ವಿಷುವಿಗೆ ಸಾವಯವ ತರಕಾರಿ: ಕೇಶವ ಪ್ರಸಾದರ ಕೃಷಿ ಸಾಹಸ


Team Udayavani, Apr 13, 2017, 3:42 PM IST

krishi-m.jpg

ಬದಿಯಡ್ಕ: ಸಾಧಿಸುವ ಶಕ್ತಿ ಎಲ್ಲರಲ್ಲೂ ಇದೆ. ಆದರೆ ಪ್ರಯತ್ನಿಸುವ ಮನಸ್ಸು ಬೇಕು. ಹಾಗೆಯೇ ಸಮಯದ ಮಹತ್ವ ಮತ್ತು ಮೌಲ್ಯ ಬಲ್ಲವನು ಅದನ್ನು ಬೇಕಾದಂತೆ ಬೇಕಾದಾಗ ಉಪಯೋಗಿಸಿಕೊಳ್ಳಬಲ್ಲ. ಸಮಯ ಇಲ್ಲ ಎನ್ನುವ ಬದಲು ಇರುವ ಸಮಯದಲ್ಲಿ ಏನೆಲ್ಲ ಮಾಡಬಹುದು ಎಂಬುದನ್ನೂ ಮೊದಲೇ ನಿರ್ಧರಿಸುತ್ತಾನೆ, ಅದರಂತೆ ಕಾರ್ಯಪ್ರವೃತ್ತ ನಾಗುತ್ತಾನೆ. ಸಾಧಿಸುವ ಮನಸಿದ್ದರೆ ಎಲ್ಲವೂ ಸಾಧ್ಯ ಎಂಬುದನ್ನು ಸದಾ ರಾಜಕೀಯ, ಸಮಾಜಸೇವೆ ಮುಂತಾದ ಚಟುವಟಿಕೆಗಳಲ್ಲಿ ಸಕ್ರಿಯರಾಗಿರುವ ಕುಂಬಳೆ ಸಮೀಪದ ನಾರಾಯಣ ಮಂಗಲದ ಕೇಶವ ಪ್ರಸಾದ್‌ ನಾಣಿತ್ತಿಲು ತೋರಿಸಿಕೊಟ್ಟಿದ್ದಾರೆ.

ಮರಗೆಣಸು ತಂದ ಆದಾಯ
ಕೃಷಿಯಲ್ಲಿ ಆಸಕ್ತಿ ಹೊಂದಿದ್ದ ಕೇಶವ ಪ್ರಸಾದ್‌ ಅವರು ಕೆಂಪು ಕಲ್ಲು ತೆಗೆದು ಹೊಂಡಗಳಿಂದ ತುಂಬಿದ್ದ ತನ್ನ ಎರಡು ಎಕ್ರೆ ಪ್ರದೇಶವನ್ನು ಸಮತಟ್ಟುಗೊಳಿಸಿ ಕೇರಳದಲ್ಲಿ ಅತೀ ಬೇಡಿಕೆ ಇರುವ ಮರಗೆಣಸು ಕೃಷಿ ಮಾಡಲು ನಿರ್ಧರಿಸಿದರು. ಇತರ ಕೃಷಿಕರಿಂದ ಹಾಗೂ ತೋಟಗಾರಿಕಾ ಇಲಾಖೆಯಿಂದ ಸುಮಾರು ಎರಡು ಸಾವಿರದಷ್ಟು ಮರಗೆಣಸಿನ ಗಿಡಗಳನ್ನು ತಂದು ನೆಟ್ಟರು. ಒಂದು ಸಸಿಯಲ್ಲಿ ಸಾಧಾರಣ ಹದಿನೈದರಿಂದ ಇಪ್ಪತ್ತು ಕಿಲೋಗಳಷ್ಟು ಗೆಣಸು ಲಭಿಸುತ್ತಿದ್ದು ಇದರಿಂದ ಮಾತ್ರ ಎರಡು ಲಕ್ಷ ರೂ.ನಷ್ಟು ಆದಾಯ ಲಭಿಸಿರುವುದಾಗಿ ಕೇಶವ ಪ್ರಸಾದ್‌ ಹೇಳುತ್ತಾರೆ.

