ಓದಿನಿಂದ ಪ್ರಶ್ನೆಗಳು ಹುಟ್ಟುತ್ತವೆ : ಡಾ| ಕೆ.ವಿ. ತಿರುಮಲೇಶ್
Team Udayavani, Apr 11, 2017, 3:43 PM IST
ಕಾಸರಗೋಡು: ಓದುಗರ ಸಂಖ್ಯೆಯನ್ನು ಲೆಕ್ಕಹಾಕಿ ಕವಿ ಬರೆಯುವುದಿಲ್ಲ. ಒಳಗಿನ ಒತ್ತಡಕ್ಕೆ ಹೊರದಾರಿ ಕಂಡುಕೊಳ್ಳಲು ಬರೆಯುತ್ತಾನೆ. ಕಾಲ ಅನಂತವಾಗಿದೆ. ಯಾವಾಗಲೋ ಯಾರೋ ಒಬ್ಬ ಓದಿದರೆ ಸಾಕು. ಅದು ಕವಿಗೆ ಸಿಕ್ಕುವ ದೊಡ್ಡ ಗೌರವ. ಓದು ಬೇಕಾಗಿರೋದು ಓದುಗನಿಗೇ ಹೊರತು ಲೇಖಕನಿಗಲ್ಲ ಎಂದು ಕವಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಡಾ| ಕೆ.ವಿ. ತಿರುಮಲೇಶ್ ಹೇಳಿದರು.
ಕಾಸರಗೋಡಿನ ಸಾಹಿತ್ಯಿಕ, ಸಾಂಸ್ಕೃತಿಕ ಸಂಸ್ಥೆ ರಂಗಚಿನ್ನಾರಿಯ ದಶಮಾನೋತ್ಸವದ ಪ್ರಯುಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಸಹ ಯೋಗದೊಂದಿಗೆ ಏರ್ಪಡಿಸಿದ “ಓದಿನ ಸುತ್ತ ಮುತ್ತ’ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಮನುಷ್ಯ ತಾಳ್ಮೆಯಿಂದಿದ್ದಾಗ, ಉಲ್ಲಸಿತ ವಾಗಿದ್ದಾಗ ಯೋಚಿಸುತ್ತಾ, ಅನುಭವಿಸುತ್ತಾ ಓದುವುದೇ ನಿಜವಾದ ಓದು. ಓದಿನಿಂದ ಪ್ರಶ್ನೆಗಳು ಹುಟ್ಟುತ್ತವೆ ಮತ್ತು ಆ ಮೂಲಕ ಮನುಷ್ಯನ ಚಿಂತನೆಯ ಮಟ್ಟದಲ್ಲಿ ಬೆಳವಣಿಗೆ ಯುಂಟಾಗುತ್ತದೆ. ಓದು ಮೇಲು ನೆಲೆಯ ಓದಾಗಿ ರೂಪುಗೊಳ್ಳಬೇಕಾದ್ದು ಇಂದಿನ ಅನಿವಾರ್ಯತೆ ಎಂದು ಅವರು ಅಭಿಪ್ರಾಯಪಟ್ಟರು.
ಶ್ರೀಕೃಷ್ಣಯ್ಯ ಅನಂತಪುರ, ಜಯಶ್ರೀ ಅನಂತಪುರ ದಂಪತಿಗಳು ಜೊತೆಯಾಗಿ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಡಾ| ಕೆ.ವಿ. ತಿರುಮಲೇಶ್ ಅವರನ್ನು ರಂಗಚಿನ್ನಾರಿ ವತಿಯಿಂದ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು. ಅನಂತರ ನಡೆದ ಸಂವಾದದಲ್ಲಿ ಹಲವು ಸಾಹಿತಿ ಗಳು, ಗಣ್ಯರು ಭಾಗವಹಿಸಿದರು. ರಮ್ಯಾ ಅಂಬಿಕಾನ, ಶ್ರದ್ಧಾ ಪೈವಳಿಕೆ ಮತ್ತು ಜಯಶ್ರೀ ಅನಂತಪುರ ಭಾವಗೀತೆಗಳನ್ನು ಹಾಡಿದರು. ರಂಗ ಚಿನ್ನಾರಿ ನಿರ್ದೇಶಕ ಕೆ. ಸತೀಶ್ಚಂದ್ರ ಭಂಡಾರಿ ವೇದಿಕೆಯಲ್ಲಿದ್ದರು. ಡಾ| ಯು. ಮಹೇಶ್ವರಿ, ಡಾ| ಶ್ರೀಪತಿ ಕಜಂಪಾಡಿ, ಶಶಿಕಲಾ ಬಾಯಾರು, ಶಂಕರನಾರಾಯಣ ಭಟ್ ಟಿ. ಮುಂತಾದವರು ಉಪಸ್ಥಿತರಿದ್ದರು.
ನಿರ್ದೇಶಕ ಕಾಸರಗೋಡು ಚಿನ್ನಾ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಡಾ| ರಾಧಾಕೃಷ್ಣ ಬೆಳ್ಳೂರು ಕಾರ್ಯಕ್ರಮ ನಿರೂಪಿಸಿದರು. ಕೆ. ಸತ್ಯನಾರಾಯಣ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Madikeri: ಹಾಡಹಗಲೇ ಹಾರ್ಡ್ ವೇರ್ ಅಂಗಡಿಗೆ ನುಗ್ಗಿ ಒಂಟಿ ಮಹಿಳೆಯ ಸರಗಳ್ಳತನ
Madikeri:ರೈಲ್ವೆ ಕಂಬಿ ಬೇಲಿಯನ್ನೇ ಮುರಿದ ಕಾಡಾನೆಗಳು:ನಿತ್ಯ ಉಪಟಳದಿಂದ ಬೇಸತ್ತ ಗ್ರಾಮಸ್ಥರು
Madikeri: ವೀರ ಸೇನಾನಿಗಳಿಗೆ ಅಗೌರವ: ಆರೋಪಿ ಸೆರೆ
Kumbale: ವರ್ಕಾಡಿ ಪ್ಲೈವುಡ್ ಕಾರ್ಖಾನೆಯಲ್ಲಿ ಬೆಂಕಿ ಅನಾಹುತ: ಬೆಂಕಿ: ಕೋಟ್ಯಂತರ ರೂ. ನಷ್ಟ
Kasargod: ಬೆಕ್ಕಿಗಾಗಿ ಬಾವಿಗಿಳಿದ ವಿದ್ಯಾರ್ಥಿಯ ರಕ್ಷಣೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.