ನನ್ನನ್ನು ಕಾ(ಪಾ)ಡುವ ಬೆಂಗಳೂರು


Team Udayavani, Apr 15, 2017, 3:59 PM IST

16.jpg

ಒಂದು ಸಲ ಒಬ್ಬ ಪಾಳೆಯಗಾರ ಎಲ್ಲಿಗೋ ಹೋಗುವಾಗ ಹಾದಿ ತಪ್ಪಿಹೋಗುತ್ತದೆ. ಹಸಿದು, ಬಾಯಾರಿ, ಬಳಲಿ ಅಲೆದಾಡುತ್ತಿ ದ್ದಾಗ ಒಂದು ಗುಡಿಸಲು ಕಾಣಿಸುತ್ತದೆ. ಅಲ್ಲಿ ಒಬ್ಬಳು ಮುಪ್ಪಾನು ಮುದುಕಿ ಒಲೆಯ ಮುಂದೆ ಕೂತಿರುತ್ತಾಳೆ. ದಣಿದು ಬಂದ ಪಾಳೆಯಗಾರನನ್ನು ಕೂರಿಸಿ ನೀರು ಕೊಡುತ್ತಾಳೆ. ಹಸಿದವನಿಗೆ ಕೊಡಲು ಮನೆಯಲ್ಲಿ ಏನೂ ಇರುವುದಿಲ್ಲ. ಕಡೆಗೆ, ಮನೆಯಲ್ಲಿದ್ದ ಬೇಯಿಸಿದ ಕಾಳುಗಳನ್ನು ಕೊಡುತ್ತಾಳೆ. ಪಾಳೆಯಗಾರನ ಹಸಿವು ಇಂಗುತ್ತದೆ. ದಣಿವಾರಿಸಿಕೊಂಡವನು ಸುಮ್ಮನೆ ಹಿಂದಿರುಗುವುದಿಲ್ಲ. ತನ್ನ ಹಸಿದ ಹೊಟ್ಟೆಗೆ ಆಹಾರ ಕೊಟ್ಟು ಕಾಪಾಡಿದ ಆ ನೆಲದಲ್ಲಿ ಒಂದು ಊರು ಕಟ್ಟಬೇಕೆಂದು ನಿಶ್ಚಯಿಸಿಕೊಳ್ಳುತ್ತಾನೆ. ಆ ಪಾಳೆಯಗಾರನ ಹೆಸರು ಕೆಂಪೇಗೌಡ! ಆ ಊರು ಬೆಂಗಳೂರು!! ಇದು ಎಲ್ಲರಿಗೂ ಗೊತ್ತು. ಹಾಗಾದರೆ ಆ ಅಜ್ಜಿಯ ಹೆಸರು? ಉಹೂಂ… ಯಾರಿಗೂ ಗೊತ್ತಿಲ್ಲ. ಅದಿರಲಿ, ಕೆಂಪೇಗೌಡ ಮತ್ತೆ ಆ ಅಜ್ಜಿಯ ಮನೆಗೆ ಹೋದನೆ? ಗೊತ್ತಿಲ್ಲ. ಆದರೆ ನನಗೆ ಯಾವಾಗಲೂ ಆ ಅಜ್ಜಿ ಬೆಂಗಳೂರಿನ ರೂಪಕವಾಗಿ ಕಾಣುತ್ತಾಳೆ. ನಾವೆಲ್ಲರೂ ಕೆಂಪೇಗೌಡನ ತುಣುಕುಗಳು. 

