ಮೇಷ್ಟ್ರು ಇಲ್ಲದ ಶಾಲೆಯಂತಾಗುತ್ತಿದೆ ಪಾಲಿಕೆ ಸಾಮಾನ್ಯ ಸಭೆ


Team Udayavani, Apr 11, 2017, 3:17 PM IST

hub1.jpg

ಹುಬ್ಬಳ್ಳಿ: ಮಹಾನಗರ ಪಾಲಿಕೆ ಸಾಮಾನ್ಯ ಸಭೆ ತನ್ನ ಗಾಂಭೀರ್ಯತೆ ಕಳೆದುಕೊಳ್ಳುತ್ತಿದೆಯೇ? ಸಭೆಯ ಸಮರ್ಪಕ ನಿರ್ವಹಣೆ ಕೊರತೆ, ಸದನ ನಾಯಕರು ತಮ್ಮದೇ ಸದಸ್ಯರ ಮೇಲೆ ಹಿಡಿತ ಇಲ್ಲದಿರುವುದು, ಸದಸ್ಯರು-ಅಧಿಕಾರಿಗಳ ನಡುವೆ ಹೆಚ್ಚುತ್ತಿರುವ ಬಿರುಕು ಸಾಮಾನ್ಯ ಸಭೆಯ ದುಸ್ಥಿತಿಯನ್ನು ಬಿಂಬಿಸತೊಡಗಿದೆ. 

ಪಾಲಿಕೆ ಸಾಮಾನ್ಯ ಸಭೆಯಲ್ಲಿ ಶಿಸ್ತು-ಬದ್ಧತೆ, ವಿಷಯದ ಮೇಲೆ ಆಳವಾದ ಚರ್ಚೆ, ಸಮಸ್ಯೆಗಳ ಚಿಂತನ-ಮಂಥನವೇ ಮಾಯವಾಗುತ್ತಿದೆ. ಅವರವರ ಹಿತಾಸಕ್ತಿ ವಿಷಯಗಳೇ ವಿಜೃಂಭಿಸತೊಡಗಿದ್ದು, ಅನೇಕ ವಿಚಾರಗಳು  ಪ್ರಸ್ತಾಪವಾದರೂ ಗಂಭೀರತೆ ಮರೆತು ಸದನ ಅಡ್ಡದಾರಿಯತ್ತ ಸಾಗುವುದೇ ಅಧಿಕವಾಗುತ್ತಿದೆ. ಸಭೆ ಮುಂದೂಡಿಕೆ, ಮುಂದೂಡಿದ ಸಭೆಯೂಮಂದೂಡಿಕೆ ಸ್ಥಿತಿ ನಿರ್ಮಾಣವಾಗುತ್ತಿದೆ. 

ಹದ ತಪ್ಪುತ್ತಿದೆ ಸಭೆ: ಪಾಲಿಕೆ ಸಾಮಾನ್ಯ ಸಭೆ ಸಮರ್ಪಕವಾಗಿ ಸಾಗಬೇಕಾದರೆ ಮಹಾಪೌರ, ಆಯುಕ್ತ, ವಿಪಕ್ಷ ನಾಯಕ ಹಾಗೂ ಸಭಾನಾಯಕರ ಪಾತ್ರ ಅತ್ಯಂತ ಪ್ರಮುಖವಾಗಿದೆ. ಆದರೆ, ಕಳೆದ ಕೆಲ ಸಭೆಗಳ ನಡವಳಿಕೆ ಗಮನಿಸಿದರೆ ಈ ನಾಲ್ವರು ವಿಫ‌ಲರಾಗುತ್ತಿದ್ದಾರೆ. ಕೆಲವೊಮ್ಮೆ ಇಂತಹ ಜವಾಬ್ದಾರಿಯುತ ಸ್ಥಾನದಲ್ಲಿದ್ದವರೆ ವಿವಾದದ ಕಿಡಿಯೊತ್ತಿಸುತ್ತಿದ್ದಾರೆ. 

