ದೇಶಭಕ್ತಿ ವಿಚಾರದಲ್ಲಿ ವಾರಸುದಾರಿಕೆ ಬೇಕಿಲ್ಲ

Team Udayavani, Apr 14, 2017, 11:49 AM IST

chandrashekar-pati.jpg

ಕೆಂಗೇರಿ: ಅಂಬೇಡ್ಕರ್‌ ಅವರನ್ನು ದಲಿತರಿಂದ, ಬಸವಣ್ಣ ಅವರನ್ನು ವೀರಶೈವರಿಂದ, ಕುವೆಂಪು ಅವರನ್ನು ಒಕ್ಕಲಿಗರಿಂದ ಬಿಡುಗಡೆಗೊಳಿಸಿ ವಿಶ್ವಮಾನವರನ್ನಾಗಿ ನೋಡುವ ಪ್ರವೃತ್ತಿ ಬೆಳಯಬೇಕಾದ ಅಗತ್ಯವಿದೆ. ಜತೆಗೆ ದೇಶ ಭಕ್ತಿಯ ವಿಚಾರದಲ್ಲಿ ವಾರಸುದಾರಿಕೆ ಸರಿಯಲ್ಲ  ಎಂದು ಸಾಹಿತಿ ಚಂದ್ರಶೇಖರ್‌ ಪಾಟೀಲ್‌ ಅಭಿಪ್ರಾಯಪಟ್ಟಿದ್ದಾರೆ. 

ಅಂಬೇಡ್ಕರ್‌ ತಾಂತ್ರಿಕ ಮಹಾ ವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ಚಾರುಪ್ರಕಾಶನದ “ಅಂಬೇಡ್ಕರ್‌ ಕಾವ್ಯ’ ಕೃತಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು,  “ಇಡೀ ದೇಶದಲ್ಲಿ ಹೊಸ ರೀತಿಯ ರಾಷಿŒàಯ ಸಂಸ್ಕೃತಿ ಪರಿಕಲ್ಪನೆ ಶುರುವಾಗಿದೆ. ಕೇವಲ ಒಂದು ವರ್ಗ ನಾವೇ ಸಂಸ್ಕೃತಿಯ ವಾರಸುದಾರರು ಎನ್ನುವ ಮನೋಧರ್ಮ ಹೊಂದಿದ್ದಾರೆ. ಈ ರೀತಿ ಆಲೋಚನೆಗಳು ಸರಿ ಅಲ್ಲ. ಎಲ್ಲರಿಗೂ ರಾಷ್ಟ್ರದ ಬಗ್ಗೆ ಅಭಿಮಾನವಿದೆ,’ ಎಂದರು.

“ಜಾಗತೀಕರಣ, ಉದಾರೀಕರಣ, ಇತ್ತೀಚೆಗಿನ ಕೇಸರೀಕರಣ ದೇಶದ ದಲಿತರ ದಮನಿತರ ಬಾಳಿನಲ್ಲಿ ಬೆಳಕು ತಂದಿಲ್ಲ. ಬುದ್ಧ, ಬಸವಣ್ಣ ಅಂಬೇಡ್ಕರ್‌, ಪೆರಿಯರ್‌ರವರ ಅರಿವಿನ ಮಾರ್ಗವೇ ದಲಿತರ ದಮನಿತರ ಬಾಳಿನ ವಿಮೋಚನೆ ಮಾರ್ಗ,’ಎಂದು ಪ್ರತಿಪಾದಿಸಿದರು.

ಡಾ.ಬಂಜಗೆರೆ ಜಯಪ್ರಕಾಶ್‌ ಮಾತನಾಡಿ “ಅಂಬೇಡ್ಕರ್‌ ಎಲ್ಲರಿಗೂ ಗೊತ್ತು. ಆದರೆ ಅವರ ವಿಚಾರಧಾರೆಗಳ ಅರಿವಿಲ್ಲ. ರಾಮಾಯಣ ಮುಗಿದಿದೆ. ಈಗ ಭೀಮಾಯಣ ಪ್ರಾರಂಭವಾಗಿದೆ. ಯುವ ಜನಾಂಗ ಮಾನವೀಯತೆ, ಸ್ವಾಭಿಮಾನ, ವಿವೇಕವನ್ನು ರೂಢಿಸಿಕೊಂಡು ಸಾಮಾಜಿಕ ನ್ಯಾಯದ ಪರವಾಗಿ ಕಾರ್ಯನಿರ್ವಹಿಸಿದಾಗ ಮಾತ್ರ ದೇಶದ ಪ್ರಗತಿಗೆ ಮಹತ್ವ ಹೆಚ್ಚುತ್ತದೆ,’ ಎಂದರು.

