ಪ್ರಾದೇಶಿಕ ಸಾರಿಗೆ ಇಲಾಖೆಯಿಂದ ಗುರಿ ಮೀರಿದ ಸಾಧನೆ


Team Udayavani, Apr 12, 2017, 5:15 PM IST

RTo.jpg

ಮಡಿಕೇರಿ: ಹಸಿರು ಪರಿಸರದ ಪುಟ್ಟ ಕೊಡಗು ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ಮಾರ್ಚ್‌ ಅಂತ್ಯಕ್ಕೆ 1.61 ಲಕ್ಷ ವಾಹನಗಳು ನೋಂದಣಿ ಯಾಗಿರುವುದಲ್ಲದೆ, ಪ್ರಾದೇಶಿಕ ಸಾರಿಗೆ ಇಲಾಖೆ 51.52 ಕೋಟಿ ರಾಜಸ್ವ ಸಂಗ್ರಹಿಸುವ ಮೂಲಕ ಶೇ. 118.44ರಷ್ಟು ಗುರಿ ಮೀರಿದ ಸಾಧನೆ ಮಾಡಿದೆ.

ಪ್ರಾದೇಶಿಕ ಸಾರಿಗೆ ಇಲಾಖೆಗೆ ಕಳೆದ 2016-17 ನೇ ಸಾಲಿನಲ್ಲಿ ನೀಡಲಾಗಿದ್ದ 47.50 ಕೊಟಿ ರಾಜಸ್ವ ಸಂಗ್ರಹದ ಗುರಿ ಮೀರಿದ ಸಾಧನೆ ದಾಖಲಾ ಗುವುದಕ್ಕೆ ವಾಹನ ಖರೀದಿಯತ್ತ ಜಿಲ್ಲೆಯ ಜನತೆ ಹೆಚ್ಚಿನ ಆಸಕ್ತಿ ತೋರಿರುವುದು ಕಾರಣವಾಗಿದೆ.

ಮೈಸೂರು ವಿಭಾಗಕ್ಕೆ ಒಳಪಟ್ಟಿರುವ ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ ಮಡಿಕೇರಿ ಕಚೇರಿ ರಾಜಸ್ವ ಸಂಗ್ರಹದಲ್ಲಿ ಪ್ರಥಮ ಸ್ಥಾನದಲ್ಲಿದೆಯೆಂದು ಮಡಿಕೇರಿ ಪ್ರಾದೇಶಿಕ ಸಾರಿಗೆ ಇಲಾಖೆಯ ಅಧಿಕಾರಿ ಫೆಲಿಕ್ಸ್‌ ಡಿ’ಸೋಜಾ ತಿಳಿಸಿದ್ದಾರೆ. 

ಕಳೆದ ಆರ್ಥಿಕ ಸಾಲಿನಲ್ಲಿ ಖರೀದಿಸಿದ ವಾಹನ ಗಳಲ್ಲಿ  75ಸಿಸಿಯಿಂದ 300 ಸಿಸಿ ವರೆಗಿನ ದ್ವಿಚಕ್ರ ವಾಹನಗಳ ಪ್ರಮಾಣವೇ 71,459ರಷ್ಟಿದೆ.ಜಿಲ್ಲೆಯ ಜನತೆಯಲ್ಲಿ ವಾಹನಗಳ ಖರೀದಿಯ ಆಸಕ್ತಿ ಹೆಚ್ಚುತ್ತಿರುವ ಅಂಶ ಈ ಅಂಕಿ ಅಂಶಗಳಲ್ಲಿ ಕಾಣಿಸುತ್ತಿದ್ದು, ಕಳೆದ ಒಂದು ವರ್ಷದ ಅವಧಿಯಲ್ಲಿ  ಕೊಡಗಿನಲ್ಲಿ  9,024 ನೂತನ ವಾಹನಗಳು ರಸ್ತೆಗಿಳಿದಿವೆ. ಕಳೆದ 2016ರಲ್ಲಿ ಜಿಲ್ಲೆಯಲ್ಲಿ 1,51,975 ವಾಹನಗಳಿದ್ದರೆ,  ಕಳೆೆದ ಮಾರ್ಚ್‌ ಅಂತ್ಯಕ್ಕೆ ಇದು 1,60,999ಕ್ಕೆ ಏರಿಕೆಯಾಗಿದೆ. ವರ್ಷದಿಂದ ವರ್ಷಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ರಸ್ತೆಗಿಳಿಯುತ್ತಿರುವ ಹಿನ್ನೆಲೆಯಲ್ಲಿ ಪುಟ್ಟ ಜಿಲ್ಲೆಯ ಅಗಲ ಕಿರಿದಾದ ರಸ್ತೆಗಳಲ್ಲಿ ವಾಹನ ದಟ್ಟಣೆ ಹಿಂದೆಂದಿಗಿಂತಲೂ ಹೆಚ್ಚಿರುವುದನ್ನು ಕಾಣಬಹುದು.

