ಆಂತರಿಕ ಉತ್ಪಾದನೆ’ಯೊಂದೇ ಮಾನದಂಡವಲ್ಲ


Team Udayavani, Apr 15, 2017, 10:17 AM IST

170414kpn89.jpg

ಬೆಂಗಳೂರು: ಜಾಗತಿಕ ಮಟ್ಟದಲ್ಲಿ ಅಭಿವೃದ್ಧಿಯ ಪರಿಕಲ್ಪನೆ ಬದಲಾಗಿದ್ದು, “ಒಟ್ಟು ಆಂತರಿಕ ಉತ್ಪಾದನೆ’ಯೊಂದೇ (ಜಿಡಿಪಿ) ದೇಶದ ಅಭಿವೃದಿಟಛಿಯ ಮಾನದಂಡ ಅಲ್ಲ. ಇದರ ಜೊತೆಗೆ “ಒಟ್ಟಾರೆ ರಾಷ್ಟ್ರೀಯ ಸೌಖ್ಯ’ವೂ (ಜಿಎನ್‌ಎಚ್‌) ಮುಖ್ಯ ಎಂದು ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಪ್ರತಿಪಾದಿಸಿದ್ದಾರೆ.

ಉನ್ನತ ಶಿಕ್ಷಣ ಇಲಾಖೆ ಶುಕ್ರವಾರ ವಿಧಾನಸೌಧದ ಬ್ಯಾಂಕ್ವೆಟ್‌ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಲಂಡನ್‌ ಸ್ಕೂಲ್‌ ಆಫ್ ಎಕನಾಮಿಕ್ಸ್‌  ಮಾದರಿಯ “ಬೆಂಗಳೂರು ಡಾ. ಬಿ.ಆರ್‌. ಅಂಬೇಡ್ಕರ್‌ ಸ್ಕೂಲ್‌ ಆಫ್ ಎಕನಾಮಿಕ್ಸ್‌’ನ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.ಪ್ರಸ್ತುತ ಜಾಗತಿಕ ಮಟ್ಟದಲ್ಲಿ ಅಭಿವೃದ್ಧಿಯ ಪರಿಕಲ್ಪನೆ ಬದಲಾಗಿದೆ. ವಿಶ್ವಬ್ಯಾಂಕ್‌, ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಯಂತಹ (ಐಎಫ್ಎಫ್) ಅಂತಾರಾಷ್ಟ್ರೀಯ ಮಟ್ಟದ ಸಂಸ್ಥೆಗಳು ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಜೊತೆಗೆ ಒಟ್ಟಾರೆ ರಾಷ್ಟ್ರೀಯ ಸೌಖ್ಯವನ್ನೂ (ಜಿಎನ್‌ಎಚ್‌) ಅಭಿವೃದ್ಧಿಯ ಮಾನದಂಡವನ್ನಾಗಿ ಪರಿಗಣಿಸುತ್ತಿವೆ. ಹಾಗಾಗಿ ಒಂದು ದೇಶದ ಅಭಿವೃದ್ಧಿಗೆ ಜಿಡಿಪಿಯ ಅಂಕಿ-ಅಂಶಗಳಷ್ಟೇ ಮುಖ್ಯ ಆಗುವುದಿಲ್ಲ. ಜಿಡಿಪಿಯ ಜೊತೆಗೆ ದೇಶದ ಜಿಎನ್‌ ಎಚ್‌ ಸಹ ಪರಿಗಣಿಸಬೇಕಾಗುತ್ತದೆ. ಆದ್ದರಿಂದ ಭಾರತ ಜಾಗತಿಕ ಶಕ್ತಿ ಕೇಂದ್ರ ಆಗಬೇಕಾದರೆ, ಇಲ್ಲಿಯ ಜೆಡಿಪಿಯಲ್ಲದೇ ಜಿಎನ್‌ಎಚ್‌ ಸಹವೃದ್ಧಿಯಾಗಬೇಕು ಎಂದು ಹೇಳಿದರು.

