ನಮಾಮಿ ಬ್ರಹ್ಮಪುತ್ರ ಎಲ್ಲಿ ನೋಡಿದರೂ ನೀರೇ ನೀರು!
Team Udayavani, Apr 16, 2017, 3:45 AM IST
ಬ್ರಹ್ಮಪುತ್ರ ನದಿಗೆ ಗೌರವ ಸಮರ್ಪಿಸುವ ನಮಾಮಿ ಬ್ರಹ್ಮಪುತ್ರ ಎಂಬ ಉತ್ಸವ ಇತ್ತೀಚೆಗೆ ಅಸ್ಸಾಂನ ವಿವಿಧೆಡೆಗಳಲ್ಲಿ ಬ್ರಹ್ಮಪುತ್ರದ ನದಿ ದಂಡೆಯ ಗುಂಟ ನಡೆಯಿತು. ಕರ್ನಾಟಕದಲ್ಲಿ ಕಾವೇರಿ ಉತ್ಸವವನ್ನು ಇದೇ ಮಾದರಿಯಲ್ಲಿ ಆಯೋಜಿಸಬಹುದಾಗಿದೆ.
ಭಾರತದ ಏಕೈಕ ಗಂಡು ನದಿ ಬ್ರಹ್ಮಪುತ್ರ.
ಹೀಗೆಂದು ಭಾರತಿಯರೆಲ್ಲರೂ ಭಾವಿಸಿಕೊಂಡಿ¨ªಾರೆ. ಆದರೆ ಪಶ್ಚಿಮ ಘಟ್ಟದಲ್ಲಿ ಹುಟ್ಟಿ ನೇತ್ರಾವತಿಯಲ್ಲಿ ಐಕ್ಯಗೊಳ್ಳುವ ಕುಮಾರಧಾರ ನದಿ ದಂಡೆಯಲ್ಲಿ ಹುಟ್ಟಿ ಬೆಳೆದ ನನ್ನಂಥವರು ಇದನ್ನು ಒಪ್ಪಿಕೊಳ್ಳಲು ಸಾಧ್ಯವೇ? ಇಲ್ಲವಲ್ಲ. ಯಾಕೆಂದರೆ, ಕುಮಾರಧಾರ ಗಂಡು ನದಿ, ಇದರ ದೊಡ್ಡಣ್ಣನಂತಿರುವ ಬ್ರಹ್ಮಪುತ್ರ ನದಿಗೆ ಗೌರವ ಸಮರ್ಪಿಸುವ ನಮಾಮಿ ಬ್ರಹ್ಮಪುತ್ರ ಎಂಬ ಉತ್ಸವವೊಂದು ಕಳೆದ ಮಾರ್ಚ್ 31ರಿಂದ ಎಪ್ರಿಲ್ 4ರ ತನಕ ಐದು ದಿನಗಳ ತನಕ ಅಸ್ಸಾಂನ ವಿವಿಧೆಡೆಗಳಲ್ಲಿ ಬ್ರಹ್ಮಪುತ್ರದ ನದಿ ದಂಡೆಗಳಲ್ಲಿ ನಡೆಯಿತು. ಅಸ್ಸಾಂನ ರಾಜಧಾನಿ ಗೌಹಾಟಿ. ಪುರಾಣದ ಹಿನ್ನೆಲೆಯಿಂದ ನೋಡಿದರೆ ಮಹಾಭಾರತದಲ್ಲಿ ಕಾಮರೂಪವೆಂಬ ರಾಜ್ಯದ ಉÇÉೇಖವಿದೆ. ಅದರ ರಾಜಧಾನಿ ಪ್ರಾಗೊjàತಿಷ್ಯಪುರ. ಅದೇ ಇಂದಿನ ಗೌಹಾಟಿ.