ನನಗೆ ನೆನಪು ಬಂದ ಮೇಲೆ ಮೊದಲ ಸಲ ನಾನು ಈ ಬೆಂಗಳೂರಿಗೆ ಕಾಲಿಟ್ಟಾಗ ಅಪ್ಪನ ಮೊಣಕಾಲುಗಳೆತ್ತರ ಇದ್ದೆ. ಆಗೆಲ್ಲಾ ನಮಗೆ ಬೆಂಗಳೂರು ಕನಸಿನ ಊರು. ಆಮೇಲೆ ಬೆಂಗಳೂರಿಗೆ ನೆಲೆಸಲು ಬಂದಾಗ ಇದು ನನ್ನ ಕರ್ಮಭೂಮಿಯೂ ಆಯಿತು. ಇಲ್ಲೇ  ಇರಲು ಬಂದ ಮೊದಲ ಕ್ಷಣದಿಂದಲೂ ಇದು ನನ್ನೂರೇ ಅನ್ನಿಸಿದೆ. ಈ ಊರಲ್ಲಿ ನಾನು ಪಡೆದ ಮೊದಲ ತಿಂಗಳ ಸಂಬಳ 900 ರೂ. ಅಷ್ಟರಲ್ಲೂ ನನ್ನನ್ನು ಪೊರೆದಿದೆ, ಈಗಲೂ ಪೊರೆಯುತ್ತಿದೆ. ಅಲ್ಲಿರುವುದು ನಮ್ಮನೆ, ಇಲ್ಲಿ ಬಂದೆ ಸುಮ್ಮನೆ ಎಂದು ನನಗೆ ಎಂದಿಗೂ ಅನ್ನಿಸಿಲ್ಲ. ಬೆಂಗಳೂರನ್ನು ನಾನೂ ಸಂಪೂರ್ಣವಾಗಿ ಒಳಗೆ ಬಿಟ್ಟುಕೊಂಡಿದ್ದೇನೆ ಹಾಗೆಯೇ ಬೆಂಗಳೂರು ಸಹ ನನ್ನನ್ನು ಒಪ್ಪಿಕೊಂಡಿದೆ. 

ಮೆಜೆಸ್ಟಿಕ್ಕು, ಅಲಂಕಾರ್‌ ಪ್ಲಾಜಾ, ಸ್ಟೇಟ್ಸು, ತ್ರಿವೇಣಿ… ಟ್ರೇನು ಹತ್ತಿ ಬಂದಿಳಿದರೆ ಬೆಂಗಳೂರು ಮಾಯಾಬಜಾರ್‌ ಸಿನಿಮಾದ ಮತ್ತೂಂದು ಮಜಲು. ಯಾರೋ ತೆರೆದಿಟ್ಟ ಪೆಟ್ಟಿಗೆಯಿಂದ ಹೊರಬಿದ್ದ ಕನಸೊಂದು ರಕ್ತಬೀಜಾಸುರನಾಗಿ ಹುಟ್ಟಿ ಭಸ್ಮಾಸುರನಾದಂತೆ ಮೊದಲೆÇÉಾ ಹೆದರಿಕೆ, ಸಂಜೆ ಟ್ರೇನಿನ ಕನವರಿಕೆ. ಟ್ರೇನಿನಿಂದ ಇಳಿದೊಮ್ಮೆ ಇÇÉೇ ನಿಂತೆ. ಅರೆ, ಬೆಂಗಳೂರಿನ ಬಾನಿನಲ್ಲೂ ಇದೆ ಕಾಮನಬಿಲ್ಲು, ಎಂ.ಜಿ ರೋಡಿನ ಕಡಲೆಬೀಜದ ಗಾಡಿಯವನೂ ವಾರಕ್ಕೊಮ್ಮೆ ಸಿಕ್ಕಾಗ ನಕ್ಕು, ನಾ ಹೇಳುವ ಮೊದಲೇ ಪೊಟ್ಟಣ ಕೈಗಿಡುತ್ತಾನೆ ಗಂಟೆಗಟ್ಟಲೆ ಕೂತು ಚಾ ಹೀರುತ್ತಾ ಸ್ನೇಹದ ಓನಾಮ ಕಲಿಸುವ ಕಾಫೀ ಶಾಪು, ಬ್ಲಾಸಮ್ಮು, ಕೋಶೀಸು ಬೆಂಗಳೂರೆಂದರೆ ಮಾಲ…, ಮೆಟ್ರೋ, ಟ್ರಾಫಿಕ್ಕು ಅಷ್ಟೇ ಅಲ್ಲ ಕಣ್ರೀ, ಇಲ್ಲಿ ಬಂದವರಿಗೆ ಬೆಂಗಳೂರು ತೆರೆದಷ್ಟೂ ಬಾಗಿಲು!  