ವಾಹನಗಳ ಸಂಖ್ಯೆ: ಕೊಡಗು ವ್ಯಾಪ್ತಿಯಲ್ಲಿ 77ಸಿಸಿವರೆಗಿನ 2,550, 75ಸಿಸಿಯಿಂದ 300 ಸಿಸಿ ವರೆಗಿನ 71,495, 300 ಸಿಸಿ ಅನಂತರದ 494 ಮೋಟಾರ್‌ ಸೈಕಲ್‌ಗ‌ಳಿದ್ದು, 38,692 ಮೋಟಾರ್‌ ಕಾರುಗಳು, 6,302 ಜೀಪುಗಳು, 8,939 ಆಟೋ ರಿûಾಗಳು, 1,403 ಮೋಟಾರ್‌ ಕ್ಯಾಬ್‌ಗಳು, 6,846 ಆಮ್ನಿ ಬಸ್‌ಗಳು, 162 ಬಸ್‌Õಗಳು, 49 ಕಾಂಟ್ರಾಕ್ಟ್ ಕ್ಯಾರೇಜ್‌ಗಳು, 7,163 ಸರಕು ವಾಹನಗಳು, 2,556 ಟ್ರಾÂಕ್ಟರ್‌ಗಳು, 4,654 ಟ್ರೆçಲರ್‌ಗಳು, 4 ಡಂಪರ್‌ಗಳು, 43 ಬುಲ್ಡೋಜರ್‌ಗಳು, 49 ಟಿಪ್ಪರ್‌ಗಳು, 3213 ಟಿಲ್ಲರ್‌ಗಳು, 1,031 ಡೆಲಿವರಿ ವ್ಯಾನ್‌ಗಳು, 42 ಆಂಬ್ಯುಲೆನ್ಸ್‌ಗಳು, 496 ಮ್ಯಾಕ್ಸಿ ಕ್ಯಾಬ್‌ಗಳು, 13ಟ್ಯಾಂಕರ್‌ಗಳು, 426 ಇತರ ವಾಹನಗಳಿವೆ.

ದಂಡ ವಸೂಲಾತಿ
ಪ್ರಾದೇಶಿಕ ಸಾರಿಗೆ ಇಲಾಖೆಯಿಂದ ಕಳೆದ ಆರ್ಥಿಕ ಸಾಲಿನಲ್ಲಿ 1,439 ವಾಹನಗಳನ್ನು ತಪಾಸಣೆ ಮಾಡಲಾಗಿದ್ದು, 288 ವಾಹನಗಳಿಗೆ ತನಿಖಾ ವರದಿ ನೀಡಲಾಗಿದೆ. ಅಲ್ಲದೆ 1,133 ವಾಹನಗಳಿಂದ ಸುಮಾರು 1.30 ಕೋಟಿ ರೂ.ಗಳ ತೆರಿಗೆ ಹಾಗೂ 22.13 ಲಕ್ಷ ರೂ.ಗಳ ದಂಡ ಸೇರಿದಂತೆ ಒಟ್ಟು 1.52 ಕೋಟಿ ರೂ.ಗಳಿಗೂ ಅಧಿಕ ಹಣವನ್ನು ವಸೂಲು ಮಾಡಲಾಗಿದೆಯೆಂದು  ಫೆಲಿಕ್ಸ್‌ ಡಿಸೋಜಾ ಮಾಹಿತಿ ಒದಗಿಸಿದ್ದಾರೆ.