ಬ್ರಹ್ಮಪುತ್ರ ಹಲವು ವೈಶಿಷ್ಟéಗಳನ್ನೊಳಗೊಂಡ ಮಹಾನದಿ. ಅದು ಈಗ ಚೀನಾದ ಸ್ವಾಧೀನದಲ್ಲಿರುವ ಟಿಬೆಟ್‌ನಲ್ಲಿ ಸಮುದ್ರ ಮಟ್ಟದಿಂದ 17,093 ಅಡಿ ಎತ್ತರದಲ್ಲಿ ಹುಟ್ಟುತ್ತದೆ. ಅಲ್ಲಿ ಅದಕ್ಕಿರುವ ಹೆಸರು ಯಾರ್ಲುಂಗ್ ಟಾಂಗೊ³à. ಇಲ್ಲಿಂದ ಆರಂಭವಾಗುವ ಅದರ ಪಯಣ ಭಾರತವನ್ನು ದಾಟಿ ಬಾಂಗ್ಲಾ ದೇಶದತ್ತ ಮುನ್ನುಗ್ಗಿ ಬಂಗಾಳಕೊಲ್ಲಿಯನ್ನು ಸೇರುವಲ್ಲಿಯವರೆಗಿನ ಅದರ ಉದ್ದ 2,900 ಕಿ.ಮೀ. ಇತ್ತೀಚಿನ ಕೆಲವು ಸಂಶೋಧನೆಗಳ ಪ್ರಕಾರ ಅದರ ಉದ್ದ 3,350 ಕಿ.ಮೀ. ಇದರಲ್ಲಿ 1,700 ಕಿ.ಮೀ. ಟಿಬೇಟ…ನಲ್ಲಿ ಹರಿಯುತ್ತದೆ. ಭಾರತದಲ್ಲಿ 916 ಕಿ.ಮೀ. ಮತ್ತು ಬಾಂಗ್ಲಾದಲ್ಲಿ 284 ಕಿ.ಮೀ. ದೂರ ಕ್ರಮಿಸುತ್ತದೆ. ಬಾಂಗ್ಲಾದಲ್ಲಿ ಅದಕ್ಕಿರುವ ಹೆಸರು ಜಮುನಾ. ಟಿಬೇಟ… ನಲ್ಲಿ ಇದು ಹತ್ತು ಸಾವಿರ ಅಡಿಗಳಿಗಿಂತಲೂ ಹೆಚ್ಚು ಎತ್ತರದಲ್ಲಿ ಹರಿಯುತ್ತಿರುತ್ತದೆ. ಇಷ್ಟು ಎತ್ತರದಲ್ಲಿ ಹರಿಯುತ್ತಿರುವ ಜಗತ್ತಿನ ಮೊದಲ ನದಿಯಿದು. ಅರುಣಾಚಲಪ್ರದೇಶದ ಮುಖಾಂತರ ಭಾರತವನ್ನು ಪ್ರವೇಶಿಸುತ್ತದೆ. ಹಿಮಾಚಲ ಪ್ರದೇಶ ಕೂಡಾ ಹಿಮಾಲಯ ಪರ್ವತಶ್ರೇಣಿಯಲ್ಲಿ ಬರುವ ಕಾರಣದಿಂದಾಗಿ ಅಲ್ಲಿಯೂ ಬ್ರಹ್ಮಪುತ್ರ ಉಪ್ಪರಿಗೆಯ ಮೇಲಿನ ನದಿಯೇ. ಅಲ್ಲಿ ಅದಕ್ಕಿರುವ ಹೆಸರು ಸಿಯಾಂಗ್. ಸಿಯಾಂಗ್ ನದಿಗೆ ಡಿಬಾಂಗ್ ಮತ್ತು ಲೋಹಿತ್ ನದಿಗಳು ಸೇರಿಕೊಳ್ಳುತ್ತವೆ.
ಅಸ್ಸಾಂಗೆ ಇಳಿದ ಮೇಲೆ ಅದು ಸ್ವಲ್ಪಮಟ್ಟಿಗೆ ನೆಲದ ನದಿಯಾಗುತ್ತದೆ. ಇಲ್ಲಿ ಹಲವಾರು ಉಪನದಿಗಳು ಇದರೊಡನೆ ಸೇರಿಕೊಂಡು ಅದಕ್ಕೆ ಬ್ರಹ್ಮಪುತ್ರ ಎಂಬ ಅಭಿದಾನ ದೊರೆಯುತ್ತದೆ.
