ಕಾಲಿವುಡ್‌ಗೆ ಕಾಲಿಟ್ಟ ಯತಿರಾಜ್‌


Team Udayavani, Apr 13, 2017, 3:59 PM IST

6.jpg

ಈಗಾಗಲೇ ಕನ್ನಡದ ಬಹುತೇಕ ನಟ, ನಟಿಯರು ಅನ್ಯಭಾಷೆಗೆ ಹೋಗಿದ್ದಾರೆ, ಬಂದಿದ್ದಾರೆ, ಕೆಲವರು ಗುರುತಿಸಿಕೊಂಡಿದ್ದಾರೆ, ಇನ್ನೂ ಕೆಲವರು ಅಲ್ಲೇ ಗಟ್ಟಿ ನೆಲೆಕಂಡಿದ್ದಾರೆ. ಆ ಸಾಲಿಗೆ ಹೊಸ ಸೇರ್ಪಡೆ ನಟ ಯತಿರಾಜ್‌. ಇದುವರೆಗೂ ಕನ್ನಡದಲ್ಲಿ 130ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ, ಬಹುತೇಕ ಸ್ಟಾರ್‌ಗಳ ಜತೆ ಅಭಿನಯಿಸಿರುವ ಯತಿರಾಜ್‌, ಇದೇ ಮೊದಲ ಸಲ ಕಾಲಿವುಡ್‌ಗೆ ಕಾಲಿಟ್ಟಿದ್ದಾರೆ. ಅವರ ಅಭಿನಯದ ಮೊದಲ ತಮಿಳು ಚಿತ್ರದ ಹೆಸರು “ಕಡಂಬನ್‌’ ನಾಳೆ ತೆರೆಕಾಣುತ್ತಿದೆ.

ಈ ಚಿತ್ರಕ್ಕೆ ರಾಘವ ನಿರ್ದೇಶಕರು. ಈ ಹಿಂದೆ ರಾಘವ, ಕನ್ನಡದಲ್ಲಿ “ಮಿ ಮೊಮ್ಮಗ’ ನಿರ್ದೇಶಿಸಿದ್ದರು. ಆ ಚಿತ್ರದಲ್ಲಿ ಯತಿರಾಜ್‌ಗೊಂದು ಪಾತ್ರ ಕೊಟ್ಟಿದ್ದರು. ಅವರ ಅಭಿನಯದ ನೋಡಿದ ನಿರ್ದೇಶಕರಿಗೆ ಯತಿರಾಜ್‌ ಅವರನ್ನು ತಮಿಳು ಚಿತ್ರರಂಗಕ್ಕೆ ಪರಿಚಯಿಸುವ ಆಸೆಯಾಗಿತ್ತು. ರಾಘವ ತಮ್ಮ “ಕಡಂಬನ್‌’ ಚಿತ್ರದಲ್ಲಿ ಯತಿರಾಜ್‌ಗೊಂದು ವಿಶೇಷ ಪಾತ್ರ ಕೊಟ್ಟು ಆಹ್ವಾನವಿತ್ತರು. “ತಮಿಳು ಚಿತ್ರರಂಗಕ್ಕೆ ಹೋಗಲು “ಮಿಸ್ಟರ್‌ ಮೊಮ್ಮಗ’ ನಿರ್ಮಾಪಕ ರವಿ ಗೌಡ ಕಾರಣ’ ಎನ್ನುವುದನ್ನು ಮರೆಯುವುದಿಲ್ಲ ಯತಿರಾಜ್‌.