ಸಿಬಂದಿಗಳ ಕೊರತೆ
ಮಡಿಕೇರಿ ಪ್ರಾದೇಶಿಕ ಸಾರಿಗೆ ಕಚೇರಿಯ ಒಟ್ಟು 36 ಹುದ್ದೆಗಳಲ್ಲಿ ಕೇವಲ 16 ಸಿಬಂದಿಗಳು ಮಾತ್ರ  ಕಾರ್ಯನಿರ್ವಹಿಸುತ್ತಿದ್ದಾರೆ. ಅತ್ಯಂತ ಪ್ರಮುಖವಾದ ಖಾಯಂ ಪ್ರಾದೇಶಿಕ ಸಾರಿಗೆ ಅಧಿಕಾರಿ ಹುದ್ದೆಯೇ ಇಲ್ಲಿ ಖಾಲಿಯಾಗಿದೆ. ಪುತ್ತೂರು ಪ್ರಾದೇಶಿಕ ಸಾರಿಗೆ ಅಧಿಕಾರಿಯವರಿಗೆ ಪ್ರಭಾರವಾಗಿ ಇಲ್ಲಿನ ಜವಾಬ್ದಾರಿಯನ್ನು ವಹಿಸಲಾಗಿದೆ. 

ವಿಪರ್ಯಾಸವೆಂದರೆ, ಸಾರಿಗೆ ಇಲಾಖೆಗೆ ಆದಾಯವನ್ನು ತಂದು ಕೊಡುವ  ಮೋಟಾರ್‌ ವಾಹನ ನಿರೀಕ್ಷಕರ ಹುದ್ದೆಗಳೇ ಖಾಲಿ ಇವೆ. ಕಚೇರಿಯಲ್ಲಿ 4 ವಾಹನ ನಿರೀಕ್ಷಕರಿರಬೇಕಿದ್ದರೂ, ಇದೀಗ ಎಲ್ಲ ಹುದ್ದೆಗಳು ಖಾಲಿಯಾಗಿವೆ. ಸರ್ಕಾರ ಗಮನ ಹರಿಸಿ ಕೊರತೆಯನ್ನು ತುಂಬುವ ಅಗತ್ಯವಿದೆ. 

ಟಾಪ್ ನ್ಯೂಸ್

Khadri–cm

Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್‌ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಉಡುಗೊರೆ!

DVG-Tagaru

Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ

1-IFFI

IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ

1-ree

IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!

isrel netanyahu

Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ

Madikeri-1

Madikeri: ರೈಲ್ವೆ ಕಂಬಿಯ ಬೇಲಿಗೆ ಸಿಲುಕಿದ ಕಾಡಾನೆಯ ರಕ್ಷಣೆ

Kharge

JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Madikeri-1

Madikeri: ರೈಲ್ವೆ ಕಂಬಿಯ ಬೇಲಿಗೆ ಸಿಲುಕಿದ ಕಾಡಾನೆಯ ರಕ್ಷಣೆ

10-madikeri

Madikeri: ಹಾಡಹಗಲೇ ಹಾರ್ಡ್ ವೇರ್ ಅಂಗಡಿಗೆ ನುಗ್ಗಿ ಒಂಟಿ ಮಹಿಳೆಯ ಸರಗಳ್ಳತನ

8-madikeri

Madikeri:ರೈಲ್ವೆ ಕಂಬಿ ಬೇಲಿಯನ್ನೇ ಮುರಿದ ಕಾಡಾನೆಗಳು:ನಿತ್ಯ ಉಪಟಳದಿಂದ ಬೇಸತ್ತ ಗ್ರಾಮಸ್ಥರು

Arrest

Madikeri: ವೀರ ಸೇನಾನಿಗಳಿಗೆ ಅಗೌರವ: ಆರೋಪಿ ಸೆರೆ

Kumbale: ವರ್ಕಾಡಿ ಪ್ಲೈವುಡ್‌ ಕಾರ್ಖಾನೆಯಲ್ಲಿ ಬೆಂಕಿ ಅನಾಹುತ: ಬೆಂಕಿ: ಕೋಟ್ಯಂತರ ರೂ. ನಷ್ಟ

Kumbale: ವರ್ಕಾಡಿ ಪ್ಲೈವುಡ್‌ ಕಾರ್ಖಾನೆಯಲ್ಲಿ ಬೆಂಕಿ ಅನಾಹುತ: ಬೆಂಕಿ: ಕೋಟ್ಯಂತರ ರೂ. ನಷ್ಟ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Khadri–cm

Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್‌ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಉಡುಗೊರೆ!

DVG-Tagaru

Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ

1-IFFI

IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ

1-ree

IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!

Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ

Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.