ಬಾಂಬ್ ನಾಗನ ಕಂತೆಗಳ ಪುರಾಣ, ಕೋಟಿ, ಕೋಟಿ ಹಳೇ ನೋಟು ಪತ್ತೆ
Team Udayavani, Apr 15, 2017, 3:50 AM IST
ಬೆಂಗಳೂರು: ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರ ಅಪ ಹರಣ ಹಾಗೂ ದರೋಡೆ ಪ್ರಕರಣದ ಆರೋಪದ ಮೇಲೆ ಬಿಬಿಎಂಪಿ ಮಾಜಿ ಸದಸ್ಯ, ಮಾಜಿ ರೌಡಿಶೀಟರ್ ವಿ. ನಾಗರಾಜ್ ಅಲಿಯಾಸ್ ಬಾಂಬ್ ನಾಗನ ಮನೆ ಹಾಗೂ ಕಚೇರಿ ಮೇಲೆ ಶುಕ್ರವಾರ ಪೊಲೀಸರು ದಾಳಿ ನಡೆ ಸಿದ್ದು, 14.80 ಕೋಟಿ ರೂ. ಮೌಲ್ಯದ ಹಳೆ 1,000 ಹಾಗೂ 500 ರೂ. ನೋಟುಗಳನ್ನು ವಶಕ್ಕೆ ಪಡೆದಿದ್ದಾರೆ.
ಅಪಹರಣ ಪ್ರಕರಣ ಸಂಬಂಧ ಸರ್ಚ್ ವಾರಂಟ್ ಪಡೆದಿದ್ದ ಪೊಲೀಸರು ಖಚಿತ ಮಾಹಿತಿ ಮೇರೆಗೆ ಶುಕ್ರವಾರ ಬೆಳಗ್ಗೆ 5.30ರ ವೇಳೆಗೆ ಶ್ರೀರಾಂಪುರದ ನಾಗರಾಜ್‌ನ ನಾಲ್ಕು ಅಂತಸ್ತಿನ ಮನೆ ಹಾಗೂ ಕಚೇರಿ ಮೇಲೆ ದಾಳಿ ನಡೆಸಿ ಕೋಟ್ಯಂತರ ರೂ. ಮೌಲ್ಯದ ಆಸ್ತಿ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.
ಹೆಚ್ಚುವರಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್, ಡಿಸಿಪಿ ಅಜಯ್ ಹಿಲ್ಲೂರಿ, ಎಸಿಪಿ ಸಜ್ಜಾದ್ ಖಾನ್ ನೇತೃತ್ವದಲ್ಲಿ ಹೆಣ್ಣೂರು ಹಾಗೂ ಶ್ರೀರಾಂಪುರ ಠಾಣೆಯ ಸುಮಾರು 50ಕ್ಕೂ ಅಧಿಕ ಪೊಲೀಸರು ಏಕಕಾಲಕ್ಕೆ ದಾಳಿ ನಡೆಸಿದರು.
ಈತ ರಿಯಲ್ ಎಸ್ಟೇಟ್, ಬೆಟ್ಟಿಂಗ್ ಹಾಗೂ ಕಪ್ಪು ಬಿಳಿ ದಂಧೆಯಲ್ಲೂ ಭಾಗಿಯಾಗಿರುವ ಶಂಕೆಯೂ ದಾಳಿ ವೇಳೆ ಗೊತ್ತಾಗಿದೆ. ದಾಳಿಯ ಸೂಚನೆ ತಿಳಿದ ನಾಗರಾಜ್ ತನ್ನ ಇಬ್ಬರು ಮಕ್ಕಳಾದ ಗಾಂಧಿ ಮತ್ತು ಶಾಸ್ತ್ರಿ ಜತೆ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ನೋಟು ಅಪಮೌಲ್ಯದ ಬಳಿಕ ಬೆಂಗಳೂರಿನಲ್ಲಿ ಪತ್ತೆಯಾಗಿರುವ ದೊಡ್ಡ ಮೊತ್ತ ಇದಾಗಿದ್ದು, ನಾಗರಾಜ್‌ಗೆ ಇದು ಹೇಗೆ ಬಂತು? ಯಾವ ವ್ಯವಹಾರ? ಯಾರ ನಂಟು ಎಂಬುದರ ಬಗ್ಗೆ ನಗರ ಪೊಲೀಸರು ತೀವ್ರ ತನಿಖೆಯಲ್ಲಿ ತೊಡಗಿದ್ದಾರೆ.
