ವಿವಿಧೆಡೆ ಶ್ರದ್ಧಾ-ಭಕ್ತಿಯ ಹನುಮ ಜಯಂತಿ ಆಚರಣೆ


Team Udayavani, Apr 12, 2017, 1:33 PM IST

dvg4.jpg

ದಾವಣಗೆರೆ: ಶ್ರೀ ಆಂಜನೇಯ, ಪವನಸುತ, ಪವಮಾನ, ಮಾರುತಿ, ಹನುಮಪ್ಪ, ಹನುಮಂತ, ವಾಯುಪುತ್ರ, ಶ್ರೀರಾಮ ಭಂಟ…. ಹೀಗೆ ವಿವಿಧ ನಾಮಾವಳಿಗಳಿಂದ ಕರೆಯಲ್ಪಡುವ ಹನುಮ ದೇವರ ಜಯಂತಿ ಮಂಗಳವಾರ ದಾವಣಗೆರೆ ನಗರ, ವಿವಿಧೆಡೆ ಶ್ರದ್ಧಾ, ಭಕ್ತಿ, ವಿಜೃಂಭಣೆಯೊಂದಿಗೆ ನಡೆಯಿತು. 

ಕೊಂಡಜ್ಜಿ ರಸ್ತೆಯಲ್ಲಿರುವ ಶ್ರೀ ಮಾರುತಿ ಮಂದಿರದಲ್ಲಿ  ಹನುಮ ಜಯಂತಿ ಮಹೋತ್ಸವ ಅಂಗವಾಗಿ ಶ್ರೀ ಮಾರುತಿಸ್ವಾಮಿಗೆ ಪಂಚಾಮೃತಾಭಿಷೇಕ, ಕುಂಕುಮ, ಎಲೆ ಪೂಜೆ, ಹೂವಿನ, ಆಭರಣ ಅಲಂಕಾರ, ಮಹಾ ಮಂಗಳಾರತಿ, ಪ್ರಸಾದ ವಿನಿಯೋಗ, ಉತ್ಸವಮೂರ್ತಿ ಮೆರವಣಿಗೆ, ಅನ್ನ ಸಂತರ್ಪಣೆ ನಡೆಯಿತು. 

ಶ್ಯಾಬನೂರು ಆಂಜನೇಯ ಬಡಾವಣೆಯಲ್ಲಿನ ಶ್ರೀ ವಿಘ್ನೇಶ್ವರ, ಶ್ರೀ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಸ್ವಾಮಿಯ ತೊಟ್ಟಿಲೋತ್ಸವ, ಮಹಾಸಂಕಲ್ಪ, ಪಂಚಫಲಸಹಿತ ಲಘುನ್ಯಾಸಪೂರ್ವಕ ರುದ್ರಾಭಿಷೇಕ ಮತ್ತು ಅಲಂಕಾರ, ಕಲಶ ಸ್ಥಾಪನಾ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ, ಚಿರಂತನಾ ಸಾಂಸ್ಕೃತಿಕ ಸಂಸ್ಥೆಯ ಕಲಾವಿದರಿಂದ ಪಾರ್ವತಿ ಕಲ್ಯಾಣ… ನೃತ್ಯ ರೂಪಕ ನಡೆಯಿತು.

ಲೇಬರ್‌ ಕಾಲೋನಿಯ ಶ್ರೀ ಪದ್ಮಾಸನ ಆಂಜನೇಯ ದೇವಸ್ಥಾನದಲ್ಲಿ ಅಭಿಷೇಕ, ತೊಟ್ಟಿಲೋತ್ಸವ, ಮಹಾ ಮಂಗಳಾರತಿ ಮತ್ತಿತರ ಕಾರ್ಯಕ್ರಮ ನಡೆದವು. ಶಿವಕುಮಾರಸ್ವಾಮಿ ಬಡಾವಣೆಯಲ್ಲಿ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಹನುಮ ಜಯಂತಿ ಅಂಗವಾಗಿ ಜನ್ಮೋತ್ಸವ, ಪವಮಾನ ಸ್ವಾಹಾಕಾರ ಹೋಮ, ಮಹಾ ಕಲ್ಪ, ಶ್ರೀ ಸಂಜೀವಿನಿ ಆಂಜನೇಯ ಸ್ವಾಮಿ  ರಥಾರೋಹಣ,

