ಖಾತರಿ ನಿಯಮಾನುಸಾರ ಕಾರ್ಯಕ್ಕೆ ಅವಕಾಶ ಕೊಡಿ!


Team Udayavani, Apr 11, 2017, 1:33 PM IST

dvg4.jpg

ದಾವಣಗೆರೆ: ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕಾಮಗಾರಿ ಕೈಗೊಳ್ಳುವಾಗ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿಗೆ ನಿಯಮಾನುಸಾರ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಡಬೇಕು ಎಂದು ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗಳ ಸಂಘ ಸೋಮವಾರ ಸಾಂಕೇತಿಕ ಧರಣಿ ಮೂಲಕ ಒತ್ತಾಯಿಸಿದೆ. 

ಉದ್ಯೋಗ ಖಾತರಿ ಯೋಜನೆ ಪ್ರಾರಂಭವಾದ ದಿನದಿಂದ ಸರ್ಕಾರದ ನಿರ್ದೇಶನ, ಅಧಿಕಾರಿಗಳ ಮೌಖೀಕ ಆದೇಶ, ಜನಪ್ರತಿನಿಧಿಗಳ ಆಶಯದಂತೆ ಕೆಲಸ ಮಾಡಲಾಗುತ್ತಿದೆ. ಇದರಿಂದ ಅಧಿಕಾರಿಗಳು ವಿನಾ ಕಾರಣ ನಿಯಮ ಉಲ್ಲಂಘನೆ ಆರೋಪ ಎದುರಿಸಬೇಕಾದ ಸ್ಥಿತಿ ಬಂದಿದೆ ಎಂದು ದೂರಿದ ಸಂಘದ ಪದಾಧಿಕಾರಿಗಳು,  ಈ ಕುರಿತು ಜಿಲ್ಲಾ ಪಂಚಾಯತ್‌ ಉಪ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಿ, ತಮ್ಮ ಬೇಡಿಕೆ ಪುರಸ್ಕರಿಸಲು ಕೋರಿದರು. 

ಇದಕ್ಕೂ ಮುನ್ನ ಮಾತನಾಡಿದ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಅಧಿಕಾರಿಗಳ ಮತ್ತು ನೌಕರರ ಸಂಘದ ಜಿಲ್ಲಾಧ್ಯಕ್ಷ ಎಸ್‌.ಎಂ. ಸಂಗಮೇಶ್‌, ಉದ್ಯೋಗ ಖಾತ್ರಿ ನಿಯಮ ಉಲ್ಲಂಘಿಸುತ್ತಿರುವುದರಿಂದ ವಿನಾಕಾರಣ ಪಿಡಿಪಗಳು, ಇತರೆ ಅಧಿಕಾರಿಗಳು ಇಲಾಖಾ ವಿಚಾರಣೆಗೆ ಒಳಪಡಬೇಕಾಗುತ್ತಿದೆ. 

ಸಾಮಾಜಿಕ ಲೆಕ್ಕ ಪರಿಶೋಧನೆಯ ಅವೈಜ್ಞಾನಿಕ ನಿರ್ಧಾರದಿಂದ ನೌಕರರ ಸೇವೆ, ಪದೋನ್ನತಿಗೆ ತೊದರೆ ಆಗುತ್ತಿದೆ. ಅಮಾನತು ಶಿಕ್ಷೆಗೂ ಸಹ ಗುರಿಯಾಗಬೇಕಾದ ಸ್ಥಿತಿ ಇದೆ. ಕೆಲ ಪ್ರಕರಣಗಳಲ್ಲಿ ಲೋಕಾಯುಕ್ತ ತನಿಖೆ ಎದುರಿಸಬೇಕಾದ ಅನಿವಾರ್ಯತೆ ಸಹ ಬಂದಿವೆ ಎಂದು ತಮ್ಮ ಅಳಲು ತೋಡಿಕೊಂಡರು. 

