ಉ.ಕೊರಿಯಾ ಶಕ್ತಿ ಪ್ರದರ್ಶನ


Team Udayavani, Apr 16, 2017, 1:22 PM IST

north.jpg

ವಾಷಿಂಗ್ಟನ್‌/ಪೊÂàಂಗ್ಯಾಂಗ್‌: ಅಮೆರಿಕ ಮತ್ತು ಉತ್ತರ ಕೊರಿಯಾ ನಡುವಿನ ಪ್ರಕ್ಷುಬ್ಧ ವಾತಾವರಣವು ಎಲ್ಲಿ ಪರಮಾಣು ಯುದ್ಧಕ್ಕೆ ನಾಂದಿ ಹಾಡುತ್ತದೆಯೋ ಎಂಬ ಭೀತಿಯ ನಡುವೆಯೇ ಶನಿವಾರ ಉತ್ತರ ಕೊರಿಯಾವು ಬೃಹತ್‌ ಸೇನಾ ಪರೇಡ್‌ ನಡೆಸಿ ಬಲ ಪ್ರದರ್ಶನ ಮಾಡಿದೆ. ಈ ಮೂಲಕ ಅಮೆರಿಕದ ದಾಳಿಗೆ ನಾವು ಸರ್ವಸನ್ನದ್ಧರಾಗಿದ್ದೇವೆ ಎಂಬ ಪರೋಕ್ಷ ಎಚ್ಚರಿಕೆಯನ್ನು ಉ.ಕೊರಿಯಾ ನೀಡಿದೆ.

ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌ ಅವರ ತಾತ ಕಿಮ್‌-2- ಸಂಗ್‌ರ 105ನೇ ಜನ್ಮದಿನಾಚರಣೆಯ ಹಿನ್ನೆಲೆಯಲ್ಲಿ ಶನಿವಾರ ಉ.ಕೊರಿಯಾವು ತನ್ನ 6ನೇ ಅಣ್ವಸ್ತ್ರ ಪರೀಕ್ಷೆಯನ್ನು ಅಥವಾ ಪ್ರಮುಖ ಕ್ಷಿಪಣಿ ಪರೀಕ್ಷೆಯನ್ನು ನಡೆಸಲಿದೆ ಎಂದೇ ಅಂತಾರಾಷ್ಟ್ರೀಯ ಸಮುದಾಯ ನಂಬಿತ್ತು. ಅಂದುಕೊಂಡಂತೆ ನಡೆದಿದ್ದೇ ಆದಲ್ಲಿ, ಉ.ಕೊರಿಯಾ ವಿರುದ್ಧ ಯುದ್ಧ ಸಾರಲು ಅಮೆರಿಕ ಕೂಡ ಸಿದ್ಧವಾಗಿ ನಿಂತಿತ್ತು. ಅದಕ್ಕೆಂದೇ, ದಕ್ಷಿಣ ಕೊರಿಯಾದಲ್ಲಿ ಸಮರಾಭ್ಯಾಸ ನಡೆಸಿ, ಕೊರಿಯಾ ಪರ್ಯಾಯ ದ್ವೀಪದಲ್ಲಿ ತನ್ನ ವಿಮಾನವನ್ನೂ ನಿಯೋಜಿಸಿತ್ತು. ಆದರೆ, ಹಾಗಾಗಲಿಲ್ಲ. ಉ.ಕೊರಿಯಾವು ಯಾವುದೇ ಅಣ್ವಸ್ತ್ರ ಪರೀಕ್ಷೆ ನಡೆಸಲಿಲ್ಲ. ಬದಲಿಗೆ, ಸೇನಾ ಪರೇಡ್‌ ನಡೆಸುವ ಮೂಲಕ ವಿಶಿಷ್ಟ ಖಂಡಾಂತರ ಕ್ಷಿಪಣಿ ಸೇರಿದಂತೆ ತನ್ನ ಸೇನಾಶಕ್ತಿಯನ್ನು ವಿಶ್ವಸಮುದಾಯಕ್ಕೆ ತೋರಿಸಿಕೊಟ್ಟಿದೆ.

