ಸಿಂಗಾಪುರ ಬ್ಯಾಡ್ಮಿಂಟನ್: ಸಿಂಧುಗೆ ಮರಿನ್ ಶಾಕ್
Team Udayavani, Apr 15, 2017, 11:52 AM IST
ನವದೆಹಲಿ: ಇಂಡಿಯನ್ ಓಪನ್ ಬ್ಯಾಡ್ಮಿಂಟನ್ ಕೂಟದ ಫೈನಲ್‌ನಲ್ಲಿ ಸಿಂಧು ವಿರುದ್ಧ ಎದುರಾದ ಸೋಲಿಗೆ ಸ್ಪೇನ್‌ನ ಖ್ಯಾತ ಆಟಗಾರ್ತಿ, ರಿಯೋ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತೆ ಕ್ಯಾರೋಲಿನಾ ಮರಿನ್ ಸೇಡು ತೀರಿಸಿಕೊಂಡಿದ್ದಾರೆ.
ಸಿಂಗಾಪುರ ಬ್ಯಾಡ್ಮಿಂಟನ್‌ನ ಮಹಿಳಾ ಸಿಂಗಲ್ಸ್ ಕ್ವಾರ್ಟರ್‌ಫೈನಲ್ ನಲ್ಲಿ ಭಾರತದ ಆಟಗಾರ್ತಿ 21-11, 21-15 ನೇರ ಸೆಟ್‌ಗಳ ಅಂತರದಿಂದ ಮರಿನ್‌ಗೆ ಶರಣಾಗಿದ್ದಾರೆ. ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಇತ್ತೀಚೆಗೆ ಮರಿನ್‌ರನ್ನು ಸೋಲಿಸಿ ಇಂಡಿಯನ್ ಬ್ಯಾಡ್ಮಿಂಟನ್ ಕೂಟ ಗೆದ್ದಿದ್ದರು. ಹೀಗಾಗಿ ಈ ಕೂಟದಲ್ಲಿ ಮರಿನ್‌ರನ್ನು ಸೋಲಿಸಿ ಸೆಮಿಫೈನಲ್‌ಗೆ ಏರಬಹುದು ಎನ್ನುವುದು ನಿರೀಕ್ಷೆ ಆಗಿತ್ತು. ಈ ಎಲ್ಲ ನಿರೀಕ್ಷೆಯನ್ನು ಸ್ಪೇನ್ ಆಟಗಾರ್ತಿ ಹುಸಿಗೊಳಿಸಿದರು ಎನ್ನುವುದು ವಿಶೇಷ.
ಪಂದ್ಯದ ಆರಂಭದಿಂದಲೂ ಮರಿನ್ ಬಿರುಸಿನ ಆಟಕ್ಕೆ ಮುಂದಾದರು. ಸಿಂಧುವಿಗೆ ಎಲ್ಲಿಯೂ ಚೇತರಿಸಿಕೊಳ್ಳಲು ಅವಕಾಶವನ್ನೇ ನೀಡಲಿಲ್ಲ.ಮೊದಲ ಗೇಮ್‌ನಲ್ಲಿ 11-21 ಅಂತರದಿಂದ ಸುಲಭವಾಗಿ ಮರಿನ್ ಗೇಮ್ ತನ್ನದಾಗಿಸಿಕೊಂಡರು. 2ನೇ ಗೇಮ್‌ನಲ್ಲೂ ಮರಿನ್‌ಗೆ ಸಿಂಧು ಸರಿಸಾಟಿಯಾಗಲಿಲ್ಲ. 19-13ರಿಂದ ಮುಂದಿದ್ದ ಸ್ಪೇನ್ ಆಟಗಾರ್ತಿ ಅಂತಿಮವಾಗಿ 21-15ರಿಂದ ಗೇಮ್ ತನ್ನದಾಗಿಸಿಕೊಂಡರು. 2-0ಯಿಂದ ಪಂದ್ಯ ಕೈವಶ ಮಾಡಿಕೊಂಡರು.
