ಪಾನ್ಪೋರ್ಟಲ್ಲಿ ಹೆಸರು ಬದಲಿಸಬೇಕಾಗಿಲ್ಲ
Team Udayavani, Apr 13, 2017, 11:39 PM IST
ಮುಂಬೈ: ಕಳೆದ ತಿಂಗಳು ಮದುವೆಯಾಯಿತು. ಪತಿ ಜತೆ ಅಮೆರಿಕಕ್ಕೆ ಹೊರಡಬೇಕು. ಪಾಸ್ಪೋರ್ಟ್ನಲ್ಲಿ ಹೆಸರು ಬದಲಿಸಬೇಕು ಎಂದೆಲ್ಲ ಪರಿತಪಿಸುವ ನವ ವಿವಾಹಿತ ಮಹಿಳೆಯರಿಗೆ ಪ್ರಧಾನಿ ನರೇಂದ್ರ ಮೋದಿ ಸಂತೋಷದ ಸುದ್ದಿ ನೀಡಿದ್ದಾರೆ. ಪಾಸ್ಪೋರ್ಟಲ್ಲಿ ಹಾಲಿ ಹೆಸರನ್ನೇ ಉಳಿಸಿಕೊಳ್ಳಬಹುದು ಹಾಗೂ ಪಾಸ್ಪೋರ್ಟ್ ಪಡೆಯುವಾಗ ವಿವಾಹ ನೋಂದಣಿ ಪ್ರಮಾಣಪತ್ರ ಕಡ್ಡಾಯವಲ್ಲ ಎಂದು ಹೇಳಿದ್ದಾರೆ. ಭಾರತೀಯ ವ್ಯಾಪಾರಿಗಳ ಮಹಿಳಾ ವಿಭಾಗ ಮುಂಬೈನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಈ ಮಾಹಿತಿ ನೀಡಿದ್ದಾರೆ.
ಮಹಿಳೆಯರು ಅಭಿವೃದ್ಧಿ ಯೋಜನೆಗ ಳಲ್ಲಿ ಕೇಂದ್ರ ಸ್ಥಾನದ ಲ್ಲಿರಬೇಕೆಂದು ಸರ್ಕಾರ ಬಯಸುತ್ತದೆ. ಇದಕ್ಕಾಗಿಯೇ ಮುದ್ರಾ, ಉಜ್ವಲ ಇತ್ಯಾದಿ ಯೋಜನೆಗಳನ್ನು ಹಮ್ಮಿಕೊಳ್ಳ ಲಾಗಿದೆ. ಇದರೊಂದಿಗೆ ಪಾಸ್ಪೋರ್ಟ್ನಲ್ಲಿ ವಿವಾಹಿತರಾದ ಬಳಿಕ ಹೆಸರು ಬದಲಿಸಬೇಕಾದ ಅಗತ್ಯವಿಲ್ಲ ಎಂದು ಹೇಳಿದರು. ಅಡುಗೆ ಅನಿಲ ಹಿಂದಿರುಗಿಸುವ ಯೋಜನೆ ಅಡಿಯಲ್ಲಿ ಸ್ವಯಂ ಪ್ರೇರಿತರಾಗಿ 12 ಕೋಟಿ ಮಂದಿ ಸಂಪರ್ಕ ವಾಪಸ್ ನೀಡಿದ್ದಾರೆ. ಮಹಿಳೆಯರ ಉದ್ಯಮಶೀಲತೆ ಪ್ರಶಂಸಿಸಿದ ಪ್ರಧಾನಿ ಲಿಜ್ಜತ್ ಹಪ್ಪಳ ಮತ್ತು ಅಮುಲ್ ಮಹಿಳೆಯ ಭಾಗೀದಾರಿಕೆಯಿಂದ ಯಶಸ್ವಿಯಾದ ಉದ್ದಿಮೆಗಳು ಎಂದು ಕೊಂಡಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.