ಜುಲೈ ತಿಂಗಳ ಕೊನೆಯಲ್ಲಿ ಗಿಡಗಳನ್ನು ನೆಟ್ಟಿದ್ದು ಮಳೆ ಕಡಿಮೆಯಾಗಿದ್ದುದರಿಂದ ಪೈಪಿನ ಮುಖಾಂತರ ನೀರುಣಿಸಬೇಕಾಯಿತು. ಹಾಗಾಗಿ ಗಿಡದ ಬೆಳವಣಿಗೆ ನಿರೀಕ್ಷೆ ಯಷ್ಟು ಆಗದೆ ಇಳುವರಿ ಕಡಿಮೆ ಯಾಯಿತು ಇಲ್ಲವಾದರೆ ಸುಮಾರು ನಾಲ್ಕು ಲಕ್ಷ ರೂ. ಆದಾಯ ಲಭಿಸುತ್ತಿತ್ತು ಎಂದವರ ಅಭಿಪ್ರಾಯ.

ಉಪಬೆಳೆಗಳ ಫ‌ಸಲು
ಮರಗೆಣಸು  ಮಾತ್ರವಲ್ಲದೆ ಉಪಬೆಳೆಯಾಗಿ ಬಸಳೆ, ಕುಂಬಳಕಾಯಿ, ಸೋರೆಕಾಯಿ, ಚೀನಿಕಾಯಿ, ತೊಂಡೆ ಕಾಯಿ, ಅಲಸಂಡೆ, ಬದನೆ, ಹರಿವೆ ಮುಂತಾದವುಗಳನ್ನು ಬೆಳೆಸುತ್ತಿದ್ದಾರೆ. ಕೇವಲ ಮೂರು ಸಾವಿರ ಖರ್ಚು ಮಾಡಿದ ಬಸಳೆ ಕೃಷಿಯಿಂದ ಮಾತ್ರ ಮೂವತ್ತೆ$çದು ಸಾವಿರ ಆದಾಯ ಲಭಿಸಿದೆ. ಸ್ಪ್ರಿಂಕ್ಲರ್‌ ಹಾಗೂ ಹನಿ ನೀರಾವರಿ ಮೂಲಕ ನೀರುಣಿಸುತ್ತಿದ್ದು, ಯಾವುದೇ ರಾಸಾಯನಿಕಗಳನ್ನು ಬಳಸದೆ ಸಾವಯವ ಕೃಷಿ ಮಾಡಿ ಯಶಸ್ವಿಗಳಿಸಿದ್ದಾರೆ ಕೇಶವ ಪ್ರಸಾದ್‌. ನೆಲಕಡಲೆ ಹಿಂಡಿ ಹಾಗೂ ಸಾವಯವ ಗೊಬ್ಬರ ಮಾತ್ರವೇ ಉಪಯೋಗಿಸಿ ಬೆಳೆದ ತರಕಾರಿಗಳಿಗೆ ಹೆಚ್ಚಿನ ಬೇಡಿಕೆ ಇದ್ದು  ಜನರು ಇವರ ಮನೆಯಿಂದ ನೇರವಾಗಿ ತರಕಾರಿಗಳನ್ನು ಕೊಂಡು ಕೊಳ್ಳುತ್ತಾರೆ. ಉಳಿದ ತರಕಾರಿಗಳನ್ನು ಕುಂಬಳೆಯಲ್ಲಿರುವ ತರಕಾರಿ ಅಂಗಡಿಗೆ ಮಾರಾಟ ಮಾಡಲಾಗುತ್ತದೆ. ಇಷ್ಟು ಮಾತ್ರವಲ್ಲದೆ ಗೋವುಗಳನ್ನೂ ಸಾಕುತ್ತಿದ್ದು ಹಟ್ಟಿಯ ಗೊಬ್ಬರ ಕೃಷಿಗೆ ಉಪಯೋಗಿಸುತ್ತಾರೆ. ಹಾಗೆಯೇ ತನ್ನ ಹಿತ್ತಿಲಲ್ಲಿ ಹುಲ್ಲನ್ನೂ ಬೆಳೆಯುತ್ತಿದ್ದಾರೆ.