ನೌಕರರು, ಅಭಿಯಂತರರು, ಅಧಿಕಾರಿಗಳ ಮೇಲೆ ದೌರ್ಜನ್ಯ ಮತ್ತು ಹಲ್ಲೆ ಪ್ರಕರಣಗಳು ಜರುಗುತ್ತಿವೆ. ಕರ್ತವ್ಯ ನಿರ್ವಹಿಸಲು ಆಗದಂತಹ ಸ್ಥಿತಿ ಇದೆ. ಇಡೀ ಯೋಜನೆ ನೋಡಿಕೊಳ್ಳುವುದೇ ನಮ್ಮ ನಿತ್ಯ ಕೆಲಸವಾಗಿ ಹೋಗಿದೆ. ಇದನ್ನು ಅಧಿಕಾರಿಗಳು, ಸರ್ಕಾರ ಅರ್ಥಮಾಡಿಕೊಳ್ಳಬೇಕಿದೆ ಎಂದು ಅವರು ಕೋರಿದರು.

ಕಡ್ಡಾಯ ಮಾನವ ದಿನ ಸೃಜಿಸುವುದು ಸಾಧ್ಯವಿಲ್ಲ. ಕೂಲಿ ಕೋರಿ ಬಂದ ಎಲ್ಲಾ ಕೂಲಿಕಾರರಿಗೆ ನಿಯಮಾನುಸಾರ ಕೂಲಿ ಪಾವತಿಸಿ, ಕಾಮಗಾರಿ ನಿರ್ವಹಿಸಲಾಗುವುದು. ಕಾಮಗಾರಿ ಸ್ಥಳದಲ್ಲಿ ಕೂಲಿಕಾರರಿಗೆ ಕಡ್ಡಾಯವಾಗಿ ಬಯೋಮೆಟ್ರಿಕ್‌ ಹಾಜರಾತಿ ಕಡ್ಡಾಯಗೊಳಿಸಬೇಕು ಎಂದು ಅವರು ಆಗ್ರಹಿಸಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಎಸ್‌. ವಿವೇಕಾನಂದ, ಖಜಾಂಚಿ ಎಂ.ಆರ್‌. ಸಿದ್ಧಪ್ಪ, ಉಪಾಧ್ಯಕ್ಷರಾದ ಪ್ರೇಮ, ಕೆ.ಎಸ್‌. ರಮೇಶ್‌, ಉಮೇಶ್‌, ಶ್ರೀನಿವಾಸ, ಸಹ ಕಾರ್ಯದರ್ಶಿ ಮಂಜುನಾಥ, ಸಂಘಟನಾ ಕಾರ್ಯದರ್ಶಿಗಳಾದ ರಂಗಸ್ವಾಮಿ, ಜಯ್ಯಣ್ಣ, ಮಂಜುನಾಥ ಧರಣಿ ನೇತೃತ್ವ ವಹಿಸಿದ್ದರು.  

ಟಾಪ್ ನ್ಯೂಸ್

Rabakavi-Yatnal

Waqf Issue: ಬಸವಣ್ಣನವರ ಕುರಿತ ಹೇಳಿಕೆಗೆ ಬಸನಗೌಡ ಯತ್ನಾಳ್‌ ಕೊಟ್ಟ ಸಮರ್ಥನೆ ಏನು?

HDK (3)

Vokkaliga ಸ್ವಾಮೀಜಿ ವಿರುದ್ಧ ಕೇಸ್‌; ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಅರಾಜಕತೆ:ಎಚ್ ಡಿಕೆ

