ದೇವರ ಅನುಗ್ರಹ ದೊರೆತರೆ ಮಾತ್ರ ಸೇವೆಯ ಅವಕಾಶ: ಪುತ್ತಿಗೆ ಶ್ರೀ 


Team Udayavani, Apr 15, 2017, 2:56 PM IST

13-Yelooru-1.jpg

ಕಾಪು: ಮನುಷ್ಯನ ಜೀವನದಲ್ಲಿ ದೇವರ ಸೇವೆ ಅವಕಾಶ ಲಭಿಸುವುದೇ ಅತ್ಯಂತ ಶ್ರೇಷ್ಠ ಅನುಭವ ವಾಗಿದ್ದು, ದೇವರ ಅನುಗ್ರಹವಿದ್ದಲ್ಲಿ ದೇವರ ಸೇವೆಗೈಯ್ಯುವ ಬಾಗಿಲು ತೆರೆದುಕೊಳ್ಳುತ್ತದೆ. ಸಿಕ್ಕಿದ ಅವಕಾಶವನ್ನು ಸಮರ್ಪಕವಾಗಿ ಸದುಪಯೋಗ ಪಡಿಸಿಕೊಂಡಾಗ ಮಾತ್ರ ಪೂರ್ಣ ದೇವತಾನುಗ್ರಹ ಪ್ರಾಪ್ತಿಯಾಗುತ್ತದೆ ಎಂದು ಉಡುಪಿ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿದರು.ಎ. 13ರಂದು ಮಹತೋಭಾರ ಎಲ್ಲೂರು ಶ್ರೀ ವಿಶ್ವೇಶ್ವರ ದೇವಸ್ಥಾನದಲ್ಲಿ ಜರಗಿದ ನೂತನ ವ್ಯವಸ್ಥಾಪನ ಸಮಿತಿ ಪದಗ್ರಹಣ ಸಮಾರಂಭದ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದಕಾಪು ಶಾಸಕ ವಿನಯ ಕುಮಾರ್‌ ಸೊರಕೆ ಮಾತನಾಡಿ, ಧಾರ್ಮಿಕ ಪರಿಷ‌ತ್‌ ನೇತೃತ್ವದಲ್ಲಿ ದೇಗುಲಗಳ ಅಭಿವೃದ್ಧಿ/ ವ್ಯವಸ್ಥಾಪನ ಸಮಿತಿ ರಚನಾ ಪ್ರಕ್ರಿಯೆಗಳು ನಡೆಯು ತ್ತಿದ್ದು, ದೇಗುಲಗಳ ಸಮಗ್ರ ಅಭಿವೃದ್ಧಿಯೇ ಅದರ  ಹಿಂದಿನ ಉದ್ದೇಶ ವಾಗಿದೆ. ಸಮಿತಿ
ಸದಸ್ಯರು ಜನರಿಗೆ ಪರಿಚಿತರಾಗಿರಬೇಕೆಂಬ ಚಿಂತನೆ ಯೊಂದಿಗೆ ಪದಗ್ರಹಣ ಸಮಾರಂಭ ಆಯೋಜಿಸಲಾಗುತ್ತಿದೆ ವಿನಃ ಇದರಲ್ಲಿ ಯಾವುದೇ ರಾಜಕೀಯ ಉದ್ದೇಶವಿಲ್ಲ ಎಂದರು.

ಅದಾನಿ-ಯುಪಿಸಿಎಲ್‌ನ ಜಂಟಿ ಅಧ್ಯಕ್ಷ ಕಿಶೋರ್‌ ಆಳ್ವ ಮಾತನಾಡಿ, ಎಲ್ಲೂರು ವಿಶ್ವನಾಥ ದೇವರ ಅನುಗ್ರಹದಿಂದ ಕಂಪೆನಿ ಹಲವು ಜನಪರಕಾರ್ಯಕ್ರಮಗಳನ್ನು ಹಮ್ಮಿಕೊಳ್ಳು ತ್ತಿದೆ. ದೇಗುಲದ ವತಿಯಿಂದ ಸಮು ದಾಯ ಭವನ ನಿರ್ಮಾಣಕ್ಕೆ 1.10 ಕೋ. ರೂ. ಅನುದಾನವನ್ನು ಕಂಪೆನಿ ವತಿಯಿಂದ ಒದಗಿಸಲಾಗುವುದು ಎಂದರು.

ವಿವಿಧ ಯೋಜನೆಗೆ ಚಾಲನೆ 
ಎಲ್ಲೂರು ದೇವಸ್ಥಾನದ ವ್ಯಾಪ್ತಿ ಯಲ್ಲಿ ಅದಾನಿ-ಯುಪಿಸಿಎಲ್‌ ವತಿ ಯಿಂದ ನಿರ್ಮಿಸಲು ಉದ್ದೇಶಿಸಿ ರುವ ಮಹಾದ್ವಾರ, ದೇಗುಲದ ಗಾರ್ಡನ್‌ ರಚನೆ ಮತ್ತು ರಂಗ ಮಂಟಪ ರಚನೆಯ ನೀಲ ನಕ್ಷೆ ಬಿಡುಗಡೆಗೊಳಿಸಲಾಯಿತು. ಕಾಪು ಕ್ಷೇತ್ರದ 61 ದೇವಸ್ಥಾನಗಳಿಗೆ 21.96 ಲಕ್ಷ ರೂ. ತಸ್ತೀಕು ಭತ್ಯೆ ವಿತರಿಸಲಾಯಿತು.