ಬ್ರಹ್ಮನ ಪುತ್ರ
ಬ್ರಹ್ಮದೇವನ ಪುತ್ರನಾದ ಕಾರಣ ಇದು ಬ್ರಹ್ಮಪುತ್ರ. ಹಾಗಾಗಿಯೇ ಇದು ಗಂಡುನದಿ, ಗಂಡಾದ ಕಾರಣದಿಂದಾಗಿಯೇ ಅಬ್ಬರ ಜಾಸ್ತಿ; ವಿದ್ವಂಸಕತೆಯೆಡೆಗೆ ಒಲವು. ಇದರ ಹರಹನ್ನು ನೋಡಿದವರು ಖಂಡಿತವಾಗಿಯೂ ಇದನ್ನು ನದಿಯೆನ್ನಲಾರರು, ಅದೊಂದು ಸಮುದ್ರ. ಅದರಲ್ಲಿಯೂ ಸಾಗರದಂತೆ ಅಲೆಗಳೇಳು ತ್ತವೆ. ಸೊಕ್ಕಿ ಹರಿದರೆ ಅಪಾರ ಸಂಖ್ಯೆಯಲ್ಲಿ ಆಸ್ತಿ ಮತ್ತು ಜೀವ ಹಾನಿಯನ್ನು ಉಂಟುಮಾಡುತ್ತದೆ. ಪ್ರತಿವರ್ಷವೂ ಈ ನದಿ ಉಕ್ಕಿ ಹರಿಯುತ್ತದೆ; ಇಲ್ಲಿಯ ಜನರ ದುಃಖಕ್ಕೆ ಕಾರಣವಾಗುತ್ತದೆ. ಬ್ರಹ್ಮಪುತ್ರ ಅಸ್ಸಾಂ ಜನತೆಯ ಜೀವಚೈತನ್ಯವೂ ಹೌದು, ಕಣ್ಣೀರಿನ ನದಿಯೂ ಹೌದು. ಈ ನದಿ ಅಸ್ಸಾಂ ರಾಜ್ಯವನ್ನು ಸದಾ ಹಚ್ಚ ಹಸಿರನ್ನಾಗಿ ನೋಡಿಕೊಳ್ಳುತ್ತದೆ, ಸುತ್ತ ನೀಲಾಚಲ ಪರ್ವತ. ಎಲ್ಲಿ ನೋಡಿದರೂ ಹಸಿರಾದ ಬಯಲು, ಈತ ರೊಚ್ಚಿಗೆದ್ದರೆ ಮಾರಣಹೋಮ ನಡೆಯುತ್ತದೆ. 1970ರಲ್ಲಿ ಸಂಭವಿಸಿದ ಭೀಕರ ನೆರೆಯಲ್ಲಿ ಸುಮಾರು ಮೂರು ಲಕ್ಷದಿಂದ ಐದು ಲಕ್ಷದಷ್ಟು ಜನರು ಸತ್ತಿರಬಹುದೆಂದು ಅಂದಾಜು ಮಾಡಲಾಗಿದೆ. ಕಳೆದ ವರ್ಷ ಈ ನದಿಯಲ್ಲಿ ನೆರೆ ಬಂದು ಕಾಜೀರಂಗ ನ್ಯಾಷನಲ್ ಪಾರ್ಕ್ ಮುಳುಗಿ ಅಸಂಖ್ಯಾತ ಪ್ರಾಣಿಗಳು ಕೊಚ್ಚಿ ಹೋಗಿದ್ದವು. ಇಲ್ಲಿಯೇ ಅಳಿವಿನಂಚಿನಲ್ಲಿರುವ ಘೇಂಡಾಮೃಗಗಳಿರುವುದು. ಹಾಗಾಗಿ ಕಾಜಿರಂಗ ವರ್ಲ್ಡ್ ಹೆರಿಟೇಜ… ಪಟ್ಟಿಯಲ್ಲಿ ಸೇರಿದೆ.
ಅಸ್ಸಾಂನಲ್ಲಿ ಬ್ರಹ್ಮಪುತ್ರದ ಆಳ ವಿಸ್ತಾರಗಳು ಎಷ್ಟಿದೆಯೆಂದರೆ ಕೆಲವೆಡೆ ಇದರ ಅಗಲ ಹತ್ತು ಕಿ.ಮೀ.ಗಳಿಗಿಂತಲೂ ಹೆಚ್ಚು . ಆಳ ಸರಾಸರಿ 124 ಅಡಿ. ಕೆಲವೆಡೆ ಇದು 360 ಅಡಿ ತಲುಪುತ್ತದೆ. ಆಳ ಮತ್ತು ವಿಸ್ತಾರದಲ್ಲಿ ಇದಕ್ಕೆ ದಕ್ಷಿಣ ಅಮೆರಿಕದ ಅಮೆಜಾನ್ ನದಿಯ ನಂತರದ ಸ್ಥಾನ ದೊರೆಯುತ್ತದೆ.
