ಬಾಬಾಸಾಹೇಬ್‌ ಆಧುನಿಕ ಭಾರತದ ಬುದ್ಧ


Team Udayavani, Apr 15, 2017, 1:06 PM IST

dvg1.jpg

ದಾವಣಗೆರೆ: ವಿಶ್ವದಲ್ಲೇ ಅತ್ಯಂತ ಶ್ರೇಷ್ಠವಾದ ಸಂವಿಧಾನ ನೀಡಿರುವ ಮಹಾನ್‌ ಮಾನವತಾವಾದಿ ಭಾರತರತ್ನ ಡಾ| ಬಿ.ಆರ್‌. ಅಂಬೇಡ್ಕರ್‌ ಆಧುನಿಕ ಭಾರತದ ಬುದ್ಧ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌. ಎಸ್‌. ಮಲ್ಲಿಕಾರ್ಜುನ್‌ ಬಣ್ಣಿಸಿದ್ದಾರೆ. ಶುಕ್ರವಾರ ಮಹಾನಗರಪಾಲಿಕೆ ಆವರಣದಲ್ಲಿ ಡಾ| ಬಿ.ಆರ್‌. ಅಂಬೇಡ್ಕರ್‌ ರವರ 126ನೇ ಜಯಂತಿ ಉದ್ಘಾಟಿಸಿ ಮಾತನಾಡಿದ ಅವರು, ಅಂಬೇಡ್ಕರ್‌ ಸಮಾನತೆಯ ಮಂತ್ರ ಬಿತ್ತಿದ ಆಧುನಿಕ ಭಾರತದ ಮಹಾನ್‌ ಮಾನವತಾವಾದಿ ಎಂದರು.

ಸಾಮಾಜಿಕ ತುಳಿತಕ್ಕೆ ಒಳಗಾಗಿದ್ದ ಬಡ ಕುಟುಂಬದಲ್ಲಿ 1891 ಏ. 14 ರಂದು ಜನಿಸಿದ ಅಂಬೇಡ್ಕರ್‌ ಬಾಲ್ಯದಲ್ಲೇ ಅಸ್ಪೃಶ್ಯತೆ ಎಂಬ ಬೆಂಕಿಯಲ್ಲಿ ಬೆಂದರೂ ದೃತಿಗೆಡದೆ ಸಾಮಾಜಿಕ ಕ್ರೌರ್ಯಕ್ಕೆ ಪ್ರತಿಯಾಗಿ ತಮ್ಮ ಎದೆಯೊಳಗೆ ಅಕ್ಷರಗಳನ್ನು ಬಿತ್ತಿಕೊಂಡು, ಅಪಮಾನದ ಮುಳ್ಳಿನ ಹಾದಿಯಲ್ಲಿ ನಡೆಯುತ್ತಲೇ ಉನ್ನತ ಪದವಿ ಪಡೆಯುತ್ತಾರೆ. ನಿರಂತರ ಪರಿಶ್ರಮ ಮತ್ತು ಅಧ್ಯಯನ ಶೀಲತೆಯಿಂದ ಬಹುದೊಡ್ಡ ವಿದ್ವಾಂಸರಾಗಿ ಹೊರ ಹೊಮ್ಮಿದವರು ಎಂದು ತಿಳಿಸಿದರು.

ಅಂಬೇಡ್ಕರ್‌ ಉದಾತ್ತ ಚಿಂತನೆಗಳ ಮೂಲಕ ಸಾವಿರಾರು ವರ್ಷಗಳಿಂದ ಶೋಷಣೆ, ತುಳಿತಕ್ಕೆ ಒಳಗಾಗಿದ್ದ ತಳ ಸಮುದಾಯಗಳನ್ನು ಒಗ್ಗೂಡಿಸಿ ಕುಡಿವ ನೀರಿನ ಕೆರೆ, ದೇಗುಲ ಪ್ರವೇಶ, ಮನು ಸ್ಮೃತಿ ಭಸ್ಮ ಮುಂತಾದ ಹೋರಾಟಗಳ ಮೂಲಕ ಜಾತಿ ವಿನಾಶಕ್ಕೆ ಶ್ರವಿಸಿದವರು. 20ಕ್ಕೂ ಹೆಚ್ಚು ವಿಭಾಗದಲ್ಲಿ ಅದ್ವಿತೀಯ ಪಾಂಡಿತ್ಯ ಹೊಂದಿದ್ದ ಅವರು ಪ್ರಖರ ಪ್ರಜಾತಂತ್ರಧಿವಾದಿ ಎನ್ನುವುದಕ್ಕೆ ಅವರು ನೀಡಿರುವ ಸಂವಿಧಾನವೇ ಸಾಕ್ಷಿ ಎಂದು ತಿಳಿಸಿದರು. 

ರಾಷ್ಟ್ರಪಿತ ಮಹಾತ್ಮ ಗಾಂಧಿಧೀಜಿಯವರು ಬ್ರಿಟಿಷರ ವಿರುದ್ಧ ಅಹಿಂಸಾತ್ಮಕ ಹೋರಾಟ ನಡೆಸಿ ಭಾರತಕ್ಕೆ ರಾಜಕೀಯ ಸ್ವಾತಂತ್ರ ತಂದು ಕೊಡಲು ಪ್ರಯತ್ನಿಸಿದರೆ ಅಂಬೇಡ್ಕರ್‌ ಭಾರತಕ್ಕೆ ರಾಜಕೀಯ ಸ್ವಾತಂತ್ರಕ್ಕಿಂತಲೂ ಮೊದಲು ಸಾಮಾಜಿಕ ಸ್ವಾತಂತ್ರ  ದೊರೆಯಬೇಕು ಎಂದು ಪ್ರತಿಪಾದಿಸುತ್ತಿದ್ದರು.