ಸಾಯಿ, ಶ್ರೀಕಾಂತ್ ಭರವಸೆ: ಪುರುಷರ ಸಿಂಗಲ್ಸ್ ಆಟಗಾರ ಸಾಯಿ ಪ್ರಣೀತ್ ಕೂಟದ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಕಪ್ ಗೆಲ್ಲುವ ಭರವಸೆ ಮೂಡಿಸಿದ್ದಾರೆ. ಇವರು ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಥಾಯ್ಲೆಂಡ್‌ನ ಥಾಂಗಕ್‌ರನ್ನು 15-21,21-14, 21-19 ಗೇಮ್‌ಗಳ ಅಂತರದಿಂದ ಸೋಲಿಸಿದರು. ಮತ್ತೂಂದು ಕ್ವಾರ್ಟರ್‌ಫೈನಲ್‌ನಲ್ಲಿ ಶ್ರೀಕಾಂತ್ 21-14-21-16 ರಿಂದ ಚೀನಾದ ಶಿ ಯೂಕಿ ಅವರನ್ನು ಮಣಿಸಿದರು. ಇವರೂ ಕೂಡ ಭಾರತಕ್ಕೆ ಪ್ರಶಸ್ತಿ ತರುವ ಭರವಸೆ ಮೂಡಿಸಿದ್ದಾರೆ.
ಮೊದಲ ಗೇಮ್ ಕಳೆದುಕೊಂಡು ಪ್ರಣೀತ್ ಪಂದ್ಯ ಕಳೆದುಕೊಳ್ಳುವ ಭೀತಿಗೆ ಸಿಲುಕಿದ್ದರು. ಆದರೆ 2 ಮತ್ತು 3ನೇ ಗೇಮ್‌ನಲ್ಲಿ ಅದ್ಭುತ ಆಟ ಪ್ರದರ್ಶಿಸಿದ ಸಾಯಿ ಪ್ರಣೀತ್ ಗೆಲುವು ಸಾರಿದರು. ಶ್ರೀಕಾಂತ್ ಕೂಡ ಅಚ್ಚರಿಯ ಆಟ ಪ್ರದರ್ಶಿಸಿ ಪಂದ್ಯ ಗೆದ್ದರು.
ಮಿಶ್ರಡಬಲ್ಸ್: ಅಶ್ವಿನಿ ಜೋಡಿ ಔಟ್: ಮಿಶ್ರ ಡಬಲ್ಸ್‌ನಲ್ಲಿ ಅಶ್ವಿನಿ ಪೊನ್ನಪ್ಪ – ಬಿ.ಸುಮಿತ್ ರೆಡ್ಡಿ ಕ್ವಾರ್ಟರ್‌ಫೈನಲ್‌ನಲ್ಲಿ ಸೋಲು ಕಂಡಿದ್ದಾರೆ. ಇವರು ಚೀನಾದ ಲ್ಯು ಕಾಯ್ ಮತ್ತು ಹ್ಯುವಾಂಗ್ ವಿರುದ್ಧ ಪರಾಭವಗೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mohammed Siraj: ಬಿಟೌನ್‌ನ ಈ ಹಾಟ್ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್ ಡೇಟಿಂಗ್?
IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
World Test Championship: ಪರ್ತ್ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ
IPL Auction 2025: ಯಾರು, ಯಾವ ತಂಡಕ್ಕೆ, ಎಷ್ಟು ಕೋಟಿಗೆ?.. ಇಲ್ಲಿದೆ ಇದುವರೆಗಿನ ಲಿಸ್ಟ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thirthahalli: ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ
RBI ಗವರ್ನರ್ ಶಕ್ತಿಕಾಂತ್ ದಾಸ್ ಚೆನ್ನೈ ಆಸ್ಪತ್ರೆಗೆ ದಾಖಲು; ಶೀಘ್ರವೇ ಡಿಸ್ ಚಾರ್ಜ್
Mundargi: ಲಾರಿ ಹರಿದು 12 ಕುರಿಗಳು ಸಾವು; 30 ಕುರಿಗಳು ಗಂಭೀರ ಗಾಯ
Belthangady: ಈ ಪುಟ್ಟ ಪೋರನಿಗಿದೆ 300 ವಿದೇಶಿ ಹಣ್ಣಿನ ಗಿಡ ಪರಿಚಯ!
Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.