ಹೋಟೆಲ್‌ಗಳಲ್ಲಿ ಸೇವಾ ತೆರಿಗೆ ವಿಧಿಸಿದರೆ ಕ್ರಮ
Team Udayavani, Apr 15, 2017, 3:50 AM IST
ನವದೆಹಲಿ: ಆಹಾರ ಮತ್ತು ಪಾನೀಯಗಳ ಬಿಲ್ ಮೇಲೆ ಸೇವಾ ತೆರಿಗೆ ವಿಧಿಸುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಗಳಿಗೆ ಸಲಹೆ ನೀಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎಂದು ಆಹಾರ ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ರಾಮ್‌ವಿಲಾಸ್ ಪಾಸ್ವಾನ್ ಹೇಳಿದ್ದಾರೆ.
“ಸೇವಾ ತೆರಿಗೆ ಅಸ್ತಿತ್ವದಲ್ಲೇ ಇಲ್ಲ. ಆದರೂ ಅಕ್ರಮವಾಗಿ ಸೇವಾ ತೆರಿಗೆ ವಿಧಿಸುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯಗಳಿಗೆ ಸಲಹೆ ನೀಡಲು ನಿರ್ಧರಿಸಿದ್ದು, ಈ ಕುರಿತ ಪ್ರಸ್ತಾವವನ್ನು ಪ್ರಧಾನಿ ಕಚೇರಿಗೆ ಕಳುಹಿಸಲಾಗಿದೆ. ಪ್ರಧಾನಿ ಕಾರ್ಯಾಲಯದ ಅನುಮತಿ ದೊರೆತ ಕೂಡಲೆ ಸಲಹೆಯನ್ನು ರಾಜ್ಯಗಳಿಗೆ ಕಳುಹಿಸಲಾಗುತ್ತದೆ. ಈ ಕುರಿತು ಗ್ರಾಹಕರಿಂದ ಸಾಕಷ್ಟು ದೂರುಗಳು ಬಂದ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಮುಂದಾಗಿದ್ದೇವೆ’ ಎಂದು ಪಾಸ್ವಾನ್ ಮಾಹಿತಿ ನೀಡಿದ್ದಾರೆ.
ಗ್ರಾಹಕರ ಹಕ್ಕುಗಳಿಗಾಗಿ ಹೋರಾಡುತ್ತಿರುವ ಸ್ವಯಂಪ್ರೇರಿತ ಗ್ರಾಹಕ ಸಂಸ್ಥೆಗಳಿಗೆ ಕೇಂದ್ರದ ಈ ಕ್ರಮದಿಂದ ಅನುಕೂಲವಾಗಲಿದೆ ಎಂದಿರುವ ಸಚಿವಾಲಯದ ಅಧಿಕಾರಿ, ಸೇವಾ ತೆರಿಗೆ ಪಾವತಿಸುವಂತೆ ಗ್ರಾಹಕರ ಮೇಲೆ ಒತ್ತಡ ಹೇರುವಂತಿಲ್ಲ. ಗ್ರಾಹಕರೇ ಬಯಸಿದರೆ ವೇಯರ್‌ಗೆ ಟಿಪ್ಸ್ ನೀಡಬಹುದು ಎಂದಿದ್ದಾರೆ. ಹೋಟೆಲ್‌ಗಳಲ್ಲಿ ಸೇವಾ ತೆರಿಗೆ ವಿಧಿಸುವುದು ಕಡ್ಡಾಯವಲ್ಲ ಎಂದು ಜನವರಿಯಲ್ಲಷ್ಟೇ ಹೇಳಿದ್ದ ಗ್ರಾಹಕರ ವ್ಯವಹಾರಗಳ ಇಲಾಖೆ, “ಗ್ರಾಹಕರು ನಿರಾಕರಿಸಿದರೆ ಬಿಲ್‌ನಿಂದ ಸೇವಾ ತೆರಿಗೆ ತೆಗೆಯಬೇಕು,’ ಎಂದು ತಿಳಿಸಿತ್ತು.
ಹೆಚ್ಚಿದ ಡಿಜಿಟಲ್ ಪಾವತಿ: ದೇಶದ ನಾಗರಿಕರು ಮಾರ್ಚ್ ತಿಂಗಳೊಂದರಲ್ಲೇ ಸುಮಾರು 64 ಲಕ್ಷ ಬಾರಿ ಡಿಜಿಟಲ್ ಪಾವತಿ ಮಾಡುವ ಮೂಲಕ, ನವೆಂಬರ್‌ನಲ್ಲಾದ ನೋಟು ಅಮಾನ್ಯ ಕ್ರಮದ ನಂತರ ಡಿಜಿಟಲ್ ಪಾವತಿ ಪ್ರಮಾಣ 23 ಪಟ್ಟು ವೃದ್ಧಿಯಾಗಿದೆ. ಮಾರ್ಚ್ ತಿಂಗಳೊಂದರಲ್ಲೇ 63.80 ಲಕ್ಷ ಬಾರಿ ಡಿಜಿಟಲ್ ವಹಿವಾಟು ನಡೆಸುವ ಮೂಲಕ, 2,425 ಕೋಟಿ ಮೌಲ್ಯದ ಹಣ ಪಾವತಿಯಾಗಿದೆ. ನವೆಂಬರ್ ಅಂತ್ಯದವರೆಗೆ 2.80 ಲಕ್ಷ ಬಾರಿ (101 ಕೋಟಿ) ನಡೆದ ನಗದು ರಹಿತ ವಹಿವಾಟುಗಳಿಗೆ ಹೋಲಿಸಿದಾಗ ಮಾರ್ಚ್ ತಿಂಗಳು ಡಿಜಿಟಲ್ ವಹಿವಾಟಿನಲ್ಲಿ 23 ಪಟ್ಟು ಹೆಚ್ಚಳ ಕಂಡುಬಂದಿರುವುದಾಗಿ ನೀತಿ ಆಯೋಗ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಡಿ. 26: ಶಬರಿಮಲೆಯಲ್ಲಿ ಮಂಡಲ ಪೂಜೆ
BJP ಪೂರ್ವಾಂಚಲಿಗಳನ್ನು ರೋಹಿಂಗ್ಯಾಗಳೆಂದು ಮತಗಳನ್ನು ಅಳಿಸುತ್ತಿದೆ: ಕೇಜ್ರಿವಾಲ್ ಆರೋಪ
Gold & Cash: ಕಾಡಿನ ಬಳಿ ನಿಲ್ಲಿಸಿದ್ದ ಕಾರಿನಲ್ಲಿ 52 ಕೆ.ಜಿ ಚಿನ್ನ, 9 ಕೋಟಿ ನಗದು ಪತ್ತೆ
Aligarh; ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ಮತ್ತೊಂದು ಶಿವ ದೇವಾಲಯ ಪತ್ತೆ
NIA; ಪ್ರವೀಣ್ ನೆಟ್ಟಾರು ಹ*ತ್ಯೆ ಪ್ರಕರಣದ ಆರೋಪಿ ವಿಮಾನ ನಿಲ್ದಾಣದಲ್ಲೇ ಬಂಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.