“ಮದಿಪು’ವಿಗೆ ಮತ್ತೂಂದು ಗೌರವ, ಪಡೀಲ್ ಅತ್ಯುತ್ತಮ ಪೋಷಕ ನಟ
Team Udayavani, Apr 12, 2017, 12:21 PM IST
ಮಂಗಳೂರು: ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಮಂಗಳವಾರ ಪ್ರಕಟವಾಗಿದ್ದು, ಕರಾವಳಿ ಭಾಗಕ್ಕೆ ಮೂರು ಗೌರವಗಳು ಲಭಿಸಿವೆ. ಕರಾವಳಿಯ ಕಲಾರಾಧನೆ ಆಧಾರಿತ ತುಳುವಿನ 78ನೇ ಸಿನೆಮಾ “ಮದಿಪು’ ಅತ್ಯುತ್ತಮ ಪ್ರಾದೇಶಿಕ ಚಿತ್ರ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಕುಸಲ್ದರಸೆ ನವೀನ್ ಡಿ. ಪಡೀಲ್ “ಕುಡ್ಲ ಕೆಫೆ’ ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕರಾವಳಿ ಮೂಲದ ರಕ್ಷಿತ್ ಶೆಟ್ಟಿ ನೇತೃತ್ವದ “ಕಿರಿಕ್ ಪಾರ್ಟಿ’ ಚಿತ್ರ ಅತ್ಯುತ್ತಮ ಮನೋರಂಜನ ಚಿತ್ರವಾಗಿ ಮೂಡಿಬಂದಿದೆ.
ಮದಿಪು ಚಿತ್ರ 64ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ “ಅತ್ಯುತ್ತಮ ಪ್ರಾದೇಶಿಕ ಚಿತ್ರ’ ಎಂಬ ಗೌರವಕ್ಕೆ ಎ. 8ರಂದು ಭಾಜನವಾಗಿತ್ತು. ಇದೀಗ ಮತ್ತೆ ಇದೇ ಚಿತ್ರಕ್ಕೆ ರಾಜ್ಯ ಪ್ರಶಸ್ತಿ ಲಭಿಸುವ ಮೂಲಕ ತುಳು ಚಿತ್ರರಂಗಕ್ಕೆ ಇನ್ನಷ್ಟು ಬಲ ಬಂದಂತಾಗಿದೆ. ಆಸ್ಥಾ ಪ್ರೊಡಕ್ಷನ್ ಲಾಂಛನದಲ್ಲಿ ತಯಾರಾದ “ಮದಿಪು’ ಚಿತ್ರದ ಕಥೆ, ಚಿತ್ರಕಥೆ, ಕಲಾ ನಿರ್ದೇಶನವನ್ನು ಚೇತನ್ ಮುಂಡಾಡಿ ಮಾಡಿದ್ದು, ಸಂದೀಪ್ ಕುಮಾರ್ ನಂದಳಿಕೆ ನಿರ್ಮಾಪಕರು. ಈ ಚಿತ್ರ ಮಾ. 10ರಂದು ನಗರದ ಸುಚಿತ್ರಾ ಟಾಕೀಸ್ ಸೇರಿದಂತೆ ಕರಾವಳಿಯ 9 ಥಿಯೇಟರ್‌ನಲ್ಲಿ ಬಿಡುಗಡೆಗೊಂಡಿತ್ತು.
