![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Apr 15, 2017, 9:09 AM IST
ಬೆಂಗಳೂರು: ನಂಜನಗೂಡು, ಗುಂಡ್ಲುಪೇಟೆಗಳಲ್ಲಿ ಬಡವರು, ದಲಿತರ ಮೊಹಲ್ಲಾಗಳಲ್ಲಿ ನಿಂತು ಕೆಲಸ ಮಾಡುವ ಕಾರ್ಯಕರ್ತರ ಕೊರತೆಯೇ ಚುನಾವಣೆಯಲ್ಲಿ ಹಿನ್ನಡೆಗೆ ಕಾರಣವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಮಲ್ಲೇಶ್ವರದ ಭಾರತೀಯ ಜನತಾ ಪಕ್ಷದ ಕೇಂದ್ರ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಡಾ.ಬಿ.ಆರ್. ಅಂಬೇಡ್ಕರ್ ಅವರ 126ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾರ್ಯಕರ್ತರ ಸಭೆ ನಡೆಸಿದಾಗ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಸೇರಿದ್ದರೂ, ನಮ್ಮ ವಿಚಾರಧಾರೆಗಳು ಕಡುಬಡವರು, ದೀನ ದಲಿತರಿಗೆ ತಲುಪಿಲ್ಲ ಎಂಬ ಅಂಶ ಸ್ಪಷ್ಟವಾಗಿ ಗೋಚರವಾಯಿತು. ನಮಗೆ ಈ ರೀತಿಯಲ್ಲಿ ಹಿನ್ನಡೆಯಾಗಲು ಸಾಧ್ಯವೇ ಇಲ್ಲ. ಆದರೂ ಹಿನ್ನಡೆಯಾಗಿರುವುದು ಏಕೆ ಎಂದು ಕಾರ್ಯಕರ್ತರನ್ನು ಪ್ರಶ್ನಿಸಿದರು. 20 ವರ್ಷಗಳಿಂದ ಆ ಭಾಗಗಳಲ್ಲಿ ನಾವು ಗೆದ್ದಿಲ್ಲ. ಆದರೂ ಗೆದ್ದೇ ಗೆಲ್ಲುತ್ತೇವೆ ಎಂಬ ವಿಶ್ವಾಸವಿತ್ತು. ಆದರೆ, ಹಿನ್ನಡೆಯಾಗಿರುವುದಕ್ಕೆ ಅಲ್ಲಿನ ಕಾರ್ಯಕರ್ತರ ವೈಫಲ್ಯ ಅಥವಾ ಕಾರ್ಯಕರ್ತರ ತಂಡ ನಮ್ಮ ನಿರೀಕ್ಷೆಯಂತೆ ಕೆಲಸ ಮಾಡಿಲ್ಲ ಎಂಬುದು ಸ್ಪಷ್ಟವಾಗುತ್ತದೆ ಎಂದರು.
You seem to have an Ad Blocker on.
To continue reading, please turn it off or whitelist Udayavani.