ನನ್ನ ಗಂಡನಿಗೆ “ಅದೇ” ಇಲ್ಲ! ಗಂಡನ ವಿರುದ್ಧ ಪತ್ನಿ ದೂರು
Team Udayavani, Apr 12, 2017, 4:01 PM IST
ಬೆಂಗಳೂರು: ತನ್ನ ಗಂಡನಿಗೆ ಪುರುಷತ್ವ ಇಲ್ಲ. ದೈಹಿಕ ಸಂಪರ್ಕಕ್ಕೆ ಕರೆದರೆ ಜಗಳದ ನೆಪದಲ್ಲಿ ಎಸ್ಕೇಪ್ ಆಗುತ್ತಿದ್ದಾರೆ. ಪುರುಷತ್ವ ಇಲ್ಲದ ಗಂಡ ತನಗೆ ವಂಚಿಸಿರುವುದಾಗಿ ಆರೋಪಿಸಿ ಪತ್ನಿ ಮೈಕೋ ಲೇಔಟ್ ಠಾಣೆಗೆ ದೂರು ನೀಡಿರುವ ಅಪರೂಪದ ಘಟನೆ ನಡೆದಿದೆ.
ತನ್ನ ಜೊತೆ ಹತ್ತು ವರ್ಷದಿಂದ ಪತಿ ಸಂಸಾರ ನಡೆಸುತ್ತಿದ್ದರು ಕೂಡಾ ದೈಹಿಕ ಸಂಪರ್ಕಕ್ಕೆ ಕರೆದರೆ ವಿನಾಃ ಕಾರಣ ಜಗಳ ತೆಗೆದು ತಪ್ಪಿಸಿಕೊಳ್ಳುತ್ತಿರುವುದಾಗಿ ಪತ್ನಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.
ಪುರುಷತ್ವ ಇಲ್ಲದಿದ್ದರೂ ವಂಚಿಸಿ 2007ರಲ್ಲಿ ಮದುವೆ ಆಗಿದ್ದಾರೆ. ಬಳಿಕ ಇನ್ ಫರ್ಟಿಲಿಟಿ ಚಿಕಿತ್ಸೆ
ಮೂಲಕ ನಾನು ಮಗುವನ್ನು ಪಡೆದಿದ್ದೆ. ಆದರೆ ಪತಿ ನನ್ನ ಮೇಲೆ ಅನುಮಾನ ದೃಷ್ಟಿಯಿಂದ ನೋಡಿ ಚಿತ್ರಹಿಂಸೆ ನೀಡುತ್ತಿರುವುದಾಗಿ ತಿಳಿಸಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.