ಎಲ್ಲೂರು ಶ್ರೀ ವಿಶ್ವೇಶ್ವರ ದೇವ ಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ವೈ. ಪ್ರಫುಲ್ಲ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಚಿತ್ರಾಪುರ ಮಠದ ಕಿರಿಯ ಯತಿಗಳಾದ ವಿದ್ಯೆàಂದ್ರ ತೀರ್ಥ ಸ್ವಾಮೀಜಿ ಉಪಸ್ಥಿತರಿದ್ದರು. ಜಾನಪದ ಸಂಶೋಧಕ ಕೆ.ಎಲ್‌. ಕುಂಡಂತಾಯ ಧಾರ್ಮಿಕ ಭಾಷಣ ಮಾಡಿದರು.
ಉದ್ಯಮಿ ಸುರೇಶ್‌ ಶೆಟ್ಟಿ ಗುರ್ಮೆ, ಎಲ್ಲೂರು ಗ್ರಾಮ ಪಂಚಾಯತ್‌ ಅಧ್ಯಕ್ಷೆವಸಂತಿ ಮಧ್ವರಾಜ್‌, ತಾಲೂಕು ಪಂಚಾಯತ್‌ ಸದಸ್ಯ ಕೇಶವ ಮೊಲಿ, ಮುಂಬಯಿ ಉದ್ಯಮಿಗಳಾದ ಪ್ರವೀಣ್‌ ಬಿ. ಶೆಟ್ಟಿ ಮಲ್ಲೆಟ್ಟು, ನಾರಾಯಣ ಕೆ. ಶೆಟ್ಟಿ ಎರ್ಮಾಳು, ಅಶೋಕ್‌ ಎನ್‌. ಶೆಟ್ಟಿ, ಕೊಂಡೆಟ್ಟು ಸುಕುಮಾರ್‌ ಶೆಟ್ಟಿ,ಕೃಷ್ಣ ವೈ. ಶೆಟ್ಟಿ, ಚಲನಚಿತ್ರ ನಟ ರಾಜಶೇಖರ ಕೋಟ್ಯಾನ್‌ ಮುದರಂಗಡಿ ಅತಿಥಿಗಳಾಗಿ ಭಾಗವಹಿಸಿದ್ದರು.

ವ್ಯವಸ್ಥಾಪನ ಸಮಿತಿ ಸದಸ್ಯರಾದ ಶೇಖರ ಡಿ. ಶೆಟ್ಟಿ ಮಾಣಿಯೂರು ಬರ್ಪಾಣಿ, ನಿರಂಜನ್‌ ಶೆಟ್ಟಿ ಎಲ್ಲೂರು ಕಿನ್ನೋಡಿಗುತ್ತು, ನರಸಿಂಹ ಜೆನ್ನಿ ಪಣಿಯೂರು, ಸೋಮನಾಥ ಪೂಜಾರಿ ಸಾಂತೂರು, ಜಯಲಕೀÒ$¾ ಆಳ್ವ ಪಾದೂರುಗುತ್ತು, ವಿಜಯಲಕೀÒ$¾ ದೇವಾಡಿಗ ಬೆಳಪು, ಬಾಲಕೃಷ್ಣ ಪಣಿ ಯೂರು ಮೊದಲಾದವರು ಉಪಸ್ಥಿತರಿದ್ದರು.ಬೆಳಪು ಸಿ.ಎ. ಬ್ಯಾಂಕ್‌ ಅಧ್ಯಕ್ಷ ಡಾ| ದೇವಿಪ್ರಸಾದ್‌ ಶೆಟ್ಟಿ ಸ್ವಾಗತಿಸಿ ದರು. ಎಲ್ಲೂರು ದೇಗುಲದ ಕಾರ್ಯ ನಿರ್ವಾಹಕ ಅಧಿಕಾರಿ ಪ್ರಶಾಂತ್‌ ಕುಮಾರ್‌ ಶೆಟ್ಟಿ ವಂದಿಸಿದರು. ಎಲ್ಲೂರು ಗ್ರಾಮಪಂಚಾಯತ್‌ ಸದಸ್ಯ ಸತೀಶ್‌ ಶೆಟ್ಟಿ ಗುಡ್ಡೆಚ್ಚಿ ಕಾರ್ಯಕ್ರಮ ನಿರೂಪಿಸಿದರು.
 

ಟಾಪ್ ನ್ಯೂಸ್

Bagheera: 3ನೇ ದಿನವೂ ಮುಂದುವರೆದ ʼಬಘೀರʼ ಬಾಕ್ಸಾಫೀಸ್‌ ಓಟ; ಗಳಿಸಿದ್ದೆಷ್ಟು?