ನದೀತೀರದ ಮಹೋತ್ಸವಕ್ಕೆ ಮಳೆ ಬಂತು !
ಬ್ರಹ್ಮಪುತ್ರ ಎಗ್ಗಿಲ್ಲದ ಹರಿಯುವ ನದಿ. ಇದು ತನ್ನ ಬಾಹುಗಳನ್ನು ಎಲ್ಲಿ ಬೇಕಾದರೂ ಚಾಚಿಕೊಳ್ಳಬಹುದು. ತನ್ನ ದೇಹವನ್ನೇ ಸೀಳಿಕೊಳ್ಳಬಹುದು, ಹಾಗೆ ಎರಡು ಕವಲಾಗಿ ಹರಿದು ನಡುವೆ ಮಾಜುಲಿ ಎಂಬ 1225 ಚದರ ಕಿ.ಮೀ. ದ್ವೀಪವೊಂದನ್ನು ಸೃಷ್ಟಿrಸಿದೆ, ಇದು ಪ್ರಪಂಚದಲ್ಲಿಯೇ ನದಿಯೊಂದು ಸೃಜಿಸಿದ ಅತ್ಯಂತ ದೊಡ್ಡ ದ್ವೀಪವಾಗಿದೆ. ಕಳೆದ ವರ್ಷ ಅದನ್ನೊಂದು ಜಿÇÉೆಯನ್ನಾಗಿ ಘೋಷಣೆ ಮಾಡಲಾಗಿದೆ. ಪ್ರಸ್ತುತ ಅಸ್ಸಾಂನ ಮುಖ್ಯಮಂತ್ರಿಯಾಗಿರುವ ಸಬ್ರಾನಂದ ಸೋನುವಾಲ ಮಾಜುಲಿ ದ್ವೀಪಕ್ಕೆ ಸೇರಿದವರು.
ಇಂತಹ ವೈಬ್ರೆಂಟ್ ನದಿಯ ಉತ್ಸವವನ್ನು ನೋಡುವ ಬಯಕೆ ಹುಟ್ಟಿದರೆ ಅದನ್ನು ಹತ್ತಿಕ್ಕಲು ಸಾಧ್ಯವೆ? ಈ ಹಿಂದೆ ಲಡಾಕ್‌ನಲ್ಲಿ ನಡೆದ ಸಿಂಧು ಉತ್ಸವದಲ್ಲಿ ಭಾಗಿಯಾಗಿ¨ªೆ. ಅದೇ ಗುಂಗಿನಲ್ಲಿ ಗೌಹಾಟಿಗೆ ವಿಮಾನ ಹತ್ತಿ¨ªೆ. ಆದರೆ ನಾನಲ್ಲಿ ಇಳಿಯುತ್ತಿರುವಾಗಲೇ ಮಳೆರಾಯ ಅದ್ದೂರಿಯ ಸ್ವಾಗತ ನೀಡಿದ್ದ. ಮಳೆ ಹೊಯ್ದರೆ ಗೌಹಾಟಿ ನಗರದ ಹೊರವಲಯವೆಲ್ಲ ಕೊಚ್ಚೆಗುಂಡಿಯಂತಾಗುತ್ತದೆ. ಅಲ್ಲಿ ಹಲವಾರು ಕಡೆ ಸಮರ್ಪಕವಾದ ಒಳಚರಂಡಿ ವ್ಯವಸ್ಥೆಯಿದ್ದಂತಿರಲಿಲ್ಲ. ಗೌಹಾಟಿ ವಿಮಾನ ನಿಲ್ದಾಣದಿಂದ ಗೌಹಾಟಿಯ ಹೊರವಲಯದಲ್ಲಿರುವ ಬ್ರಹ್ಮಪುತ್ರ ದಂಡೆಯಲ್ಲಿರುವ ಸುಕ್ರೇಶ್ವರ ಘಾಟ…ಗೆ 22 ಕಿ.ಮೀ. ದೂರವಿದೆ. ಇÇÉೆಯೇ ನಮಾಮಿ ಬ್ರಹ್ಮಪುತ್ರ ದ ಮುಖ್ಯ ಉತ್ಸವ ನಡೆಯುತ್ತಿರುವುದು.
