ರೈಲ್ವೇ ಸೌಲಭ್ಯ ಉನ್ನತೀಕರಣಕ್ಕೆ ಕ್ರಮ: ಸಚಿವ ಡಿ.ವಿ.ಎಸ್‌.


Team Udayavani, Apr 10, 2017, 3:02 PM IST

railway-soulabya.jpg

ಮಂಗಳೂರು: ಮಂಗಳೂರು ಜಂಕ್ಷನ್‌ನಿಂದ ಯಶವಂತಪುರಕ್ಕೆ ನೇರ ಸಂಪರ್ಕ ಕಲ್ಪಿಸುವ “ಕುಡ್ಲ ಎಕ್ಸ್‌ಪ್ರಸ್‌’ ರೈಲು ಸಂಚಾರಕ್ಕೆ ರವಿವಾರ ಚಾಲನೆ ನೀಡಲಾಯಿತು. ಈ ಮೂಲಕ ಮಂಗಳೂರಿನಿಂದ ಬೆಂಗಧಿಳೂರಿಗೆ ಕಡಿಮೆ ಅವಧಿಯಲ್ಲಿ  ಪ್ರಯಾಣಿಸುವ ಸುಮಾರು ಎರಡು ದಶಕಗಳ ಬೇಡಿಕೆ ಈಡೇರಿದೆ.

ಮಂಗಳೂರು ಜಂಕ್ಷನ್‌ ರೈಲು ನಿಲ್ದಾಣಧಿದ‌ಲ್ಲಿ ಉದ್ಘಾಟನಾ ಸಮಾರಂಭ ಆಯೋಜಿಸಲಾಗಿದ್ದು, ರೈಲ್ವೇ ಸಚಿವ ಸುರೇಶ್‌ ಪ್ರಭು ಅವರು ಗೋವಾದ ಪಣಜಿಯಿಂದ ವೀಡಿಯೋ ಕಾನ್ಫರೆನ್ಸ್‌ ಮೂಲಕ ರಿಮೋಟ್‌ ಒತ್ತಿ ನೂತನ ರೈಲಿಗೆ ಚಾಲನೆ ಕೊಟ್ಟರು.

ಕುಡ್ಲ ಎಕ್ಸ್‌ಪ್ರೆಸ್‌ಗೆ ಹಸಿರು ನಿಶಾನೆ ತೋರಿಸಿ ಮಾತನಾಡಿದ ಕೇಂದ್ರ ಅಂಕಿ-ಅಂಶ ಹಾಗೂ ಕಾರ್ಯಕ್ರಮ ಅನುಷ್ಠಾನ ಸಚಿವ ಡಿ.ವಿ. ಸದಾನಂದ ಗೌಡ, “ನಾನು ರೈಲ್ವೇ ಸಚಿವನಾಗಿದ್ದಾಗ ಬಜೆಟ್‌ನಲ್ಲಿ ಘೋಷಿಸಿದ್ದ ಕುಡ್ಲ ಎಕ್ಸ್‌ಪ್ರೆಸ್‌ ರೈಲು ಇದೀಗ ಚಾಲನೆಗೊಂಡಿರುವುದು ನನಗೆ ಅತೀವ ಸಂತೋಷ ತಂದಿದೆ. ಈ ರೈಲು ಪ್ರಯಾಣಿಕರಿಗೆ‌ ಹೆಚ್ಚಿನ ಸೌಲಭ್ಯ ನೀಡುವುದರ ಜತೆಗೆ ಕರಾವಳಿ ಭಾಗದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಉತ್ತೇಜನ ನೀಡಲಿದೆ’ ಎಂದು ಹೇಳಿದರು.

