ಚರ್ಚ್‌ಗಳಲ್ಲಿ ಶ್ರದ್ಧಾಭಕ್ತಿಯ “ಗರಿಗಳ ರವಿವಾರ’ ಆಚರಣೆ
Team Udayavani, Apr 10, 2017, 3:35 PM IST
ಪುತ್ತೂರು/ಸುಳ್ಯ : ಯೇಸುಕ್ರಿಸ್ತರು ದೇವಪುತ್ರನಾದರೂ ಮನುಜನ ಪಾಪ ಪರಿಹಾರಕ್ಕಾಗಿ ಮಾನವನಾಗಿ ಭೂಮಿ ಯಲ್ಲಿ ಜನ್ಮತಾಳಿದವರು. ಪ್ರೀತಿ ಮತ್ತು ಶಾಂತಿಯ ದ್ಯೋತಕರಾಗಿ ಇತರರನ್ನು ಗೆಲ್ಲಲು ಪ್ರಯತ್ನಿಸಿದವರು ಎಂದು ಮಾçದೆ ದೇವುಸ್ ಚರ್ಚ್‌ನ ಸಹಾಯಕ ಧರ್ಮ ಗುರು ವಂ| ಸಂತೋಷ್ ಡಿ’ಸೋಜಾ ಹೇಳಿದರು.
ರವಿವಾರ ವಿಶ್ವಾದಾದ್ಯಂತ ಕೈಸ್ತರು ಆಚರಿಸುತ್ತಿರುವ “ಗರಿಗಳ ರವಿವಾರ (ಪಾಮ್ ಸಂಡೇ)’ಯ ಅಂಗವಾಗಿ ನಗರದ ಮಾçದೆ ದೇವುಸ್ ಚರ್ಚ್‌ನಲ್ಲಿ ಅವರು ಬೈಬಲ್ ಸಂದೇಶ ನೀಡಿದರು.
ಕ್ರಿಸ್ತ ಆಧ್ಯಾತ್ಮಿಕ ಅನುಭವವನ್ನು ಎಲ್ಲೆಡೆ ಚೆಲ್ಲುವ ಹರಿಕಾರರಾದವರು. ಸ್ವತಃ ಕಷ್ಟದ ಜೀವನವನ್ನು ಸವೆಸಿ ಕಷ್ಟವೇನೆಂಬುದರ ಅರಿವನ್ನು ತೋರಿಸಿಕೊಟ್ಟವರು. ತನ್ನ ಎಡಬಲಗಳಲ್ಲಿ ಕುಳಿತುಕೊಳ್ಳುವ, ಅಧಿಕಾರಕ್ಕಾಗಿ ಕಚ್ಚಾಡುವವರಿಗೆ ಕೊನೆಯವನು ಹೇಗೆ ಮೊದಲಿಗನಾಗಬೇಕೆಂದು ಸಾರಿದವರು. ಸಾಮಾಜಿಕ ಸಮಸ್ಯೆಗಳಿಗೆಲ್ಲ ಮನಃಪರಿವರ್ತನೆ, ಪರಸ್ಪರ ಸೇವೆ ಮತ್ತು ಸಹಕಾರವೇ ಮದ್ದು ಎಂದು ಸಾರಿದವರು ಎಂದರು.
ವಿಶ್ವಾಸವಿರಿಸಬೇಕು
ಹಿಂಸೆಯಿಂದ ಹೊರಬರಲು ಒಂದೇ ಮಾರ್ಗವೆಂದರೆ ಅದು ಶಿಸ್ತಿನ ಬದುಕು. ಆಧ್ಯಾತ್ಮಿಕತೆಗೆ ಕರೆದೊಯ್ಯುವ ಪ್ರಾರ್ಥನೆ, ಉಪವಾಸ, ಕಷ್ಟ-ನೋವುಗಳ ನಡುವೆ ತೋರಬೇಕಾದ ತಾಳ್ಮೆ ಸಹನೆಗಳಷ್ಟೇ ಹಿಂಸೆಯನ್ನು ಹತ್ತಿಕ್ಕಲು ಸಾಧ್ಯವೆಂದು ತಿಳಿಸಿದವರು ಕ್ರಿಸ್ತರು. ಬದುಕಿನಲ್ಲಿ ಕಷ್ಟ ಮತ್ತು ನಿರಾಸೆಯಾದಾಗ ಮಾತ್ರ ಯೇಸುಕ್ರಿಸ್ತರನ್ನು ನೆನೆಯುವುದು ಆಗಬಾರದು. ಯೇಸು ಕ್ರಿಸ್ತರು ಪುನರುತ್ಥಾನರಾದಂತೆ ನಾವೂ ಒಂದು ದಿನ ಪುನರುತ್ಥಾನ ಹೊಂದುವೆವು ಎಂಬುದರ ಕುರಿತು ವಿಶ್ವಾಸವಿರಿಸಬೇಕು ಎಂದು ವಂ| ಸಂತೋಷ್ ಹೇಳಿದರು.ಪ್ರಧಾನ ಧರ್ಮಗುರು ವಂ| ಆಲೆøàಡ್ ಜಾನ್ ಪಿಂಟೋ ಬಲಿಪೂಜೆಯ ನೇತೃತ್ವ ವಹಿಸಿದ್ದರು. ವಂ| ವಲೇರಿಯನ್ ಮಿತ್ತೂರು, ವಂ| ಮ್ಯಾಕ್ಸಿಮ್ ಡಿ’ಸೋಜಾ ಬಲಿಪೂಜೆಯಲ್ಲಿ ಸಹಕರಿಸಿದರು.