ಲೇಖಕ ಎಸ್‌.ಶಿವಮಲ್ಲು, ಪಿವಿಪಿ ಕಲ್ಯಾಣದತ್ತಿಯ ಕಾರ್ಯದರ್ಶಿ ಎ.ಅರ್‌.ಕೃಷ್ಣಮೂರ್ತಿ, ಖಜಾಂಚಿ ಪಿ.ಎಲ್‌.ನಂಜುಂಡ ಸ್ವಾಮಿ, ಧರ್ಮದರ್ಶಿ ಡಾ.ಎಸ್‌.ಚಿನ್ನಸ್ವಾಮಿ, ಡಾ.ಅಂಬೇಡ್ಕರ್‌ ತಾಂತ್ರಿಕ ಮಹಾವಿದ್ಯಾಲ ಯದ ಪ್ರಾಂಶುಪಾಲ ಡಾ.ಸಿ. ನಂಜುಂಡಸ್ವಾಮಿ, ಚಾರುಪ್ರಕಾಶನ ಸಂಸ್ಥೆಯ ಪಾರ್ವತೀಶ್‌ ಬಿಳಿದಾಳೆ ಇದ್ದರು. 

ಕವಿ ಸಿದ್ದಲಿಂಗಯ್ಯ ವಿನೋದ
“ಕವಿಗಳು ಅಷ್ಟು ವ್ಯವಹಾರಸ್ಥರಲ್ಲ. ಮನೆಯಲ್ಲೂ ಒಳ್ಳೆ ಅಭಿಪ್ರಾಯವಿಲ್ಲ. ರೋಡ್‌ನ‌ಲ್ಲಿ ಹೋಗ್ತಾ ಇದ್ದರೆ, ಆಕಾಶದಲ್ಲಿ ಚಂದ್ರನ ನೋಡ್ತಾ ಹಾಗೆಯೇ ಮೈಮರೆ ಯುತ್ತಾರೆ. ಅಂಗಡಿಗೆ ಹೋದರೆ ಚಿಲ್ಲರೆ ಬಿಟ್ಟು ಬರುತ್ತಾರೆ,’ ಎಂದು ಹೇಳುವ ಮೂಲಕ ಕವಿ ಸಿದ್ದಲಿಂಗಯ್ಯ ಸಮಾರಂಭದಲ್ಲಿ ನಗೆ ಹೊನಲು ಹರಿಸಿದರು. 

ಟಾಪ್ ನ್ಯೂಸ್

ESI Hospital : ಕೋಲ್ಕತ್ತಾದ ಇಎಸ್‌ಐ ಆಸ್ಪತ್ರೆಯಲ್ಲಿ ಅಗ್ನಿ ಅವಘಡ… ಓರ್ವ ರೋಗಿ ಮೃತ್ಯು

ESI Hospital: ಬೆಳ್ಳಂಬೆಳಗ್ಗೆ ಇಎಸ್‌ಐ ಆಸ್ಪತ್ರೆಯಲ್ಲಿ ಅಗ್ನಿ ಅವಘಡ… ರೋಗಿ ಮೃತ್ಯು

Bhavani Revanna: ಅಪಹರಣ ಕೇಸ್-ಭವಾನಿ ರೇವಣ್ಣ ಜಾಮೀನು ರದ್ದತಿಗೆ ಸುಪ್ರೀಂ ನಕಾರ

Bhavani Revanna: ಅಪಹರಣ ಕೇಸ್-ಭವಾನಿ ರೇವಣ್ಣ ಜಾಮೀನು ರದ್ದತಿಗೆ ಸುಪ್ರೀಂ ನಕಾರ

4-bng-crime

Bengaluru: ಪತಿ, ಪ್ರಿಯಕರನ ಕೊಂದು ಪತಿ ಆತ್ಮಹತ್ಯೆ!

INDvsNZ: Dhruv Jurel wicket-keeping instead of Pant; What’s up with Rishabh Pant?

INDvsNZ: ಪಂತ್‌ ಬದಲು ಧ್ರುವ್ ಜುರೆಲ್‌ ವಿಕೆಟ್‌ ಕೀಪಿಂಗ್;‌ ರಿಷಭ್‌ ಪಂತ್‌ ಗೆ ಏನಾಗಿದೆ?

