ಮಹಾವೀರರ ತತ್ವ ಅಳವಡಿಸಿಕೊಳ್ಳಿ
Team Udayavani, Apr 10, 2017, 3:34 PM IST
ಜೇವರ್ಗಿ: ಪ್ರತಿಯೊಬ್ಬರು ಭಗವಾನ ಮಹಾವೀರರ ಅಹಿಂಸಾ ತತ್ವಗಳನ್ನು ಬದುಕಿನಲ್ಲಿ ಆಳವಡಿಸಿಕೊಂಡು ಸತ್ಯವನ್ನು ನುಡಿಯುತ್ತ ಸನ್ಮಾರ್ಗದಲ್ಲಿ ನಡೆಯಬೇಕು ಎಂದು ಜೆಡಿಎಸ್ ಮುಖಂಡ ಚನ್ನಮಲ್ಲಯ್ಯ ಹಿರೇಮಠ ಹೇಳಿದರು. ಪಟ್ಟಣದ ತಹಶೀಲ್ದಾರ ಕಚೇರಿ ಆವರಣದಲ್ಲಿ ತಾಲೂಕು ಆಡಳಿತದ ವತಿಯಿಂದ ರವಿವಾರ ಆಯೋಜಿಸಲಾಗಿದ್ದ ಮಹಾವೀರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜೀವನದ ವೈರಾಗ್ಯ, ಜೀವನದ ಸಂದೇಶಗಳನ್ನು ತಿಳಿಸಿದ ಮಹಾವೀರರ ತತ್ವಗಳು ಸರ್ವಕಾಲಿಕವಾಗಿವೆ. ಕ್ರಿ.ಪೂ. 6ನೇ ಶತಮಾನದಲ್ಲಿ ಜನಿಸಿದ ಮಹಾವೀರ ಜೀವನದಲ್ಲಿ ಎಲ್ಲ ಐಶ್ವರ್ಯ ಪಡೆದುಕೊಂಡಿದ್ದ. ಹೆಂಡತಿ, ಮಕ್ಕಳು ಇದ್ದರೂ ಜೀವನದ ಜಂಜಾಟ ತೊರೆದು ಜಗತ್ತಿಗೆ ಉತ್ತಮ ಸಂದೇಶ ನೀಡಿದರು.
ಅಲ್ಲದೆ ಜೇವರ್ಗಿ ಪಟ್ಟಣ, ತಾಲೂಕಿನ ಇಜೇರಿ, ಹಂಗರಗಾ ಸೇರಿದಂತೆ ಅನೇಕ ಕಡೆ ಜೈನ ಧರ್ಮದ ಕುರುಹುಗಳಿವೆ. ಸಮಾಜದವರು ಮತ್ತು ಸರಕಾರಗಳು ಅಂತಹ ಸ್ಮಾರಕಗಳನ್ನು ರಕ್ಷಿಸುವ ಕೆಲಸ ಮಾಡಬೇಕು. 24ನೇ ತೀರ್ಥಂಕರನಾದ ಮಹಾವೀರ ಜಗತ್ತಿಗೆ ಅಹಿಂಸಾ ತತ್ವ ನೀಡಿ ಶಾಂತಿ ಸಂದೇಶ ನೀಡಿದ್ದಾರೆ.
ಅವರ ತತ್ವಗಳು ನಮಗೆ ದಾರಿ ದೀಪವಾಗಬೇಕು ಎಂದು ಹೇಳಿದರು. ತಹಶೀಲ್ದಾರ ಯಲ್ಲಪ್ಪ ಸುಬೇದಾರ, ಶಿರಸ್ತೇದಾರ ಗುರುರಾಜ ಸಂಗಾವಿ, ಆಹಾರ ನಿರೀಕ್ಷಕ ಡಿ.ಬಿ. ಪಾಟೀಲ, ಸಾಯಬಣ್ಣ, ಜೈನ್ ಸಮಾಜದ ತಾಲೂಕು ಅಧ್ಯಕ್ಷ ಅಂಬಣ್ಣ ಜೈನ,
ಅಶೋಕ ಪಾಟೀಲ ಕಲ್ಲಹಂಗರಗಾ, ದೇವಿಂದ್ರ ಜೈನ್, ಪ್ರದೀಪ ಪಂಡಿತ, ಧನರಾಜ ಸಾಹು ಇಜೇರಿ, ನಾರಾಯಣ ಇಜೇರಿ, ಬ್ರಹ್ಮಶುರ ಪಂಡಿತ, ಭರಮಣ್ಣ ಇಜೇರಿ, ಶಾಂತಿನಾಥ ಪಾಟೀಲ ಕಲ್ಲಹಂಗರಗಾ, ರಾಮಪ್ಪ, ಶಾಂತಪ್ಪ ಪಾಟೀಲ, ಉಸ್ಮಾನ ಸಿಪಾಯಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಡ್ರಗ್ಸ್ ದಂಧೆಕೋರನ ಮೇಲೆ ಕಲಬುರಗಿಯಲ್ಲಿ ಪೊಲೀಸ್ ಫೈರಿಂಗ್
Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ
Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ
ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ
Kalaburagi; ಸಿದ್ದರಾಮಯ್ಯ ಔಟ್ ಗೋಯಿಂಗ್ ಸಿಎಂ: ಆರ್ ಅಶೋಕ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.