ನಿಲ್ದಾಣ ಉನ್ನತೀಕರಣಕ್ಕೆ  ಕ್ರಮ
ದೇಶದಲ್ಲಿ ಒಟ್ಟು 400 ರೈಲು ನಿಲ್ದಾಣಧಿಗಳನ್ನು ಎ ಮತ್ತು ಎ-1 ದರ್ಜೆ ನಿಲ್ದಾಣಗಳಾಗಿ ಗುರುತಿಸಲಾಗಿದ್ದು ಮಂಗಳೂರು ಸೆಂಟ್ರಲ್‌ ನಿಲ್ದಾಣವೂ ಸೇರಿದೆ. ಈ ನಿಲ್ದಾಣಗಳ ಉನ್ನತೀಕರಣಕ್ಕೆ ಪ್ರಸ್ತಾವ ರೂಪಿಸಲಾಗಿದ್ದು ಪ್ರಥಮ ಹಂತದ ಯಾದಿಯಲ್ಲೇ ಮಂಗಳೂರನ್ನು ಆಯ್ಕೆ ಮಾಡಲಾಗಿದೆ. ಈ ಹಿಂದೆಯೇ ಮಂಗಳೂರು ರೈಲು ನಿಲ್ದಾಣವನ್ನು ವಿಶ್ವದರ್ಜೆ ನಿಲ್ದಾಣವಾಗಿ ರೂಪಿಸುವ ಪ್ರಸ್ತಾವನೆಯಿತ್ತು. ಆದರೆ ಕೇಂದ್ರ ಸರಕಾರವು ಪ್ರಸ್ತುತ ವಿಶ್ವದರ್ಜೆ ಪರಿಕಲ್ಪನೆಗೆ ಎ ಮತ್ತು ಎ1 ರೈಲು ನಿಲ್ದಾಣಗಳೆಂಬ ಮಾನದಂಡ ನೀಡಿರುವ ಹಿನ್ನೆಲೆಯಲ್ಲಿ ಈ ರೀತಿಯ ಬದಲಾವಣೆ ಆಗಿದೆ ಎಂದು ಸದಾನಂದ ಗೌಡ‌ ತಿಳಿಸಿದರು.

ನಾನು ರೈಲ್ವೇ ಸಚಿವನಾಗಿದ್ದ 6 ತಿಂಗಳ ಅವಧಿಯಲ್ಲಿ ಕರ್ನಾಟಕಕ್ಕೆ ಒಟ್ಟು 1,618 ಕೋಟಿ  ರೂ. ಬಿಡುಗಡೆ ಮಾಡಿದ್ದು , 26 ಹೊಸ ರೈಲು ಸಂಚಾರ ಆರಂಭಿಸುವ ಪ್ರಸ್ತಾವನೆ ಮಾಡಿದ್ದೆ. ಅವುಗಳ ಪೈಕಿ ಮಂಗಳೂರಿನಲ್ಲಿ ಈಗ ಉದ್ಘಾಟನೆಗೊಂಡಿರುವ ರೈಲು 24ನೇಯದ್ದು. ದ.ಕ. ಜಿಲ್ಲೆಯಲ್ಲಿ  ಪಡೀಲ್‌ ರೈಲ್ವೇ ಮೇಲ್ಸೇತುವೆ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದೆ. ಜಪ್ಪು ಕುಡುಪಾಡಿಯಲ್ಲಿಯೂ ಮೇಲ್ಸೇತುವೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಪುತ್ತೂರು ಹಾಗೂ ಸುಬ್ರಹ್ಮಣ್ಯ ರೈಲು ನಿಲ್ದಾಣಗಳನ್ನು ಕೂಡ ಆದರ್ಶ ರೈಲ್ವೇ ನಿಲ್ದಾಣಗಳಾಗಿ ಅಭಿವೃದ್ಧಿಪಡಿಸಲಾಗಿದೆ ಎಂದು ಹೇಳಿದರು.

ಸಚಿವ ಬಿ. ರಮಾಧಿನಾಥ ರೈ ಮಾತನಾಡಿ, ಕುಡ್ಲ ಎಕ್ಸ್‌ಪ್ರೆಸ್‌ ರೈಲು ಕಡಿಮೆ ಅವಧಿಯಲ್ಲಿ ಬೆಂಗಳೂರು ತಲುಪುವ ನಿಟ್ಟಿನಲ್ಲಿ  ಇಲಾಖೆ ಕ್ರಮ ಕೈಗೊಂಡರೆ, ಅದರಿಂದ ಜನರಿಗೆ ಹೆಚ್ಚು ಪ್ರಯೋಜನವಾಗುತ್ತದೆ ಎಂದರು.