ಸಭೆ ಸಮರ್ಪಕ ನಿರ್ವಹಣೆ ಕೊರತೆ ಇತ್ತೀಚೆಗಿನ  ದಿನಗಳಲ್ಲಿ ಹೆಚ್ಚತೊಡಗಿದೆ. ಸದನದಲ್ಲಿ ಪ್ರಶ್ನೋತ್ತರ, ಗಮನ ಸೆಳೆಯುವ ಸೂಚನೆ, ಶೂನ್ಯವೇಳೆ, ಸದಸ್ಯರ ವಾರ್ಡ್‌ ಸಮಸ್ಯೆ ಹೀಗೆ ಯಾವುದೇ ವಿಷಯಕ್ಕೂ ಅದರದ್ದೇಯಾದ ನಿಯಮವಿದೆ. ಪ್ರಶ್ನೋತ್ತರ ವೇಳೆಯಲ್ಲಿ ಹತ್ತಾರು ಜನ ಮಾತನಾಡುವ ಮೂಲಕ ಪ್ರಶ್ನೆ ಕೇಳಿದವರೇ ನಾನೇನು ಕೇಳಿದ್ದೇನೆ, ಕೇಳುದ್ದು  ನಾನೇನಾ ಎಂದು ಮರೆತು ಹೋಗುವಂತಹ ಸ್ಥಿತಿ ನಿರ್ಮಾಣವಾದರೂ ಅದನ್ನು ಸರಿಪಡಿಸುವ ಕೆಲಸ ಮಹಾಪೌರರಿಂದ ಆಗುತ್ತಿಲ್ಲ.  

ಶೂನ್ಯ ವೇಳೆ ಇನ್ನಿತರ ಸಮಯದಲ್ಲಿ ಏಕಕಾಲಕ್ಕೆ ನಾಲ್ಕೈದು ಜನ ಮಾತನಾಡಲು ನಿಲ್ಲುತ್ತಿದ್ದು, ಇದಕ್ಕೆ ಆಯಾ ಪಕ್ಷಗಳ ಸದನ ನಾಯಕರಿಂದಾಗಲಿ, ಮಹಾಪೌರರಿಂದಾಗಲಿ ನಿಯಂತ್ರಣ ಹಾಗೂ ಕೆಎಂಸಿ ಕಾಯ್ದೆ ಏನು ಹೇಳುತ್ತಿದೆ ಎಂಬುದರ ಸಣ್ಣ ಚಿಂತನೆಯೂ ಇಲ್ಲದಾಗಿದೆ. ವಿಪಕ್ಷ ನಾಯಕ ಎದ್ದು  ತರೆ ಯಾವ ವಿಷಯ ಪ್ರಸ್ತಾಪಿಸಿ ಸಂಕಷ್ಟಕ್ಕೆ ಸಿಲುಕಿಸುತ್ತಾರೋ, ಯಾವ ತಪ್ಪು ಹುಡುಕುತ್ತಾರೋ ಎಂಬ ಭಾವನೆ ಆಡಳಿತ ಪಕ್ಷದವರಿಗೆ ಮೂಡಬೇಕು ಆದರೆ, ಅಂತಹ ಯಾವುದೇ ಸನ್ನಿವೇಶ ಇಲ್ಲವಾಗುತ್ತಿದೆ. 

ವಿಪಕ್ಷ ನಾಯಕರೇ ಅಪರೂಪಕ್ಕೊಮ್ಮೆ ಎನ್ನುವಂತೆ ಚುಟುಕಾಗಿ ಮಾತನಾಡುವ ಸ್ಥಿತಿ ಇದೆ. ವಿಪಕ್ಷ ನಾಯಕರಾದವರು ತಮ್ಮ ಪಕ್ಷದ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ವಿಷಯ ಪ್ರಸ್ತಾಪ ಕುರಿತಾಗಿ ಸಂಪರ್ಕ ಹೊಂದಬೇಕು, ತಮ್ಮ ಸದಸ್ಯರು ನಿಯಮ ಮೀರುತ್ತಿದ್ದರೆ, ಅನಗತ್ಯವಾಗಿ ಚರ್ಚೆಗೆ ಮುಂದಾದರೆ ಅವರನ್ನು ನಿಯಂತ್ರಿಸಬೇಕು ಅದು ಇಲ್ಲವಾಗುತ್ತಿದೆ. 

ಇನ್ನು ಸಭಾನಾಯಕರೆಂದರೆ ಆಡಳಿತ ಪಕ್ಷದ ಸೇನಾಧಿಪತಿ ಇದ್ದಂತೆ ಇಡೀ ತಂಡವನ್ನು ಮುನ್ನಡೆಸಬೇಕು, ವಿಪಕ್ಷಗಳು ಇಕ್ಕಟ್ಟು ಸ್ಥಿತಿ ಸೃಷ್ಟಿಸುವ ಸಂದರ್ಭದಲ್ಲಿ ಮಹಾಪೌರರ ನೆರವಿಗೆ ಧಾವಿಸಬೇಕು. ತಮ್ಮ ಪಕ್ಷದ ಸದಸ್ಯರು ನಿಯಮ ಮೀರಿ ಇಲ್ಲವೆ ಅನಗತ್ಯವಾಗಿ ಮಧ್ಯಪ್ರವೇಶ, ಮಾತನಾಡಲು ಮುಂದಾದಾಗ ಅವರನ್ನು  ನಿಯಂತ್ರಿಸಬೇಕು. ಆದರೆ, ಸಭಾನಾಯಕ ಸ್ಥಾನವೂ ಈ ವಿಚಾರದಲ್ಲಿ ವಿಫ‌ಲವಾಗತೊಡಗಿದೆ. 