ಸಾಮಾಜಿಕ ಕ್ರಾಂತಿಯ ಹೊರತಾಗಿ ಸಮಾಜದಲ್ಲಿರುವ ಅಸಮಾನತೆಯನ್ನು ಹೋಗಲಾಡಿಸಲು ಸಾಧ್ಯವಿಲ್ಲ ಎಂದು ಬಲವಾಗಿ ನಂಬಿದ್ದ ಅವರು ಸಂವಿಧಾನದಲ್ಲಿ ಸಮಾನತೆಗೆ ಅತಿ ಹೆಚ್ಚಿನ ಮಹತ್ವ ನೀಡಿದ್ದಾರೆ ಎಂದು ತಿಳಿಸಿದರು. ಅಂಬೇಡ್ಕರ ಅಧ್ಯಕ್ಷತೆಯಲ್ಲಿ ರೂಪಿತವಾದ ಭಾರತ ಸಂವಿಧಾನ ಜಗತ್ತಿನಲ್ಲೇ ಶ್ರೇಷ್ಠ ಸಂವಿಧಾನವೆಂದು ಪರಿಗಣಿಸಲ್ಪಟ್ಟಿದೆ. 

ಅದಕ್ಕೆ ಕಾರಣ ಅಂಬೇಡ್ಕರ್‌ ಅವರಲ್ಲಿದ್ದ ಬಹುತ್ವ ಭಾರತದ ಸಾಂಸ್ಕೃತಿಕ ರಾಜಕೀಯ ನೆಲೆಗಳ ಜಾಗತಿಕ ತಿಳುವಳಿಕೆ, ಸರ್ವಧರ್ಮ ಸಮನ್ವಯ ಮನೋಭಾವ ಹಾಗೂ ಬಹು ಸಂಸ್ಕೃತಿಗಳ ಮಾನ್ಯತೆ ಎಂದು ತಿಳಿಸಿದರು.

ಅಂಬೇಡ್ಕರ್‌ ಕಾನೂನು ಸಚಿವರಾಗಿ ಹಿಂದೂ ಕೋಡ್‌ ಬಿಲ್‌ ಜಾರಿಗೆ ತರುವ ಮೂಲಕ ಮಹಿಳೆಯರಿಗೆ ಆಸ್ತಿ ಹಕ್ಕು, ವಿವಾಹ ವಿಚ್ಛೇದನ ಪಡೆಯುವ ಹಕ್ಕು, ಬಹು ಪತ್ನಿತ್ವ ನಿರಾಕರಣೆ, ವರದಕ್ಷಿಣೆ ನಿಷೇಧ, ಅಂತರ್ಜಾತಿ ವಿವಾಹಕ್ಕೆ ಅವಕಾಶ, ತಾಯ್ತನದ ಹೆರಿಗೆ ರಜೆ ಸೌಲಭ್ಯ ಮುಂತಾದ ಸೌಲಭ್ಯ ಒದಗಿಸುವ ಮೂಲಕ ಮಹಿಳಾ ಸಬಲೀಕರಣಕ್ಕೆ ನಾಂದಿ ಹಾಕಿದ್ದಾರೆ ಎಂದು ತಿಳಿಸಿದರು.    

ಟಾಪ್ ನ್ಯೂಸ್

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Davanagere; ನನ್ನಅಳಿಯನನ್ನು ಬಿಟ್ಟು ಬಿಟ್ಟಿದ್ದರೆ ದರ್ಶನ್‌ ಗೆ….: ರೇಣುಕಾಸ್ವಾಮಿ ಮಾವa

Davanagere; ನನ್ನಅಳಿಯನನ್ನು ಬಿಟ್ಟು ಬಿಟ್ಟಿದ್ದರೆ ದರ್ಶನ್‌ ಗೆ….: ರೇಣುಕಾಸ್ವಾಮಿ ಮಾವ

6-

Nyamathi ಪಟ್ಟಣದ ಹಲವೆಡೆ ಸರಣಿ ಕಳ್ಳತನ; ನಾಲ್ವರಲ್ಲಿ ಇಬ್ಬರು ಆರೋಪಿಗಳ ಬಂಧನ, ಸ್ವತ್ತು ವಶ

BC-Patil

Congress ವಿಪಕ್ಷದಲ್ಲಿದ್ದಾಗ ಕೋವಿಡ್ ಹಗರಣ ಬಗ್ಗೆ ಸುಮ್ಮನಿದ್ದಿದ್ದೇಕೆ?: ಬಿ.ಸಿ.ಪಾಟೀಲ್‌

Protest against Aadhaar link to agricultural pump set: Kodihalli Chandrasekhar

ಕೃಷಿ ಪಂಪ್ ಸೆಟ್ ಗೆ ಆಧಾರ‌ ಲಿಂಕ್ ಖಂಡಿಸಿ ಸೆ. 4ರಂದು ಪ್ರತಿಭಟನೆ: ಕೋಡಿಹಳ್ಳಿ ಚಂದ್ರಶೇಖರ್‌

Davanagere; Governor’s post should be abolished: CPI

Davanagere; ರಾಜ್ಯಪಾಲ ಹುದ್ದೆಯನ್ನೇ ರದ್ದು ಮಾಡಬೇಕು: ಸಿಪಿಐ ಆಗ್ರಹ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.