ನಮಾಮಿ ಬ್ರಹ್ಮಪುತ್ರ ಉತ್ಸವದ ಆಚರಣೆಗೆ ಅಸ್ಸಾಮಿನ ಎÇÉಾ 21 ಜಿÇÉೆಗಳೂ ಸಜ್ಜುಗೊಂಡಿದ್ದವು. ಹದಿನಾಲ್ಕು ಕೋಟಿ ರೂಪಾಯಿಗಳ ವೆಚ್ಚದಲ್ಲಿ ಬ್ರಹ್ಮಪುತ್ರ ನದಿ ದಂಡೆಗಳು ಮದುವೆ ಮಂಟಪದಂತೆ ಸಿಂಗಾರಗೊಂಡಿದ್ದವು. ಬಗೆ ಬಗೆಯ ಭಕ್ಷ್ಯಭೋಜ್ಯದ ಶಾಖಾಹಾರಿ ಮತ್ತು ಮಾಂಸಹಾರಿ ಸ್ಟಾಲ್‌ಗಳು ತಲೆಯೆತ್ತಿ ನಿಂತಿದ್ದವು. ಆದರೆ ಮಳೆರಾಯ ಇದೆಲ್ಲವನ್ನೂ ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತೆ ಮಾಡಿಬಿಟ್ಟ.
ನಮ್ಮಲ್ಲಿ ಅಂದರೆ ಕರ್ನಾಟಕದಲ್ಲಿ ಜೂನ್ ಮೊದಲ ಅಥವಾ ಎರಡನೆ ವಾರದಲ್ಲಿ ಮಳೆಗಾಲ ಆರಂಭವಾಗುತ್ತದೆ. ಅದಕ್ಕೂ ಒಂದು ವಾರಕ್ಕಿಂತ ಮೊದಲು ನೈಋತ್ಯ ಮಾರುತ ಕೇರಳವನ್ನು ಪ್ರವೇಶಿಸುತ್ತದೆ. ಕರ್ನಾಟಕದಿಂದ ಮೂರು ಸಾವಿರ ಕಿ.ಮೀ. ದೂರದಲ್ಲಿ ರುವ ಅಸ್ಸಾಂಗೆ ವಾಡಿಕೆಯ ಪ್ರಕಾರ ಮಳೆಗಾಲ ಆರಂಭವಾಗುವುದು ಬಿಸು ಹಬ್ಬದ ನಂತರವೇ. ಅಂದರೆ ಎಪ್ರಿಲ್ 14ರ ನಂತರ.
ಇವೆಲ್ಲ ಲೆಕ್ಕಾಚಾರವನ್ನು ಹಾಕಿಯೇ ನಮಾಮಿ ಬ್ರಹ್ಮಪುತ್ರ ಉತ್ಸವನ್ನು ಆಯೋಜಕರು ಹಮ್ಮಿಕೊಂಡಿದ್ದರು. ಆಯೋಜಕರಿಗೆ ಮಧ್ಯಪ್ರದೇಶ ಸರಕಾರವು ಹಲವಾರು ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದ ನಮಾಮಿ ನರ್ಮದಾ ಉತ್ಸವ ಪ್ರೇರಣೆಯಾಗಿತ್ತು. ಪ್ರವಾಸೋದ್ಯಮ, ಆರ್ಥಿಕ ಮತ್ತು ಸಾಂಸ್ಕೃತಿಕ ಆಯಾಮಗಳ ಬೆಸುಗೆಯನ್ನು ನಮಾಮಿ ಬ್ರಹ್ಮಪುತ್ರದ ಈ ಮೊದಲ ಉತ್ಸವದಲ್ಲಿ ಜಗತ್ತಿನೆದುರು ತೋರಿಸಲು ಅವರು ಉತ್ಸುಕರಾಗಿದ್ದರು. ಆದರೆ ಈ ಬಾರಿ ಎಪ್ರಿಲ… ಆರಂಭಕ್ಕೆ ಮುನ್ನವೇ ಮಳೆರಾಯ ಧಾಂಗುಡಿಯಿಟ್ಟಿದ್ದ.
