ಇನ್ನೊಂದು ಮಹಾಯುದ್ಧಕ್ಕೆ ಟ್ರಂಪ್ ಮುನ್ನುಡಿ?
Team Udayavani, Apr 15, 2017, 3:50 AM IST
ಐಸಿಸ್ ಉಗ್ರರನ್ನು ಸದೆಬಡಿಯಲು ಅಮೆರಿಕ ಏಕಾಏಕಿ ಬೃಹತ್ ಬಾಂಬ್ ಪ್ರಯೋಗಿಸಿರುವುದು ಆತಂಕಕ್ಕೆ ಕಾರಣವಾಗಿದೆ. ನಿಧಾನ ವಾಗಿ ಜಾಗತಿಕ ಶಕ್ತಿಗಳೆಲ್ಲ ಒಂದೊಂದು ಕಡೆ ಸರಿದು ಧ್ರುವೀಕರಣಗೊಳ್ಳುತ್ತಿರುವುದು, ತಮ್ಮ ತಮ್ಮ ಶಸ್ತ್ರಾಸ್ತ್ರಗಳನ್ನು ಝಳಪಿಸುತ್ತಿರುವುದು ಯಾವುದರ ಮುನ್ನುಡಿ?
ಅಫ್ಘಾನಿಸ್ಥಾನದ ಅಚಿನ್ ಪ್ರಾಂತ್ಯದ ನಂಗರ್‌ಹರ್ ಪ್ರದೇಶವನ್ನು ಕಾರಸ್ಥಾನ ಮಾಡಿಕೊಂಡಿರುವ ಐಸಿಸ್ ಉಗ್ರರನ್ನು ನಿರ್ಮೂಲನ ಮಾಡಲು ಅಮೆರಿಕ ಜಗತ್ತಿನಲ್ಲೇ ಅತೀ ದೊಡ್ಡ ಸಾಂಪ್ರದಾಯಿಕ ಬಾಂಬ್ ಬಳಸಿದ ಅನಂತರ ಆಗುತ್ತಿರುವ ಬೆಳವಣಿಗೆಗಳನ್ನು ಪ್ರಪಂಚ ಆತಂಕದಿಂದ ಗಮನಿಸುತ್ತಿದೆ. ಮೊದಲಾಗಿ ಒಂದು ಪ್ರಬಲ ಭೂಕಂಪದಷ್ಟು ಭೀಕರ ಪರಿಣಾಮ ಉಂಟು ಮಾಡಬಲ್ಲ ಬಾಂಬನ್ನು ಗುಹೆಗಳಲ್ಲಿ ಅಡಗಿರುವ ಉಗ್ರರನ್ನು ನಾಶ ಮಾಡಲು ಬಳಸಿದ ಉದ್ದೇಶವೇ ಹಲವು ಅನುಮಾನಗಳಿಗೆ ಕಾರಣವಾಗಿದೆ. ಅಧಿಕೃತ ಅಂಕಿಅಂಶಗಳ ಪ್ರಕಾರ ಈ ಬಾಂಬಿಗೆ 36 ಉಗ್ರರು ಬಲಿಯಾಗಿದ್ದಾರೆ. ಉಳಿದಂತೆ ಆಗಿರುವ ನಾಶನಷ್ಟದ ಲೆಕ್ಕಾಚಾರವಿನ್ನೂ ಸಿಕ್ಕಿಲ್ಲ. ಸಿಗುವುದೂ ಸಾಧ್ಯವೂ ಇಲ್ಲ. ಏಕೆಂದರೆ ನಂಗರ್‌ಹರ್ ಎನ್ನುವುದು ಮನುಷ್ಯ ಮಾಧಿತ್ರಧಿರಾದವರು ಹೋಗಲು ಅಸಾಧಿಧ್ಯವಾದ ದುರ್ಗಮ ಪ್ರದೇಶ. ಅಲ್ಲಿರುವ ಸಾವಿರಾರು ಗುಹೆಗಳ ಪೈಕಿ ಯಾವುದರಲ್ಲಿ ಯಾವ ರೀತಿಯ ಅಪಾಯ ಹೊಂಚು ಹಾಕಿದೆ ಎನ್ನು ವುದನ್ನು ಊಹಿಸುವುದು ಅಸಾಧ್ಯ. ಹೀಗಾಗಿ ಯಾವ ಸೈನಿಕನೂ ನಂಗರ್‌ಹರ್‌ಗೆ ಹೋಗುವ ಧೈರ್ಯ ಮಾಡು ವುದಿಲ್ಲ. ಏನಿದ್ದರೂ ವಾಯುಧಿಮಾರ್ಗ ದ ಅವಲೋಕನ ಮಾತ್ರ ಸಾಧ್ಯ.
