ಚಿತ್ರಮಂದಿರದಲ್ಲಿ ಲೇಡಿ ಪೊಲೀಸ್ಗೆ ಕಿರಿಕ್!: ಕಾಮುಕನಿಗೆ ಗೂಸಾ !
Team Udayavani, Apr 15, 2017, 4:47 PM IST
ಹಾಸನ : ಇಲ್ಲಿನ ಚಿತ್ರಮಂದಿರವೊಂದರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಚಕ್ರವರ್ತಿ ಚಿತ್ರದ ಪ್ರದರ್ಶನದ ವೇಳೆ ಮಹಿಳಾ ಪೇದೆಯೊಬ್ಬರಿಗೆ ಕಿರಿಕ್ ಮಾಡಿ ಯುವಕನೊಬ್ಬ ಹಿಗ್ಗಾಮುಗ್ಗಾ ಏಟು ತಿಂದ ಘಟನೆ ಶುಕ್ರವಾರ ನಡೆದಿದೆ.
ಎಸ್ಜಿಬಿ ಚಿತ್ರಮಂದಿರದಲ್ಲಿ ಘಟನೆ ನಡೆದಿದ್ದು ರೈಲ್ಲೇ ಇಲಾಖೆಯ ಮಹಿಳಾ ಪೊಲೀಸ್ ಪೇದೆ ಭಾರತಿ ಅವರು ರಾತ್ರಿ ಚಿತ್ರ ವೀಕ್ಷಿಸಲು ಬಂದಿದ್ದರು. ಪ್ರದರ್ಶನ ನಡೆಯುವ ವೇಳೆ ಕಾಮುಕ ಯುವಕನೊಬ್ಬ ಕುಡಿದು ಬಂದಿದ್ದು , ಚೇಷ್ಠೆ ಶುರುವಿಟ್ಟುಕೊಂಡಿದ್ದಾನೆ. ಪಕ್ಕದಲ್ಲಿ ಕುಳಿತು ಕಾಲು ತಾಗಿಸಿ ತೊಂದರೆ ನೀಡಲು ಶುರುವಿಟ್ಟುಕೊಂಡಿದ್ದ, ಸಾಮದಿಂದ ಸರಿ ಕುಳಿತುಕೊಳ್ಳುವಂತೆ ಎಚ್ಚರಿಕೆ ನೀಡಿದ್ದಾರೆ. ಆದರೂ ತನ್ನ ಕುಚೇಷ್ಠೆ ಮುಂದುವರಿಸಿದ್ದಾನೆ .
ಕೂಡಲೆ ಭಾರತಿ ಅವರು ಯುವಕನನ್ನು ಚಿತ್ರಮಂದಿರದ ಹೊರಗೆ ಎಳೆದೊಯ್ದು ಕಪಾಳಕ್ಕೆ ನಾಲ್ಕೇಟು ಬಾರಿಸಿದ್ದಾರೆ. ಈ ವೇಳೆ ಚಿತ್ರಮಂದಿರದಲ್ಲಿದ್ದ ಇತರ ಪ್ರೇಕ್ಷಕರು ಕುತೂಹಲಿಗಳಾಗಿ ಚಿತ್ರ ವೀಕ್ಷಿಸುವುದನ್ನು ಬಿಟ್ಟು ಹೊರಗೆ ಬಂದು ಆಳಿಗೊಂದರಂತೆ ನಾಲ್ಕೇಟು ಬಾರಿಸಿದ್ದಾರೆ.
ಹಿಗ್ಗಾಮುಗ್ಗಾ ಥಳಿತಕ್ಕೊಳಗಾದ ಬಳಿಕ ಯುವಕ ಭಾರತಿ ಅವರ ಕಾಲಿಗೆ ಬಿದ್ದು ಕ್ಷಮೆ ಯಾಚಿಸಿದ್ದಾನೆ.
ಯುವಕ ಚಿಕ್ಕಮಗಳೂರು ಮೂಲದವನು ಎನ್ನಲಾಗಿದ್ದು , ಯಾವುದೇ ಪ್ರಕರಣ ದಾಖಲಾದ ಬಗ್ಗೆ ವರದಿಯಾಗಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cardamom: ಜಾಗತಿಕ ಉತ್ಪಾದನೆ ಕುಸಿತ : ಏಲಕ್ಕಿಗೂ ಶುಕ್ರದೆಸೆ: ಕೆ.ಜಿ.ಗೆ 3,000 ರೂ.!
Hassan: ಗರ್ಭಿಣಿ ಪತ್ನಿಯ ಹತ್ಯೆಗೈದು ಆತ್ಮಹ*ತ್ಯೆಗೆ ಯತ್ನಿಸಿದ ಪತಿ
Halebeedu; ನ. 29-ಡಿ. 4: ಜೈನರ ಗುತ್ತಿ ಕ್ಷೇತ್ರದಲ್ಲಿ ಪಂಚಕಲ್ಯಾಣ ಮಹೋತ್ಸವ
Belur: ಶಾಲೆ ಆವರಣದಲ್ಲಿ ಕಾಡಾನೆ ಪ್ರತ್ಯಕ್ಷ, ವಿದ್ಯಾರ್ಥಿಗಳ ಆತಂಕ
Hasana: ಹೊಳೆನರಸೀಪುರ ಸರಕಾರಿ ನರ್ಸಿಂಗ್ ಕಾಲೇಜಿನಲ್ಲಿ ಗಡ್ಡ ವಿವಾದ ಸುಖಾಂತ್ಯ!
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Puttur: ಮಾದಕ ಪದಾರ್ಥ ಸಹಿತ ಆರೋಪಿ ಸೆರೆ
Udupi; ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾಗಿ ರಮೇಶ್ ಕಾಂಚನ್ ಆಯ್ಕೆ
Road Mishap: ಬೀದರ್ ನಲ್ಲಿ ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಮೃತ್ಯು, ಮಹಿಳೆ ಗಂಭೀರ
Belgavi;ಸುವರ್ಣ ವಿಧಾನ ಸೌಧದ ಸುತ್ತ ನಿಷೇಧಾಜ್ಞೆ
Maharashtra ಮತದಾನ ಮುಗಿದ ನಂತರ 7% ಹೆಚ್ಚಳ : ECI ಸ್ಪಷ್ಟಪಡಿಸಬೇಕು ಎಂದ ಕಾಂಗ್ರೆಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.