ಬೋಡೋಗಳ ನಾಡು
ಅಸ್ಸಾಂ ಮೂಲತಃ ಬೋಡೋ ಎಂಬ ಬುಡಕಟ್ಟು ಜನಾಂಗದವರ ನಾಡು. ಅವರು ಇದನ್ನು “ಬುಲ್ಲಮ… ಬುಧೂರ್’ ಎಂದು ಕರೆಯುತ್ತಾರೆ. ಅವರ ಹಾಡು, ಕವಿತೆಗಳಲ್ಲಿ ಈ ನದಿಗೆ ವಿಶೇಷವಾದ ಮನ್ನಣೆಯಿದೆ. ಬೋಡೋ ಸೇರಿದಂತೆ ಇನ್ನಿತರ ಹಲವು ಬುಡಕಟ್ಟು ಜನರನ್ನು , ಮುಸ್ಲಿಮರನ್ನು , ಕ್ರಿಶ್ಚಿಯನ್ನರನ್ನು ಸರಕಾರವು ನಮಾಮಿ ಬ್ರಹ್ಮೋತ್ಸವದಿಂದ ದೂರವಿಡಲಾಗಿತ್ತು ಎಂಬ ಮಾತುಗಳು ಉತ್ಸವದಲ್ಲಿ ಅಲ್ಲಲ್ಲಿ ಕೇಳಿಬಂದವು. ಗಂಗಾ ಆರತಿಯ ಮಾದರಿಯÇÉೇ ಉದ್ಘಾಟನೆಯಂದು ಬ್ರಹ್ಮಪುತ್ರನಿಗೆ ದಶಾಸ್ವಮೇದ ಘಾಟ…ನಲ್ಲಿ ದೀಪದಾರತಿಯನ್ನು ಮಾಡಲಾಗಿತ್ತು. ಅದಕ್ಕೆಂದೇ ನಿಯೋ ವೈಷ್ಣವ ಪೂಜಾರಿಗಳನ್ನು ಹರಿದ್ವಾರದಿಂದ ಕರೆಸಲಾಗಿತ್ತು. ಆದರೆ ಗೌಹಾಟಿಯ ರಕ್ಷಕ ದೇವತೆಯಂತೆ ಎತ್ತರದ ಗುಡ್ಡದ ಮೇಲೆ ಕುಳಿತಿರುವ ಶಕ್ತಿ ದೇವತೆ ಕಾಮಾಖ್ಯ ದೇವಾಲಯದ ಮುಖ್ಯ ಅರ್ಚಕರಿಗೆ ಉತ್ಸವಕ್ಕೆ ಅಹ್ವಾನ ಕೊಟ್ಟಿರಲಿಲ್ಲ, ಇದು ಅಸ್ಸಾಮಿನ ಸತ್ರಿಯಾ (ಖಚಠಿಠಿrಜಿyಚ) ಕಲ್ಚರ್‌ಗೆ ಮಾಡಿದ ಅವಮಾನ ಎಂಬ ಮಾತುಗಳೂ ಕೇಳಿ ಬಂದವು.
ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರು ಉತ್ಸವದ ಉದ್ಘಾಟನೆಯನ್ನು ಮಾಡಿದಾಗ ಮಳೆರಾಯ ಅತ್ತ ಸುಳಿದಾಡದೆ ಮಾನ ಕಾಪಾಡಿದ್ದ. ಆದರೆ, ಮರುದಿನ ಎಪ್ರಿಲ… ಒಂದರಿಂದ ಸತತ ನಾಲ್ಕು ದಿನ ಹನಿ ತುಂಡಾಗಲೇ ಇಲ್ಲ. ಹಾಗಾಗಿ, ಯಾವ ಸಾಂಸ್ಕೃತಿಕ ಕಾರ್ಯಕ್ರಮಗಳೂ ಜರಗಲಿಲ್ಲ. ರಾಜ್ಯದ ಬೇರೆ ಬೇರೆ ಭಾಗಗಳಿಂದ ಕಲಾತಂಡಗಳು, ಕಲಾವಿದರು, ಹಾಡುಗಾರರು, ವಿದ್ಯಾರ್ಥಿಗಳು ನಿರಾಶೆಯಿಂದ ಹಿಂದಿರುಗಬೇಕಾಯ್ತು. ಕೊನೆಯ ದಿನ ಸಮಾರೋಪವನ್ನು ಕೂಡಾ ದೂರದ ಒಂದು ಸಭಾಂಗಣದಲ್ಲಿ ಮಾಡಬೇಕಾಯ್ತು. ಮಳೆ ಎಕ್ಕಸಕ್ಕ ಸುರಿಯುತ್ತಿದ್ದ ಕಾರಣ ನಾನೂ ಸೇರಿದಂತೆ ಬಹುತೇಕ ಪ್ರವಾಸಿಗರಿಗೆ ಅಲ್ಲಿಗೆ ಹೋಗಲಾಗಲಿಲ್ಲ. ಕೊನೆಯ ದಿನ ಸಂಜೆಯಾಗುತ್ತಿದ್ದಂತೆ ಬ್ರಹ್ಮಪುತ್ರ ಉಕ್ಕೇರಿ ವೇದಿಕೆಯತ್ತ ಮುನ್ನುಗ್ಗಲು ಪ್ರಯತ್ನಿಸುತ್ತಿತ್ತು. ಮೆಲ್ಲ ಮೆಲ್ಲನೆ ಅಂಗಡಿ ಮುಂಗಟ್ಟುಗಳತ್ತ ತೋಳು ಚಾಚತೊಡಗಿತು. ದಂಡೆಯಲ್ಲಿ ಬಿರುಕುಗಳು ಕಾಣಿಸಿಕೊಳ್ಳುತ್ತ ಅವು ಪುಟ್ಟ ಪುಟ್ಟ ಕಣಿವೆಗಳಾಗುತ್ತ ದೊಡ್ಡದಾಗತೊಡಗಿತು. ಅÇÉೇ ಇದ್ದ ಸೇನೆಯ ವಿಪತ್ತು ನಿರ್ವಹಣ ತಂಡದ ಸೈನಿಕರು ಅತ್ತಿತ್ತ ಓಡಾಡುವುದು ಹೆಚ್ಚಾಗತೊಡಗಿತು. ಅದನ್ನೆಲ್ಲ ನೋಡುತ್ತ ನಾನು ಮನಸ್ಸಿನÇÉೇ ಅಂದುಕೊಂಡೆ; “ಉದ್ಘಾಟನೆಯನ್ನು ಮನುಷ್ಯರು ತಮಗೆ ಬೇಕಾದಂತೆ ಮಾಡಿಕೊಂಡರು. ಸಮಾರೋಪವನ್ನು ನನಗೆ ಬೇಕಾದಂತೆ ಮಾಡಿಕೊಂಡೆ!’ ಎಂದು ಬ್ರಹ್ಮಪುತ್ರ ಹೇಳಿಕೊಳ್ಳುತ್ತಿರಬಹುದೆ- ಅಂತ.
ಇದೆÇÉಾ ಏನೇ ಇರಲಿ, ದೂರದೇಶಗಳಿಂದ, ದೇಶದ ಇನ್ನಿತರ ರಾಜ್ಯಗಳಿಂದ ಉತ್ಸವದಲ್ಲಿ ಪಾಲ್ಗೊಳ್ಳಲು ಜನ ಉತ್ಸಾಹದಿಂದ ಆಗಮಿಸಿದ್ದರು. ಕೈಯ್ಯಲ್ಲಿ ಬಣ್ಣಬಣ್ಣದ ಕೊಡೆ ಹಿಡಿದುಕೊಂಡೋ, ಇಲ್ಲವೇ ಮಳೆಯಲ್ಲಿ ನೆನೆದುಕೊಂಡೋ ಉತ್ಸವಕ್ಕೆಂದು ನಿಗದಿಯಾದ ಜಾಗದಲ್ಲಿ ಓಡಾಡುತ್ತಾ, ಸ್ಟಾಲ…ಗಳಲ್ಲಿ ಬಟ್ಟೆಬರೆ, ವಸ್ತುಗಳನ್ನು ಖರೀದಿಸುತ್ತ. ಬ್ರಹ್ಮಪುತ್ರನೊಡನೆ ಸೆಲ್ಫಿ ತೆಗೆದುಕೊಳ್ಳುತ್ತ ಸಂಭ್ರಮಿಸುತ್ತಿದ್ದರು. ಸುರಿಯುವ ಮಳೆಯÇÉೇ ಬ್ರಹ್ಮಪುತ್ರದ ನಡುಗಡ್ಡೆಯಲ್ಲಿರುವ ಉಮಾನಂದ ಮತ್ತು ಗುಡ್ಡದ ಮೇಲೆ ಕುಳಿತಿರುವ ಶಕ್ತಿ ದೇವತೆ ಕಾಮಾಖ್ಯದ ದರ್ಶನಕ್ಕೆ ಹೋಗಿ-ಬರುತ್ತಿದ್ದರು.