ಅಮೆರಿಕ ಬಳಸಿರುವ ಬಾಂಬನ್ನು ಅದರ ಸಾಮರ್ಥ್ಯ ಮತ್ತು ಗಾತ್ರದ ಕಾರಣಕ್ಕೆ “ಸಕಲ ಬಾಂಬ್‌ಗಳ ತಾಯಿ’ ಎಂದು ಕರೆಯುತ್ತಾರೆ. ಅಮೆರಿಕ 2003ರಲ್ಲಿ ಇರಾಕ್ ಯುದ್ಧ ಸಂದರ್ಭ ಈ ಬೃಹತ್ ಬಾಂಬ್ ತಯಾರಿಸಿತ್ತು. ಇರಾಕ್‌ಗೆ ಸಾಗಿಸಿತ್ತು ಕೂಡ, ಆದರೆ ಬಳಸಿರಲಿಲ್ಲ. 32 ಕಿ. ಮೀ. ದೂರದ ತನಕ ಅದರ ಸ್ಫೋಟದ ಪರಿಣಾಮ ಉಂಟಾಗುತ್ತದೆ. ದೊಡ್ಡ ಬಾಂಬರ್ ವಿಮಾನ ಅಥವಾ ಸರಕು ಸಾಗಣೆ ವಿಮಾನದಲ್ಲಿ ಸಾಗಿಸಿ ಇದನ್ನು ಪ್ರಯೋಗಿಸುತ್ತಾರೆ. ಅಮೆರಿಕ ಈ ಮಾದರಿಯ ಬಾಂಬನ್ನು ಪ್ರಯೋಗಿಸಿರುವುದು ಇದೇ ಮೊದಧಿಲೇಧಿನಲ್ಲ. 2001ರಲ್ಲಿ ಅಚಿನ್ ಪ್ರಾಂತ್ಯದ ಪಕ್ಕದಲ್ಲೇ ಇರುವ ಟೋರಾಬೋರಾದಲ್ಲಿದ್ದ ಒಸಾಮ ಬಿನ್ ಲಾದನ್ ಅಡಗುತಾಣದ ಮೇಲೆ ಡೈಸಿ ಕಟ್ಟರ್ ಎಂಬ ಇಷ್ಟೇ ಪ್ರಬಲವಾದ ಬಾಂಬ್ ಹಾಕಿತ್ತು. ಅನೇಕ ಅಲ್ ಕಾಯಿದ ಉಗ್ರರು ಈ ಬಾಂಬಿಗೆ ಬಲಿಯಾಗಿದ್ದರೂ ಲಾದನ್ ಮತ್ತು ಅವನ ನಂಬಿಕಸ್ಥ ಭಂಟರು ಪಾರಾಗಿದ್ದರು. ಹೀಗಾಗಿ ಈ ಕಾರ್ಯಾಚರಣೆಯು ವಿಫಲವಾಗಿತ್ತು. ಅನಂತರ ಲಾದನ್ ಬೇಟೆಯಾಡಲು ಅಮೆರಿಕ 10 ವರ್ಷ ಕಾಯಬೇಕಾಯಿತು. ಹೀಗೆ ಬಾಂಬ್ ಹಾಕುವುದರಿಂದ ಉಗ್ರರ ವಿರುದ್ಧ ನಡೆಸುವ ಕಾರ್ಯಾಚರಣೆಯ ನೈಜ ಉದ್ದೇಶ ಈಡೇರುವುದಿಲ್ಲ ಎಂದು ತಿಳಿದಿದ್ದರೂ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೂಂದು ಕಾರ್ಯಾಚರಣೆಗೆ ಅನುಮತಿ ಕೊಟ್ಟಿರುವುದೇಕೆಂದು ಅರ್ಥವಾಗುತ್ತಿಲ್ಲ. ಅಫ್ಘಾನಿಸ್ಥಾನವನ್ನು ಅಮೆಧಿ ರಿಕ ಬಾಂಬ್ ಪರೀಕ್ಷೆಯ ತಾಣ ಮಾಡಿಕೊಂಡಿದೆ ಎಂಬ ಆರೋಪವನ್ನು ಈಗ ಅಲ್ಲಗಳೆಯಲು ಸಾಧ್ಯವಿಲ್ಲ. ಹೀಗಾಗಿ ಮಾಜಿ ಅಧ್ಯಕ್ಷ ಹಮೀದ್ ಕರ್ಜಾಯಿ ಸೇರಿ ಹಲವು ಜಾಗತಿಕ ನಾಯಕರು ಅಮೆರಿಕದ ಕ್ರಮವನ್ನು ಖಂಡಿಸಿದ್ದಾರೆ.
