ISIS ಉಗ್ರರ ಮೇಲೆ ಅಮೆರಿಕಾದಿಂದ ಮದರ್‌ ಆಫ್ ಆಲ್‌ ಬಾಂಬ್‌!

Team Udayavani, Apr 14, 2017, 9:02 AM IST

10.jpg

ವಾಷಿಂಗ್ಟನ್‌: ಕುಖ್ಯಾತ ಉಗ್ರ ಸಂಘಟನೆ ಐಸಿಸ್‌ ವಿರುದ್ಧದ ಕಾರ್ಯಾಚರಣೆಯಲ್ಲಿ ಇದೇ ಮೊದಲ ಬಾರಿಗೆ ಅಮೆರಿಕ ವಿಶ್ವದಲ್ಲೇ ಅತಿ ದೊಡ್ಡದಾದ ಸಾಂಪ್ರದಾಯಿಕ ಬಾಂಬ್‌ (ಮದರ್‌ ಆಫ್ ಆಲ್‌ ಬಾಂಬ್‌) ಒಂದನ್ನು ಪ್ರಯೋಗಿಸಿದೆ. ಡೊನಾಲ್ಡ್‌ ಟ್ರಂಪ್‌ ಅಮೆರಿಕ ಅಧ್ಯಕ್ಷರಾದ ಬಳಿಕ ಇದೇ ಮೊದಲ ಬಾರಿಗೆ ಭಾರೀ ಪ್ರಮಾಣದ ಬಾಂಬ್‌ ಪ್ರಯೋಗದ ನಿರ್ಧಾರ ಕೈಗೊಳ್ಳಲಾಗಿದೆ.

36 ಮಂದಿ ಉಗ್ರರು ಹತ್ಯೆಗೀಡಾಗಿರುವ ಬಗ್ಗೆ  ಶುಕ್ರವಾರ ಆಫ್ಘಾನಿಸ್ತಾನದ ರಕ್ಷಣಾ ಸಚಿವಾಲಯ ತಿಳಿಸಿದೆ.  ಸಚಿವಾಲಯದ ವಕ್ತಾರ ಮಹಮದ್‌ ರದ್‌ಮಿಶ್‌ ಸುದ್ದಿಗಾರರೊಂದಿಗೆ ಮಾತನಾಡಿ ದಾಳಿಯಲ್ಲಿ ದೊಡ್ಡ ಪ್ರಮಾಣದ ಲ್ಲಿ  ಉಗ್ರರ  ಶಸ್ತ್ರಾಸ್ತ್ರಗಳು  ಮತ್ತು ಮದ್ದುಗುಂಡುಗಳು ನಾಶಗೊಂಡಿರುವುದಾಗಿ ತಿಳಿಸಿದ್ದಾರೆ.

ಅಮೆರಿಕ ಪ್ರಯೋಗಿಸಿದ ಬಾಂಬ್‌ ಪರಮಾಣು ಬಾಂಬ್‌ಗಳ ಹೊರತಾದ ಅತಿ ಸಾಮರ್ಥ್ಯದ ಬಾಂಬ್‌ ಇದಾಗಿದ್ದು, ಆಫ್ಘಾನಿಸ್ತಾನದ ನಂಗರ್‌ಹಾರ್‌ ಪ್ರಾಂತ್ಯದ ಅಚಿನ್‌ ಜಿಲ್ಲೆಯಲ್ಲಿರುವ ಐಸಿಸ್‌ನ ಅಡಗುದಾಣದ ಮೇಲೆ ಈ ಬಾಂಬ್‌ ಹಾಕಲಾಗಿದೆ. ಇಲ್ಲಿ ಐಸಿಸ್‌ ಉಗ್ರರು ಗುಹೆಯಲ್ಲಿ ಅಡಗಿಕೊಂಡಿದ್ದಾರೆ ಎನ್ನಲಾಗಿದೆ.