1,000 ಕೋಟಿ ರೂ. ವಿನಿಯೋಗ
ಸಂಸದ ನಳಿನ್‌ ಕುಮಾರ್‌ ಕಟೀಲು ಮಾತನಾಡಿ, ಕಳೆದ ಎರಡೂವರೆ ವರ್ಷಗಳ ಅವಧಿಯಲ್ಲಿ ದ.ಕ. ಜಿಲ್ಲೆಯಲ್ಲಿ ರೈಲ್ವೇ ಇಲಾಖೆಯಿಂದ ಸುಮಾರು 1,000 ಕೋಟಿ ರೂ. ವೆಚ್ಚದ ಕಾಮಗಾರಿಗಳು ಆಗಿವೆ. ಆಮೆ ವೇಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇಲಾಖೆ ಇದೀಗ ಕುದುರೆ ವೇಗದಲ್ಲಿ ಮುನ್ನಡೆಯುತ್ತಿದೆ. ಕುಡ್ಲ ಎಕ್ಸ್‌ಪ್ರೆಸ್‌ ರೈಲು ಬೇಡಿಕೆಯನ್ನು ಆದಷ್ಟು ಶೀಘ್ರ ಈಡೇರಿಸಿದ ರೈಲ್ವೇ ಸಚಿವರು ಹಾಗೂ ಸಚಿವ ಸದಾನಂದ ಗೌಡರಿಗೆ ಕೃತಜ್ಞತೆ ಸಲ್ಲಿಸುತ್ತಿದ್ದೇನೆ. ಜತೆಗೆ ಈ ರೈಲು ಅನ್ನು ಮಂಗಳೂರು ಸೆಂಟ್ರಲ್‌ಗೆ ವಿಸ್ತರಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಶಾಸಕ ಜೆ.ಆರ್‌. ಲೋಬೋ, ವಿಧಾನ ಪರಿಷತ್‌ ಸಚೇತಕ ಐವನ್‌ ಡಿ’ಸೋಜಾ, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಮೇಯರ್‌ ಕವಿತಾ ಸನಿಲ್‌ ಶುಭಕೋರಿದರು. ಮನಪಾ ಸದಸರಾದ ವಿಜಯ ಕುಮಾರ್‌, ಸುಧೀರ್‌ ಶೆಟ್ಟಿ ಕಣ್ಣೂರು, ಪ್ರವೀಣ್‌ಚಂದ್ರ ಆಳ್ವ ಭಾಗವಹಿಸಿದ್ದರು.

ರೈಲ್ವೇ ಪಾಲಾ^ಟ್‌ ವಿಭಾಗದ ವಿಭಾಗೀಯ ಪ್ರಬಂಧಕ ನರೇಶ್‌ ಲಾಲ್ವಾನಿ, ಮೈಸೂರು ವಿಭಾಗ‌ ಡಿಆರ್‌ಎಂ ಅತುಲ್‌ ಗುಪ್ತಾ, ಕೊಂಕಣ ರೈಲ್ವೇ ಅಧಿಕಾರಿ ಮಹಮ್ಮದ್‌ ಅಸೀಮ್‌ ಸುಲೈಮಾನ್‌ ಉಪಸ್ಥಿತರಿದ್ದರು. ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣ ಸಹಾಯಕ ಸ್ಟೇಶ‌ನ್‌ ಮಾಸ್ಟರ್‌ ಕಿಶನ್‌ ಕುಮಾರ್‌ ನಿರ್ವಹಿಸಿದರು.

ಸೆಂಟ್ರಲ್‌ಗೆ ವಿಸ್ತರಿಸಲು ಆಗ್ರಹ
ಕುಡ್ಲ ಎಕ್ಸ್‌ಪ್ರೆಸ್‌ ಅನ್ನು ಮಂಗಳೂರು ಸೆಂಟ್ರಲ್‌ ವರೆಗೆ ವಿಸ್ತರಿಸಬೇಕೆಂದು ವೇದಿಕೆಯಲ್ಲಿದ್ದ ಎಲ್ಲ ಜನಪ್ರತಿನಿಧಿಗಳು ಆಗ್ರಹಿಸಿದರು. ಅದಕ್ಕೆ ಸ್ಪಂದಿಸಿದ ಡಿ.ವಿ. ಸದಾನಂದ ಗೌಡರು ಈ ಬಗ್ಗೆ ತಾನು ಹಾಗೂ ಸಂಸದ ನಳಿನ್‌ ಕುಮಾರ್‌ ಕಟೀಲು ಈಗಾಗಲೇ ರೈಲ್ವೇ ಸಚಿವರನ್ನು ಭೇಟಿ ಮಾಡಿ ಮನವರಿಕೆ ಮಾಡಿದ್ದೇವೆ. ಶೀಘ್ರದಲ್ಲೇ ಸಮಸ್ಯೆಗಳನ್ನು ಬಗೆಹರಿಸಿ ಕುಡ್ಲ ಎಕ್ಸ್‌ಪ್ರೆಸ್ಸನ್ನು ಮಂಗಳೂರು ಸೆಂಟ್ರಲ್‌ಗೆ ವಿಸ್ತರಿಸಲಾಗುವುದು ಎಂದು ಭರವಸೆ ನೀಡಿದರು.

