ಯುವ ಬಿಜೆಪಿಯಿಂದ ಪರಿಶಿಷ್ಟರ ಕುಟುಂಬ ದತ್ತು: ಪೂಂಜಾ
Team Udayavani, Apr 15, 2017, 2:21 PM IST
ಬೆಳ್ತಂಗಡಿ: ಅಂಬೇಡ್ಕರ್ ಜನ್ಮದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲು ದ.ಕ. ಜಿಲ್ಲಾ ಬಿಜೆಪಿ ಯುವ ಮೋರ್ಚಾ ತೀರ್ಮಾನಿಸಿದೆ. ಜಿಲ್ಲೆಯ ಬಿಜೆಪಿ ಮಂಡಲಗಳಲ್ಲಿ ಪರಿಶಿಷ್ಟರ ಕುಟುಂಬ ದತ್ತು ಪಡೆದು ಅಭಿವೃದ್ಧಿಗೆ ಸಹಾಯ ಮಾಡುವ ಮೂಲಕ ಅಂಬೇಡ್ಕರ್ ಆಶಯಗಳಿಗೆ ಬದ್ಧರಾಗುವ ಸಂಕಲ್ಪ ನಮ್ಮದು ಎಂದು ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಹರೀಶ್ ಪೂಂಜಾ ಹೇಳಿದ್ದಾರೆ.
ಸಮತೆ ಮತ್ತು ಮಮತೆಯಿಂದ ಸಮಾಜದಲ್ಲಿ ಸಮರಸ ತಂದ ಸಾಮಾಜಿಕ ಕ್ರಾಂತಿ ಸೂರ್ಯ, ಸಂವಿಧಾನ ಶಿಲ್ಪಿ, ಸಮಾಜ ಪರಿವರ್ತಕ, ಭಾರತ ರತ್ನ ಡಾ| ಬಿ.ಆರ್. ಅಂಬೇಡ್ಕರ್ ಅವರ 126ನೇ ಜನ್ಮ ಜಯಂತಿಯನ್ನು ವಿಶಿಷ್ಟವಾಗಿ ಆಚರಿಸಲು ತೀರ್ಮಾನಿಸಲಾಗಿದೆ. ಅಂಬೇಡ್ಕರ್ ಜಯಂತಿ ಪ್ರಯುಕ್ತ ದ.ಕ. ಜಿಲ್ಲಾ ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾದ ವತಿಯಿಂದ ಮೋದಿಜಿ ಅವರ “ಸಬ್ಕಾ ಸಾಥ್ ಸಬ್ಕಾ ವಿಕಾಸ್’ ಎನ್ನುವ ಮೂಲಮಂತ್ರದ ಆಶಯದಂತೆ “ಮಂಡಲಕ್ಕೊಂದು ಮನೆ’ ಎಂಬ ಯೋಜನೆ ಪ್ರಾರಂಭಿಸಲಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿ ಮಂಡಲದಲ್ಲಿ, ವರ್ಷಕ್ಕೆ ಒಂದು ಪ.ಜಾ. ಬಡ ಕುಟುಂಬವನ್ನು ಗುರುತಿಸಿ, ಆ ಕುಟುಂಬದ ಸರ್ವತೋಮುಖ ಅಭಿವೃದ್ಧಿಯನ್ನು ಮಂಡಲ ಯುವಮೋರ್ಚಾ ಕೈಗೆತ್ತಿಕೊಳ್ಳುವ ನಿರ್ಧಾರ ಮಾಡಿದೆ. ದತ್ತು ಪಡೆದುಕೊಂಡ ಕುಟುಂಬದ ಮಕ್ಕಳ ವಿದ್ಯಾಭ್ಯಾಸ, ಆರೋಗ್ಯ ರಕ್ಷಣೆ, ಗೃಹ ನಿರ್ಮಾಣ ಹೀಗೆ ಕುಟುಂಬದ ಸರ್ವತೋಮುಖ ಅಭಿವೃದ್ಧಿಗೆ ಯುವಮೋರ್ಚಾ ತಂಡ ಶ್ರಮಿಸಲಿದೆ ಎಂದು ಪೂಂಜಾ ತಿಳಿಸಿದ್ದಾರೆ.
ಡಾ| ಬಿ.ಆರ್. ಅಂಬೇಡ್ಕರ್ ಹಾಗೂ ಪ್ರಧಾನಿ ಮೋದಿ ಕನಸು ನನಸು ಮಾಡಲು ಅಳಿಲು ಸೇವೆ ಮಾಡುವ ಸಣ್ಣ ಪ್ರಯತ್ನವಷ್ಟೇ ನಮ್ಮದು ಎಂದು ಅವರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Betting App; ಬಾಲಿವುಡ್ ನಟಿಯರು ಪ್ರಚಾರ ಮಾಡಿದ್ದ ಬೆಟ್ಟಿಂಗ್ ಆ್ಯಪ್ ಮಾಲಕ ಪಾಕಿಸ್ತಾನಿ!
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ
Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.