ಜಿಬಿಯು-43/ಬಿ (ಮಾಬ್‌) ಹೆಸರಿನ, ಬರೋಬ್ಬರಿ 9787 ಕೇಜಿ ತೂಕದ ಭಾರೀ ದೊಡ್ಡ ಬಾಂಬ್‌ ಇದಾಗಿದ್ದು, ಸ್ಥಳೀಯ ಕಾಲಮಾನ 7 ಗಂಟೆಗೆ ಅದನ್ನು ಪ್ರಯೋಗಿಸಲಾಗಿದೆ. ಎಮ್‌ ಸಿ-130 ಸರಕು ಸಾಗಣೆ ವಿಮಾನದಿಂದ ಇದನ್ನು ಪ್ರಯೋಗಿಸಲಾಗಿದೆ ಎಂದು ಅಮೆರಿಕ ಮಿಲಿಟರಿ ಹೇಳಿಕೊಂಡಿದೆ. ಬಾಂಬ್‌ ಸುರಿದ ಜಾಗದಲ್ಲಿ ಆದ ಹಾನಿ ಎಷ್ಟು? ಅಲ್ಲಿದ್ದ ಉಗ್ರರ ಸರ್ವನಾಶವಾಗಿದೆಯೇ? ಎಂಬ ವಿಚಾರಗಳ ಬಗ್ಗೆ ಇನ್ನಷ್ಟೇ ಪರಿಶೀಲನೆ ನಡೆಸಬೇಕಿದೆ. ಆಫ್ಘಾನಿಸ್ತಾನದಲ್ಲಿನ ಅಮೆರಿಕ ಮಿಲಿಟರಿ ಮುಖ್ಯಸ್ಥ ಜ.ಜಾನ್‌ ನಿಕೊಲ್ಸನ್‌ ಈ ಬಾಂಬ್‌ ಪ್ರಯೋಗಿಸುವ ನಿರ್ಣಯಕ್ಕೆ ಸಹಿ ಹಾಕಿದ್ದಾರೆ ಎಂದು ಪೆಂಟಗಾನ್‌ ಮೂಲಗಳು ಹೇಳಿವೆ.

ಏನಿದು ಮಾಬ್‌ ಬಾಂಬ್‌? 

ಸದ್ಯ ವಿಶ್ವದಲ್ಲೇ ಅತಿ ದೊಡ್ಡದಾದ ಸಾಂಪ್ರದಾಯಿಕ ಬಾಂಬ್‌. ಬಾಂಬ್‌ಗಳ ತಾಯಿ ಬಾಂಬ್‌ (ಮದರ್‌ ಆಫ್ ಆಲ್‌ ಬಾಂಬ್‌) ಎಂದೇ ಇದಕ್ಕೆ ಹೆಸರು. ಅಮೆರಿಕದ ಏರ್‌ಫೋರ್ಸ್‌ ಸಂಶೋಧನಾ ಕೇಂದ್ರ 2003ರಲ್ಲಿ ಇರಾಕ್‌ ಯುದ್ಧ ಸಂದರ್ಭ ಇದನ್ನು ತಯಾರಿಸಿದೆ.ಯುದ್ಧ ಪ್ರದೇಶದಲ್ಲಿ ಪ್ರಯೋಗವಾಗುತ್ತಿರುವುದು ಈ ಬಾಂಬ್‌ ಇದೇ ಮೊದಲು.

