“ಕುಡ್ಲ’ ರೈಲು ಮಂಗಳೂರು ಸೆಂಟ್ರಲ್‌ಗೆ ತರಿಸಲು ಕೋರ್ಟ್‌ಗೆ’
Team Udayavani, Apr 14, 2017, 11:37 AM IST
ಉಡುಪಿ: ಬೆಂಗಳೂರು ಸಿಟಿ ಜಂಕ್ಷನ್ – ಮಂಗಳೂರು ಸೆಂಟ್ರಲ್ ರೈಲನ್ನು ಯಶವಂತಪುರ – ಮಂಗಳೂರು ಜಂಕ್ಷನ್ ಆಗಿ ಮಾಡಿರುವುದು ಹೈಕೋರ್ಟ್ ತೀರ್ಪಿಗೆ ವಿರುದ್ಧವಾಗಿದೆ.
ಈ ಬಗ್ಗೆ ಸದ್ಯದಲ್ಲಿಯೇ ಮಂಗಳೂರು ಪಶ್ಚಿಮ ರೈಲ್ವೇ ಅಭಿವೃದ್ಧಿ ಸಮಿತಿ ಅಧ್ಯಕ್ಷ ಹನುಮಂತ ಕಾಮತ್ ಸಭೆ ಕರೆದು ತಕ್ಕ ನಿರ್ಣಯ ತೆಗೆದುಕೊಂಡು ನ್ಯಾಯಾಲಯದಲ್ಲಿ ಪುನರ್ವಿಮರ್ಶೆ ಪ್ರತಿ ಅರ್ಜಿಯನ್ನು ದಾಖಲು ಮಾಡಿ ನ್ಯಾಯಕ್ಕಾಗಿ ಹೋರಾಡುತ್ತೇವೆ ಎಂದು ಉಡುಪಿ ರೈಲ್ವೇ ಯಾತ್ರಿಕರ ಸಂಘದ ಅಧ್ಯಕ್ಷ ಅರ್.ಎಲ್. ಡಯಾಸ್ ತಿಳಿಸಿದ್ದಾರೆ.
2015ಧಿ16ರ ವೇಳಾಪಟ್ಟಿಯಲ್ಲಿ ಬೆಂಗಳೂರು ಸಿಟಿ ಜಂಕ್ಷನ್‌ನಿಂದ ಮಂಗಳೂರು ಸೆಂಟ್ರಲ್‌ಗೆ ಎಂದು ಪ್ರಕಟವಾಗಿತ್ತು. ಈಗ ಇದನ್ನು ಬದಲಾಯಿಸಿದರು. ನಾವು ಉಚ್ಚ ನ್ಯಾಯಾಲಯದಲ್ಲಿ ಹೂಡಿದ ರಿಟ್ ಅರ್ಜಿಯಿಂದಾಗಿ ರೈಲ್ವೇಯವರು ರೈಲು ಆರಂಭಿಸಿದರು. ಇತ್ತೀಚೆಗೆ ನಡೆದ ಉದ್ಘಾಟನಾ ಸಮಾರಂಭದಲ್ಲಿ ಸದಾನಂದ ಗೌಡ, ನಳಿನ್ ಕುಮಾರ್ ಕಟೀಲು, ಐವನ್ ಡಿ’ಸೋಜಾ, ಜೆ.ಆರ್. ಲೋಬೊ, ನೈಋತ್ಯ, ಸದರ್ನ್, ಕೊಂಕಣ ರೈಲ್ವೇ ಅಧಿಕಾರಿಗಳಿದ್ದರು. ಈ ರೈಲನ್ನು ತಾವು ಪ್ರಾರಂಭಿಸಿದ್ದಾಗಿ ಸಚಿವರು, ಸಂಸದರೇ ಮೊದಲಾದವರು ಹೇಳಿದರೆ ವಿನಾ ರೈಲು ಪ್ರಾರಂಭವಾಗಲು ಉಚ್ಚ ನ್ಯಾಯಾಲಯದಲ್ಲಿ ರೈಲ್ವೇ ಯಾತ್ರಿಕರ ಸಂಘ ಹಾಕಿದ್ದ ರಿಟ್ ಅರ್ಜಿಯ ತೀರ್ಪು ಕಾರಣ ಎಂದು ಹೇಳಲೇ ಇಲ್ಲ. ನಾನು ವೇದಿಕೆಯಲ್ಲಿ ಮಾತನಾಡಲು ಬಂದಾಗ ವೇದಿಕೆ ಏರಲು ಬಿಡಲಿಲ್ಲ. ಕಡೆಗೆ ಪ್ರಯತ್ನ ಪಟ್ಟು ವೇದಿಕೆ ಏರಿ ಮಾತನಾಡಲು ಪ್ರಾರಂಭಿಸಿದಾಗ ಸಮಾರಂಭದ ಪ್ರಾಯೋಜಕರು ಮೈಕ್ ಲೈನ್ ಕಡಿತ ಮಾಡಿ ನನಗೆ ಅವಮಾನ ಮಾಡಿದರು ಎಂದು ಡಯಾಸ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು
By Election: ಕೊಪ್ಪಳ ನಗರಸಭೆ ಉಪಚುನಾವಣೆ… ಕಮಲಕ್ಕೊಂದು ಕೈಗೊಂದು ಗೆಲುವು
Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ
Crime: ಶೀಲ ಶಂಕಿಸಿ ಪತ್ನಿಯ ಹತ್ಯೆಗೈದಿದ್ದ ಪತಿಯನ್ನು ವಶಕ್ಕೆ ಪಡೆದ ಪೊಲೀಸರು
Leopard: ನೆಲಮಂಗಲ ಸಮೀಪ ಚಿರತೆ ಸೆರೆ: ನರಭಕ್ಷಕ ಇದೇನಾ? ವರದಿ ನಿರೀಕ್ಷೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.