ದಾಳಿ ಎದುರಿಸಲು ನಾವು ಸಿದ್ಧ: ಈ ವಾರ್ಷಿಕ ಪರೇಡ್‌ನ‌ಲ್ಲಿ ಕಿಮ್‌ ಜಾಂಗ್‌ ಉನ್‌ ಏನನ್ನೂ ಮಾತನಾಡದೇ ಅಚ್ಚರಿ ಮೂಡಿಸಿದರು. ಆದರೆ, ಅವರ ಆಪ್ತ, 2ನೇ ಸ್ಥಾನದಲ್ಲಿರುವ ಅಧಿಕಾರಿ ಚೋ ರ್‍ಯಾಂಗ್‌ ಹೇ, “ಅಮೆರಿಕವು ನಮ್ಮ ಮೇಲೆ ಅಣ್ವಸ್ತ್ರ ದಾಳಿ ನಡೆಸಲು ಮುಂದಾದರೆ, ಅದನ್ನು ಎದುರಿಸಲು ನಾವು ಸಿದ್ಧ. ಪರಿಪೂರ್ಣ ಯುದ್ಧಕ್ಕೆ ಪ್ರತಿಯಾಗಿ ಪರಿಪೂರ್ಣ ಯುದ್ಧ ನಡೆಸಲು ನಾವು ತಯಾರಿದ್ದೇವೆ. ಹಾಗೆಯೇ, ಅಣ್ವಸ್ತ್ರಗಳಿಂದ ದಾಳಿ ನಡೆಸಿದರೆ, ಅದಕ್ಕೆ ನಮ್ಮದೇ ಶೈಲಿಯಲ್ಲಿ ಅಣ್ವಸ್ತ್ರಗಳಿಂದಲೇ ಪ್ರತಿದಾಳಿ ನಡೆಸುತ್ತೇವೆ’ ಎಂದಿದ್ದಾರೆ. ನಾವು ಇರಾಕ್‌, ಲಿಬಿಯಾವಲ್ಲ: ಇದೇ ವೇಳೆ, ಅಣ್ವಸ್ತ್ರಗಳೇ ಹೊಂದಿರದ ಇರಾಕ್‌ ಹಾಗೂ ಲಿಬಿಯಾ ಮೇಲೆ ಅಮೆರಿಕ ಯುದ್ಧ ನಡೆಸಿದೆ. ನಮ್ಮನ್ನೂ ಇರಾಕ್‌ ಮತ್ತು ಲಿಬಿಯಾದಂತೆಯೇ ಎಂದು ಭಾವಿಸಿದರೆ ಅದು ಅಮೆರಿಕದ ಮೂರ್ಖತನ. ಅವರು ದಾಳಿ ನಡೆಸುತ್ತಿದ್ದರೆ, ಸುಮ್ಮನಿರಲು ನಾವೇನೂ ಇರಾಕ್‌, ಲಿಬಿ ಯಾವಲ್ಲ ಎಂದೂ ಉ.ಕೊರಿಯಾ ಹೇಳಿದೆ.

ಪರೇಡ್‌ನ‌ಲ್ಲಿ ಏನಿದ್ದವು?
ತಮ್ಮಲ್ಲಿ ಎಂತೆಂತಹ ಶಸ್ತ್ರಾಸ್ತ್ರಗಳಿವೆ ಎಂಬುದನ್ನು ಜಗತ್ತಿಗೆ ತೋರಿಸಲೆಂದೇ ಉ.ಕೊರಿಯಾವು ಈ ಸೇನಾ ಪರೇಡ್‌ ಆಯೋಜಿಸಿದಂತಿತ್ತು. ಟ್ರಕ್‌ಗಳಲ್ಲಿ ಕೆಎನ್‌-08 ಸರಣಿಯ ಕ್ಷಿಪಣಿಗಳನ್ನು ಪ್ರದರ್ಶಿಸಲಾಯಿತು. ಇದು ಅತ್ಯಂತ ದೂರದ ಗುರಿಯನ್ನು ತಲುಪುವ ಸಾಮರ್ಥ್ಯವುಳ್ಳ ಕ್ಷಿಪಣಿ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಜತೆಗೆ, ಎರಡು ರೀತಿಯ ಟಿಇಎಲ್‌ (ಕ್ಷಿಪಣಿ ಉಡಾವಣ ವಾಹನ), ಟ್ಯಾಂಕ್‌ಗಳು, ಬಹು ರಾಕೆಟ್‌ ಉಡಾವಣಾ ವಾಹನಗಳು, ಜಲಾಂತರ್ಗಾಮಿಗಳಿಂದ ಹಾರಿಸುವ ಸಾಲಿಡ್‌-ಫ್ಯೂಯೆಲ್‌ ಕ್ಷಿಪಣಿಗಳು, ಮುಸುಡಾನ್‌ ಕ್ಷಿಪಣಿ, ಉಡಾವಣೆಗೆ ಮೊದಲು ಪತ್ತೆಯೇ ಮಾಡಲಾಗದಂಥ ಹೊಸ ಮಾದರಿಯ ಕ್ಷಿಪಣಿ ಮತ್ತಿತರ ಶಸ್ತ್ರಾಸ್ತ್ರಗಳನ್ನು ಪರೇಡ್‌ನ‌ಲ್ಲಿ ಪ್ರದರ್ಶಿಸಲಾಯಿತು. 