Mahayuti

Maharashtra; ಡಿ.5 ರಂದು ಪ್ರಧಾನಿ ಸಮ್ಮುಖದಲ್ಲಿ ನೂತನ ಸರಕಾರ ಪ್ರಮಾಣ ವಚನ

ಕಾಂಗ್ರೆಸ್ ಏಜೆಂಟ್ ಆಗಿ ಬಿಜೆಪಿ ದುರ್ಬಲಗೊಳಿಸುತ್ತಿರುವ ಯತ್ನಾಳ್: ಸ್ವಪಕ್ಷ ನಾಯಕರ ಆಕ್ರೋಶ

ಕಾಂಗ್ರೆಸ್ ಏಜೆಂಟ್ ಆಗಿ ಬಿಜೆಪಿ ದುರ್ಬಲಗೊಳಿಸುತ್ತಿರುವ ಯತ್ನಾಳ್: ಸ್ವಪಕ್ಷ ನಾಯಕರ ಆಕ್ರೋಶ

pratap-Simha

Waqf Issue: ಪಕ್ಷದ ಕಾರ್ಯಕರ್ತನಾಗಿ ಯಾರೇ ಹೋರಾಟಕ್ಕೆ ಕರೆದರೂ ಹೋಗ್ತಿನಿ: ಪ್ರತಾಪ್‌ ಸಿಂಹ

Chikkamagaluru: ಆನೆ ದಾಳಿಗೆ ವ್ಯಕ್ತಿ ಸಾ*ವು… ಅರಣ್ಯ ಇಲಾಖೆ ವಿರುದ್ಧ ಆಕ್ರೋಶ

Chikkamagaluru: ಕಾಡಾನೆ ದಾಳಿಗೆ ವ್ಯಕ್ತಿ ಸಾ*ವು… ಅರಣ್ಯ ಇಲಾಖೆ ವಿರುದ್ಧ ಆಕ್ರೋಶ

BJP 2

BJP;ಯತ್ನಾಳ್ ವಿರುದ್ಧ ಕ್ರಮ ಕೈಗೊಳ್ಳುವ ಮುನ್ನ ಆ ಇಬ್ಬರ ಮೇಲೆ ಕೈಗೊಳ್ಳಬೇಕಲ್ಲ?!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೇಂದ್ರ ಸ್ಥಾನದಲ್ಲಿ ವಾಸಿಸದಿದ್ದರೆ ಶಿಸ್ತು ಕ್ರಮ

Karnataka Govt.,: ಕೇಂದ್ರ ಸ್ಥಾನದಲ್ಲಿ ವಾಸಿಸದಿದ್ದರೆ ಶಿಸ್ತು ಕ್ರಮ

Davanagere: ಗೆಳೆಯನನ್ನೇ ಕೊಲೆ ಮಾಡಿದ ಪ್ರಕರಣ… ಆರೋಪಿಗೆ ಜೀವಾವಧಿ ಶಿಕ್ಷೆ

Davanagere: ಗೆಳೆಯನನ್ನೇ ಕೊಲೆ ಮಾಡಿದ ಪ್ರಕರಣ… ಆರೋಪಿಗೆ ಜೀವಾವಧಿ ಶಿಕ್ಷೆ

ಮೀಸಲಾತಿಗೆ ಒತ್ತಾಯಿಸಿ ಡಿ.10ರಂದು ಸುವರ್ಣ ಸೌಧಕ್ಕೆ ಮುತ್ತಿಗೆ: ಬಸವ ಜಯಮೃತ್ಯುಂಜಯ ಸ್ವಾಮೀಜಿ

ಮೀಸಲಾತಿಗೆ ಒತ್ತಾಯಿಸಿ ಡಿ.10ರಂದು ಸುವರ್ಣ ಸೌಧಕ್ಕೆ ಮುತ್ತಿಗೆ: ಬಸವ ಜಯಮೃತ್ಯುಂಜಯ ಸ್ವಾಮೀಜಿ

ಯಡಿಯೂರಪ್ಪ

Politics: ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಗೆ ಪ್ರಯತ್ನ: ಬಿಎಸ್‌ ಯಡಿಯೂರಪ್ಪ

DVG-Tagaru

Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ

MUST WATCH

udayavani youtube

ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

ಹೊಸ ಸೇರ್ಪಡೆ

Rabakavi-Yatnal

Waqf Issue: ಬಸವಣ್ಣನವರ ಕುರಿತ ಹೇಳಿಕೆಗೆ ಬಸನಗೌಡ ಯತ್ನಾಳ್‌ ಕೊಟ್ಟ ಸಮರ್ಥನೆ ಏನು?

21

Udupi: ಬೈಕ್‌ಗೆ ಇನ್ನೋವಾ ಢಿಕ್ಕಿ; ಸವಾರನಿಗೆ ಗಾಯ

Syed Modi International 2024:  ಹೂಡಾಗೆ ಸೋಲು; ಸಿಂಧು ಫೈನಲಿಗೆ

Syed Modi International 2024: ಹೂಡಾಗೆ ಸೋಲು; ಸಿಂಧು ಫೈನಲಿಗೆ

World Chess Championship: ಗುಕೇಶ್‌-ಲಿರೆನ್‌ 5ನೇ ಪಂದ್ಯ ಡ್ರಾ

World Chess Championship: ಗುಕೇಶ್‌-ಲಿರೆನ್‌ 5ನೇ ಪಂದ್ಯ ಡ್ರಾ

ACC U19 Asia Cup 2024: ಭಾರತ ವಿರುದ್ಧ ಪಾಕ್‌ಗೆ ಜಯ

ACC U19 Asia Cup 2024: ಭಾರತ ವಿರುದ್ಧ ಪಾಕ್‌ಗೆ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.