ಪವಮಾನ ಸ್ವಾಹಾಕಾರ ಹೋಮದ ಪೂರ್ಣಾಹುತಿ, ಪಲ್ಲಕ್ಕಿ ಉತ್ಸವ, ಅನ್ನ ಸಂತರ್ಪಣೆ ನಡೆಯಿತು. ವಿನೋಬ ನಗರದ 3ನೇ ಮುಖ್ಯ ರಸ್ತೆ 9ನೇ ಕ್ರಾಸ್‌ನಲ್ಲಿರುವ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಪಂಚಾಮೃತಾಭಿಷೇಕ, ಕುಂಕುಮ, ಎಲೆ ಪೂಜೆ, ಹೂವಿನ, ಆಭರಣ ಅಲಂಕಾರ, ಮಹಾ ಮಂಗಳಾರತಿ, ಪ್ರಸಾದ ವಿನಿಯೋಗ, ಉತ್ಸವಮೂರ್ತಿ  ಮೆರವಣಿಗೆ ನಡೆಯಿತು.

ನಿಟುವಳ್ಳಿ ರಸ್ತೆಯ ಶ್ರೀ ಗುರು ದ್ರೋಣ ಕ್ರೀಡಾ ಸಮಿತಿ, ವಿನಾಯಕರ ಬಳಗದಿಂದ ಹನುಮ ಜಯಂತಿ ಅಂಗವಾಗಿ ಪ್ರಸಾದ ವಿನಿಯೋಗ ಮಾಡಲಾಯಿತು. ಮಾಜಿ ಸಚಿವ ಎಸ್‌.ಎ. ರವೀಂದ್ರನಾಥ್‌, ಮಾಜಿ ಮೇಯರ್‌ ಎಂ.ಎಸ್‌. ವಿಠuಲ್‌ ಇತರರು ಪೂಜೆ ನೆರವೇರಿಸಿದರು. ಸರಸ್ವತಿ ಬಡಾವಣೆಯ ಪಂಚಮುಖೀ ದೇವಸ್ಥಾನ, ಶಾಮನೂರು ಗ್ರಾಮದ ಆಂಜನೇಯ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಧಾರ್ಮಿಕ ಕಾರ್ಯ ನಡೆದವು.  

ಟಾಪ್ ನ್ಯೂಸ್

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Davanagere; ನನ್ನಅಳಿಯನನ್ನು ಬಿಟ್ಟು ಬಿಟ್ಟಿದ್ದರೆ ದರ್ಶನ್‌ ಗೆ….: ರೇಣುಕಾಸ್ವಾಮಿ ಮಾವa

Davanagere; ನನ್ನಅಳಿಯನನ್ನು ಬಿಟ್ಟು ಬಿಟ್ಟಿದ್ದರೆ ದರ್ಶನ್‌ ಗೆ….: ರೇಣುಕಾಸ್ವಾಮಿ ಮಾವ

6-

Nyamathi ಪಟ್ಟಣದ ಹಲವೆಡೆ ಸರಣಿ ಕಳ್ಳತನ; ನಾಲ್ವರಲ್ಲಿ ಇಬ್ಬರು ಆರೋಪಿಗಳ ಬಂಧನ, ಸ್ವತ್ತು ವಶ

BC-Patil

Congress ವಿಪಕ್ಷದಲ್ಲಿದ್ದಾಗ ಕೋವಿಡ್ ಹಗರಣ ಬಗ್ಗೆ ಸುಮ್ಮನಿದ್ದಿದ್ದೇಕೆ?: ಬಿ.ಸಿ.ಪಾಟೀಲ್‌

Protest against Aadhaar link to agricultural pump set: Kodihalli Chandrasekhar

ಕೃಷಿ ಪಂಪ್ ಸೆಟ್ ಗೆ ಆಧಾರ‌ ಲಿಂಕ್ ಖಂಡಿಸಿ ಸೆ. 4ರಂದು ಪ್ರತಿಭಟನೆ: ಕೋಡಿಹಳ್ಳಿ ಚಂದ್ರಶೇಖರ್‌

Davanagere; Governor’s post should be abolished: CPI

Davanagere; ರಾಜ್ಯಪಾಲ ಹುದ್ದೆಯನ್ನೇ ರದ್ದು ಮಾಡಬೇಕು: ಸಿಪಿಐ ಆಗ್ರಹ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.