ಬ್ಯಾಂಕುಗಳಿಗೆ 2,240 ಕೋಟಿ ರೂ. ವಂಚನೆ: ಸಿಬಿಐನಿಂದ ನಾಲ್ವರು ಅರೆಸ್ಟ್
Team Udayavani, Apr 12, 2017, 6:10 PM IST
ಹೊಸದಿಲ್ಲಿ : ಬ್ಯಾಂಕ್ ಕೂಟಕ್ಕೆ ಸುಮಾರು 2,240 ಕೋಟಿ ರೂ. ವಂಚಿಸಿರುವ ಆರೋಪದ ಮೇಲೆ ಬಂಧಿತರಾಗಿದ್ದ ಸೂರ್ಯ ವಿನಾಯಕ್ ಇಂಡಸ್ಟ್ರೀಸ್ ಲಿಮಿಟೆಡ್‌ನ ನಾಲ್ವರು ನಿರ್ದೇಶಕರನ್ನು ದಿಲ್ಲಿ ಯ ನ್ಯಾಯಾಲಯವೊಂದು ಇಂದು ಬುಧವಾರ ಹತ್ತು ದಿನಗಳ ಸಿಬಿಐ ಕಸ್ಟಡಿಗೆ ಒಪ್ಪಿಸಿತು.
ಪಂಜಾಬ್ ನ್ಯಾಶನಲ್ ಬ್ಯಾಂಕ್ ಕೊಟ್ಟಿರುವ ದೂರಿನ ಪ್ರಕಾರ ಸಿಬಿಐನಿಂದ ಬಂಧಿತರಾಗಿದ್ದ ಸಂಜಯ್ ಜೈನ್, ರಾಜೀವ್ ಜೈನ್, ರೋಹಿತ್ ಚೌಧರಿ ಮತ್ತು ಸಂಜೀವ್ ಅಗ್ರವಾಲ್ ಅವರನ್ನು ಚೀಫ್ ಜ್ಯುಡೀಶಿಯಲ್ ಮ್ಯಾಜಿಸ್ಟ್ರೇಟ್ ಸುಮಿತ್ ದಾಸ್ ಅವರು ಎಪ್ರಿಲ್ 22ರ ತನಕ 10 ದಿನಗಳ ಸಿಬಿಐ ಕಸ್ಟಡಿಗೆ ಒಪ್ಪಿಸಿ ಆದೇಶ ಹೊರಡಿಸಿದರು.
ನೂರಕ್ಕೂ ಹೆಚ್ಚು ಶೆಲ್ (ನಕಲಿ) ಕಂಪೆನಿಗಳನ್ನು ಸೃಷ್ಟಿಸಿ ಅವುಗಳ ಮೂಲಕ ಬ್ಯಾಂಕ್ ಹಣವನ್ನು ಅಕ್ರಮವಾಗಿ ರವಾನಿಸುವ ಮತ್ತು ವರ್ಗಾಯಿಸುವ ಕಾನೂನುಬಾಹಿರ ಚಟುವಟಿಕೆ ನಡೆಸುತ್ತಿದ್ದ ಈ ನಾಲ್ವರನ್ನು ಸಿಬಿಐ ಇಂದು ಬೆಳಗ್ಗೆಯಷ್ಟೇ ಬಂಧಿಸಿತ್ತು.
ಸೂರ್ಯ ವಿನಾಯಕ ಇಂಡಸ್ಟ್ರೀಸ್ ಮತ್ತು ನಕಲಿ ಕಂಪೆನಿಗಳ ನಡುವೆ ಯಾವುದೇ ಸಾಚಾ ಔದ್ಯಮಿಕ ವಹಿವಾಟು ಇರಲಿಲ್ಲ. ಆರೋಪಿಗಳಾದ ನಾಲ್ವರು ನಿರ್ದೇಶಕರು ಪಂಜಾಬ್ ನ್ಯಾಶನಲ್ ಬ್ಯಾಂಕಿನ 2,240 ಕೋಟಿ ರೂ.ಗಳನ್ನು ಅಕ್ರಮವಾಗಿ ವಿದೇಶಗಳಿಗೆ ರವಾನಿಸಿ ಬ್ಯಾಂಕ್ ಕೂಟಕ್ಕೆ ಭಾರೀ ನಷ್ಟ ಉಂಟುಮಾಡಿದ್ದರು. 300 ಕೋಟಿ ರೂ.ಮೀರಿದ ಕಾರ್ಯ ಬಂಡವಾಳವನ್ನು ಈ ಆರೋಪಿಗಳು ವಿದೇಶದಲ್ಲಿರುವ ಆರು ನಕಲಿ ಕಂಪೆನಿಗಳಿಗೆ ವರ್ಗಾಯಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jio domain ಗಲಾಟೆ ನಡುವೆಯೇ “ಜಿಯೋಸ್ಟಾರ್’ ಹೊಸ ವೆಬ್‌ಸೈಟ್ ಪ್ರತ್ಯಕ್ಷ!
Haldiram ಭುಜಿಯಾವಾಲಾದಲ್ಲಿ ₹235 ಕೋಟಿ ಹೂಡಿಕೆ ಮಾಡಿದ ಭಾರತ್ ವ್ಯಾಲ್ಯು ಫಂಡ್
Gold Rates:ಡಾಲರ್ ಬೆಲೆ ಏರಿಕೆ-18k, 22K, 24K, ಇಂದಿನ ಚಿನ್ನದ ಮಾರುಕಟ್ಟೆ ಬೆಲೆ ಎಷ್ಟು?
Explainer: ಉಳಿತಾಯ ಖಾತೆಯಲ್ಲಿ ಎಷ್ಟು ನಗದು ಠೇವಣಿ ಇಡಬಹುದು? ವಾರ್ಷಿಕ ಮಿತಿ ಎಷ್ಟು….
Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ
MUST WATCH
ಹೊಸ ಸೇರ್ಪಡೆ
Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ
Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು
Mangaluru: ಪಂಪ್‌ವೆಲ್-ಪಡೀಲ್ ನಡುವಿನ ಚತುಷ್ಪಥ ಕಾಮಗಾರಿ 3 ವರ್ಷ ಕಳೆದರೂ ಅಪೂರ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.