ಕಪ್ಪತಗುಡ್ಡ: ಎರಡನೇ ಬಾರಿ ಜನ ಹೋರಾಟಕ್ಕೆ ಗೆಲುವು..
Team Udayavani, Apr 12, 2017, 3:06 PM IST
ಹುಬ್ಬಳ್ಳಿ: ಕಪ್ಪತಗುಡ್ಡದ ಸಂರಕ್ಷಣೆ ವಿಚಾರದಲ್ಲಿ ಎರಡನೇ ಬಾರಿಗೆ ಜನರ ಭಾವನೆಗಳಿಗೆ ಮನ್ನಣೆ ದೊರೆತಿದೆ. ಗಣಿ ಕಂಪೆನಿಯ ಪ್ರಬಲ ಲಾಬಿ, ಹಲವು ಹುನ್ನಾರಗಳ ನಡುವೆಯೂ ಸರಕಾರ ಜನ ಹೋರಾಟ, ಪರಿಸರ ಪ್ರೇಮಿಗಳ ಒತ್ತಾಯಕ್ಕೆ ಪೂರಕವಾಗುವ ನಿರ್ಣಯ ಕೈಗೊಂಡಿದೆ.
ಕಪ್ಪತಗುಡ್ಡವನ್ನು ಸಂರಕ್ಷಿತ ಪ್ರದೇಶ ಘೋಷಣೆಯ ಸರಕಾರದ ನಿರ್ಧಾರವನ್ನು ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲರು ಮಂಗಳವಾರ ಪ್ರಕಟಿಸಿರುವುದು, ಸಹಜವಾಗಿಯೇ ಕಪ್ಪತಗುಡ್ಡದ ತಪ್ಪಲಲ್ಲಿ ಸಂತಸ ಕುಣಿದಾಡುವಂತೆ ಮಾಡಿದೆ. ಗದಗ ತೋಂಟದಾರ್ಯ ಮಠದ ಜಗದ್ಗುರು ಡಾ| ಸಿದ್ದಲಿಂಗ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಹೋರಾಟ ಗೆಲುವಿನ ನಗೆ ಬೀರಿದೆ.
ಕಪ್ಪತಗುಡ್ಡವನ್ನು ಕಬಳಿಸಲೇಬೇಕೆಂಬ ತೀವ್ರ ಯತ್ನ-ಹುನ್ನಾರಕ್ಕೆ ಎರಡನೇ ಬಾರಿ ಸೋಲಾಗಿದೆ. ಕಪ್ಪತಗುಡ್ಡವನ್ನು ಸಂರಕ್ಷಿತ ಪ್ರದೇಶವೆಂದು ಘೋಷಿಸಲು ಸರಕಾರದ ವಿಳಂಬ ನೀತಿ, ಮತ್ತೂಂದು ಕಡೆ ಗಣಿ ಕಂಪೆನಿಯ ತೀವ್ರ ಲಾಬಿಯಿಂದ ಸಹಜವಾಗಿಯೇ ಕಪ್ಪತಗುಡ್ಡದ ಮಡಿಲ ಮೂಲ ನಿವಾಸಿಗಳು, ರೈತರು, ಹೋರಾಟಗಾರರಿಗೆ ಆತಂಕ ಮನೆ ಮಾಡಿತ್ತಾದರೂ, ಸರಕಾರದ ನಡೆ ಆತಂಕ ದೂರವಾಗಿರಿಸಿದೆ.
2ನೇ ದೊಡ್ಡ ಗೆಲುವು: ಕಪ್ಪತಗುಡ್ಡ ಸಂರಕ್ಷಣೆ ನಿಟ್ಟಿನಲ್ಲಿ ಜನರಿಗೆ ಹಾಗೂ ಹೋರಾಟಗಾರರಿಗೆ ಇದು ಎರಡನೇ ಬಹುದೊಡ್ಡ ಗೆಲುವಾಗಿದೆ. ಕಪ್ಪತಗುಡ್ಡವನ್ನು ಕಬಳಿಸಬೇಕೆಂದು ಬಿಜೆಪಿ ಸರಕಾರದಲ್ಲಿ ಪೋಸ್ಕೋಕಂಪೆನಿ, ಇದೀಗ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಬಲ್ಡೋಟಾ ಮಾಲಿಕತ್ವದ ರಾಮಘಡ ಕಂಪೆನಿಯ ಯಾವುದೇ ಹುನ್ನಾರ, ಒಡೆದಾಳು ನೀತಿಗಳಿಗೆ ಫಲ ದೊರೆತಿಲ್ಲವಾಗಿದೆ.
