ಬೈಕ್ ಮೇಲೆ ಲೈಂಗಿಕ ಕೌಶಲ್ಯ ತೋರಲು ಮುಂದಾದ ವ್ಯಕ್ತಿ!
Team Udayavani, Apr 16, 2017, 1:13 PM IST
ಲಂಡನ್: ಮುಂದುವರಿದ ರಾಷ್ಟ್ರಗಳು ಕೇವಲ ಜೀವನ ಶೈಲಿ, ತಂತ್ರಜ್ಞಾನ ಮೊದ ಲಾದ ಕ್ಷೇತ್ರಗಳಲ್ಲಷ್ಟೇ ಮುಂದುವರಿದಿಲ್ಲ. ಬದಲಿಗೆ ಅಲ್ಲಿನ ಜನರ ಲೈಂಗಿಕ ಆಸಕ್ತಿ ಕೂಡ ತುಂಬಾ ಮುಂದುವರಿದಿದೆ. ಆಗ್ನೇಯ ಇಂಗ್ಲೆಂಡ್ನ ಕೆಂಟ್ ರಾಷ್ಟ್ರದ ಪ್ರಸಿದ್ಧ ಪ್ರವಾಸಿ ತಾಣ ಕ್ಯಾಂಟರ್ಬರಿಯಲ್ಲಿ ವ್ಯಕ್ತಿ ಮೋಟರ್ಬೈಕ್ ಮೇಲೆ ತನ್ನ ಲೈಂಗಿಕ ಕೌಶಲ್ಯ ತೋರಲು ಮುಂದಾಗಿ, ತನ್ನ ಯತ್ನ ವಿಫಲವಾದಾಗ ಬೈಕ್ಗೆ ಕಾಲಿನಿಂದ ಒದ್ದು, ತಳ್ಳಿದ ಆರೋಪ ಎದುರಿಸುತ್ತಿದ್ದಾನೆ!
ಕ್ಯಾಂಟರ್ಬರಿ ನಿವಾಸಿ, 33 ವರ್ಷದ ಕೆವಿನ್ ಚಾಪ್ಮನ್ ಇಂಥ ಗಂಭೀರ ಆರೋಪ ಎದುರಿಸುತ್ತಿರುವ ವ್ಯಕ್ತಿ. ಮಾ.27ರಂದು ಸುಜುಕಿ ಕಂಪನಿಯ ಮೋಟರ್ ಬೈಕ್ ಬಳಿ ನಿಂತ ಚಾಪ್ಮನ್, ತನ್ನ ಗುಪ್ತಾಂಗ ಹೊರತೆಗೆದು, ಲೈಂಗಿಕ ಕ್ರಿಯೆ ನಡೆಸಲು ಯತ್ನಿಸಿದ್ದಾನೆ. “ವಾಹನ ಸ್ಪಂದಿಸದಿದ್ದಾಗ’ ಅದನ್ನು ಒದ್ದು, ತಳ್ಳಿದ್ದಾನೆ ಎಂಬ ಆರೋಪ ವಿದೆ. ಆದರೆ ಇದನ್ನು ತಳ್ಳಿಹಾಕಿರುವ ಚಾಪ್ಮನ್, “ಸ್ಥಳದಲ್ಲಿದ್ದ ನಿರಾಶ್ರಿತರು ನನ್ನನ್ನು ಬೈಕ್ ಮೇಲೆ ತಳ್ಳಿದರು’ ಎಂದಿದ್ದಾನೆ. ಮತ್ತೂಂದು ಪ್ರಕರಣದಲ್ಲಿ ವ್ಯಕ್ತಿಯೊಬ್ಬರಿಗೆ ಬೆದರಿಸಿದ ಆರೋಪವನ್ನೂ ಚಾಪ್ಮನ್ ಎದುರಿಸುತ್ತಿದ್ದಾನೆ.
“ನಾನು ನಿನ್ನನ್ನು ಹುಡುಕಿ ಕೊಂಡು ಬರುತ್ತೇನೆ. ಮನೆಯವರು, ಮಕ್ಕಳು ಕೂಡಗುರುತಿಸಲಾಗದಂತೆ ನಿನ್ನನ್ನು ಕತ್ತರಿಸುತ್ತೇನೆ. ಇದು ನಿನ್ನ ಕಡೆಯ ದಿನ,’ ಎಂಬುದಾಗಿ ವ್ಯಕ್ತಿಯೊಬ್ಬರಿಗೆ ಸಂದೇಶ ಕಳುಹಿಸಿದ್ದ. ಈ ಆರೋಪವನ್ನು ಕೂಡ ಕೆವಿನ್ ಚಾಪ್ಮನ್ ಅಲ್ಲಗಳೆದಿದ್ದು, ಈತನ ಹೇಳಿಕೆ ಆಲಿಸಿದ ಫೋಕ್ಸ್ಟೋನ್ ಮ್ಯಾಜಿ ಸ್ಟ್ರೇಟ್ ನ್ಯಾಯಾಲಯ ವಿಚಾರಣೆಯನ್ನು ಜೂ.13ಕ್ಕೆ ಮುಂದೂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.