ವಿವಿಧ ಚರ್ಚ್‌ಗಳಲ್ಲಿ
ಮರೀಲು ಸೆಕ್ರೇಡ್ ಹಾರ್ಟ್ ಚರ್ಚ್‌ನಲ್ಲಿ ಧರ್ಮಗುರು ವಂ| ಫ್ರಾನ್ಸಿಸ್ ಅಸ್ಸಿಸಿ ಡಿ’ಅಲ್ಮೇಡಾ ಅವರು ಪ್ರಧಾನ ದಿವ್ಯ ಬಲಿಪೂಜೆ ನೆರವೇರಿಸಿದರು. ಸೆವಕ್ ಕೊಂಕಣಿ ಪತ್ರಿಕೆಯ ಸಂಪಾದಕ ವಂ| ಡೆರಿಕ್ ಸಂದೇಶ ನೀಡಿದರು.
ಬನ್ನೂರು ಸಂತ ಅಂತೋನಿ ಚರ್ಚ್‌ನಲ್ಲಿ ಪ್ರಧಾನ ಧರ್ಮಗುರು ವಂ| ಪ್ರಶಾಂತ್ ಫೆರ್ನಾಂಡಿಸ್ ದಿವ್ಯ ಬಲಿಪೂಜೆ ನೆರವೇ ರಿಸಿ ಸಂದೇಶ ನೀಡಿದರು.
ಆಯಾ ಚರ್ಚ್‌ಗಳಲ್ಲಿ ದಿವ್ಯ ಪೂಜೆಯ ಮೊದಲು ಶುದ್ಧೀಕರಿಸಿದ ತಾಳೆಗರಿಗಳನ್ನು ಭಕ್ತರಿಗೆ ಹಂಚಲಾಯಿತು.
ಬಳಿಕ ಭಕ್ತಿ ಮೆರವಣಿಗೆ ಮೂಲಕ ಭಕ್ತರು ಚರ್ಚ್‌ಗೆ ಆಗಮಿಸಿ ದಿವ್ಯ ಬಲಿ ಪೂಜೆಯಲ್ಲಿ ಪಾಲ್ಗೊಂಡರು. ಚರ್ಚ್‌ಗಳ ಪಾಲನ ಸಮಿತಿಯ ಉಪಾಧ್ಯಕ್ಷರು, ಕಾರ್ಯದರ್ಶಿ, ಪಾಲನ ಸಮಿತಿಯ ಸದಸ್ಯರು, ವಾಳೆ ಗುರಿಕಾರರು, ಚರ್ಚ್ ಸ್ಯಾಕ್ರಿಸ್ಟಿಯನ್, ವೇದಿ ಸೇವಕರು, ಗಾಯನ ಮಂಡಳಿಯವರು ಸಹಕರಿಸಿದರು.