ಶಿಕ್ಷಣ-ಸಂಶೋಧನೆಯಿಂದ ಸಿಕ್ಕಿದ್ದೇನು? ಶಿಕ್ಷಣ ಮತ್ತು ಸಂಶೋಧನೆಯ ಗುಣಮಟ್ಟ ನಿರೀಕ್ಷಿತ ಮಟ್ಟದಲ್ಲಿ ಇಲ್ಲ. ದೇಶದಲ್ಲಿ 760 ವಿವಿಗಳಿವೆ. 36 ಸಾವಿರಕ್ಕೂ ಹೆಚ್ಚು ಕಾಲೇಜುಗಳಿವೆ. ಇದಲ್ಲದೇ ನೂರಾರು ಸಂಶೋಧನಾ ಸಂಸ್ಥೆಗಳಿವೆ. ಆದರೆ, ಇವುಧಿಗಳಿಂದ ಪಡೆದುಕೊಂಡಿದ್ದೇನು ಎಂದು ಪ್ರಶ್ನಿಸಿಕೊಂಡರೆ, ಸಮಧಾನದ ಉತ್ತರ ಸಿಗುವುದಿಲ್ಲ.

ಉನ್ನತ ಶಿಕ್ಷಣದಲ್ಲಿ ಗುಣಮಟ್ಟದ ಕೊರತೆ ಹಾಗೂ ಸಂಶೋಧನೆಗೆ ಅವಕಾಶ ಇಲ್ಲದ ಕಾರಣ. ಸಾವಿರಾರು ಪ್ರತಿಭಾವಂತರು ಭಾರತದ ನೆಲ ಬಿಟ್ಟು, ಬೇರೆ ದೇಶಗಳಿಗೆ ಹೋಗುತ್ತಿದ್ದಾರೆ. ಅವರನ್ನು ವಾಪಸ್‌ ಕರೆದು ಅವಕಾಶ ಸಿಗುವಂತೆ ಮಾಡಬೇಕು. ತಕ್ಷಶಿಲಾ, ನಳಂದಾ ವಿವಿಗಳಿಗೆ ಪ್ರಪಂಚದ ಬೇರೆ-ಬೇರೆ ಭಾಗಗಳಿಂದ ಜನ ಬರುತ್ತಿದ್ದಾರೆ. ಅಂತಹ ಕಾಲ ಮತ್ತೆ ಬರುವಂತೆ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ತಿಳಿಸಿದರು.

ಜನಸಂಖ್ಯೆ ವರವಾಗಲಿ: ಯುವಕರಲ್ಲಿ ಶಿಕ್ಷಣ ಇದೆ. ಆದರೆ, ಕೌಶಲ್ಯದ ಕೊರತೆ ಇದು. ಪ್ರತಿ ವರ್ಷ ಕೋಟ್ಯಂತರ ವಿದ್ಯಾವಂತ ಯುಕವರು “ಉದ್ಯೋಗ ಮಾರುಕಟ್ಟೆ’ ಪ್ರವೇಶ ಮಾಡುತ್ತಾರೆ. ಆದರೆ, ಕೌಶಲ್ಯ ಇಲ್ಲದೇ ಇರುವುದರಿಂದ ಅವರಲ್ಲಿ ಉದ್ಯೋಗ ಕ್ಷಮತೆ ಇರುವುದಿಲ್ಲ. ಹಾಗಾಗಿ ಕೌಶಲ್ಯ
ಅಭಿವೃದ್ಧಿಗೆ ಒತ್ತು ಕೊಡಬೇಕು ಎಂದು ಹೇಳಿದ ರಾಷ್ಟ್ರಪತಿಯವರು, ಕೌಶಲ್ಯ ವಿವಿ ಸ್ಥಾಪಿಸುವ ಕರ್ನಾಟಕ ಸರ್ಕಾರದ ನಿರ್ಧಾರದ ಬಗ್ಗೆ ಇದೇ ವೇಳೆ ಪ್ರಶಂಸೆ ವ್ಯಕ್ತಪಡಿಸಿದರು.

ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯಡ್ಡಿ ಮಾತನಾಡಿ, ಅಂಬೇಡ್ಕರ್‌ ಅವರ 125ನೇ ಜನ್ಮದಿನಾಚರಣೆ ಹಾಗೂ ಮಾಜಿ ಪ್ರಧಾನಿ ಡಾ. ಮನಮೋಹನ್‌ಸಿಂಗ್‌ ಅವರ ಆರ್ಥಿಕ ಸುಧಾರಣೆಗಳ ಸೂತ್ರಗಳಿಗೆ 25 ವರ್ಷ ಮುಗಿದಿರುವ ಈ ಸಂದರ್ಭದಲ್ಲಿ ಅಂಬೇಡ್ಕರ್‌ ಸ್ಕೂಲ್‌ ಆಫ್ ಎಕನಾಮಿಕ್ಸ್‌ ಆರಂಭವಾಗುತ್ತಿರುವುದು ವಿಶೇಷ ಸಂದರ್ಭದಲ್ಲಿ ಇದಕ್ಕಾಗಿ ರಾಜ್ಯ ಸರ್ಕಾರ 275 ಕೋಟಿ ರೂ. ಅನುದಾನ ನೀಡಿದೆ. ಮುಂದಿನ ದಿನಗಳಲ್ಲಿ ಇದೊಂದು ಸ್ವಾಯತ್ತ ಸಂಸ್ಥೆಯಾಗಿ ಕಾರ್ಯನಿರ್ವಹಿಸಲಿದೆ ಎಂದರು.

ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ಅನಂತಕುಮಾರ್‌, ಡಿ.ವಿ. ಸದಾನಂದಗೌಡ, ಲೋಕಸಭೆಯಕ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ, ಸಚಿವರಾದ ಆರ್‌.ವಿ. ದೇಶಪಾಂಡೆ, ಡಾ.ಜಿ.ಪರಮೇಶ್ವರ್‌, ಡಾ. ಎಚ್‌.ಸಿಮಹದೇವಪ್ಪ, ಎಚ್‌. ಆಂಜನೇಯ, ಆರ್‌. ರೋಷನ್‌ಬೇಗ್‌, ಮುಖ್ಯಕಾರ್ಯದರ್ಶಿ ಸುಭಾಷಚಂದ್ರ ಕುಂಟಿಯಾ, ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಜಾವೇದ್‌ ಅಖ್ತರ್‌, ಡಾ. ಬಿ.ಆರ್‌. ಅಂಬೇಡ್ಕರ್‌
ಸ್ಕೂಲ್‌ ಆಫ್ ಎಕನಾಮಿಕ್ಸ್‌ನ ನಿರ್ದೇಶಕ ಅನುಪ್‌ ಕೆ. ಪೂಜಾರಿ ಮತ್ತಿತರರು ಇದ್ದರು.

ಅಭಿವೃದ್ಧಿ ಅಂದ್ರೆ ಬರೀ ರಸ್ತೆ, ಸೇತುವೆಗಳಲ್ಲ: ಸಿಎಂ
ಕರ್ನಾಟಕದಲ್ಲಿ ಆಕರ್ಷಕ ರಸ್ತೆಗಳು, ಉಕ್ಕು ಮತ್ತು ಗಾಜಿನ ಎತ್ತರದ ಸೇತುವೆಗಳು, ಬುಲೆಟ್‌ ರೈಲುಗಳನ್ನಷ್ಟೇ ಅಭಿವೃದಿಟಛಿಯೆಂದು ಪರಿಗಣಿಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಸಮಾರಂಭದಲ್ಲಿ ಮಾತನಾಡಿದ ಅವರು, ರಸ್ತೆ, ಸೇತುವೆಗಳ ನಿರ್ಮಾಣ ಮಾತ್ರ ಅಭಿವೃದ್ಧಿಯಲ್ಲ. ಮಾನವ ಅಭಿವೃದ್ಧಿಗೆ ಸಂಬಂಧಿಸಿದ ಆರೋಗ್ಯ, ಶಿಕ್ಷಣ, ಪೌಷ್ಟಿಕತೆ ಮತ್ತು ಅವಕಾಶಗಳು ನಿಜವಾದ ಅಭಿವೃದ್ಧಿ ಎಂದರು. ಜನರಿಗೆ ತಮಗಿಷ್ಟದ ಆಹಾರ ಆಯ್ಕೆ ಮಾಡಿಕೊಳ್ಳಲು, ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಲು ಯಗ್ರಸ್ಥರಾಗಿದ್ದರೆ ಸಮಾಜದ ಪ್ರಗತಿ ಹೊಂದಲು ಸಾಧ್ಯವಿಲ್ಲ. ಹಸಿವು ಏನೆಂದುಗೊತ್ತಿರದವರು ಅನ್ನಭಾಗ್ಯ ಯೋಜನೆಯನ್ನು ಕಿಸುತ್ತಾರೆ. ಆದರೆ, ಇಂತಹ ಟೀಕೆಗಳಿಗೆ ರ್ಕಾರ ಕಿವಿಗೊಡುವುದಿಲ್ಲ ಎಂದರು.