ಅದೆಲ್ಲಾ ಸರಿ, “ಕಡಂಬನ್‌’ ಚಿತ್ರದಲ್ಲಿ ಯತಿರಾಜ್‌ ಅವರ ಪಾತ್ರವೇನು ಎಂದರೆ, ಅವರಲ್ಲಿ ಕರುಣ ಎಂಬ ಫಾರೆಸ್ಟ್‌ ರೇಂಜರ್‌ ಪಾತ್ರ ನಿರ್ವಹಿಸಿದ್ದಾರೆ. “ಕಳೆದ 2016 ಫೆಬ್ರವರಿಯಲ್ಲಿ ಸ್ಕ್ರೀನ್‌ ಟೆಸ್ಟ್‌ ಆಯಿತು. ಚಿತ್ರದಲ್ಲಿ ಸುಮಾರು 25 ದಿನಗಳ ಕಾಲ ಕೆಲಸ ಮಾಡಿದ್ದೀನಿ. ಇಡೀ ಸಿನಿಮಾ ಕಾಡಿನ ಬ್ಯಾಕ್‌ಡ್ರಾಪ್‌ನಲ್ಲೇ ಸಾಗಲಿದೆ. ಕೊಡೈಕೆನಾಲ್‌, ಕೇರಳದ ವಾಗಮಾನ್‌, ಕೊಚ್ಚಿನ್‌ ಸೇರಿದಂತೆ ಇತರೆ ಗುಡ್ಡಗಾಡು ಪ್ರದೇಶಗಳಲ್ಲಿ ಚಿತ್ರೀಕರಿಸಲಾಗಿದೆ. “ಕಡಂಬನ್‌’ನಲ್ಲಿ ನೆಗೆಟಿವ್‌ ಪಾತ್ರ ಮಾಡಿದ್ದೇನೆ. ಆ ಪಾತ್ರ ಇಡೀ ಸಿನಿಮಾದ ಕೇಂದ್ರ ಬಿಂದು’ ಎಂದು ವಿವರ ಕೊಡುತ್ತಾರೆ ಅವರು. ಸಿನಿಮಾದ ಹೀರೋ ಸೇರಿದಂತೆ ಬಹುತೇಕ ಪಾತ್ರಗಳು, ಯತಿರಾಜ್‌ ಪಾತ್ರದಿಂದ ತೊಂದರೆಗೆ ಒಳಗಾಗುತ್ತವಂತೆ.

ಅಂದಹಾಗೆ, ಇನ್ನೊಂದು ಖುಷಿ ವಿಷಯ ಹೇಳುವ ಯತಿರಾಜ್‌, ಅವರ ಪಾತ್ರಕ್ಕೆ ಅವರೇ ಡಬ್‌ ಮಾಡಿದ್ದಾರಂತೆ. ಮೊದಲ ತಮಿಳು ಚಿತ್ರಕ್ಕೆ ಡಬ್‌ ಮಾಡಿದ್ದು, ಕಲಾವಿದನಾಗಿ ಹೆಮ್ಮೆಯ ವಿಷಯ ಎನ್ನುತ್ತಾರೆ ಅವರು. ಅದಕ್ಕಾಗಿ ಸಾಕಷ್ಟು ತಮಿಳು ಸಿನಿಮಾಗಳನ್ನು ನೋಡಿ, ಮಾತಾಡುವುದನ್ನು ಕಲಿತು ಡಬ್‌ ಮಾಡಿ ಪಾತ್ರಕ್ಕೆ ನ್ಯಾಯ ಸಲ್ಲಿಸುವ ಪ್ರಯತ್ನ ಮಾಡಿದ್ದಾರಂತೆ.ಸದ್ಯ “ಕಡಂಬನ್‌’ ಬಿಡುಗಡೆ ಎದುರು ನೋಡುತ್ತಿರುವ ಯತಿರಾಜ್‌ಗೆ ಅಲ್ಲಿ ಪಾತ್ರ ಮಾಡುವಾಗ ಸಿಕ್ಕ ಮೆಚ್ಚುಗೆಯಲ್ಲೇ ಖುಷಿಗೊಂಡಿದ್ದಾರೆ.