Thirthahalli: ವಿದ್ಯಾರ್ಥಿಯ ಮೇಲೆ ಹರಿದ ಪ್ರವಾಸಿಗರ ಬಸ್;‌ ವಿದ್ಯಾರ್ಥಿ ಸಾವು

Thirthahalli: ವಿದ್ಯಾರ್ಥಿಯ ಮೇಲೆ ಹರಿದ ಪ್ರವಾಸಿಗರ ಬಸ್;‌ ವಿದ್ಯಾರ್ಥಿ ಸಾವು

Mudhol: ಬೆಳ್ಳಂಬೆಳಗ್ಗೆ ಅಬ್ಬರಿಸಿದ ಮಳೆರಾಯ… ಜನಜೀವನ ಅಸ್ತವ್ಯಸ್ತ

Mudhol: ವಾರದ ಸಂತೆಗೆ ಮಳೆರಾಯನ ಕಾಟ… ಜನಜೀವನ ಅಸ್ತವ್ಯಸ್ತ

Manipur: ಸಿಎಂ ಬಿರೇನ್ ಸಿಂಗ್ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿ ಶಾಸಕರಿಂದ ಪ್ರಧಾನಿಗೆ ಪತ್ರ

Manipur: ಸಿಎಂ ಬಿರೇನ್ ಸಿಂಗ್ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿ ಶಾಸಕರಿಂದ ಪ್ರಧಾನಿಗೆ ಪತ್ರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4-bng-crime

Bengaluru: ಪತಿ, ಪ್ರಿಯಕರನ ಕೊಂದು ಪತಿ ಆತ್ಮಹತ್ಯೆ!

Bengaluru: ರಾಜಕಾಲುವೆ ಒತ್ತುವರಿಯೇ ಅವಾಂತರಕ್ಕೆ ಕಾರಣ; ಆಯುಕ್ತ

Bengaluru: ರಾಜಕಾಲುವೆ ಒತ್ತುವರಿಯೇ ಅವಾಂತರಕ್ಕೆ ಕಾರಣ; ಆಯುಕ್ತ

Bengalruru Rain: ಬಿಬಿಎಂಪಿ ಕಳಪೆ ಕಾಮಗಾರಿ ಬಿಚ್ಚಿಟ್ಟ ಮಳೆ

Bengalruru Rain: ಬಿಬಿಎಂಪಿ ಕಳಪೆ ಕಾಮಗಾರಿ ಬಿಚ್ಚಿಟ್ಟ ಮಳೆ

5

Bengaluru Rain: ಮಳೆಗೆ 4 ಬಡಾವಣೆ ನಿವಾಸಿಗಳ ಗುಳೆ!

3

Bengaluru Airport: ನಗರದಲ್ಲಿ ಶೀಘ್ರವೇ ಏರ್‌ಟ್ಯಾಕ್ಸಿ ಸೇವೆ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

ESI Hospital : ಕೋಲ್ಕತ್ತಾದ ಇಎಸ್‌ಐ ಆಸ್ಪತ್ರೆಯಲ್ಲಿ ಅಗ್ನಿ ಅವಘಡ… ಓರ್ವ ರೋಗಿ ಮೃತ್ಯು

ESI Hospital: ಬೆಳ್ಳಂಬೆಳಗ್ಗೆ ಇಎಸ್‌ಐ ಆಸ್ಪತ್ರೆಯಲ್ಲಿ ಅಗ್ನಿ ಅವಘಡ… ರೋಗಿ ಮೃತ್ಯು

Bagheera movie song out

Bagheera ರುಧಿರ ಗಾನ…; ಶ್ರೀಮುರಳಿ ಸಿನಿಮಾದ ಹಾಡು ಬಂತು

Bhavani Revanna: ಅಪಹರಣ ಕೇಸ್-ಭವಾನಿ ರೇವಣ್ಣ ಜಾಮೀನು ರದ್ದತಿಗೆ ಸುಪ್ರೀಂ ನಕಾರ

Bhavani Revanna: ಅಪಹರಣ ಕೇಸ್-ಭವಾನಿ ರೇವಣ್ಣ ಜಾಮೀನು ರದ್ದತಿಗೆ ಸುಪ್ರೀಂ ನಕಾರ

5-ptr

Puttur: ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯನಿರ್ವಹಣಾಧಿಕಾರಿ ಅಪಘಾತದಲ್ಲಿ ಮೃತ್ಯು

simha roopini kannada movie

Simha Roopini: ಭಕ್ತಿ ಭಾವದ ʼಸಿಂಹ ರೂಪಿಣಿʼ: ಕಿನ್ನಾಳ್‌ ರಾಜ್‌ ನಿರ್ದೇಶನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.