ಡಿಸಿ ಕೊಲೆಯತ್ನ ಪ್ರಕರಣ: ಬಂಧಿತರ ಸಂಖ್ಯೆ 21ಕ್ಕೆ ಏರಿಕೆ
Team Udayavani, Apr 10, 2017, 3:15 PM IST
ಉಡುಪಿ/ಕುಂದಾಪುರ: ಡಿ.ಸಿ., ಎ.ಸಿ, ವಿ.ಎ., ಗನ್‌ಮ್ಯಾನ್ ಮೇಲೆ ಮರಳು ಮಾಫಿಯಾದವರು ನಡೆಸಿದ ಹಲ್ಲೆ ಹಾಗೂ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿ ಶನಿವಾರ ರಾತ್ರಿ ಮತ್ತೆ ನಾಲ್ವರು ಆರೋಪಿಗಳನ್ನು ಹಾಗೂ ರವಿವಾರ ಮಧ್ಯಾಹ್ನ ಒಬ್ಬನನ್ನು ಬಂಧಿಸಿದ್ದು, ಒಟ್ಟಾರೆ ಎ. 3ರಿಂದ ಎ. 9ರ ವರೆಗೆ ಹಂತ-ಹಂತವಾಗಿ ಒಟ್ಟು 21 ಆರೋಪಿಗಳ (ಗಡೀಪಾರು ಮಾಡಲಾದ ಐವರನ್ನು ಹೊರತುಪಡಿಸಿ) ಬಂಧನವಾಗಿದೆ.
ಶನಿವಾರ ರಾತ್ರಿ ಕಾಳಾವರದ ರಾಘವೇಂದ್ರ (36), ಕಂಡೂÉರಿನ ಫಯಾಜ್ ಅಹ್ಮದ್ (22), ಮುಶಿನ್ (23), ಮಹಮ್ಮದ್ ಯಾಸಿನ್ (20) ಮೂಡುಬಗೆಯ ಮಹಮ್ಮದ್ ಅಫìತ್ (23) ಹಾಗೂ ರವಿವಾರ ಮಧ್ಯಾಹ್ನ ಕಂಡೂÉರಿನ ಸಂಜೀವ (44) ಅವರನ್ನು ಬಂಧಿಸಲಾಗಿದೆ. ಬಂಧಿತರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಅಮಾಯಕರ ಬಿಡುಗಡೆಗೆ ಆಗ್ರಹ
ಈ ಪ್ರಕರಣದಲ್ಲಿ ಅಮಾಯಕರನ್ನು ಬಂಧಿಸಲಾಗಿದೆ ಎಂದು ಕಂಡೂÉರಿನ ಮಹಿಳೆಯರ ಸಹಿತ ಸ್ಥಳೀಯರು ಕುಂದಾಪುರ ಠಾಣಾಧಿಕಾರಿ ಹಾಗೂ ಕಂಡೂÉರು ಠಾಣಾಧಿಕಾರಿ ವಿರುದ್ಧ ಆರೋಪ ಮಾಡಿದರು.
ಕಂಡೂÉರು ಠಾಣೆಗೆ ತೆರಳಿ ಠಾಣಾಧಿಕಾರಿಗಳಲ್ಲಿ ಅಮಾಯಕರನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿದರು. ಈ ಬಗ್ಗೆ ಮನವಿಯನ್ನು ಮೇಲಧಿಕಾರಿಗಳಿಗೆ ಕಳುಹಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ. ಅದೇ ರೀತಿ ಕಂಡೂÉರಿನವರು ಉಡುಪಿ ನಗರ ಠಾಣೆಗೂ ಆಗಮಿಸಿ ಅಧಿಕಾರಿಗಳಲ್ಲಿ ಅವರು ಮನವಿ ಮಾಡಿಕೊಂಡಿದ್ದಾರೆ.
21 ಆರೋಪಿಗಳ ಬಂಧನ: ಎಸ್‌ಪಿ
ರವಿವಾರದ ವರೆಗೆ ಒಟ್ಟು 21 ಆರೋಪಿಗಳ ಬಂಧನವಾಗಿದೆ. ಇನ್ನೂ ಹಲವು ಆರೋಪಿಗಳ ಬಂಧನವಾಗಲೂಬಹುದು. ಪೊಲೀಸ್ ತಂಡ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಪ್ರಕರಣದ ಮತ್ತಷ್ಟು ಆರೋಪಿಗಳ ಪತ್ತೆ ಕಾರ್ಯಕ್ಕೆ ಶ್ರಮ ವಹಿಸುತ್ತಿದೆ ಎಂದು ಎಸ್‌ಪಿ ಕೆ.ಟಿ. ಬಾಲಕೃಷ್ಣ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಪಿಕಪ್ ವಾಹನ ಢಿಕ್ಕಿ ಹೊಡೆದು ವ್ಯಕ್ತಿ ಗಾಯ
Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ
Kaup ಪುರಸಭೆ: ರಸ್ತೆ ಬದಿಯಲ್ಲಿ ಖಾಲಿ ಬಿಯರ್ ಬಾಟಲಿ ಸದ್ದು
Katpadi: ಹೆದ್ದಾರಿ ಅಂಚಿನಲ್ಲಿ ಅಪಾಯ!; ರಸ್ತೆ ಬದಿಯಲ್ಲಿ ಉದ್ದಕ್ಕೂ ಹೊಂಡಗುಂಡಿ
Health Card: ಮಣಿಪಾಲ ಆರೋಗ್ಯಕಾರ್ಡ್ ನೋಂದಾವಣೆಗೆ ಐದು ದಿನ ಬಾಕಿ: ನ.30 ಕೊನೆಯ ದಿನ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.