ಟಾಪ್ ನ್ಯೂಸ್

HDK-by-Poll

By Election: ಚನ್ನಪಟ್ಟಣದಲ್ಲಿ ಧರ್ಮ-ಅಧರ್ಮದ ನಡುವೆ ಚುನಾವಣೆ: ಎಚ್‌.ಡಿ.ಕುಮಾರಸ್ವಾಮಿ

Janapada-Academy

Janapada Academy: ಚಿನ್ನಪ್ಪ ಗೌಡಗೆ ಜೀಶಂಪ, ಬೇವಿನಕಟ್ಟಿಗೆ ಗದ್ದಗಿಮಠ ತಜ್ಞ ಪ್ರಶಸ್ತಿ

AANE 2

Elephants; ಮಧ್ಯಪ್ರದೇಶ ಬಳಿಕ ಒಡಿಶಾದಲ್ಲಿ 7 ತಿಂಗಳಿನಲ್ಲಿ 50 ಆನೆಗಳ ಸಾವು

ವಕ್ಫ್  ನೋಟಿಸ್‌ಗೆ ಬಿಜೆಪಿ ಆಕ್ರೋಶ; ರಾಜ್ಯಾದ್ಯಂತ ಮುಖಂಡರು, ಕಾರ್ಯಕರ್ತರ ಪ್ರತಿಭಟನೆ

ವಕ್ಫ್  ನೋಟಿಸ್‌ಗೆ ಬಿಜೆಪಿ ಆಕ್ರೋಶ; ರಾಜ್ಯಾದ್ಯಂತ ಮುಖಂಡರು, ಕಾರ್ಯಕರ್ತರ ಪ್ರತಿಭಟನೆ

Vijayapura-waqf

Waqf Notice: ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅಹೋರಾತ್ರಿ ಧರಣಿ

Congress: ಸುಳ್ಳು ಗ್ಯಾರಂಟಿಗೆ 3 ರಾಜ್ಯ ನಾಶ: ಪ್ರಧಾನಿ ಮೋದಿ

Congress: ಸುಳ್ಳು ಗ್ಯಾರಂಟಿಗೆ 3 ರಾಜ್ಯ ನಾಶ: ಪ್ರಧಾನಿ ಮೋದಿ

PM Modi: ಜನರ ಸಮಸ್ಯೆ ವಿಷಯ ಮಾತಾಡಲಿ: ಮಲ್ಲಿಕಾರ್ಜುನ ಖರ್ಗೆ

PM Modi: ಜನರ ಸಮಸ್ಯೆ ವಿಷಯ ಮಾತಾಡಲಿ: ಮಲ್ಲಿಕಾರ್ಜುನ ಖರ್ಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BBK11: ಅನುಷಾಗೆ ಎಲ್ ಕೆಜಿ ಮಗು ಎಂದ ಚೈತ್ರಾ…

BBK11: ಅನುಷಾಗೆ ಎಲ್ ಕೆಜಿ ಮಗು ಎಂದ ಚೈತ್ರಾ…

Prajwal Devaraj; ಡಿಸೆಂಬರ್‌ ಗೆ ಬರಲಿದೆ ʼರಾಕ್ಷಸʼ

Prajwal Devaraj; ಡಿಸೆಂಬರ್‌ ಗೆ ಬರಲಿದೆ ʼರಾಕ್ಷಸʼ

Mooru Kaasina Kudure movie is in Amazon prime

Mooru Kaasina Kudure: ಅಮೆಜಾನ್‌ ನಲ್ಲಿ ನವ ತಂಡದ ಸಿನಿಮಾ

Shiva Rajkumar’s Bhairathi ranagal sequel will come soon

Shiva Rajkumar: ಬರಲಿದೆ ಭೈರತಿ ರಣಗಲ್‌-2

BBK11: ಬಿಗ್ ಬಾಸ್ ಪಯಣ ಮುಗಿಸಿದ ಮಾನಸ; ಸ್ಪರ್ಧಿಗಳಿಂದ ಕಣ್ಣೀರಿನ ವಿದಾಯ

BBK11: ಬಿಗ್ ಬಾಸ್ ಪಯಣ ಮುಗಿಸಿದ ಮಾನಸ; ಸ್ಪರ್ಧಿಗಳಿಂದ ಕಣ್ಣೀರಿನ ವಿದಾಯ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

HDK-by-Poll

By Election: ಚನ್ನಪಟ್ಟಣದಲ್ಲಿ ಧರ್ಮ-ಅಧರ್ಮದ ನಡುವೆ ಚುನಾವಣೆ: ಎಚ್‌.ಡಿ.ಕುಮಾರಸ್ವಾಮಿ

DK-Shivakuamar

By Poll: ರಣರಂಗವೂ ಇಲ್ಲ, ಚದುರಂಗವೂ ಇಲ್ಲ, ಜನರೇ ಪಟ್ಟಿ ಮಾಡಿ, ಅಂಕ ನೀಡ್ತಾರೆ: ಡಿಕೆಶಿ

Janapada-Academy

Janapada Academy: ಚಿನ್ನಪ್ಪ ಗೌಡಗೆ ಜೀಶಂಪ, ಬೇವಿನಕಟ್ಟಿಗೆ ಗದ್ದಗಿಮಠ ತಜ್ಞ ಪ್ರಶಸ್ತಿ

High-Court

Order: ಶಿರೂರು ಗುಡ್ಡ ಕುಸಿತ: 2 ತಿಂಗಳೊಳಗೆ 5 ಲ.ರೂ. ಪರಿಹಾರಕ್ಕೆ ಹೈಕೋರ್ಟ್‌ ಸೂಚನೆ

current

Power cut shock:ಅದಾನಿ ಕಂಪೆನಿಗೆ ಬಾಂಗ್ಲಾ ಪಾವತಿ ಶುರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.