವಿಷಯ ಕುರಿತು ಪುತ್ತೂರಿನ ಲಕ್ಷಿಶ ತೋಳ್ಪಾಡಿ ತಮ್ಮ ಅನಿಸಿಕೆ ಹಂಚಿಕೊಂಡರು.  

ಟಾಪ್ ನ್ಯೂಸ್

MBPatil

Airport: ರಾಜಧಾನಿ ಸಮೀಪ ವಿಮಾನ ನಿಲ್ದಾಣಕ್ಕೆ ಜಾಗದ ಹುಡುಕಾಟ: ಎಂ.ಬಿ. ಪಾಟೀಲ್‌

Charmadi Ghat: ತಡೆಗೋಡೆ ಅಪಾಯದಲ್ಲಿ: ಕೊಚ್ಚಿ ಹೋಗುತ್ತಿರುವ ಮಣ್ಣು

Charmadi Ghat: ತಡೆಗೋಡೆ ಅಪಾಯದಲ್ಲಿ: ಕೊಚ್ಚಿ ಹೋಗುತ್ತಿರುವ ಮಣ್ಣು

1-a-da

Rain; ಭಾರತ ಮತ್ತು ದಕ್ಷಿಣ ಆಫ್ರಿಕಾ ವನಿತಾ ಟಿ20 ರದ್ದು

Heavy Rain ದ.ಕ.ದಲ್ಲಿ ಬಿರುಸಿನ ಗಾಳಿ-ಮಳೆ; ಕೆಲವೆಡೆ ಹಾನಿ

Heavy Rain ದ.ಕ.ದಲ್ಲಿ ಬಿರುಸಿನ ಗಾಳಿ-ಮಳೆ; ಕೆಲವೆಡೆ ಹಾನಿ

Udupi ಜ್ಞಾನ, ಭಕ್ತಿಯ ಶರಣಾಗತಿಯಿಂದ ಶ್ರೇಯಸ್ಸು: ಚಿತ್ರಾಪುರ ಶ್ರೀ

Udupi ಜ್ಞಾನ, ಭಕ್ತಿಯ ಶರಣಾಗತಿಯಿಂದ ಶ್ರೇಯಸ್ಸು: ಚಿತ್ರಾಪುರ ಶ್ರೀ

Dr. Veerendra Heggade ಪ್ರತಿಯೊಬ್ಬರಿಗೂ ಕಾನೂನಿನ ಜ್ಞಾನ ಅಗತ್ಯ

Dr. Veerendra Heggade ಪ್ರತಿಯೊಬ್ಬರಿಗೂ ಕಾನೂನಿನ ಜ್ಞಾನ ಅಗತ್ಯ

Uchila ದಸರಾ ಉತ್ಸವಕ್ಕೆ ಇನ್ನಷ್ಟು ಮೆರುಗು

Uchila ದಸರಾ ಉತ್ಸವಕ್ಕೆ ಇನ್ನಷ್ಟು ಮೆರುಗು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hubli; CM-DCM issue not to be debated on sidewalks: RB Thimmapura

Hubli; ಸಿಎಂ-ಡಿಸಿಎಂ ವಿಚಾರ ಹಾದಿಬೀದಿಯಲ್ಲಿ ಚರ್ಚೆ ಮಾಡುವುದಲ್ಲ: ಆರ್.ಬಿ ತಿಮ್ಮಾಪುರ

ಪ್ರಹ್ಲಾದ ಜೋಶಿ

Hubli; ಸಿದ್ದರಾಮಯ್ಯ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ: ಪ್ರಹ್ಲಾದ ಜೋಶಿ

Prahalad-Joshi

MUDA Scam ತನಿಖೆ ಸಿಬಿಐಗೆ ವಹಿಸಿ: ಕೇಂದ್ರ ಸಚಿವ ಪ್ರಹ್ಲಾದ ಜೋಶಿ

ತರಾತುರಿಯ ಡಿಸಿ ವರ್ಗಾವಣೆಯು ಸಿಎಂ ಭ್ರಷ್ಟಾಚಾರವನ್ನು ಸಾಬೀತುಪಡಿಸಿದೆ: ಪ್ರಹ್ಲಾದ ಜೋಶಿ

Hubli;ತರಾತುರಿಯ ಡಿಸಿ ವರ್ಗಾವಣೆಯು ಸಿಎಂ ಭ್ರಷ್ಟಾಚಾರವನ್ನು ಸಾಬೀತುಪಡಿಸಿದೆ: ಪ್ರಹ್ಲಾದಜೋಶಿ

prahlad-joshi

Mahadayi ಪ್ರವಾಹ್ ಸಮಿತಿ ಭೇಟಿ ಬಗ್ಗೆ ಬೇರೆ ಅರ್ಥ ಕೊಡಬಾರದು: ಜೋಶಿ

MUST WATCH

udayavani youtube

ಕೂಲ್ ಮೂಡ್ ನಲ್ಲಿ ಸ್ವಿಮ್ಮಿಂಗ್ ಮಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ : ಇಲ್ಲಿದೆ ವಿಡಿಯೋ

udayavani youtube

ಅಂಬಾನಿ ಕುಟುಂಬದಿಂದ ಆಟಗಾರರೊಂದಿಗೆ ವಿಶ್ವಕಪ್ ಗೆಲುವಿನ ಸಂಭ್ರಮಾಚರಣೆ

udayavani youtube

Team india

udayavani youtube

ಮರವಂತೆ ಬೀಚ್ ಅಪಾಯ ಲೆಕ್ಕಿಸದೆ ಪ್ರವಾಸಿಗರ ಹುಚ್ಚಾಟ

udayavani youtube

ಕಮಲಶಿಲೆ ದುರ್ಗೆಯ ಪಾದ ಸ್ಪರ್ಶಿಸಿದ ಕುಬ್ಜಾ ನದಿ

ಹೊಸ ಸೇರ್ಪಡೆ

1-a-chinna

Asian ಪೆಸಿಫಿಕ್‌ ಬೆಂಚ್‌ ಪ್ರಸ್‌ ಚಾಂಪಿಯನ್‌ಶಿಪ್‌: ವಿಜಯ ಕಾಂಚನ್‌ಗೆ 2 ಚಿನ್ನ

1-a-abhay-aaa-euro

Copa America Football: ಬಲಿಷ್ಠ ಬ್ರಝಿಲ್‌ಗೆ ಉರುಳಾದ ಉರುಗ್ವೆ

1-tre

Football ಯೂರೋ ಕಪ್‌: ಇಂಗ್ಲೆಂಡ್‌-ನೆದರ್ಲೆಂಡ್ಸ್‌ ಸೆಮಿ ಸೆಣಸಾಟ

1-a-abhay

Wimbledon: ಕ್ವಾರ್ಟರ್‌ ಫೈನಲ್‌ಗೆ ಪೌಲಿನಿ, ಅಲ್ಕರಾಜ್‌

1-a-abhay-aaa

Asian ಡಬಲ್ಸ್‌ ಸ್ಕ್ವಾಶ್‌: ಅಭಯ್‌ಗೆ ಅವಳಿ ಚಿನ್ನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.