ದಿನದ ಸಂಕೇತ
ಗರಿಗಳ ರವಿವಾರ ಪಿತನ ಚಿತ್ತಕ್ಕೆ ವಿಧೇಯ ರಾದ ಯೇಸು, ನಿತ್ಯಜೀವ ಅರಸಲು ಮೃತ್ಯುಪಾಶಕ್ಕೆ ಸಾಗುವ ಪ್ರಯಾಣದ ಸಂಕೇತ. ಈ ರವಿವಾರವನ್ನು ಗರಿಗಳ ರವಿವಾರ ಅಥವಾ ಶ್ರಮ -ಮರಣಗಳ ರವಿವಾರವೆಂದು ಗುರುತಿಸಲಾಗುತ್ತದೆ. ಇದು ಶೋಕ ಸಂಭ್ರಮಗಳ ರವಿವಾರ. ಜನತೆ ಯೇಸುಕ್ರಿಸ್ತರನ್ನು ತಾಳೆಗರಿಗಳಿಂದ ಆತ್ಮೀಯವಾಗಿ ಬರಮಾಡಿಕೊಂಡ ದಿನ ವನ್ನೇ ಕ್ರಿಶ್ಚಿಯನ್ ಸಮುದಾಯದವರು “ಪಾಮ್ ಸಂಡೇ’ ಆಗಿ ಆಚರಿಸುವುದು ಸಂಪ್ರದಾಯವಾಗಿದೆ. ಮುಂದಿನ ರವಿ ವಾರದವರೆಗೆ ಕ್ರೈಸ್ತ ಬಂಧುಗಳು ಪವಿತ್ರ ವಾರ ಆಚರಿಸಲಿದ್ದು, ಎ. 13ರಂದು ಶುಭ ಗುರುವಾರ, ಎ. 14ರಂದು ಶುಭ ಶುಕ್ರವಾರವನ್ನಾಗಿ ಆಚರಿಸಿ ಎ. 16ರಂದು ಈಸ್ಟರ್ ಸಂಡೇ ಹಬ್ಬಕ್ಕಾಗಿ ಕ್ರೈಸ್ತರು ಪೂರ್ವ ಸಿದ್ಧತೆ ನಡೆಸುತ್ತಿದ್ದಾರೆ.
ಈ ವಾರವನ್ನು ಯಾತನೆಯ ವಾರ ವೆಂದು ಕರೆಯಲಾಗಿದೆ. ಗರಿಗಳ ರವಿವಾರ ದಂದು ಆರಂಭವಾಗುವ ಯೇಸುವಿನ ಯಾತ್ರೆ ಇಡೀ ವಾರ ಮುಂದುವರಿದು ಶುಕ್ರವಾರದಂದು ಅಂತಿಮಗೊಳ್ಳುತ್ತದೆ. ಕ್ರೈಸ್ತರಿಗೆಲ್ಲ ಪರಿಶುದ್ಧವಾದ, ಬದುಕಿನ ಉತ್ಕೃಷ್ಟ ಭಾವನೆಗಳನ್ನು ಹೊರಹೊಮ್ಮುವ ವಾರ ಈ ಪವಿತ್ರ ವಾರವಾಗಿದೆ.
ಸಂತ ಬ್ರಿಜಿಡರ ಚರ್ಚ್‌ನಲ್ಲಿ ಗರಿಗಳ ರವಿವಾರ
ಸುಳ್ಯ : ಸುಳ್ಯದ ಆಯರ್ಲೆಂಡಿನ ಸಂತ ಬ್ರಿಜಿಡ್ ಚರ್ಚ್‌ನಲ್ಲಿ ಗರಿಗಳ ರವಿವಾರವನ್ನು ಸಂಭ್ರಮದಿಂದ ಆಚರಿಸಲಾಯಿತು. ಸೈಂಟ್ ಜೋಸೆಫ್ ಶಾಲಾ ಮೆಸ್ ಹಾಲ್‌ನಲ್ಲಿ ಚರ್ಚಿನ ಧರ್ಮಗುರು ವಂ| ವಿನ್ಸೆಂಟ್ ಡಿ’ಸೋಜಾ ಅವರು ಪಾಲನ ಸಮಿತಿಯ ಸಹಯೋಗದಲ್ಲಿ ಹಾಗೂ ಚರ್ಚ್ ಭಕ್ತರ ಸಮ್ಮುಖದಲ್ಲಿ ಗರಿಗಳನ್ನು ಆಶೀರ್ವದಿಸಿ ಭಕ್ತರಿಗೆ ವಿತರಿಸಿದರು. ಆನಂತರ ಗರಿಗಳನ್ನು ಹಿಡಿದುಕೊಂಡು ಮೆರವಣಿಗೆಯ ಮೂಲಕ ದೇವಾಲಯಕ್ಕೆ ಸಾಗಿ ಅಲ್ಲಿ ಬಲಿ ಪೂಜೆಯನ್ನು ಅರ್ಪಿಸಲಾಯಿತು. ಯಾಜಕರು ಗರಿಗಳ ರವಿವಾರದ ಮಹತ್ವದ ಬಗ್ಗೆ ಸವಿವರವಾದ ಬೋಧನೆಯನ್ನು ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.