ಇಲ್ಲಿ ಟ್ರಾಫಿಕ್‌ ಸಮಸ್ಯೆ ಹೆಚ್ಚು ಎನ್ನುವಾಗ, ಬೆಂಗಳೂರಿಗೆ  Incoming call  ಗಳೂ ಹೆಚ್ಚು  Incoming  ಕಾಲುಗಳೂ ಹೆಚ್ಚು ಎನ್ನುವುದನ್ನು ಮರೆಯುತ್ತೇವೆ, ಇಲ್ಲಿ ಯಾರು ಯಾರಿಗೂ ಇಲ್ಲ ಅನ್ನುವಾಗ ನಾವೂ ಸಹ ಪಕ್ಕದ ಮನೆಯವರನ್ನು ಮಾತನಾಡಿಸಿ ದಿನಗಳೇ ಉರುಳಿತು ಎನ್ನುವುದನ್ನು ಮರೆಯುತ್ತೇವೆ. ಇಲ್ಲಿ ಎಲ್ಲೆಲ್ಲೂ ಜನ, ಆದರೆ ನಾವು ಸಹ ಆ ಜನವೇ ಎನ್ನುವುದನ್ನು ಮರೆಯುತ್ತೇವೆ. ನಮ್ಮ ಮನಸ್ಸಿನಲ್ಲಿ ನೋವಿಲ್ಲದ, ಸಾವಿಲ್ಲದ ಶಾಂಗ್ರಿಲಾವಾಗಿ ಉಳಿದ ನಮ್ಮ ಬಾಲ್ಯದ ಊರನ್ನು ಮೊದಲ ಪ್ರೇಮದಂತೆ ಎದೆಯೊಳಗಿಟ್ಟುಕೊಂಡು, ಬೆಂಗಳೂರಿನ ಜೊತೆ ಮನಸ್ಸಿಲ್ಲದ ಮನಸ್ಸಿನಿಂದ ಸಂಸಾರ ಮಾಡುತ್ತಾ ಬೆಂಗಳೂರು ನಮ್ಮದಾಗಲಿಲ್ಲ ಎಂದು ಕೊರಗುತ್ತೇವೆ. ಬೆಂಗಳೂರು ಮಾತ್ರ ಮಾತೇ ಆಡದೆ ನಮ್ಮ ತಟ್ಟೆಗೆ ಬೆಂದ ಕಾಳುಗಳನ್ನು ಬಡಿಸುತ್ತಿರುತ್ತದೆ. ಬೆಂಗಳೂರು ಒಂದು ಘಟನೆಯಾಗಿ, ಒಂದು ವ್ಯಕ್ತಿಯಾಗಿ, ಒಂದು ಸಂದರ್ಭವಾಗಿ ಅಲ್ಲಾ ಇಡಿಯಾಗಿ ನನ್ನನ್ನು ಕಾಡುತ್ತದೆ, ಕಾಪಾಡುತ್ತದೆ. 

– ಸಂಧ್ಯಾರಾಣಿ  

ಟಾಪ್ ನ್ಯೂಸ್

ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ

Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ

7-lokayuktha

Surathkal: ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಮುಲ್ಕಿ ಕಂದಾಯ ನಿರೀಕ್ಷಕ

Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ‌ ಕಾಂಗ್ರೆಸ್ ಶಾಸಕ

Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ‌ ಕಾಂಗ್ರೆಸ್ ಶಾಸಕ

6-ptr

Puttur: ಬಸ್ – ಬೈಕ್‌ ಅಪಘಾತ; ಸವಾರ ಸಾವು

Parliament; Pushing in front of Parliament House; Two MPs injured, allegations against Rahul Gandhi

Parliament; ಸಂಸತ್‌ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್‌ ವಿರುದ್ದ ಆರೋಪ

BBK11: ಕೊನೆಗೂ ಬಿಗ್‌ ಬಾಸ್‌ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್‌ ಸುರೇಶ್

BBK11: ಕೊನೆಗೂ ಬಿಗ್‌ ಬಾಸ್‌ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್‌ ಸುರೇಶ್

ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು

ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

3

Belma: ಕುಸಿತ ಭೀತಿಯಲ್ಲಿರುವ ಮನೆ; ಕಾಂಕ್ರೀಟ್‌ ತಡೆಗೋಡೆಗೆ ಪಿಡಬ್ಲ್ಯುಡಿ ಪ್ರಸ್ತಾವ

ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ

Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ

7-lokayuktha

Surathkal: ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಮುಲ್ಕಿ ಕಂದಾಯ ನಿರೀಕ್ಷಕ

2

Mudbidri: ಸರಕಾರಿ ಬಸ್ಸಿಗಿಲ್ಲ ನಿಲ್ದಾಣ

Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ‌ ಕಾಂಗ್ರೆಸ್ ಶಾಸಕ

Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ‌ ಕಾಂಗ್ರೆಸ್ ಶಾಸಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.