ಸಭೆ ನಿಯಮಗಳಿಗನುಸಾರವಾಗಿ ಸಾಗಬೇಕಾದರೆ, ಅಭಿವೃದ್ಧಿ ಯೋಜನೆಗಳ ಬಗ್ಗೆ ಗೊಂದಲ, ಸಂಶಯಗಳೇನಾದರೂ ಬಂದರೆ ಅವುಗಳನ್ನು ನಿವಾರಿಸುವ, ಸದಸ್ಯರಿಗೆ ಮನವರಿಕೆ ಮಾಡುವ ಮೂಲಕ ಸಭೆ ಸುಗಮವಾಗಿ ಸಾಗಲು ತಮ್ಮದೇ ಕೊಡುಗೆ ನೀಡಬೇಕಾದ ಜವಾಬ್ದಾರಿ ಆಯುಕ್ತರದ್ದಾಗಿದೆ. ಆದರೆ ಆಯುಕ್ತರು ವಿಪಕ್ಷ ನಾಯಕರೇ ನಾಚುವ ರೀತಿಯಲ್ಲಿ ವಾಗ್ವಾದಕ್ಕೆ ಇಳಿಯುತ್ತಿದ್ದಾರೆ. 

ಸದಸ್ಯರೇನಾದರೂ ನಿಯಮಕ್ಕೆ ವಿರುದ್ಧ ನಿರ್ಣಯಕ್ಕೆ ಮುಂದಾದರೆ ಅದನ್ನು ಸರಕಾರದ ಗಮನಕ್ಕೆ ತರುವ ಇಲ್ಲವೆ ಸದಸ್ಯರಿಗೆ ಕಾಯ್ದೆಯ ಮಾಹಿತಿ ನೀಡುವ ಬದಲು ಸದಸ್ಯರ ಹಕ್ಕುಗಳನ್ನೇ ಪ್ರಶ್ನಿಸುವ ರೀತಿಯಲ್ಲಿ ಆಯುಕ್ತರು ನಡೆದುಕೊಳ್ಳುತ್ತಿರುವುದು ಸದಸ್ಯರು ಹಾಗೂ ಅಧಿಕಾರಿಗಳ ನಡುವಿನ ಕಂದಕ ಹೆಚ್ಚತೊಡಗಿದೆ. ಇಬ್ಬರ ನಡುವೆ ಸಂಶಯ, ಅವಿಶ್ವಾಸ, ಅಸಮಾಧಾನದ ವಾತಾವರಣ ಹೆಚ್ಚತೊಡಗಿದೆ. 

ಪಾಲಿಕೆ ಆದಾಯ ವೃದ್ಧಿ, ಸ್ವತ್ಛತೆ, ಸೌಂದರ್ಯಕ್ಕೆ ಒತ್ತು ನೀಡಿ ನಿರೀಕ್ಷಿತ ಕೆಲಸ ಆಗಿಲ್ಲ ಎಂದು ಪಕ್ಷಭೇದ ಮರೆತು ಅಧಿಕಾರಿಗಳ ಮೇಲೆ ಮುಗಿಬೀಳಬೇಕಾದ ಸದಸ್ಯರಲ್ಲಿ ಕೆಲವರು ಈ ಕಾಮಗಾರಿ ಯಾಕೆ ಮಾಡಿಲ್ಲ ಎಂದು ವಿಷಯ ಮಂಡಿಸುತ್ತಾರೆ. ಅವರದ್ದೇ ಪಕ್ಷದ ಒಂದಿಬ್ಬರು ಸದಸ್ಯರು ಇದಕ್ಕೆ ವ್ಯತಿರಿಕ್ತವಾಗಿ ವರ್ತನೆ ತೋರುತ್ತಾರೆ. ಪಾಲಿಕೆ  ಜಾಗದ ಅತಿಕ್ರಮಣ ಮಾಡಿದವರಿಗೆ ಪಾಲಿಕೆಯಿಂದ ದಂಡ ಹಾಕಬೇಕಿದ್ದರೆ, ಅಂತಹವರಿಗೆ ಪರಿಹಾರ ನೀಡಿ ಎಂದು ಸ್ವತಃ ಸದಸ್ಯರೇ ಒತ್ತಾಯಿಸುತ್ತಾರೆ. 