ಡ್ರೋನ್ ಮೂಲಕ ಉಗ್ರರ ಬೇಟೆಯಾಡುತ್ತಿದ್ದ ಅಮೆರಿಕ ಯಾವುದೇ ಪೂರ್ವಸೂಚನೆಯಿಲ್ಲದೆ ಬೃಹತ್ ಬಾಂಬ್ ಪ್ರಯೋಗಿಸಿರುವುದಕ್ಕೆ ಏಶ್ಯಾದಲ್ಲಿ ನಡೆಯುತ್ತಿರುವ ಕ್ಷಿಪ್ರ ಬೆಳವಣಿಗೆಗಳು ಕಾರಣ ಎನ್ನಲಾಗುತ್ತಿದೆ. ಈ ಬಾಂಬಿನ ಮೂಲಕ ಚೀನ, ಪಾಕಿಸ್ಥಾನಕ್ಕೆ ಟ್ರಂಪ್ ಅಗತ್ಯ ಬಂದರೆ ಇಂತಹ ಅಸ್ತ್ರಗಳನ್ನು ಪ್ರಯೋಗಿಸಲು ಹಿಂದೇಟು ಹಾಕುವುದಿಲ್ಲ ಎಂಬ ಸಂದೇಶವನ್ನು ನೀಡಿದ್ದಾರೆ. ಇದರ ಜತೆಗೆ ಉ. ಕೊರಿಯಾ ಮತ್ತು ಸಿರಿಯಾಕ್ಕೆ ಕೂಡ ಎಚ್ಚರಿಕೆ ಕೊಟ್ಟಿದ್ದಾರೆ. ಇರಾಕ್ ಮತ್ತು ಸಿರಿಯಾದಲ್ಲಿ ಬಲಗುಂದಿದ ಬಳಿಕ ಅಪಾ^ನಿಸ್ಥಾನವನ್ನು ಕೇಂದ್ರವಾಗಿಟ್ಟುಕೊಂಡು ಏಶ್ಯಾದಲ್ಲಿ ನೆಲೆಯೂರುವ ಐಸಿಸ್ ಪ್ರಯತ್ನವನ್ನು ಮೊಳಕೆಯಲ್ಲೇ ಚಿವುಟಿ ಹಾಕುವ ಪ್ರಯತ್ನವನ್ನು ಟ್ರಂಪ್ ಮಾಡಿದ್ದಾರೆ ಎನ್ನುವ ವಾದವೂ ಇದೆ. ಹೀಗಾದರೆ ಇದು ಭಾರತದ ಪಾಲಿಗೆ ಒಳ್ಳೆಯ ಸುದ್ದಿ. ಏಕೆಂದರೆ ಐಸಿಸ್‌ನ ಮೊದಲ ಗುರಿ ಇರುವುದೇ ಭಾರತದ ಮೇಲೆ. ಈಗಾಗಲೇ ಭಾರತದ ಅನೇಕ ಯುವಕರು ಐಸಿಸ್ ಪ್ರಭಾವಕ್ಕೊಳಗಾಗಿ ಈ ಸಂಘಟನೆಯನ್ನು ಸೇರಿದ್ದಾರೆ. ಈ ಪೈಕಿ ಕೆಲವರು ನಂಗರ್‌ಹರ್‌ನಲ್ಲಿಯೇ ಇದ್ದರು. ಅವರೂ ಅಮೆರಿಕದ ಬಾಂಬಿಗೆ ಬಲಿಯಾಗಿದ್ದಾರೆ ಎಂಬ ಸುದ್ದಿಗಳಿವೆ.
ಅಮೆರಿಕ ಬಳಿ ಇದಕ್ಕಿಂತಲೂ ಪ್ರಬಲವಾಗಿರುವ ಇನ್ನೊಂದು ಬಾಂಬು ಇದೆ. ಏತನ್ಮಧ್ಯೆ ರಶ್ಯಾ ಕೂಡ ತಾನು ಇನ್ನೊಂದು ಬೃಹತ್ ಬಾಂಬ್ ಹೊಂದಿದ್ದೇನೆ ಎಂದು ಹೇಳಿಕೊಂಡಿದೆ. ಹೀಗೆ ಜಗತ್ತಿನ ಬಲಿಷ್ಠ ದೇಶಗಳೆಲ್ಲ ತಮ್ಮ ಬಳಿಯಿರುವ ಪ್ರಬಲ ಬಾಂಬ್‌ಗಳನ್ನು ಝಳಪಿಸಲು ತೊಡಗಿರುವುದು ಇನ್ನೊಂದು ಮಹಾಯುದ್ಧಕ್ಕೆ ಬರೆಯುತ್ತಿರುವ ಮುನ್ನುಡಿಯೇ?
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.