ಕುಲಭೂಷಣ್‌ಗೆ ಪಾಕ್ ಗಲ್ಲು: ಪ್ರಶ್ನೆಯಿಂದ ನುಣುಚಿಕೊಂಡ ವಿಶ್ವಸಂಸ್ಥೆ
Team Udayavani, Apr 13, 2017, 3:56 PM IST
ಇಸ್ಲಾಮಾಬಾದ್ : ಭಾರತೀಯ ಬೇಹುಗಾರನೆಂದು ಆರೋಪಿಸಲ್ಪಟ್ಟ ಕುಲಭೂಷಣ್ ಜಾಧವ್‌ಗೆ ಪಾಕಿಸ್ಥಾನ ಗಲ್ಲು ಶಿಕ್ಷೆ ನೀಡಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ವಿಶ್ವಸಂಸ್ಥೆ ಉತ್ತರ ನೀಡದೆ ನುಣುಚಿಕೊಂಡಿದೆ. ‘ಜಾಧವ್ ಪ್ರಕರಣವನ್ನು ವಿಶ್ಲೇಷಿಸುವ, ತೀರ್ಮಾನಿಸುವ ಸ್ಥಿತಿಯಲ್ಲಿ ತಾನಿಲ್ಲ’ ಎಂದು ಅದು ಹೇಳಿದೆ.
“ಜಾಧವ್‌ಗೆ ಪಾಕಿಸ್ಥಾನ ಗಲ್ಲು ಶಿಕ್ಷೆ ನೀಡಿರುವ ಪ್ರಕರಣದಲ್ಲಿ ನಮ್ಮದೇ ಆದ ನಿಲುವನ್ನು ಹೊಂದುವ ಸ್ಥಿತಿಯಲ್ಲಿ ನಾವಿಲ್ಲ; ಈ ಪ್ರಕರಣವನ್ನು ವಿಶ್ಲೇಷಿಸುವ ಸ್ಥಿತಿಯಲ್ಲೂ ನಾವಿಲ್ಲ’ ಎಂದು ವಿಶ್ವಸಂಸ್ಥೆಯ ಮಹಾ ಕಾರ್ಯದರ್ಶಿಗಳ ವಕ್ತಾರ ಸ್ಟೀಫನ್ ಡ್ಯುಜಾರಿಕ್ ಅವರು ಪ್ರಶ°ಕನೋರ್ವನಿಗೆ ನೀಡಿರುವ ಉತ್ತರವನ್ನು ಡಾನ್ ಉಲ್ಲೇಖೀಸಿ ವರದಿ ಮಾಡಿದೆ.
ಭಾರತ – ಪಾಕಿಸ್ಥಾನದ ಒಟ್ಟಂದದ ವಿಚಾರದಲ್ಲಿ ನಾವು ಈಗಲೂ ಒತ್ತಿ ಹೇಳುವುದೇನೆಂದರೆ ಉಭಯ ದೇಶಗಳು ತಮ್ಮೊಳಗಿನ ಎಲ್ಲ ಭಿನ್ನಾಭಿಪ್ರಾಯಗಳನ್ನು ಸೌಹಾರ್ದಯುತ ಮಾತುಕತೆಯ ಮೂಲಕ ಇತ್ಯರ್ಥಪಡಿಸಿಕೊಂಡು ಈ ವಲಯದಲ್ಲಿ ಶಾಂತಿ ಪುನಃಸ್ಥಾಪನೆಗೆ ಯತ್ನಿಸಬೇಕು ಎಂಬುದೇ ಆಗಿದೆ’ ಎಂದು ವಿಶ್ವಸಂಸ್ಥೆ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Dandeli: ಅಪರಿಚಿತ ವಾಹನ ಡಿಕ್ಕಿ; ಕರು ಸಾವು
Covid ಗಿಂತ ಬಿಜೆಪಿ ಭ್ರಷ್ಟಾಚಾರದಿಂದ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ: ಖಂಡ್ರೆ
Delhi: ಕ್ಷುಲ್ಲಕ ಕಾರಣಕ್ಕೆ 19ರ ಯುವಕನ ಗುಂಡಿಕ್ಕಿ ಹ*ತ್ಯೆಗೈದ ಅಪ್ರಾಪ್ತರು!!
BBK11: ಬಿಗ್‌ಬಾಸ್ ಆಟ ನಿಲ್ಲಿಸಿದ ಖ್ಯಾತ ಸ್ಪರ್ಧಿ.. ಈ ವಾರ ಆಚೆ ಬರುವುದು ಇವರೇ
Srinagar; ಉಗ್ರ ವಿರೋಧಿ ಕಾರ್ಯಾಚರಣೆ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ ಬಿಸ್ಕೆಟ್‌ಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.