ಜಿಪಿಎಸ್‌ ನಿರ್ದೇಶನ ವ್ಯವಸ್ಥೆ ಇದರಲ್ಲಿದೆ. ದೊಡ್ಡ ಬಾಂಬರ್‌ ವಿಮಾನಗಳಲ್ಲಿ ಸರಕು ಸಾಗಣೆ ವಿಮಾನಗಳಲ್ಲಿ ಇದನ್ನು ಪ್ರಯೋಗಿಸಬಹುದು. 30 ಅಡಿ ಉದ್ದವಿರುವ ಈ ಬಾಂಬ್‌, 8164 ಕೇಜಿ ಸ್ಫೋಟಕವನ್ನು ಹೊಂದಿರುತ್ತದೆ. ಸ್ಫೋಟವಾದ ಸುಮಾರು 32 ಕಿ.ಮೀ.ಗಳಷ್ಟು ವ್ಯಾಪ್ತಿಯಲ್ಲಿ ಪರಿಣಾಮ ಬೀರುತ್ತದೆ. ಜೊತೆಗೆ 300 ಮೀ. ವಿಸ್ತಾರಕ್ಕೆ ದೊಡ್ಡ ಕುಳಿ ಉಂಟುಮಾಡಬಲ್ಲದು.

ಅಮೆರಿಕದ ಫ್ಲೋರಿಡಾದ ಎಲ್‌ಗಿನ್‌ ವಾಯುನೆಲೆಯಲ್ಲಿ 2003ರಲ್ಲಿ ಇದರ ಪರೀಕ್ಷೆ ಮೊದಲ ಬಾರಿಗೆ ನಡೆಸಲಾಗಿತ್ತು. ಬಳಿಕ ಇರಾಕ್‌ ಯುದ್ಧ ವೇಳೆ ಬಾಂಬ್‌ ಸಾಗಿಸಲಾಗಿದ್ದರೂ ಪ್ರಯೋಗಿಸಿರಲಿಲ್ಲ. ಅಮೆರಿಕದ ವಾಯುಪಡೆ, ಬ್ರಿಟನ್‌ ವಾಯುಪಡೆಗಳ ಬತ್ತಳಿಕೆಯಲ್ಲಿ ಈ ಬಾಂಬ್‌ ಇದೆ.

ನಂಗರ್‌ಹಾರ್‌ ಪ್ರಾಂತ್ಯ ಎಲ್ಲಿದೆ?
ಆಫ್ಘಾನಿಸ್ತಾನದ 34 ಪ್ರಾಂತ್ಯಗಳಲ್ಲಿ ಇದೂ ಒಂದು. ಪೂರ್ವ ದಿಕ್ಕಿನಲ್ಲಿ ಪಾಕಿಸ್ತಾನದ ಗಡಿಗೆ ತಾಗಿಕೊಂಡಂತೆ ಈ ಪ್ರಾಂತ್ಯವಿದೆ. ಜಲಲಾಬಾದ್‌ ಇದರ ರಾಜಧಾನಿ. 7727 ಕಿ.ಮೀ. ವಿಸ್ತಾರದಲ್ಲಿ ಈ ಪ್ರಾಂತ್ಯವಿದೆ. 

ಬಾಂಬ್‌ ಹೇಗಿದೆ?
9,797ಕೆಜಿ ತೂಕ
30ಅಡಿ ಉದ್ದ
8,164ಕೆಜಿ ಸ್ಫೋಟಕ
2003ರಲ್ಲಿ ಮೊದಲ ಪರೀಕ್ಷೆ
32 ಕಿ.ಮೀ. ದೂರಕ್ಕೆ ಪರಿಣಾಮ
300 ಮೀ. ವ್ಯಾಪ್ತಿಯ ಕುಳಿ
ಜಿಪಿಎಸ್‌ ನಿರ್ದೇಶನ ವ್ಯವಸ್ಥೆ