ಬಿಜೆಪಿ ಸರಕಾರದ ಅವಧಿಯಲ್ಲಿ ದಕ್ಷಿಣ ಕೋರಿಯಾ ಮೂಲದ ಪೋಸ್ಕೊ ಕಂಪೆನಿ ಇದೇ ಕಪ್ಪತಗುಡ್ಡವನ್ನು ದೃಷ್ಟಿಯಲ್ಲಿಟ್ಟುಕೊಂಡು ಹಳ್ಳಿಗುಡಿಯಲ್ಲಿ ಲಂಗರು ಹಾಕಲು ಯತ್ನಿಸಿತ್ತಾದರೂ, ಅಂದು ಗದಗ ತೋಂಟದಾರ್ಯ ಮಠದ ಡಾ|ಸಿದ್ದಲಿಂಗ ಸ್ವಾಮೀಜಿ ನೇತೃತ್ವದಲ್ಲಿ ಜನ ಹೋರಾಟ ಎದ್ದು ನಿಂತಿತ್ತು.
ಅಂತಾರಾಷ್ಟ್ರೀಯ ಜಲತಜ್ಞ ಡಾ| ರಾಜೇಂದ್ರ ಸಿಂಗ್, ಪರಿಸರ ಹೋರಾಟಗಾರ್ತಿ ಮೇಧಾ ಪಾಟ್ಕರ್‌ರಂತಹ ಘಟಾನುಘಟಿ ಹೋರಾಟಗಾರರು, ತಜ್ಞರು ಹೋರಾಟದಲ್ಲಿ ಪಾಲ್ಗೊಳ್ಳುವ ಮೂಲಕ ನೈತಿಕ ಬಲ ಹೆಚ್ಚುವಂತೆ ಮಾಡಿದ್ದರು. ಪೋಸ್ಕೋ ವಿಚಾರ ರಾಜಕೀಕರಣಗೊಂಡಿತ್ತು.
ಅಂದಿನ ವಿಧಾನಸಭೆ ವಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಅನೇಕ ರಾಜಕೀಯ ಮುಖಂಡರು ಜನ ಹೋರಾಟಕ್ಕೆ ತಮ್ಮ ಧ್ವನಿ ಸೇರಿಸಿದ್ದರು. ಅಂತಿಮವಾಗಿ ಪೋಸ್ಕೋ ಕಂಪೆನಿಗೆ ನೀಡಿದ್ದ ಅನುಮತಿಯನ್ನು ಬಿಜೆಪಿ ಸರಕಾರ ಹಿಂಪಡೆದಿದ್ದರಿಂದ ಕಪ್ಪತಗುಡ್ಡದ ಮೇಲೆ ಕವಿದ ಕಾರ್ಮೋಡ ಕರಗಿತ್ತು.
ರಾಜ್ಯದಲ್ಲಿ ಸರಕಾರ ಬದಲಾಗಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಅನಂತರದಲ್ಲಿ ಪೋಸ್ಕೋ ವಿರುದ್ಧ ಹೋರಾಟದಲ್ಲಿ ಪರೋಕ್ಷ ಬೆಂಬಲ ನೀಡಿದ್ದ ಬಲ್ಡೋಟಾ ಕಂಪೆನಿ ತನ್ನ ಅಸಲಿ ಮುಖ ದರ್ಶನ ಮಾಡಿಸಿತ್ತು. ಪೋಸ್ಕೋಗಿಂತ ನೂರು ಪಟ್ಟು ಹೆಚ್ಚಿನ ಲಾಬಿಯೊಂದಿಗೆ ಚಿನ್ನದ ಗಣಿಗಾರಿಕೆಗೆ ಮುಂದಾದಾಗ ಡಾ| ಸಿದ್ದಲಿಂಗ ಸ್ವಾಮೀಜಿ ನೇತೃತ್ವದಲ್ಲಿ ಜನ ಮತ್ತೂಂದು ಹೋರಾಟದ ಕಹಳೆ ಮೊಳಗಿತ್ತು.
ಸಮಾಜ ಪರಿವರ್ತನಾ ಸಮುದಾಯ ಸಂಸ್ಥೆಯ ಎಸ್.ಎಸ್.ಹಿರೇಮಠ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ಸಾಹಿತಿ ದೇವನೂರು ಮಹದೇವ ಸೇರಿದಂತೆ ಅನೇಕ ಹೋರಾಟಗಾರರು ಜನರ ಕೂಗಿಗೆ ಧ್ವನಿಯಾದರು. ಸರಕಾರದ ಮೇಲೆ ಒತ್ತಡ ತರುವ ನಿಟ್ಟಿನಲ್ಲಿ ಹೋರಾಟ ತೀವ್ರಗೊಂಡಿತ್ತಲ್ಲದೆ, ಕಂಪೆನಿಯ ಕಾನೂನು ಸಮರದ ಹುನ್ನಾರವನ್ನು ವಿಫಲಗೊಳಿಸಲಾಗಿತ್ತು.
