ಸುರಕ್ಷಾ ಆ್ಯಪ್ ಪರೀಕ್ಷೆಗಿಳಿದ ಬೆಂಗಳೂರಿನ ಮಹಿಳೆಯರು!
Team Udayavani, Apr 12, 2017, 12:06 PM IST
ಬೆಂಗಳೂರು: ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗಾಗಿ ಜಾರಿಗೆ ತಂದಿರುವ “ಸುರಕ್ಷಾ’ ಆ್ಯಪ್ಗೆ ಉತ್ತಮ ಪ್ರತಿಕ್ರಿಯೆಗೆ ವ್ಯಕ್ತವಾಗಿದೆ. ಇದುವರೆಗೂ ಸುಮಾರು 6 ಸಾವಿರಕ್ಕೂ ಅಕ ಮಂದಿ ಆ್ಯಪ್ ಡೌನ್ಲೋಡ್ ಮಾಡಿಕೊಂಡಿದ್ದು, 600 ಸಂದೇಶಗಳು ರವಾನೆಯಾಗಿವೆ ಎಂದು ಮೂಲಗಳು ತಿಳಿಸಿವೆ.
ಆದರೆ, ಯಾವುದೇ ಮಹಿಳೆಯಿಂದ ದೂರು ಬಂದಿಲ್ಲ. ಆ್ಯಪ್ ಡೌನ್ಲೋಡ್ ಮಾಡಿಕೊಂಡ ಸಾರ್ವಜನಿಕರು ಪರೀûಾರ್ಥವಾಗಿ ಕೆಂಪು ಬಟನ್ ಒತ್ತಿ ಪ್ರಯೋಗಿಸುತ್ತಿದ್ದಾರೆ. ಈ ಬಟನ್ ಒತ್ತಿದ ಕೂಡಲೇ ನಿಯಂತ್ರಣ ಕೊಠಡಿಗೆ ಮಾಹಿತಿ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಮಹಿಳೆಯರಿಗೆ ಪುನಃ ಕರೆ ಮಾಡಿದರೆ ಪರೀಕ್ಷಾರ್ಥವಾಗಿ ಉಪಯೋಗಿಸುತ್ತಿದ್ದೇವೆ ಎನ್ನುತ್ತಾರೆ ಎಂದು ಅಕಾರಿಯೊಬ್ಬರು ತಿಳಿಸಿದರು.
ಆ್ಯಪ್ ಬಗ್ಗೆ ಅರಿವು ಮೂಡಿಸಲು ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳನ್ನು ಉಪಯೋಗಿಸಿಕೊಳ್ಳಲಾಗುತ್ತಿದೆ. ಮಹಿಳಾ ಉದ್ಯೋಗಿಗಳು ಹೆಚ್ಚಿರುವ ಐಟಿ ಕಂಪನಿಗಳಿಗೆ ಆಯಾ ವಿಭಾಗದ ಡಿಸಿಪಿಗಳ ಮೂಲಕ ನೂತನ ಆ್ಯಪ್ ಬಗ್ಗೆ ಸಂಸ್ಥೆಯವರಿಗೆ ಪತ್ರ ಬರೆದು ಮಾಹಿತಿ ನೀಡಲಾಗುವುದು.
ಅದೇ ರೀತಿ ಕಾಲೇಜುಗಳಲ್ಲಿಯೂ ಜಾಗೃತಿ ಮೂಡಿಸಲಾಗುವುದು. ಜತೆಗೆ ಪಿಂಕ್ ಹೊಯ್ಸಳ ಮಹಿಳಾ ಕಾಲೇಜುಗಳ ಬಳಿ ಗಸ್ತು ತಿರುಗುತ್ತಿವೆ. ಕಾಲೇಜು ಬಿಡುವ ಹಾಗೂ ಆರಂಭವಾಗುವ ಸಂದರ್ಭದಲ್ಲಿ ಕಾಲೇಜು ಬಳಿ ಕೆಲ ಹೊತ್ತು ಪಿಂಕ್ ವಾಹನ ನಿಲ್ಲುತ್ತದೆ ಎಂದು ಅವರು ತಿಳಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.