ನಾಗರಾಜ್ ಕುಟುಂಬ ವಾಸವಿರುವ ಮನೆಯಲ್ಲಿ ಯಾವುದೇ ನಗದು ಪತ್ತೆಯಾಗಿಲ್ಲ. ಆದರೆ, ವಾಣಿಜ್ಯ ಸಂಕೀರ್ಣದ ಕಚೇರಿಯಲ್ಲಿ ಹಳೆಯ ನೋಟುಗಳು, ಬೇನಾಮಿ ಆಸ್ತಿ ಹಾಗೂ ಕೆಲ ಉದ್ಯಮಿಗಳು, ಸ್ಥಳೀಯರ ಹೆಸರಿನಲ್ಲಿರುವ ಆಸ್ತಿಗಳ ದಾಖಲೆಗಳು ಪತ್ತೆಯಾಗಿವೆ. ಅಮಾನ್ಯಗೊಂಡ 1000 ರೂ. ಹಾಗೂ 500 ರೂ. ನೋಟುಗಳನ್ನು ಪೊಲೀಸರು ಆರ್‌ಬಿಐ ವಶಕ್ಕೆ ಒಪ್ಪಿಸಿದ್ದಾರೆ.
ಪ್ರಕರಣದ ಹಿನ್ನೆಲೆ: 18ರಂದು ಹೆಣ್ಣೂರು ಠಾಣಾ ವ್ಯಾಪ್ತಿಯಲ್ಲಿ ಉದ್ಯಮಿ ಕಿಶೋರ್, ಉಮೇಶ್ ಹಾಗೂ ಗಣೇಶ್ ಅವರನ್ನು ಅಪಹರಿಸಿದ ನಾಗರಾಜ್, ತನ್ನ ಸ್ನೇಹ ಸೇವಾ ಸಮಿತಿ ಕಚೇರಿಗೆ ಕರೆ ತಂದು 50 ಲಕ್ಷ ರೂ. ವಸೂಲಿ ಮಾಡಿ ಪ್ರಾಣ ಬೆದರಿಕೆಯೊಡ್ಡಿದ್ದ. ಜತೆಗೆ ಅವರ ಬಳಿಯಿದ್ದ ಉಂಗುರ, ಸರ ಕಿತ್ತುಕೊಂಡಿದ್ದ. ಆದರೆ ಈ ಸಂಬಂಧ ತತ್‌ಕ್ಷಣ ಉಮೇಶ್ ದೂರು ನೀಡಿರಲಿಲ್ಲ. ಅನಂತರ ಎ. 7ರಂದು ಹೆಣ್ಣೂರು ಠಾಣೆಗೆ ಹಾಜರಾಗಿ ದೂರು ನೀಡಿದ್ದರು. ಪ್ರಕರಣ ತನಿಖೆ ನಡೆಸಿದ ಪೊಲೀಸರು, ಆರೋಪಿಯ ವಿರುದ್ಧ ಸರ್ಚ್ ವಾರಂಟ್ ಪಡೆದು ಒಂದು ವಾರದ ಹಿಂದೆಯೇ ಬಂಧಿಸಲು ಯತ್ನಿಸಿದ್ದು, ಆತನ ಸಂಪೂರ್ಣ ವ್ಯವಹಾರ ಬಗ್ಗೆ ಮಾಹಿತಿ ಸಂಗ್ರಹಿಸಲು ಹೆಣ್ಣೂರು ಠಾಣೆ ಇನ್‌ಸ್ಪೆಕ್ಟರ್ ಶ್ರೀನಿವಾಸ್ ಮತ್ತು ಸಿಬಂದಿ ಮಾರುವೇಷದಲ್ಲಿ ಆತನ ಮನೆ ಮತ್ತು ಕಚೇರಿಗೆ ಭೇಟಿ ನೀಡಿದ್ದರು. ಅಲ್ಲದೇ ಮಫ್ತಿಯಲ್ಲಿ ಪೊಲೀಸ್ ಪೇದೆಗಳು ಮಾಹಿತಿ ಕಲೆ ಹಾಕಿದ್ದರು. ಇದ್ದಕ್ಕಿದ್ದಂತೆ ನಾಪತ್ತೆಯಾಗುತ್ತಿದ್ದ ನಾಗರಾಜ್ ಎ.14ರಂದು ಅಂಬೇಡ್ಕರ್ ಜಯಂತಿಗೆ ಬರುವ ಮಾಹಿತಿ ಲಭಿಸಿತು. ಅದರಂತೆ ಪೊಲೀಸರು ದಾಳಿ ನಡೆಸಿದರು. ಆದರೆ ಇದರ ಮಾಹಿತಿಯೂ ತಿಳಿದುಕೊಂಡ ನಾಗರಾಜ್ ಪೊಲೀಸರ ದಾಳಿಗೆ ಮುನ್ನವೇ ಪರಾರಿಯಾಗಿದ್ದ.