ಮುಂಜಾನೆ ಆರು ಗಂಟೆಗೆ ತೋಟಕ್ಕಿಳಿಯುವ ಇವರು ಗಿಡಗಳಿಗೆ ನೀರುಣಿಸುವುದು, ಗೊಬ್ಬರ ಹಾಕು ವುದು, ಕಳೆ ಕೀಳುವುದು, ತರಕಾರಿ ಗಳನ್ನು ಕೊಯ್ಯುವುದು ಮುಂತಾದ ಕೆಲಸಗಳನ್ನು ಮುಗಿಸಿ ಸುಮಾರು ಎಂಟೂವರೆ ಗಂಟೆಗೆ ತನ್ನ ಕೃಷಿಯ ಕೆಲಸ ಮುಗಿಸಿ ಇತರ ಕೆಲಸಕ್ಕೆ ಹೊರಡುತ್ತಾರೆ. ಸಂಜೆಯಾಗುತ್ತಿದ್ದಂತೆ ಇವರ ಪತ್ನಿ, ಕುಂಬಳೆ ಪಂಚಾಯತ್‌ನ ಮಾಜಿ ಸದಸ್ಯೆ ಅಶ್ವಿ‌ನಿ ನಾಣಿತ್ತಿಲು ಹಾಗೂ ಮಕ್ಕಳಾದ ಅನನ್ಯಾ ಹಾಗೂ ಅಕ್ಷಯ ತೋಟದ ಕಾರ್ಯಗಳನ್ನು ನೋಡುತ್ತಾರೆ. ಸದಾ ಹಸನ್ಮುಖೀಯಾಗಿ ಜನರ ಅಗತ್ಯಗಳಿಗೆ ಸ್ಪಂದಿಸುವ ಸಮಾಜಸೇವಕ, ನುರಿತ ರಾಜಕಾರಣಿ, ಗಡಿನಾಡಲ್ಲಿ ಜಾನಪದ ಸಂಚಾರ ಕಾರ್ಯಕ್ರಮವನ್ನೂ ಯಶಸ್ವಿಯಾಗಿ ಮಾಡುತ್ತಿರುವ ಕೇಶವ ಪ್ರಸಾದ್‌ ಸದಾ ಒಂದಲ್ಲಾ ಒಂದು ಚಟುವಟುಕೆಯಲ್ಲಿ ನಿರತರಾಗಿರುತ್ತಾರೆ.

ಕೃಷಿಗೂ ಸೈ, ಸಮಾಜಸೇವೆಗೂ ಸೈ
ಕಾಸರಗೋಡು ಜಿಲ್ಲಾ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಜನಪದ ಸಾಹಿತ್ಯ ಪರಿಷತ್‌ ಕೇರಳ ಘಟಕದ ಅಧ್ಯಕ್ಷರು, ಕುಂಬಳೆ ಗ್ರಾಮ ಪಂಚಾಯತ್‌ನ ಮಾಜಿ ಉಪಾಧ್ಯಕ್ಷರು, ಉತ್ತಮ ಸಂಘಟಕ, ಸಮಾಜಸೇವಕ… ಹೀಗೆ ಸದಾ ಒಂದಲ್ಲ ಒಂದು ಕೆಲಸದಲ್ಲಿ ನಿರತರಾಗಿರುವ ಕೇಶವ ಪ್ರಸಾದರು ತನ್ನ ಬಿಡುವಿನ ಸಮಯವನ್ನು ಕೃಷಿ ಕೆಲಸಕ್ಕಾಗಿ ಮೀಸಲಿಡುತ್ತಾರೆ. ಉತ್ತಮ ವಾಗ್ಮಿಯು ಅಗಿರುವ ಇವರು ಕನ್ನಡ, ಮಲಯಾಳಂ, ತುಳು, ಇಂಗ್ಲೀಷ್‌, ಹಿಂದಿ ಮಾತಾಡಬಲ್ಲವರಾಗಿದ್ದಾರೆ. ಇವರ ತೋಟದಲ್ಲಿ ಬೆಳೆಯುವ ತರಕಾರಿಗಳು ಈ ವರ್ಷದ ವಿಷುವಿಗಾಗಿ ಈಗಾಗಲೇ ಮಾರುಕಟ್ಟೆ ತಲುಪಿದೆ. ಉತ್ತಮ ಗುಣಮಟ್ಟದ, ಸಾವಯವ ಉತ್ಪನ್ನಗಳು ಆರೋಗ್ಯವಂತ ವಿಷುವನ್ನು ಜನರು ಸಂಭ್ರಮದಿಂದ ಆಚರಿಸುವಂತೆ ಮಾಡುವುದರಲ್ಲಿ ಎರಡು ಮಾತಿಲ್ಲ.