Bagheera: 3ನೇ ದಿನವೂ ಮುಂದುವರೆದ ʼಬಘೀರʼ ಬಾಕ್ಸಾಫೀಸ್‌ ಓಟ; ಗಳಿಸಿದ್ದೆಷ್ಟು?

hk-patil

Waqf ಗೆಜೆಟ್ ನೋಟಿಫಿಕೇಶನ್ ನಲ್ಲಿ ಬಿಜೆಪಿ ಪಾಲಿದೆ: ಎಚ್.ಕೆ. ಪಾಟೀಲ್ ಕಿಡಿ

lakshaman-savadi

Waqf ವಿಷಯ ಮುಗಿದು ಹೋಗಿದೆ.. ಬಿಜೆಪಿಯವರಿಂದ ಗೊಂದಲ‌‌‌: ಲಕ್ಷ್ಮಣ ಸವದಿ

Khandre

Covid ಗಿಂತ ಬಿಜೆಪಿ ಭ್ರಷ್ಟಾಚಾರದಿಂದ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ: ಖಂಡ್ರೆ

firing

Delhi: ಕ್ಷುಲ್ಲಕ ಕಾರಣಕ್ಕೆ 19ರ ಯುವಕನ ಗುಂಡಿಕ್ಕಿ ಹ*ತ್ಯೆಗೈದ ಅಪ್ರಾಪ್ತರು!!

BBK11: ಬಿಗ್‌ಬಾಸ್‌ ಆಟ ನಿಲ್ಲಿಸಿದ ಖ್ಯಾತ ಸ್ಪರ್ಧಿ.. ಈ ವಾರ ಆಚೆ ಬರುವುದು ಇವರೇ

BBK11: ಬಿಗ್‌ಬಾಸ್‌ ಆಟ ನಿಲ್ಲಿಸಿದ ಖ್ಯಾತ ಸ್ಪರ್ಧಿ.. ಈ ವಾರ ಆಚೆ ಬರುವುದು ಇವರೇ

ARMY (2)

Srinagar; ಉಗ್ರ ವಿರೋಧಿ ಕಾರ್ಯಾಚರಣೆ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ ಬಿಸ್ಕೆಟ್‌ಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ದಿಶಾಂಕ್ ಆಪ್ ನಲ್ಲಿ ಕಾಣಿಸಿಕೊಂಡ ‘ಸುಲ್ತಾನ್ ಪುರ’… ಜಿಲ್ಲಾಧಿಕಾರಿಯಿಂದ ಸ್ಪಷ್ಟನೆ

Udupi: ದಿಶಾಂಕ್ ಆಪ್ ನಲ್ಲಿ ಕಾಣಿಸಿಕೊಂಡ ‘ಸುಲ್ತಾನ್ ಪುರ’… ಜಿಲ್ಲಾಧಿಕಾರಿಯಿಂದ ಸ್ಪಷ್ಟನೆ

1-katapady

Katapady: ಲಾರಿಗೆ ಟೂರಿಸ್ಟ್ ವಾಹನ ಢಿಕ್ಕಿ; ಹಲವು ಪ್ರವಾಸಿಗರಿಗೆ ಗಂಭೀರ ಗಾಯ

25-kota

Kota: ಮರೆಯಾಗುತ್ತಿವೆ ಮೇಟಿ ಪೂಜೆ, ರಾಶಿ ಪೂಜೆ

17-katapady

Katapady: ಹಟ್ಟಿಗೊಬ್ಬರ ಖರೀದಿ ಹೆಸರಲ್ಲಿ ಮೋಸ!

14-malpe

Malpe: ನಿರಂತರ ರಜೆ: ಬೀಚ್‌ಗಳಲ್ಲಿ ಪ್ರವಾಸಿಗರ ದಟ್ಟಣೆ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Bagheera: 3ನೇ ದಿನವೂ ಮುಂದುವರೆದ ʼಬಘೀರʼ ಬಾಕ್ಸಾಫೀಸ್‌ ಓಟ; ಗಳಿಸಿದ್ದೆಷ್ಟು?

Bagheera: 3ನೇ ದಿನವೂ ಮುಂದುವರೆದ ʼಬಘೀರʼ ಬಾಕ್ಸಾಫೀಸ್‌ ಓಟ; ಗಳಿಸಿದ್ದೆಷ್ಟು?

hk-patil

Waqf ಗೆಜೆಟ್ ನೋಟಿಫಿಕೇಶನ್ ನಲ್ಲಿ ಬಿಜೆಪಿ ಪಾಲಿದೆ: ಎಚ್.ಕೆ. ಪಾಟೀಲ್ ಕಿಡಿ

lakshaman-savadi

Waqf ವಿಷಯ ಮುಗಿದು ಹೋಗಿದೆ.. ಬಿಜೆಪಿಯವರಿಂದ ಗೊಂದಲ‌‌‌: ಲಕ್ಷ್ಮಣ ಸವದಿ

20

Dandeli: ಅಪರಿಚಿತ ವಾಹನ ಡಿಕ್ಕಿ; ಕರು ಸಾವು

Khandre

Covid ಗಿಂತ ಬಿಜೆಪಿ ಭ್ರಷ್ಟಾಚಾರದಿಂದ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ: ಖಂಡ್ರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.