ಕಾಮಿಡಿ ಪಾತ್ರದ ಮೂಲಕ ಕರಾವಳಿಯಾದ್ಯಂತ ಮನೆಮತಾದ ನವೀನ್ ಡಿ. ಪಡೀಲ್ “ಕುಡ್ಲ ಕೆಫೆ’ ತುಳುಚಿತ್ರದಲ್ಲಿ ವಿಭಿನ್ನ ಪೋಷಕ ಪಾತ್ರದ ಮೂಲಕ ಗಮನ ಸೆಳೆದಿದ್ದರು. ರಂಜನ್ ಶೆಟ್ಟಿ ಹಾಗೂ ಸೂರ್ಯ ಮೆನನ್ ಸೇರಿ ನಿರ್ಮಿಸಿದ “ಕುಡ್ಲ ಕೆಫೆ’ ಚಿತ್ರವನ್ನು ಸೂರ್ಯ ಮೆನನ್ ನಿರ್ದೇಶಿಸಿದ್ದಾರೆ. ಗೆಳೆಯರು ಒಟ್ಟು ಸೇರಿ ಹೊಟೇಲ್ ಒಂದನ್ನು ಉಳಿಸಲು ಕಬಡ್ಡಿ ಆಯೋಜಿಸಿದ ಕಥೆಯ ಈ ಚಿತ್ರದಲ್ಲಿ ಪಡೀಲ್ ಅವರ ಅಭಿನಯಕ್ಕಾಗಿ ಪೋಷಕ ಪ್ರಶಸ್ತಿ ಗೌರವ ದೊರಕಿದೆ.
ಈ ಹಿಂದೆ “ಕೋಟಿ ಚೆನ್ನಯ’ ಚಿತ್ರದ ನೀತು ಅವರಿಗೆ ಅತ್ಯುತ್ತಮ ಪೋಷಕ ನಟಿ ರಾಜ್ಯ ಪ್ರಶಸ್ತಿ ಹಾಗೂ “ಗಗ್ಗರ’ ಚಿತ್ರದಲ್ಲಿ ಎಂ.ಕೆ. ಮಠ ಅವರಿಗೆ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ದೊರಕಿತ್ತು.
ಈ ಮಧ್ಯೆ ಕರಾವಳಿ ಮೂಲದವರಾದ ರಕ್ಷಿತ್ ಶೆಟ್ಟಿ ನಿರ್ಮಾಣ ಹಾಗೂ ಅಭಿನಯದ ರಿಷಭ್ ಶೆಟ್ಟಿ ನಿರ್ದೇಶನದ “ಕಿರಿಕ್ ಪಾರ್ಟಿ’ ಕನ್ನಡ ಚಿತ್ರ ಅತ್ಯುತ್ತಮ ಮನೋರಂಜನಾ ಚಿತ್ರ ಎಂಬ ಗೌರವಕ್ಕೆ ಪಾತ್ರವಾಗಿದೆ. ಈ ಚಿತ್ರ ಇತ್ತೀಚೆಗೆ ತೆರೆಕಂಡು ರಾಜ್ಯವ್ಯಾಪಿ ಉತ್ತಮ ಗಳಿಕೆಯೊಂದಿಗೆ ಸದ್ದು ಮಾಡಿತ್ತು.
ತುಳುನಾಡಿಗೆ ಸಂದ ಗೌರವ
ತುಳು ಭಾಷೆ ಮೇಲಿನ ಪ್ರೀತಿಯಿಂದ ನನ್ನನ್ನು ಆಶೀರ್ವದಿಸಿದ ತುಳುನಾಡಿನ ಸರ್ವ ಧರ್ಮದ ಸಮಸ್ತ ಜನರಿಗೆ ಸಂದ ಗೌರವ ಇದಾಗಿದೆ. ರಂಗಭೂಮಿಯ ಮೂಲಕ, ತುಳು, ಕನ್ನಡ ಚಿತ್ರರಂಗದಲ್ಲಿ ಸಾಧನೆ ಮಾಡಲು ಕಾರಣವಾದ ನನ್ನ ತಾಯ್ನೆಲ ಹಾಗೂ ಬೆಂಬಲಿಸಿದ ಸರ್ವರಿಗೂ ಆಭಾರಿ. ಈ ಪ್ರಶಸ್ತಿ ಮೂಲಕ ತುಳುಚಿತ್ರರಂಗಕ್ಕೆ ಇನ್ನಷ್ಟು ಸ್ಫೂರ್ತಿ ಸಿಗುವಂತಾಗಲಿ.
– ನವೀನ್ ಡಿ. ಪಡೀಲ್, ಖ್ಯಾತ ನಟ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ
Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು
Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್ ಪಟೇಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.