ಸುಜ್ಲಾನ್ ಕಂಪೆನಿ: ಗುತ್ತಿಗೆ ಕಾರ್ಮಿಕ ಸಮಸ್ಯೆ ತಾತ್ಕಾಲಿಕ ಪರಿಹಾರ
Team Udayavani, Apr 12, 2017, 2:49 PM IST
ಪಡುಬಿದ್ರಿ: ಉಡುಪಿ ತಹಶೀಲ್ದಾರ್ ಮಹೇಶ್ಚಂದ್ರ, ಕಾರ್ಮಿಕ ಇಲಾಖಾಧಿಕಾರಿ ಎಂ.ಪಿ. ವಿಶ್ವನಾಥ್, ಕ್ಷೇತ್ರದ ಶಾಸಕ ವಿನಯಕುಮಾರ್ ಸೊರಕೆ, ಕಾರ್ಮಿಕ ರಕ್ಷಣಾ ವೇದಿಕೆಯ ರವಿ ಶೆಟ್ಟಿ ಮತ್ತಿತರ ಸಮ್ಮುಖದಲ್ಲಿ ಸುಜ್ಲಾನ್ ಗುತ್ತಿಗೆದಾರರು, ಕಾರ್ಮಿಕ ನಾಯಕರು, ಸುಜ್ಲಾನ್ ಎಸ್ ಇ ಬ್ಲೇಡ್ಸ್ ಅಧಿಕಾರಿಗಳ ನಡುವೆ ಒಡಂಬಡಿಕೆಯೇರ್ಪಟ್ಟು ಒಮ್ಮತದ ಅಭಿಪ್ರಾಯ ವಿನಿಮಯ ಪತ್ರಕ್ಕೆ ಸಹಿ ಮಾಡಿಕೊಳ್ಳುವ ಮೂಲಕ ಸುಜ್ಲಾನ್ ಗುತ್ತಿಗೆ ಕಾರ್ಮಿಕರ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಕಂಡುಕೊಳ್ಳಲಾಯಿತು.
ಕಂಪೆನಿಯು ಕೆಲಸದಿಂದ ತೆಗೆದಿದ್ದ 750 ಮಂದಿ ಗುತ್ತಿಗೆ ಕಾರ್ಮಿಕರಿಗೆ ಒಂದು ತಿಂಗಳ ಪೂರ್ಣ ಸಂಬಳ ನೀಡಿಕೆ, ಯುನಿಟೆಕ್ ಕಂಪೆನಿ ಬಾಕಿ ಉಳಿಸಿಕೊಂಡಿದ್ದ ಬೋನಸ್ ವಿತರಣೆ ಹಾಗೂ ಇದೇ ಗುತ್ತಿಗೆ ಕಾರ್ಮಿಕರನ್ನು ಕೆಲಸಕ್ಕೆ ಮರು ನೇಮಿಸಿಕೊಳ್ಳುವ ಮತ್ತು ವರ್ಗಾವಣೆ ಮಾಡಬೇಕಾದಲ್ಲಿ ಕಾರ್ಮಿಕರೊಂದಿಗೆ ಚರ್ಚಿಸಿ ವರ್ಗಾವಣೆಗೊಳಿಸುವ ನಿರ್ಣಯಗಳೊಂದಿಗೆ ಕಾರ್ಮಿಕ ಸಮಸ್ಯೆಗೆ ತತ್ಕಾಲದ ಪರಿಹಾರ ಕಂಡುಕೊಳ್ಳಲಾಯಿತು.
ಮಂಗಳವಾರ ಬೆಳಗ್ಗೆ ಮತ್ತೆ ಒಗ್ಗೂಡಿದ ಸುಜ್ಲಾನ್ ಗುತ್ತಿಗೆ ಕಾರ್ಮಿಕರು ಮುಂಜಾನೆ ಪಾಳಿಗೆ ಕಾರ್ಮಿಕರನ್ನು ಕರೆತಂದಿದ್ದ ಬಸ್‌ಗಳನ್ನು ಗೇಟಲ್ಲೇ ತಡೆದು ನಿಲ್ಲಿಸಿದರು. ಬಸ್‌ಗಳನ್ನು ಕಂಪೆನಿಯೊಳಕ್ಕೆ ತೆರಳಲು ಈ ಮುಷ್ಕರ ನಿರತ ಕಾರ್ಮಿಕರು ಅನುವು ಮಾಡಿಕೊಡಲಿಲ್ಲ. ಬಿಜೆಪಿ, ಜೆಡಿಎಸ್ ನಾಯಕರು ಕಾರ್ಮಿಕರಿಗೆ ಸಾಥ್ ನೀಡಿದ್ದರು. ಒಂದೊಮ್ಮೆ ಕಾರ್ಮಿಕ
ಇಲಾಖಾ ಅಧಿಕಾರಿಗಳು, ಉಡುಪಿ ತಹಶೀಲ್ದಾರರು ಕಂಪೆನಿಯ ಅಧಿಕಾರಿಗಳೊಂದಿಗೆ ಕಂಪೆನಿಯ ಒಳಗೆ ಮಾತುಕತೆಗೆ ತೊಡಗಿದ್ದಾಗ ಮತ್ತೆ ಸಿಟ್ಟಿಗೆದ್ದ ಕಾರ್ಮಿಕ ನಾಯಕರು ತಮ್ಮನ್ನು ಬಿಟ್ಟು ಮಾತುಕತೆ ನಡೆಸಬಾರದೆಂಬಂತೆ ಪಟ್ಟು ಹಿಡಿದಿದ್ದರು. ಆಗ ಅವರನ್ನು ಸಮಾಧಾನಿಸಿ ಹೊರಕ್ಕೆ ಕಳುಹಿಸಲಾಗಿತ್ತು. ತಹಶೀಲ್ದಾರ್ ಮಹೇಶ್ಚಂದ್ರ ಹೊರಗೆ ಬಂದು ಕಾರ್ಮಿಕರ ಬಳಿ ಮಾತುಕತೆಗಳ ಬಗ್ಗೆ ವಿವರಿಸಿದರು.