ಮಹಾಬಾಂಬ್‌: ಮೃತರ ಸಂಖ್ಯೆ 94ಕ್ಕೇರಿಕೆ
ಅಮೆರಿಕ ಸೇನೆಯು ಗುರುವಾರ ರಾತ್ರಿ ಅಫ‌^ನ್‌ ಮೇಲೆ ನಡೆಸಿದ ಅಣುವೇತರ ಬಾಂಬ್‌ ದಾಳಿಗೆ ಮೃತಪಟ್ಟ ಐಸಿಸ್‌ ಉಗ್ರರ ಸಂಖ್ಯೆ 94ಕ್ಕೇರಿಕೆಯಾಗಿದೆ. ದಾಳಿ ನಡೆದ ಅಚಿನ್‌ ಜಿಲ್ಲೆಯ ನಂಗರ್‌ಹಾರ್‌ ಪ್ರಾಂತ್ಯದಲ್ಲಿ ಶನಿವಾರ ಶೋಧ ಕಾರ್ಯ ನಡೆದಿದ್ದು, 94 ಮಂದಿಯ ಮೃತದೇಹ ಪತ್ತೆಯಾಗಿದೆ. ಈ ಪೈಕಿ ನಾಲ್ವರು ಐಸಿಸ್‌ನ ನಾಯಕ ಸ್ಥಾನದಲ್ಲಿದ್ದವರು ಎಂದು ಅಫ‌^ನ್‌ ಅಧಿಕಾರಿಗಳು ತಿಳಿಸಿದ್ದಾರೆ. ಜತೆಗೆ, ದಾಳಿಯಲ್ಲಿ ನಾಗರಿಕರಾರೂ ಬಲಿಯಾಗಿಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ. ದಾಳಿಯಲ್ಲಿ 36 ಮಂದಿ ಸಾವಿಗೀಡಾಗಿದ್ದಾರೆ ಎಂದು ಶುಕ್ರವಾರ ಸರಕಾರ ಅಂದಾಜಿಸಿತ್ತು. ಜತೆಗೆ, ಈ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆಯನ್ನೂ ಹೇಳಿತ್ತು. 

ಜಗತ್ತಿನಾದ್ಯಂತ ಧಾರ್ಮಿಕ ಸ್ವಾತಂತ್ರ್ಯಕ್ಕೆ ಭಯೋತ್ಪಾದನೆಯೇ ಅತಿದೊಡ್ಡ ಅಪಾಯ. ಹಿಂದೂಗಳು ಸೇರಿದಂತೆ ಎಲ್ಲ ಧರ್ಮಗಳ ಜನರೂ ತಮ್ಮ ಪ್ರಜ್ಞೆಗೆ ತಕ್ಕಂತೆ ಪೂಜಿಸುವಂಥ ಒಳ್ಳೆಯ ನಾಳೆಗಳು ಬರಲಿ ಎನ್ನುವ ಆಶಯ ನಮ್ಮದು.
– ಡೊನಾಲ್ಡ್‌ ಟ್ರಂಪ್‌, ಅಮೆರಿಕ ಅಧ್ಯಕ್ಷ

ಟಾಪ್ ನ್ಯೂಸ್

19

Ganesh Chaturthi: ನೆನಪಿನ ಬುತ್ತಿಯಾದ ಗಣೇಶ ಹಬ್ಬ

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Time AI 100: ಎಐ 2024ರ 100 ಪ್ರಭಾವಿಗಳ ಪಟ್ಟಿಯಲ್ಲಿ ವೈಷ್ಣವ್‌, ನಿಲೇಕಣಿ

Time AI 100: ಎಐ 2024ರ 100 ಪ್ರಭಾವಿಗಳ ಪಟ್ಟಿಯಲ್ಲಿ ವೈಷ್ಣವ್‌, ನಿಲೇಕಣಿ

US Poll: ಯಾರು ಶ್ವೇತಭವನ ಪ್ರವೇಶಿಸಲಿದ್ದಾರೆ? ಚುನಾವಣ ನಾಸ್ಟ್ರೋಡಮಸ್‌ ಭವಿಷ್ಯದಲ್ಲೇನಿದೆ…

US Poll: ಯಾರು ಶ್ವೇತಭವನ ಪ್ರವೇಶಿಸಲಿದ್ದಾರೆ? ಚುನಾವಣ ನಾಸ್ಟ್ರೋಡಮಸ್‌ ಭವಿಷ್ಯದಲ್ಲೇನಿದೆ…

Covid test

China; ಮಾನವರಿಗೆ ಅಪಾಯಕಾರಿ 39 ವೈರಸ್‌ ಪತ್ತೆ

joe-bidden

Biden-Modi ದೂರವಾಣಿ ಮಾತುಕತೆ: ಬಾಂಗ್ಲಾ ಬಗ್ಗೆ ಕಳವಳ

canada

Canada; ಬೆಂಬಲ ಹಿಂಪಡೆದ ಎನ್‌ಡಿಪಿ: ಜಸ್ಟಿನ್‌ ಸರಕಾರಕ್ಕೆ ಸಂಕಷ್ಟ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

19

Ganesh Chaturthi: ನೆನಪಿನ ಬುತ್ತಿಯಾದ ಗಣೇಶ ಹಬ್ಬ

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.