ಕರ್ನಾಟಕ ವನ್ಯಜೀವಿ ಮಂಡಳಿ ಸಭೆಯಲ್ಲಿ ಸಂರಕ್ಷಿತ ಪ್ರದೇಶಕ್ಕೆ ಬಹುತೇಕರ ಒಪ್ಪಿಗೆ ಇದ್ದಾಗಲೂ ಅಂತಿಮ ನಿರ್ಣಯವನ್ನು ಮುಖ್ಯಮಂತ್ರಿಗೆ ನೀಡಲಾಗಿತ್ತು. ಸರಕಾರ ಘೋಷಣೆಗೆ ವಿಳಂಬ ತೋರಿದ್ದರಿಂದ ಹೋರಾಟಗಾರರು ಗದಗ ಜಿಲ್ಲೆಯ ಸುಮಾರು 100 ಗ್ರಾಮಗಳಲ್ಲಿ ಪರಿಸರ ಸಂರಕ್ಷಣೆ ಜಾಗೃತಿ ರಥಯಾತ್ರೆ ಕೈಗೊಂಡಿದ್ದರು. ಇನ್ನು 15 ದಿನದೊಳಗೆ ಸಂರಕ್ಷಿತ ಪ್ರದೇಶ ಘೋಷಣೆ ಆಗದಿದ್ದರೆ ಗದಗನಿಂದ ಬೆಂಗಳೂರುವರೆಗೆ ಪಾದಯಾತ್ರೆ ನಡೆಸಲು ನಿರ್ಧರಿಸಿದ್ದರು.
ಕಪ್ಪತಗುಡ್ಡ ಸಂರಕ್ಷಿತ ಪ್ರದೇಶವೆಂದು ಘೋಷಣೆ ಮಾಡಿದೆಯಾದರೂ, ಮುಂದೆಂದು ಗಣಿ ಕಂಪೆನಿಗಳು ಕಪ್ಪಗುಡ್ಡದ ಕಡೆ ಕಣ್ಣೆತ್ತದಂತೆ ಹಾಗೂ ಇನ್ನಾವುದೋ ಲೋಪ ತೋರಿಸಿ ಮತ್ತೂಮ್ಮೆ ಕಬಳಿಕೆಗೆ ಮುಂದಾಗದಂತೆ ಎಲ್ಲ ರೀತಿ ಮುಂಜಾಗ್ರತಾ ಕ್ರಮಗಳನ್ನು ಸರಕಾರ ಕೈಗೊಳ್ಳಬೇಕೆಂಬುದು ಜನರ ಒತ್ತಾಯವಾಗಿದೆ.
* ಅಮರೇಗೌಡ ಗೋನವಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Hubli: ದಿವಾಳಿಯಾದ ಸರ್ಕಾರ ಬಿಪಿಎಲ್ ಕಾರ್ಡ್ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Assembly bypolls; 14 ರಾಜ್ಯಗಳ 48 ಸ್ಥಾನಗಳ ಗೆಲುವಿನ ವಿವರ ಇಲ್ಲಿದೆ: ಎನ್‌ಡಿಎ ಮೇಲುಗೈ
Uppinangady: ಸರಣಿ ಅಪಘಾತ; 19 ಮಂದಿಗೆ ಗಾಯ
Maharashtra ; ಕೈ ಯಿಂದ ಲೋಕಸಭಾ ಸ್ಥಾನ ಕಸಿದ ಬಿಜೆಪಿ: ರಾಜ್ಯಸಭೆ ಬಹುಮತದತ್ತ ಚಿತ್ತ
By Election: ಮೂರು ಕ್ಷೇತ್ರದಲ್ಲೂ ಬಿಜೆಪಿ ಸೋತಿದ್ದಕ್ಕೆ ಟಿವಿಯನ್ನೇ ಒಡೆದು ಹಾಕಿದ ಮುಖಂಡ!
Basavaraj Bommai: ಹಣದ ಹೊಳೆಹರಿಸಿ ಕಾಂಗ್ರೆಸ್ ಗೆಲುವು: ಬೊಮ್ಮಾಯಿ ಆರೋಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.