ಬೇಡಿಕೆ ಕುಸಿದಿರುವುದರಿಂದ ಗುತ್ತಿಗೆ ಆಧಾರದಲ್ಲಿದ್ದ ಕಾರ್ಮಿಕರನ್ನು ಕೈಬಿಡಲಾಗಿದೆ ಎಂದು ಸುಜ್ಞಾನ್ ಕಂಪೆನಿಯ ಅಧಿಕಾರಿಗಳು ಸೋಮವಾರ ತಿಳಿಸಿದ್ದರು.
ಬಾಗಿಲ ಗಾಜು ತಾಗಿ ಗಾಯ
ಸಂಜೆ ವೇಳೆಗೆ ಕಾರ್ಮಿಕ ಅಧಿಕಾರಿಯೋರ್ವರ ತಪ್ಪು ನಡೆಯಿಂದಾಗಿ ಕಾರ್ಮಿಕರ ಆಕ್ರೋಶ ಭುಗಿಲೆದ್ದು ಅಧಿಕಾರಿಗಳ ಮಟ್ಟದ ಸಭೆ ನಡೆಯುತ್ತಿದ್ದ ಆಸ್ಪೆನ್ ಇನ್‌ಫ್ರಾಸ್ಟ್ರಕ್ಚರ್ ಆಡಳಿತ ಕಚೇರಿಯೊಳಗೆ ಪ್ರವೇಶಿಸಲು ಹವಣಿಸಿದಾಗ ಬಾಗಿಲಿನ ಗಾಜು ಬಿದ್ದು, ಅದು ಜೆಡಿಎಸ್ ನಾಯಕ ಇಸ್ಮಾಯಿಲ್ ಪಲಿಮಾರ್ ಕೈಗೆ ತಗುಲಿ ಗಾಯವಾಯಿತು. ತತ್‌ಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಯಿತು.
ಸಂಜೆ ಶಾಸಕ ಸೊರಕೆ ಅವರು ಕಾರ್ಮಿಕರನ್ನು ಉದ್ದೇಶಿಸಿ ಮಾತನಾಡಿ, ಒಡಂಬಡಿಕೆಯ ಪ್ರಸ್ತಾವ ಅವರ ಮುಂದಿಟ್ಟ ಬಳಿಕ ಕಾರ್ಮಿಕರು ಅಲ್ಲಿಂದ ನಿರ್ಗಮಿಸಿದರು. ಕಾರ್ಮಿಕ ಇಲಾಖಾ ನಿರೀಕ್ಷಕರಾದ ರಾಮಮೂರ್ತಿ, ಜೀವನ್ ಕುಮಾರ್ ಒಡಂಬಡಿಕೆಯನ್ನು ಕಾರ್ಯರೂಪಕ್ಕಿಳಿಸಲು ಸಹಕರಿಸಿದ್ದರು. ಉಡುಪಿ ಡಿವೈಎಸ್ಪಿ ಕುಮಾರಸ್ವಾಮಿ, ಕಾಪು ಸರ್ಕಲ್ ಹಾಲಮೂರ್ತಿ ರಾವ್ ಮತ್ತಿತರ ಕಡೆಗಳ ಪೊಲೀಸ್ ಅಧಿಕಾರಿಗಳು ಬಂದೋಬಸ್ತ್ ಏರ್ಪಡಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf ವಿಷಯ ಮುಗಿದು ಹೋಗಿದೆ.. ಬಿಜೆಪಿಯವರಿಂದ ಗೊಂದಲ: ಲಕ್ಷ್ಮಣ ಸವದಿ
Dandeli: ಅಪರಿಚಿತ ವಾಹನ ಡಿಕ್ಕಿ; ಕರು ಸಾವು
Covid ಗಿಂತ ಬಿಜೆಪಿ ಭ್ರಷ್ಟಾಚಾರದಿಂದ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ: ಖಂಡ್ರೆ
Delhi: ಕ್ಷುಲ್ಲಕ ಕಾರಣಕ್ಕೆ 19ರ ಯುವಕನ ಗುಂಡಿಕ್ಕಿ ಹ*ತ್ಯೆಗೈದ ಅಪ್ರಾಪ್ತರು!!
BBK11: ಬಿಗ್‌ಬಾಸ್ ಆಟ ನಿಲ್ಲಿಸಿದ ಖ್ಯಾತ ಸ್ಪರ್ಧಿ.. ಈ ವಾರ ಆಚೆ ಬರುವುದು ಇವರೇ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.