ಇಡೀ ದೇಶದಲ್ಲಿ ಶಿಕ್ಷಣ ತ್ತು ಆರೋಗ್ಯದ ಉತ್ತಮ ಸೌಲಭ್ಯಗಳಿರುವುದು ಕರ್ನಾಟಕದಲ್ಲಿ ತ್ರ. ಬೆಂಗಳೂರು ಡಾ. ಬಿ.ಆರ್‌. ಬೇಡ್ಕರ್‌ ಸ್ಕೂಲ್‌ ಆಫ್ ಎಕನಾಮಿಕ್ಸ್‌ ದೇಶದ ಮೊದಲ ಸಂಸ್ಥೆಯಾಗಿದ್ದು, ಇದು ರ್ನಾಟಕದ ಪ್ರಗತಿಯ ಸಂಕೇತ.
– ವಜುಭಾಯಿ ವಾಲಾ, ರಾಜ್ಯಪಾಲರು

ಉನ್ನತ ಶಿಕ್ಷಣದಲ್ಲಿ ಒಟ್ಟಾರೆ ದಾಖಲಾತಿ ಅನುಪಾತ ಶೇ.27 ರಷ್ಟಿದ್ದು, 10 ವರ್ಷ ಗಳಲ್ಲಿ ಅದನ್ನು ಶೇ.40ಕ್ಕೆ ಹೆಚ್ಚಿಸುವ ಗುರಿ
ಹೊಂದಲಾಗಿದೆ. ಅದಕ್ಕಾಗಿ ಕಾಲೇಜು ಶಿಕ್ಷಣ ಪಡೆಯುವ ಯುವಕರಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುವುದು. ಅಂಬೇಡ್ಕರ್‌ ಸ್ಕೂಲ್‌ ಆಫ್ ಎಕನಾಮಿಕ್ಸ್‌ ಈ ನಿಟ್ಟಿನ ಮಹತ್ವದ ಹೆಜ್ಜೆ.

– ಸಿದ್ದರಾಮಯ್ಯ, ಮುಖ್ಯಮಂತ್ರಿ

ಟಾಪ್ ನ್ಯೂಸ್

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Chikkamagaluru: ಸಾವಿನಲ್ಲೂ ಸಾರ್ಥಕತೆ; ಅಪಘಾತದಿಂದ ಮೃತಪಟ್ಟ ಯುವಕರ ನೇತ್ರದಾನ

Chikkamagaluru: ಸಾವಿನಲ್ಲೂ ಸಾರ್ಥಕತೆ… ರಸ್ತೆ ಅಪಘಾತದಿಂದ ಮೃತಪಟ್ಟ ಯುವಕರ ನೇತ್ರದಾನ

Sandalwood: ಮೀ ಟೂ ಪ್ರಕರಣ; ಸೆ.16ಕ್ಕೆ ಚಿತ್ರರಂಗ ಸಭೆ

Sandalwood: ಮೀ ಟೂ ಪ್ರಕರಣ; ಸೆ.16ಕ್ಕೆ ಚಿತ್ರರಂಗ ಸಭೆ

Mudhol: ಈ ಸಾರ್ವಜನಿಕ ಆಸ್ಪತ್ರೆಗೆ 10 ತಿಂಗಳಿನಿಂದ ಪ್ರಭಾರಿ ವೈದ್ಯಾಧಿಕಾರಿಯೇ ದಿಕ್ಕು

Mudhol: ಈ ಸಾರ್ವಜನಿಕ ಆಸ್ಪತ್ರೆಗೆ 10 ತಿಂಗಳಿನಿಂದ ಪ್ರಭಾರಿ ವೈದ್ಯಾಧಿಕಾರಿಯೇ ದಿಕ್ಕು

9

Cabinet Meeting: ದಶಕದ ಬಳಿಕ ಕಲಬುರಗಿಯಲ್ಲಿ ಸಂಪುಟ ಸಭೆ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.