ನಮಾಮಿ ಬ್ರಹ್ಮಪುತ್ರ ಆಯೋಜಕರ ದೃಷ್ಟಿಯಲ್ಲಿ ಮಳೆಯಿಂದಾಗಿ ಉತ್ಸವ ಅಸ್ತವ್ಯಸ್ತಗೊಂಡಿರಬಹುದು. ಆದರೆ ಪ್ರವಾಸಿಗರ, ಜನಸಾಮಾನ್ಯರ ದೃಷ್ಟಿಯಲ್ಲಿ ಗೆದ್ದಿದೆ. ಮುಂದಿನ ವರ್ಷ ಈ ಬಾರಿ ಆದ ಲೋಪ ದೋಷಗಳನ್ನು ಸರಿಪಡಿಸಿಕೊಂಡರೆ ದೇಶದ ಅತೀ ದೊಡ್ಡ ನದಿ ಉತ್ಸವ ಇನ್ನೂ ಹಲವು ನದಿ ಉತ್ಸವಗಳಿಗೆ ಮುನ್ನುಡಿಯಾಗಬಹುದು, ಯಾಕೆಂದರೆ ಕರ್ನಾಟಕದಲ್ಲಿಯೂ ಪ್ರವಾಸೋದ್ಯಮವನ್ನು ಬಲಪಡಿಸುವ ಉದ್ದೇಶದಿಂದ ಕಾವೇರಿ ದರ್ಶನ ಉತ್ಸವಕ್ಕೆ ಕೊಡಗು ಜಿÇÉಾ ಪಂಚಾಯತ್ ಮುಂದಾಗಿದೆ. ಇದಕ್ಕಾಗಿ ಅದು ಕೇಂದ್ರಕ್ಕೆ 94 ಲಕ್ಷ ರೂಪಾಯಿಗಳ ಪ್ರಸ್ತಾವನೆಯೊಂದನ್ನು ಸಲ್ಲಿಸಿದೆ.
ನೆಲಜಲಭಾಷೆಗಳು ಮನುಷ್ಯರನ್ನು ಭಾವನಾತ್ಮಕವಾಗಿ ಬೆಸೆಯುತ್ತವೆ. ಚೀನಾ ಈಗಾಗಲೇ ಬ್ರಹ್ಮಪುತ್ರಾ ನದಿಗೆ ಬಲು ದೊಡ್ಡದಾದ ಅಣೆಕಟ್ಟನ್ನು ಕಟ್ಟಿದೆ. ಈ ನದಿಯ ಇನ್ನಷ್ಟು ನೀರನ್ನು ಕಬಳಿಸಿಕೊಳ್ಳಲು ಅದು ಹೊಸ ಹೊಸ ಯೋಜನೆಗಳನ್ನು ಹಾಕಿಕೊಳ್ಳುತ್ತಲೇ ಇದೆ, ಇಂತಹ ಸಂದರ್ಭಗಳಲ್ಲಿ “ಈ ನದಿ ನಮ್ಮದು’ ಎಂಬ ಭಾವನೆ ಮತ್ತಷ್ಟು ಬಲಗೊಳ್ಳಲು ಆ ನದಿ ದಡದಲ್ಲಿ ಹುಟ್ಟಿದ ಕಲೆ, ಸಂಸ್ಕೃತಿಯನ್ನು ಪ್ರಚುರಪಡಿಸುವ ಇಂತಹ ಉತ್ಸವಗಳು ಇನ್ನಷ್ಟು ನಡೆಯುತ್ತಿರಬೇಕು.
– ಉಷಾ ಕಟ್ಟೇಮನೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Bidar: ವಕ್ಫ್ ಹೋರಾಟ ಆರಂಭಿಸಿದ ಯತ್ನಾಳ್- ಜಾರಕಿಹೊಳಿ ತಂಡ
ಮಕ್ಕಳನ್ನು ಶಾಲೆಗೆ ಸೇರಿಸೋದು ಮುಖ್ಯವಲ್ಲ, ನಿತ್ಯವೂ ಕಳುಹಿಸಿ… :ಸಚಿವ ಮಧು ಬಂಗಾರಪ್ಪ
Protest: ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ
Drink & Drive Case: ಕುಡಿದು ವಾಹನ ಚಾಲನೆ; ʼಮಂಜುಮ್ಮೆಲ್ ಬಾಯ್ಸ್ʼ ನಟ ಬಂಧನ
Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.