– ರವಿವಾರ ಉದ್ಘಾಟನೆಗೊಂಡ ಇತರ ಯೋಜನೆಗಳು
– ಮಂಗಳೂರು ಜಂಕ್ಷನ್‌-ಚೆರ್ವತ್ತೂರು ರೈಲುಮಾರ್ಗ ವಿದ್ಯುದೀಕರಣ (82 ಕಿ.ಮೀ.)
- ಪಣಂಬೂರು-ಜೋಕಟ್ಟೆ ಹಳಿ ದ್ವಿಗುಣ (13.5 ಕಿ.ಮೀ.), ಹೊಸ ಬ್ಲಾಕ್‌ ಸ್ಟೇಶನ್‌
- 80 ಲಕ್ಷ ರೂ. ವೆಚ್ಚದಲ್ಲಿ  ತೋಕೂರಿನಲ್ಲಿ  ಸರಕು ನಿರ್ವಹಣೆ ಸೈಡಿಂಗ್‌ ಸೌಲಭ್ಯ

– ರೈಲ್ವೇ ಸಮಾರಂಭಕ್ಕೆ ಬಹಿಷ್ಕಾರ ಹಾಕಿದ್ದ ಡಿವಿ
ರೈಲ್ವೇ ಸಚಿವನಾಗಿ ಎರಡೂವರೆ ವರ್ಷಗಳ ಹಿಂದೆ ಬಜೆಟ್‌ನಲ್ಲಿ ಘೋಷಿಸಿದ್ದ ಕುಡ್ಲ ಎಕ್ಸ್‌ಪ್ರೆಸ್‌ ಆರಂಭಿಸದಿದ್ದರೆ ಇನ್ನುಮುಂದೆ ರೈಲ್ವೇ ಇಲಾಖೆಯ ಯಾವುದೇ ಸಮಾಧಿರಂಭದಲ್ಲಿ ಹಾಜರಾಗುವುದಿಲ್ಲ ಎಂದು ರೈಲ್ವೇ ಸಚಿವರಿಗೆ ತಿಳಿಸಿದ್ದೆ. ಇತ್ತೀಚೆಗೆ ಹಾಸನ- ಬೆಂಗಳೂರು ಹೊಸ ರೈಲು ಮಾರ್ಗ ಉದ್ಘಾಟನೆ ಸಮಾರಂಭಕ್ಕೂ ಅದೇ ಕಾರಣಕ್ಕೆ ಹಾಜರಾಗಿರಲಿಲ್ಲ. ಇದಾದ ಮೂರೇ ದಿನದಲ್ಲಿ ಕುಡ್ಲ ರೈಲು ಸಂಚಾರ ಆರಂಭವನ್ನು ರೈಲ್ವೇ ಸಚಿವರು ಘೋಷಿಸಿದರು ಎಂದು ಸಚಿವ ಡಿ.ವಿ. ಸದಾನಂದ ಗೌಡ ಹೇಳಿದರು.