ಟಾಪ್ ನ್ಯೂಸ್

142

Laddu Mutya: ಬದುಕು ಅರಳಿಸಿದ ಬಾಗಲಕೋಟೆಯ ಭಗವಂತ: ತಮಾಷೆಯ ವಸ್ತುವಲ್ಲ ಲಡ್ಡು ಮುತ್ಯಾ

K L RAhul

KL Rahul; ಗಾಯದ ಚಿಂತೆ ನಿವಾರಿಸಲು ನೆಟ್‌ನಲ್ಲಿ ಬ್ಯಾಟಿಂಗ್: ಬ್ಯಾಕ್-ಅಪ್ ಆಗಿ ಪಡಿಕ್ಕಲ್

Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ

Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ

Kantara Chapter 1: ರಿಷಬ್‌ ಶೆಟ್ಟಿ ʼಕಾಂತಾರ ಚಾಪ್ಟರ್‌ -1ʼ ರಿಲೀಸ್ ಗೆ ಡೇಟ್‌ ಪಿಕ್ಸ್

Kantara Chapter 1: ರಿಷಬ್‌ ಶೆಟ್ಟಿ ʼಕಾಂತಾರ ಚಾಪ್ಟರ್‌ -1ʼ ರಿಲೀಸ್ ಗೆ ಡೇಟ್‌ ಫಿಕ್ಸ್

1-wewrewre

The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ

BBK11: ಬಿಗ್‌ ಬಾಸ್‌ ಮನೆಗೆ ವೈಲ್ಡ್‌ ಕಾರ್ಡ್ ಸ್ಪರ್ಧಿ; ಅಬ್ಬರಿಸುತ್ತಲೇ ದೊಡ್ಮನೆಗೆ ಎಂಟ್ರಿ

BBK11: ಬಿಗ್‌ ಬಾಸ್‌ ಮನೆಗೆ ವೈಲ್ಡ್‌ ಕಾರ್ಡ್ ಸ್ಪರ್ಧಿ; ಅಬ್ಬರಿಸುತ್ತಲೇ ದೊಡ್ಮನೆಗೆ ಎಂಟ್ರಿ

Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ

Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-USAA

America; ಭಾರತಕ್ಕೆ 84.40 ಕೋ.ರೂ. ಮೌಲ್ಯದ 1,400 ಕಲಾಕೃತಿ ವಾಪಸ್‌

north

Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್‌ ಪರೀಕ್ಷೆ

Iran: ಹಿಜಾಬ್‌ ನಿರಾಕರಿಸಿದರೆ ವಿಶೇಷ ಕ್ಲಿನಿಕ್‌: ಇರಾನ್‌ ತೀರ್ಮಾನಕ್ಕೆ ಆಕ್ರೋಶ

Iran: ಹಿಜಾಬ್‌ ನಿರಾಕರಿಸಿದರೆ ವಿಶೇಷ ಕ್ಲಿನಿಕ್‌: ಇರಾನ್‌ ತೀರ್ಮಾನಕ್ಕೆ ಆಕ್ರೋಶ

ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್‌ಗೆ ಕ್ಲೀನ್‌ಚಿಟ್‌

Canada: ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್‌ಗೆ ಕ್ಲೀನ್‌ಚಿಟ್‌

1-wqewq

UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

142

Laddu Mutya: ಬದುಕು ಅರಳಿಸಿದ ಬಾಗಲಕೋಟೆಯ ಭಗವಂತ: ತಮಾಷೆಯ ವಸ್ತುವಲ್ಲ ಲಡ್ಡು ಮುತ್ಯಾ

K L RAhul

KL Rahul; ಗಾಯದ ಚಿಂತೆ ನಿವಾರಿಸಲು ನೆಟ್‌ನಲ್ಲಿ ಬ್ಯಾಟಿಂಗ್: ಬ್ಯಾಕ್-ಅಪ್ ಆಗಿ ಪಡಿಕ್ಕಲ್

Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ

Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ

Kantara Chapter 1: ರಿಷಬ್‌ ಶೆಟ್ಟಿ ʼಕಾಂತಾರ ಚಾಪ್ಟರ್‌ -1ʼ ರಿಲೀಸ್ ಗೆ ಡೇಟ್‌ ಪಿಕ್ಸ್

Kantara Chapter 1: ರಿಷಬ್‌ ಶೆಟ್ಟಿ ʼಕಾಂತಾರ ಚಾಪ್ಟರ್‌ -1ʼ ರಿಲೀಸ್ ಗೆ ಡೇಟ್‌ ಫಿಕ್ಸ್

1-wewrewre

The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.