ಮನೆಯಲ್ಲಿ ಪತ್ನಿ ಹಾಗೂ ಪುತ್ರಿ ಇದ್ದು, ಪೊಲೀಸರ ದಾಳಿ ಸಂದರ್ಭದಲ್ಲಿ ಪತ್ನಿ ಲಕ್ಷ್ಮಿ ಹೈಡ್ರಾಮಾ ನಡೆಸಿದರು. ಪತಿ ಎಲ್ಲಿ ಹೋಗಿದ್ದಾರೋ ಗೊತ್ತಿಲ್ಲ. ನಾನೇನೂ ಬಚ್ಚಿಟ್ಟುಕೊಂಡಿಲ್ಲ ಎಂದು ಜೋರು ಧ್ವನಿಯಲ್ಲಿ ಉತ್ತರಿಸಿದಳು. ಜತೆಗೆ ಸಂಜೆ ನನಗೆ ವಾಯುವಿಹಾರಕ್ಕೆ ಹೋಗಬೇಕು, ಅವಕಾಶ ಮಾಡಿಕೊಡಿ. ಇಲ್ಲವಾದರೆ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಕೊಡುತ್ತೇನೆ ಎಂದು ಧಮ್ಕಿ ಹಾಕಿದರು ಎಂದು ಮೂಲಗಳು ತಿಳಿಸಿವೆ.
ಸಿಕ್ಕಿದ್ದು ಕೋಟಿ ಕೋಟಿ: ಉದ್ಯಮಿ ಉಮೇಶ್ ಅಪಹರಿಸಿ 50 ಲಕ್ಷ ರೂ. ದರೋಡೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗರಾಜ್ ಕಚೇರಿ ಮೇಲೆ ದಾಳಿ ನಡೆಸಿದ ಪೊಲೀಸರು, ಆತನ ಮನೆಯಲ್ಲಿ ದೊರೆತ ಕಂತೆ ಕಂತೆ ನೋಟುಗಳನ್ನು ಕಂಡು ಒಂದು ಕ್ಷಣ ಆಶ್ಚರ್ಯ ಚಕಿತರಾದರು. ಐಷಾರಾಮಿ ಕಚೇರಿ ಮತ್ತು ಮನೆಯ ಪ್ರತಿ ಕಪಾಟುಗಳಲ್ಲಿ ಆಸ್ತಿಗಳಿಗೆ ಸಂಬಂಧಿಸಿ ದಾಖಲೆಗಳು, ಹಣದ ಕಂತೆಗಳು ಪತ್ತೆಯಾಗಿವೆ. ಆತನ ಮನೆಯ ಚಪ್ಪಲಿ ಸ್ಟಾಂಡ್‌ನ ಹಿಂಭಾಗದಲ್ಲೂ ಆಸ್ತಿಯ ದಾಖಲೆಗಳನ್ನು ಅಡಗಿಸಿಟ್ಟಿದ್ದು ಪತ್ತೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Constitution: ಕಾಂಗ್ರೆಸ್ಸಿಗರಿಂದ ಸಂವಿಧಾನದ ರಕ್ಷಕರಂತೆ ಕಪಟ ನಾಟಕ: ಬಿ.ವೈ.ವಿಜಯೇಂದ್ರ
Vijayapura: 6ರ ಬಾಲಕನ ಮೇಲೆ ಅನೈಸರ್ಗಿಕ ಲೈಂಗಿಕ ದೌರ್ಜನ್ಯ: ಅಪರಾಧಿಗೆ 20 ವರ್ಷ ಜೈಲು
Kalaburagi; ನಮ್ಮ ತಂಡದವರು ಸಿಎಂ ಆಗುವ ದಿನ ಬರಲಿದೆ: ಗುಡುಗಿದ ಯತ್ನಾಳ್
Politics: ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಗೆ ಪ್ರಯತ್ನ: ಬಿಎಸ್ ಯಡಿಯೂರಪ್ಪ
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ನ.28ಕ್ಕೆ ಮುಂದೂಡಿದ ಹೈಕೋರ್ಟ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Gundlupete: ವಿದ್ಯುತ್ ತಂತಿಗೆ ಸಿಲುಕಿ ಮರಿಯಾನೆ ಸಾವು
Constitution: ಕಾಂಗ್ರೆಸ್ಸಿಗರಿಂದ ಸಂವಿಧಾನದ ರಕ್ಷಕರಂತೆ ಕಪಟ ನಾಟಕ: ಬಿ.ವೈ.ವಿಜಯೇಂದ್ರ
Sirsi: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ ಪರಾರಿ; ಆರೋಪಿ ಬಂಧನ
EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್ ಟೀಕೆ
Sirsi: ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿಯಾದ ಸಂಸದ ಕಾಗೇರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.