ಟಾಪ್ ನ್ಯೂಸ್

IPL Mega Auction: Huge demand for spinner Chahal; Miller to Lucknow

IPL Mega Auction: ಸ್ಪಿನ್ನರ್‌ ಚಾಹಲ್‌ ಗೆ ಭಾರೀ ಬೇಡಿಕೆ; ಮಿಲ್ಲರ್‌ ಲಕ್ನೋಗೆ

DKShi

Channapatna bypoll; ಗೆಲುವಿಗೆ ಬಿಜೆಪಿ-ಜೆಡಿಎಸ್ ನವರೂ ಸಹಕರಿಸಿದ್ದಾರೆ: ಡಿ.ಕೆ.ಶಿವಕುಮಾರ್

rishabh-pant

IPL Mega Auction: ಭರ್ಜರಿ ಬಿಡ್‌ ಗಳಿಸಿ ಅಯ್ಯರ್‌ ದಾಖಲೆ ಮುರಿದ ರಿಷಭ್‌ ಪಂತ್

11

IPL ‌Mega Auction: ಬಟ್ಲರ್‌ಗೆ ಬಲೆ ಬೀಸಿದ ಗುಜರಾತ್; ಸಿಕ್ಕ ಬೆಲೆ ಎಷ್ಟು?

Iyer

IPL ‌Mega Auction: ದಾಖಲೆ ಬೆಲೆ ಪಡೆದ ಶ್ರೇಯಸ್‌ ಅಯ್ಯರ್‌ ಪಂಜಾಬ್‌ ಪಾಲಿಗೆ

IPL Mega Auction: ಹರಾಜು ಆರಂಭ; ಭರ್ಜರಿ ಬಿಡ್‌ ಗಳಿಸಿದ ವೇಗಿ ಅರ್ಶದೀಪ್‌ ಸಿಂಗ್

IPL Mega Auction: ಹರಾಜು ಆರಂಭ; ಭರ್ಜರಿ ಬಿಡ್‌ ಗಳಿಸಿದ ವೇಗಿ ಅರ್ಶದೀಪ್‌ ಸಿಂಗ್

Saira Banu: ಎ.ಆರ್‌.ರೆಹಮಾನ್‌ರಿಂದ ದೂರವಾದ ಬಗ್ಗೆ ಕೊನೆಗೂ ಮೌನ ಮುರಿದ ಸಾಯಿರಾ

Saira Banu: ಎ.ಆರ್‌.ರೆಹಮಾನ್‌ರಿಂದ ದೂರವಾದ ಬಗ್ಗೆ ಕೊನೆಗೂ ಮೌನ ಮುರಿದ ಸಾಯಿರಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9-someshwara

Someshwara: ಸಮುದ್ರಕ್ಕೆ ಹಾರಿದ ಯುವತಿಯ ರಕ್ಷಣೆ

Chrmadi-Ghat

Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ

Dawwod-Arrest

Mangaluru: ಕುಖ್ಯಾತ ರೌಡಿಶೀಟರ್‌ ದಾವೂದ್‌ ಬಂಧಿಸಿದ ಸಿಸಿಬಿ ಪೊಲೀಸರು

NITK-Padavi-pradana

Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್‌ ರಂಗರಾಜನ್‌

Nalin-Kateel

Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್‌

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

IPL Mega Auction: Huge demand for spinner Chahal; Miller to Lucknow

IPL Mega Auction: ಸ್ಪಿನ್ನರ್‌ ಚಾಹಲ್‌ ಗೆ ಭಾರೀ ಬೇಡಿಕೆ; ಮಿಲ್ಲರ್‌ ಲಕ್ನೋಗೆ

DKShi

Channapatna bypoll; ಗೆಲುವಿಗೆ ಬಿಜೆಪಿ-ಜೆಡಿಎಸ್ ನವರೂ ಸಹಕರಿಸಿದ್ದಾರೆ: ಡಿ.ಕೆ.ಶಿವಕುಮಾರ್

rishabh-pant

IPL Mega Auction: ಭರ್ಜರಿ ಬಿಡ್‌ ಗಳಿಸಿ ಅಯ್ಯರ್‌ ದಾಖಲೆ ಮುರಿದ ರಿಷಭ್‌ ಪಂತ್

11

IPL ‌Mega Auction: ಬಟ್ಲರ್‌ಗೆ ಬಲೆ ಬೀಸಿದ ಗುಜರಾತ್; ಸಿಕ್ಕ ಬೆಲೆ ಎಷ್ಟು?

Iyer

IPL ‌Mega Auction: ದಾಖಲೆ ಬೆಲೆ ಪಡೆದ ಶ್ರೇಯಸ್‌ ಅಯ್ಯರ್‌ ಪಂಜಾಬ್‌ ಪಾಲಿಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.