ತಮ್ಮದೇ ಪಕ್ಷದ ಸದಸ್ಯರು ಸೇರಿದಂತೆ ಸದನ ನಿರ್ಣಯ ಕೈಗೊಂಡ ಮೇಲೂ ಅದನ್ನು ವಿರೋಧಿಸಿ ಒಂದಿಬ್ಬರು ಸದಸ್ಯರು ತಮ್ಮ ಸದನ ನಾಯಕರಿಗೂ ತಿಳಿಸದೆ ಸಭೆಯಿಂದ ಹೊರ ಹೋಗುತ್ತಾರೆ. ಒಂದು ರೀತಿಯಲ್ಲಿ ನೀತಿ-ನಿಯಮ, ಯಾರ ಜವಾಬ್ದಾರಿ ಏನು, ಯಾರು ಯಾವ ರೀತಿ ವರ್ತಿಸಬೇಕು ಎಂಬ ಸಣ್ಣ ಚಿಂತನೆಯೂ ಇಲ್ಲದೆ ಪಾಲಿಕೆ ಸಾಮಾನ್ಯ ಸಭೆ ಮೇಷ್ಟ್ರು ಇಲ್ಲದ ಶಾಲೆಯಂತಾಗುತ್ತಿದೆ. ತಾನು ನಡೆದಿದ್ದೇ ದಾರಿ ಎನ್ನುವಂತೆ ಸಾಗತೊಡಗಿದೆ. ಆಯಾ ಪಕ್ಷಗಳ ಹಿರಿಯ ನಾಯಕರು ಸಹ ಇದಕ್ಕೂ ತಮಗೂ ಸಂಬಂಧ ಇಲ್ಲವೆಂಬಂತೆ ಮೌನಕ್ಕೆ ಜಾರಿದಂತೆ ಭಾಸವಾಗುತ್ತಿದೆ.  

* ಅಮರೇಗೌಡ ಗೋನವಾರ 

ಟಾಪ್ ನ್ಯೂಸ್

19

Ganesh Chaturthi: ನೆನಪಿನ ಬುತ್ತಿಯಾದ ಗಣೇಶ ಹಬ್ಬ

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

P.-Joshi

Bengaluru Jail: ಸರಕಾರದಿಂದಲೇ ದರ್ಶನ್‌ ಕೇಸ್‌ ಫೋಟೋ ವೈರಲ್‌: ಪ್ರಹ್ಲಾದ್‌ ಜೋಶಿ ಕಿಡಿ

Dharwad: ಮಹದಾಯಿ ಬಗ್ಗೆ ವನ್ಯಜೀವಿ ಮಂಡಳಿ ನಿರ್ಲಕ್ಷ್ಯ: ಸಚವ‌ ಲಾಡ್ ಕಿಡಿ

Dharwad: ಮಹದಾಯಿ ಬಗ್ಗೆ ವನ್ಯಜೀವಿ ಮಂಡಳಿ ನಿರ್ಲಕ್ಷ್ಯ: ಸಚವ‌ ಲಾಡ್ ಕಿಡಿ

Dharwad;ವೀರಶೈವ ಮಹಾಸಭೆಗೆ ಸದ್ಯಕ್ಕಿಲ್ಲ ಆಡಳಿತಾತ್ಮಕ ಅಧಿಕಾರ; ಜಿಎಂಎಫ್‌ಸಿ ನ್ಯಾಯಾಲಯ ಆದೇಶ

Dharwad;ವೀರಶೈವ ಮಹಾಸಭೆಗೆ ಸದ್ಯಕ್ಕಿಲ್ಲ ಆಡಳಿತಾತ್ಮಕ ಅಧಿಕಾರ; ಜಿಎಂಎಫ್‌ಸಿ ನ್ಯಾಯಾಲಯ ಆದೇಶ

Hubli; ಬ್ಯಾಂಕ್‌ ದೋಚಲು ಯತ್ನಸಿದ ವ್ಯಕ್ತಿಯನ್ನು ಕೆಲವೇ ಗಂಟೆಗಳಲ್ಲಿ ಬಂಧಿಸಿದ ಪೊಲೀಸರು

Hubli; ಬ್ಯಾಂಕ್‌ ದೋಚಲು ಯತ್ನಸಿದ ವ್ಯಕ್ತಿಯನ್ನು ಕೆಲವೇ ಗಂಟೆಗಳಲ್ಲಿ ಬಂಧಿಸಿದ ಪೊಲೀಸರು

Hubballi: ಮಲಪ್ರಭಾ ಬಚಾವೋ ಆಂದೋಲನಕ್ಕೆ ಚಿಂತನೆ

Hubballi: ಮಲಪ್ರಭಾ ಬಚಾವೋ ಆಂದೋಲನಕ್ಕೆ ಚಿಂತನೆ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

19

Ganesh Chaturthi: ನೆನಪಿನ ಬುತ್ತಿಯಾದ ಗಣೇಶ ಹಬ್ಬ

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.