ಆತ್ಮಹತ್ಯೆಯೋಚನೆಯ ಕೃಷಿಕರು ಇವರಿಂದ ಕಲಿಯಲಿ
ಕೃಷಿಯಲ್ಲಿ ಸಾಧನೆಮಾಡಲು ಹೋಗಿ ಕೈಸುಟ್ಟುಕೊಂಡ ನಿರಾಸೆ ಯಿಂದ ಆತ್ಮಹತ್ಯೆ ಮಾಡುವ ಕೃಷಿಕರು ಇವರಿಂದ ಕಲಿಯುವುದು ಬಹಳ ವಿದೆ. ಬಿಡುವಿನ ಸಮಯವನ್ನು ಹೇಗೆ ಪ್ರಯೋಜನಕಾರಿಯಾಗಿ ಉಪ ಯೋಗಿಸಿಕೊಳ್ಳಬಹುದು ಎಂಬು ದನ್ನು ತೋರಿಸಿಕೊಟ್ಟ ಕೇಶವ ಪ್ರಸಾದ್‌ ಅವರ ಸಾಧನೆ ಮುಂದುವ ರಿಯಲಿ. ಹಾಗೆಯೇ ಭಾರತ ದೇಶದ ಬೆನ್ನೆಲು ಬಾದ ಕೃಷಿಯತ್ತ ಜನರನ್ನು ಆಕರ್ಷಿಸು ವಂತಾಗಲಿ.
ವಿಷುವಿನ ಸಂಭ್ರಮ ವರ್ಷವಿಡೀ ಎಲ್ಲರ ಮನೆಯಲ್ಲೂ ತುಂಬಿ ತುಳುಕಲಿ.

– ಅಖೀಲೇಶ್‌ ನಗುಮುಗಂ

ಟಾಪ್ ನ್ಯೂಸ್

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

CJI-Ind

Recommendation: ನ್ಯಾ. ಸಂಜೀವ್‌ ಖನ್ನಾ ಸುಪ್ರೀಂಕೋರ್ಟ್‌ ಮುಂದಿನ ಮುಖ್ಯ ನ್ಯಾಯಮೂರ್ತಿ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

de

Kasaragod: ಬೋಟ್‌ ಮುಳುಗಡೆ; ನಾಪತ್ತೆಯಾಗಿದ್ದ ಮುಜೀಬ್‌ ಮೃತದೇಹ ಪತ್ತೆ

8

Kumbla: ಕುಸಿದು ಬೀಳುವ ಅಪಾಯದಲ್ಲಿದೆ ಉರ್ಮಿ-ಪಲ್ಲೆಕೂಡೆಲು ಕಿರು ಸೇತುವೆ

Kodagu: ತಲಕಾವೇರಿಯಲ್ಲಿ ನಿಗಧಿತ ಸಮಯಕ್ಕೆ ತೀಥ೯ರೂಪಿಣಿಯಾದ ಕಾವೇರಿ ಮಾತೆ

Kodagu: ತಲಕಾವೇರಿಯಲ್ಲಿ ನಿಗಧಿತ ಸಮಯಕ್ಕೆ ತೀಥ೯ರೂಪಿಣಿಯಾದ ಕಾವೇರಿ ಮಾತೆ

17

Kasaragod: ಜಿಲ್ಲಾ ನ್ಯಾಯಾಲಯದ ತೀರ್ಪಿನ ವಿರುದ್ಧ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ ಸರಕಾರ

courts

Kasaragod: ಕೊಲೆ ಪ್ರಕರಣ: 8 ವರ್ಷ ಕಠಿಣ ಸಜೆ, ದಂಡ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.