ಸೆಳೆಯಲ್ಪಡುವ ನೀರು!
Team Udayavani, Apr 13, 2017, 3:50 AM IST
ಬೇಕಾದ ವಸ್ತುಗಳು:
ಖಾಲಿ ನೀರಿನ ಬಾಟಲ್, ಸೈಕಲ್ ನ್ಪೋಕ್ ಕಡ್ಡಿ, ಗಟ್ಟಿಯಾದ ಸ್ಟ್ರಾ, ಬಣ್ಣದ ನೀರು, ಬಾಟಲಿ ಮುಚ್ಚಳ.
ಮಾಡುವ ವಿಧಾನ:
1. ಒಂದು ಪ್ಲಾಸ್ಟಿಕ್ ಬಾಟಲ್ ತೆಗೆದುಕೊಂಡು ಅದರ ಮಧ್ಯದಲ್ಲಿ ರಂಧ್ರ ಮಾಡಿ ಬಾಟಲ್ ವ್ಯಾಸಕ್ಕಿಂತ ಸ್ವಲ್ಪ ದೊಡ್ಡದಾದ ಗಟ್ಟಿ ಸ್ಟ್ರಾ ಪೈಪ್ ಸೇರಿಸಿ, ಫೆವಿ ಕ್ವಿಕ್ ಅಥವಾ ಗ್ಲೂ(Glue) ಗಮ್ ಹಾಕಿ ಭದ್ರಪಡಿಸಿ.
2. ಬಾಟಲ್‌ನ ಮತ್ತೂಂದು ಮುಚ್ಚಳದ ಮಧ್ಯಕ್ಕೆ ಸೈಕಲ್ ನ್ಪೋಕ್(Spoke) ಕಡ್ಡಿ ಸೇರಿಸಿ ಹಿಡಿಯಲು ಸಹಾಯವಾಗುವಂತೆ ಮುಚ್ಚಳದ ಕೆಳ ಭಾಗವನ್ನು ಬಾಗಿಸಿ.
3. ಪ್ಲಾಸ್ಟಿಕ್ ಬಾಟಲ್‌ಗೆ ಸ್ಕೆಚ್ ಪೆನ್‌ನ ಕೆಂಪು ಇಂಕ್ ಸೇರಿಸಿ ಮಿಶ್ರ ಮಾಡಿರುವ ಸ್ವಲ್ಪ ಬಣ್ಣದ ನೀರನ್ನು ಹಾಕಿ ಮುಚ್ಚಳ ಭದ್ರಪಡಿಸಿ. ಸೈಕಲ್ ನ್ಪೋಕ್ ಕಡ್ಡಿ ಸೇರಿಸಿದ ಮುಚ್ಚಳದ ಮೇಲ್ಭಾಗಕ್ಕೆ ಚಿತ್ರದಲ್ಲಿರುವಂತೆ ಬಾಟಲ್‌ನ ಸ್ಟ್ರಾ ಪೈಪನ್ನು ಸೇರಿಸಿ.
4. ಎಡಗೈನಿಂದ ಚಿತ್ರದಲ್ಲಿರುವಂತೆ ಬಾಗಿಸಿದ ಸೈಕಲ್ ನ್ಪೋಕ್ ಕಡ್ಡಿ ಹಿಡಿದುಕೊಂಡು ಬಲಗೈನಿಂದ ಬಾಟಲ್‌ಅನ್ನು ಜೋರಾಗಿ ತಿರುಗಿಸಿ. ಬಾಟಲ್‌ನಲ್ಲಿರುವ ನೀರನ್ನು ಗಮನಿಸಲು ಮಕ್ಕಳಿಗೆ ತಿಳಿಸಿ.
5. ಬಾಟಲಿ ಜೋರಾಗಿ ತಿರುಗುವಾಗ ಬಾಟಲ್‌ನ ಎರಡೂ ಕಡೆಗಳಿಗೆ ನೀರು ಸೆಳೆಯಲ್ಪಡುವುದನ್ನು ನಾವು ಕಾಣುತ್ತೇವೆ.
6. ಈಗ ಬಾಟಲ್‌ನಲ್ಲಿರುವ ಕೆಂಪು ನೀರಿಗೆ ನೀಲಿ ಬಣ್ಣದ ಸೀಮೆ ಎಣ್ಣೆ ಸೇರಿಸಿ. ಅದು ಈಗ ನೀರಿನ ಮೇಲ್ಪದರದಲ್ಲಿ ನಿಲ್ಲುತ್ತದೆ. ಈ ಪ್ರಯೋಗವನ್ನು ಪುನರಾವರ್ತಿಸಿ. ಈಗ ಯಾವ ವಸ್ತು ಮೊದಲು ಬಾಟಲ್‌ನ ಅಂಚಿಗೆ ಸೆಳೆಯಲ್ಪಡುತ್ತದೆ ಎಂಬುದನ್ನು ಗಮನಿಸಲು ತಿಳಿಸಿ. ಏಕೆ ಎಂದು ಕೇಳಿ.
ವೈಜ್ಞಾನಿಕ ಕಾರಣ:
ಬಾಟಲಿ ಸುತ್ತುವಾಗ ಕೇಂದ್ರ ತ್ಯಾಗಿ ಬಲ(Centrifugal)ದಿಂದಾಗಿ ಬಾಟಲ್‌ನ ಎರಡೂ ಕಡೆಗಳಿಗೆ ನೀರು ಸೆಳೆಯಲ್ಪಡುತ್ತದೆ. ಸೀಮೆ ಎಣ್ಣೆ ನೀರಿನ ಮೇಲೆ ತೇಲಲು ಕಾರಣ ನೀರಿನ ಸಾಂದ್ರತೆಗಿಂತ ಸೀಮೆ ಎಣ್ಣೆ ಸಾಂದ್ರತೆ ಕಡಿಮೆ ಇದೆ. ಹೀಗಾಗಿಯೇ ಇವೆರಡನ್ನೂ ಹಾಕಿ ಬಾಟಲ್ ತಿರುಗಿಸಿದಾಗ ನೀರು ಮೊದಲು ಬಾಟಲ್‌ನ ಅಂಚಿಗೆ ಸೆಳೆಯಲ್ಪಟ್ಟು, ನಂತರ ಸೀಮೆ ಎಣ್ಣೆ ಸೆಳೆಯಲ್ಪಡುತ್ತದೆ.
ಸೋಮಶೇಖರ ಟಿ.ಎಂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Madhu Bangarappa ; ಟ್ರೋಲ್ ಗಳಿಗೆ ಬಗ್ಗಲ್ಲ.. ಕಿಡಿ ಕಿಡಿಯಾದ ಶಿಕ್ಷಣ ಸಚಿವ!
Vijayapura: ಪೊಲೀಸರಿಂದ 22 ಲಕ್ಷ ರೂ.ಮೌಲ್ಯದ ಗಾಂಜಾ ಜಪ್ತಿ, ಎರಡು ಕಾರು ವಶಕ್ಕೆ
IFFI 2024;ರಾಜಕೀಯ ಕಾರಣಗಳಿಂದಲೇ ಸಾವರ್ಕರ್‌ಗೆ ಸಿಗಬೇಕಾದ ಮನ್ನಣೆ ಸಿಕ್ಕಿಲ್ಲ:ರಣದೀಪ್ ಹೂಡಾ
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.